ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍)

ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍)

ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍)

ಮುಂಜಾನೆ ಎದ್ದು, ಒದ್ದ ಕಂಬಳಿಯ ಪಕ್ಕಕ್ಕೆ ಸರಿಸಿ - ನಮ್ನಮ್ ದೇವರ ಚಿತ್ರಾನ ನೋಡಿ, ನಂತರ ಮಡಚಿ ದಿಂಬಿನ ಮೇಲಿಟ್ಟು, ದಿನನಿತ್ಯದ ಕರ್ಮಗಳನ್ನು ಮುಗಿಸಿ, ಆಫೀಸಿಗೆ ಹೋಗಲು ತಯಾರಾಗಿ, ಟೂ ವೀಲ್ಹರ್‍ ಹತ್ತಿದಾಕ್ಷಣ ಟೂ ವೀಲ್ಹರ್‍ನಲ್ಲಿ ಹೋಗುವ ಪ್ರತಿಯೊಬ್ಬರೂ ಈ ಸಾಲನ್ನು {ಅಂದರೆ ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍) } ನೆನಪಿಡಿ...

ಹಾಗೂ

ನಮ್ಮ ಮಾನ್ಯ ವಾಟಾಳ್ ನಾಗರಾಜ್ ರವರು ಧರಿಸುವ ಅಗಲವಾದ ಕಪ್ಪು ಕನ್ನಡಕದಂತೆ ನೀವೂ ಕೂಡ ಟೂ... ವೀಲ್ಹರ್‍ ಚಾಲನೆ ಮಾಡುವಾಗ ರಕ್ಷಾ ಕವಚವನ್ನು ಧರಿಸಲು ಮರೆಯಬೇಡಿ...

ಏಕೆಂದರೆ, ನಮ್ಮ ಟೂ ವೀಲ್ಹರ್‍ನ ಮುಂದೆ ಕಾರ್‍ಗಳು ಚಲಿಸುತ್ತಿದ್ದರೆ ಅದರಲ್ಲಿ ಕುಳಿತಿರುವವರು ಜೋಕಾಗಿ ಕಾರಿನ ಕಿಂಡಿಯಿಂದ ಚೋಟುದ್ದ ಸಿಗರೇಟನ್ನು ಚಾಚಿ ಬೂದಿಯನ್ನು ಹೊರಹಾಕುತ್ತಾರೆ. ಕೇಳಲು ಹೋದರೆ ಫುಲ್ ಆವಾಜ್, ಕೇಳದೇ ಹೋದರೆ - ಕಣ್ಣುಗಳ ದಾನ ಯಾಮಾರ್‍ದ್ರೆ ದೇಹದಾನ, ಆತ್ಮ - ತ್ಯಾಗ.

ಪ್ರೀತಿಯ ಸಹೋದರ, ಸಹೋದರಿಯರೆ ಈಗ ಪ್ರಸ್ತುತ ಹೋಟೆಲ್, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳಲ್ಲಿ, ಪೆಟ್ರೋಲ್ ಬಂಕ್ ಗಳಲ್ಲಿ, ಸಾರ್ವಜನಿಕ ವಾಹನಗಳಲ್ಲಿ ಮುಂತಾದ ಸ್ಥಳಗಳಲ್ಲಿ ಧೂಮಪಾನ ನಿಷೇದಿಸಿರುವ ನಮ್ಮ ಸರ್ಕಾರ ಯಾವುದೇ ವಾಹನಗಳಲ್ಲಿ, ಯಾವುದೇ ವ್ಯಕ್ತಿ ಧೂಮಪಾನ ಮಾಡದಿರುವಂತೆ ಕಾನೂನನ್ನು ಜಾರಿಗೊಳಿಸಬೇಕು, ಒಂದುವೇಳೆ ಮಾಡಿದರೆ ದಂಡ ವಿಧಿಸುವ ಅಧಿಕಾರವನ್ನು ಸಂಬಂಧಪಟ್ಟವರಿಗೆ ನೀಡಬೇಕು ಎಂದು ನನ್ನ ಅನಿಸಿಕೆ.

ಈ ಸಿಗರೇಟಿನ ಕಾಟದಿಂದ ನಿಮಗೆ ಅಥವಾ ನಿಮ್ಮವರಿಗೆ ಏನಾದರೂ ಹಾನಿಯಾಗಿದ್ದರೆ ನಮ್ಮೂಂದಿಗೆ ಹಂಚಿಕೊಳ್ಳಿ

ಇ-ಮೇಲ್ ವಿಳಾಸ: nammakarunaadu@gmail.com

ನಮ್ಮ ತಂಡ ಸದಾ ನಿಮ್ಮ ಸಂಗಡ......24x365...

Rating
No votes yet

Comments