ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍)

ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍)

ಪೈರಿನ ಮೇಲಿನ ನೀರು - ನೀರ ಮೇಲಿನ ಗುಳ್ಳೆ

 
ನನ್ನ ಕಳೆದ ಬ್ಲಾಗ್ ಪೋಸ್ಟ್ ಗೆ ಪ್ರತಿಕ್ರಿಯಿಸಿ ಶೈಲಾ ಸ್ವಾಮಿಯವರು, ನಾನು ತೆಗೆದ ನೀರಿನ ಚಿತ್ರಗಳೆಲ್ಲಿ ಎಂದು ಕೇಳಿದ್ದರು...

ಮನದ ದೀಪ

ಮನದ ದೀಪ

ಇಂದು ಬಂದಿರುವೆ ಮನದಲಿ
ಇಂಥಹ ಮನದ ಇರುಳಲಿ
ಬೆಳಗು ನಿನ್ನ ನಗುವಿನ ದೀಪ
ಸದಾ ಬೆಳಗುತಿರಲಿ ಆ ದೀಪ ನನ್ನಲ್ಲಿ
ನಿನ್ನಯ ನಗುವಿನ ನೆನಪಲಿ

ಈ ಹೃದಯ ಎಂಬ ಇಳೆಯಲಿ
ಪ್ರೀತಿ ಎಂಬ ಬೀಜ ಬಿತ್ತಿ
ನಿನ್ನಯ ನಗುವಿನ ಮಳೆಯು ಬರದೆ
ಬೀಜ ಹೆಮ್ಮರ ವಾಗುದೆ?
ಸದಾ ಸುರಿಯುತಿರಲಿ ಆ ಮಳೆಯು ನನ್ನಲಿ
ಬೀಜ ಹೆಮ್ಮರವಾಗುವ ನೆಪದಲಿ

ಹರೀಶ .ವಾ.ಕಲಕೋಟಿ

ಅಗಲಿದ ಚೇತನ

ಅಗಲಿದ ಚೇತನ.
ಅಪಾರಜ್ಞಾನ, ಅಷ್ಟೇ ಸೌಜನ್ಯತೆ, ಸರಳ ನೇರ ನಡೆ ನುಡಿ ಇವೆಲ್ಲವನ್ನೂ ಒಟ್ಟುಗೂಡಿಸಿದಾಗ ಎದ್ದು ಕಾಣುವ ರೂಪವೇ ಹಿರಿಯ ಸಾಹಿತಿಗಳಲ್ಲೊಬ್ಬರಾದ ಶ್ರೀಯುತ ಎಚ್.ಎಸ್.ಕೃಷ್ಣಸ್ವಾಮಿಯವರು. ಅಂಕಣಕಾರರೆಂದೇ ಖ್ಯಾತಿ ಹೊಂದಿರುವ ಅವರು ಈಗ 29ನೇ ತಾರೀಕು ಇನ್ನಿಲ್ಲವಾದರು ಎಂದು ತಿಳಿದಾಗ ಮನಸ್ಸಿಗೆ ಉತ್ತಮವಾದುದೇನನ್ನೋ ಕಳೆದುಕೊಂಡ ಭಾವ. 1920ರ ಆಗಸ್ಟ್ 20ರಂದು ಜನಿಸಿದ ಅವರು 2008ರ ಅದೇ ಆಗಸ್ಟ್ 29ರಂದು ನಮ್ಮನ್ನೆಲ್ಲಾ ಅಗಲಿದ್ದಾರೆ.
ಖ್ಯಾತ ಅರ್ಥಶಾಸ್ತ್ರಜ್ಞರಾದ ಇವರು ಅನೇಕ ದಿನಪತ್ರಿಕೆಗಳು ವಾರ ಪತ್ರಿಕೆಗಳಲ್ಲಿ ವಾಣಿಜ್ಯ, ವ್ಯಕ್ತಿವಿಷಯಕ್ಕೆ ಸಂಬಂಧಪಟ್ಟ ಅಂಕಣಗಳನ್ನು ಬರೆಯುವ ಮೂಲಕ ಜನಪ್ರಿಯರಾದರು. ಸುಧಾ ವಾರ ಪತ್ರಿಕೆಯಲ್ಲಿ 36 ವರ್ಷ ಒಂದು ವಾರವೂ ತಪ್ಪದೇ ವ್ಯಕ್ತಿ ವಿಶೇಷ ಅಂಕಣ ಬರೆದು ಅನೇಕ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಸಿದ್ದರು. ‘ಕನ್ನಡದಲ್ಲಿ ವಿಡಂಬನಾ ಸಾಹಿತ್ಯ’ ಎಂಬ ಇವರ ವಿಮರ್ಶನಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‍ನ ‘ಭಾಸ್ಕರರಾವ್ ಸ್ಮಾರಕ’ ಬಹುಮಾನ ಲಭಿಸಿದೆ.ಹಾಗೆಯೇ ವಾಣಿಜ್ಯ ಹಾಗೂ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ ‘ನಮ್ಮ ಅಭಿವೃದ್ದಿ ಯೋಜನೆ’ ಕೃತಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಲಭಿಸಿದೆ. ಇವರ ಪ್ರಭಂದಗಳಲ್ಲಿ ಪ್ರಭುದ್ದತೆ, ಚಿಂತನೆ, ಅಧ್ಯಯನಶೀಲತೆ ಹಾಗೂ ಕಾವ್ಯ ಗುಣಗಳನ್ನು ಕಾಣಬಹುದು ಎಂದು ಡಾ.ದೇ.ಜವರೇಗೌಡರು ಹೇಳಿದ್ದಾರೆ. ಇವರು ಕೆಲವು ಕಾದಂಬರಿಗಳು ಸಹಾ ಬರೆದಿದ್ದಾರೆ.
ಇವರನ್ನು ಕವಿ ಚನ್ನವೀರಕಣವಿಯವರು ಸಾಹಿತ್ಯ ಲೋಕದ ಸವ್ಯ ಸಾಚಿ ಎಂದಿದ್ದಾರೆ. ಹಾಗೆಯೇ ಕವಿ ದೊಡ್ಡ ರಂಗೇಗೌಡರು ಇವರ ಸಾಹಿತ್ಯ ಭೂಮಿ ತೂಕದ ಸಾಹಿತ್ಯ ಎಂದೇ ವರ್ಣಿಸಿದ್ದಾರೆ.

ಕವನವಲ್ಲವಿದು ಮನದಾಳದ ಭಾವನೆ..

ಹೊರಟಿರುವೆ ನಾನಿಂದು ಗೆಳೆಯರನು ಅಗಲಿ
ಬರುತಿರುವ ದು:ಖವನು ಹೇಗೆನಾ ನುಂಗಲಿ?

ಮಾತು ಮಾತಿಗೂ ನಗುವಿನಾ ಹಾಸು
ನಡುನಡುವೆ ಕೋಪದಾ ಗುಸುಗುಸು
ಹ್ರದಯದೀ ಬಂದಂತಹ ಆ ಓಡನಾಟ
ಕಂಡಿರದು ಜಗವು ಇಂತಹದೊಂದು ನೋಟ

ಅಭ್ಯಾಸದ ಅವಧಿಯೊಳು ಮಾಡಿದಂತಹ ಮೋಜು
ಬಡೆಯದಿರಲು ಮುಗುದೊಬ್ಬರ ಮನದ ರೊಜ್ಜು
ವಿಚಾರಗಳು ಬಹುವಾದರೂ ಇರುತಿತ್ತೊಂದೇ ಭಾವ
ಈ ವಿರಹದಿಂದಾಗುವುದು ಬಹಳ ನೊವ

ಏಕೆ?

ವರುಷಗಳೇ ಕಳೆದವು ಆ ದಿನಗಳು ಉರುಳಿ
ಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ


ನಿನ್ನ ಪ್ರೀತಿಯ ಕಂಡೂ ಕಾಣದವರು
ನೆನೆಯಲು ಇನ್ನೂ ಅರ್ಹರೇ? ಏಕೆ


ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋ
ಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ


ನಿನ್ನ ಹೂವಂತಹ ಹ್ರದಯದಲಿ
ಆ ಬಾಡಿದ ಪ್ರೀತಿಯ ನೆನಪುಗಳೇಕೆ


ಯಾರು ನಿನ್ನ ಭಾವನೆಗಳನ್ನರಿಯದೇ ಹೊದರೋ
ಅವರ ಅಧಿಕಾರ ನಿನ್ನ ಹ್ರದಯದ ಮೇಲೆ ಇನ್ನೂ ಏಕೆ


ಯಾವ ಸಂಬಂಧ ಮುಗಿ(ರಿ)ದು ಹೋಯಿತೋ
ಅದು ಈಗಲೂ ನಿನ್ನ ಉಸಿರಾಗಿರುವುದೇಕೆ


ನಿನ್ನ ವರ್ತಮಾನದಲ್ಲೇ ಇರುವವರು
ನಿನ್ನ ಪಾಲಿಗೆ ಅತೀತ (ಅತೀ ಅತ್ತ)ವಾದುದೇಕೆ ?


 

ಮಾಯೆ

ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ
ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ

ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ
ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ

ನಿನ್ನ ಓರೆಗಣ್ಣಿನ ನೋಟಕ್ಕಾಗಿ ಹಗಲಿರುಳೂ ಕಾಯುವೆ
ಆ ಒಂದು ನೋಟವನ್ನು ದಿನವೆಲ್ಲಾ ಸ್ಮರಿಸುವೆ

ತುಟಿಗಳಲಿ ಬರುವ ಹೆಸರಿಗಾಗಿ ತುದಿಗಾಲಲಿ ನಿಲ್ಲುವೆ

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ

ವಾದನಗಳ ವಂದನೆ

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ
ಸುರಗಳ ಪ್ರತಿಶಬ್ದದಲ್ಲಿ ಹಿಂದುತ್ವದ ಘೋಷಣೆ |ಪ|

ಸಿಂಹಗಳ ಗುಂಪಿದು ತಾಳಕೆ ಹೊಂದುತ
ರಾಷ್ತ್ರಾಭಿಮಾನದ ವಾದ್ಯವ ನುಡಿಸುತ
ನಾಭಿಯಿಂದ ಬಂದಂತಹ ಹಿಂದುತ್ವದ ಧ್ವನಿಯಿದು
ಮುಗಿಲೆತ್ತರ ಏರಲಿದೆ ಅಭಿಮಾನದ ಗುಡುಗಿದು

ನಾವೆಲ್ಲಾ ಹಿಂದು ಎಂಬ ಅಭಿಮಾನವು ಬೆಳೆಯಲಿ

ಹೇಳಿ ಕೊಡಬೇಕಿದೆ ಈಗ..

ಯಾಕೆ ದಡಕ್ಕೆ ಬಂದೂ ಬಂದೂ
ಅಲೆಗಳು ಆತ್ಮಹತ್ಯೆ
ಮಾಡಿ ಕೊಳ್ಳುತವೆ?
ಯಾರದೋ ದುಃಖಕ್ಕೆ ಯಾಕೆ ಮಳೆ ಅಷ್ಟು
ಭೋರೆಂದು ಅಳುತ್ತದೆ?

ಯಾರಾದರು ಅದಕ್ಕೆ ಹೇಳಿ ಕೊಡಬೇಕಿದೆ ಈಗ..

ನನ್ನಂತೆ ….

ಎಂಥ ನೋವಿದ್ದರೂ ಅವುಡುಗಚ್ಚಿ
ಸುಮ್ಮನಾಗುವುದನ್ನು ...

ಎಲ್ಲ ನೋವುಗಳನ್ನು ಸಲ್ಪ ಸಲ್ಪವಾಗಿ
ನಮ್ಮದಾಗಿಸುವುದನ್ನು ....