ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನೊಲವಿಗೆ....

ನಾ ಚಿಗುರಾಗುವೆ
ಎನ್ನೊಳಗೆ ಲೀನವಾಗುವ
ಮುಂಜಾವದ ಮಂಜು
ನೀನಾಗಿ ಬರುವೆಯೆಂದು...

ನಾ ಹೂವಾಗುವೆ
ಈ ಪ್ರೀತಿ ಮಧುವ
ಹೀರ ಬರುವ ತುಂಬಿ
ನೀನಾಗಿ ಬರುವೆಯೆಂದು....

ನಾ ಹಣ್ಣಾಗುವೆ
ಈ ರುಚಿಯ ಸವಿಯ ಬರುವ
ಹೆಣ್ಣು ಗಿಳಿ
ನೀನಾಗಿ ಬರುವೆಯೆಂದು...

ನಾ ಮರವಾಗುವೆ
ಎನ್ನಪ್ಪಿ ಬೆಳೆವ
ಲಲಿತ ಲತೆ
ನೀನಾಗಿ ಬರುವೆಯೆಂದು...

ನಾ ಮರದ ಕೊಳಲಾಗುವೆ
ಒಳಗಣ್ಣಿನಿಂದುಸುರಿ ಬರುವ

ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?

ಮೊನ್ನೆ ನಮ್ಮ ಮನೆಯ ಬಾಡಿಗೆಯ ಕರಾರು ಪತ್ರವನ್ನು(ರೆಂಟಲ್ ಅಗ್ರಿಮೆಂಟ್) ನವೀಕರಿಸಿದ ಮನೆಯ ಓನರ್ ನಮ್ಮವರ ಬಳಿ ಸಹಿ ಹಾಕಲು ಕೇಳಿದರಂತೆ
ಅದಕ್ಕೆ ಇವರು ಅವಳನ್ನು ಕೇಳದೆ ಸಹಿ ಹಾಕುವುದಿಲ್ಲ ಎಂದರಂತೆ.
ಆದಕ್ಕೆ ಆ ಆಸಾಮಿ "ಅಯ್ಯೋ ಹೆಂಗಸರನ್ನೆಲ್ಲಾ ಪರ್ಮಿಶನ್ ಕೇಳ್ತಿದ್ರೆ ಅವರಿಗೆ ದೊಡ್ಡ ಕೋಡು ಬಂದು ಬಿಡುತ್ತೆ ಸುಮ್ಮನೆ ಸೈನ್ ಮಾಡಿ " ಎಂದರಂತೆ

ಬಂಗಾರದ ಮನುಷ್ಯನಿಗೆ ಹೃದಯಸ್ಫರ್ಶಿ ನಮನ (ರಾಜಣ್ಣನವರ ಕುರಿತು ಒಂದು ಕವನ)

ಶಿವಪ್ಪನಿಗೆ ಕಣ್ಣನ್ನು ಕೊಟ್ಟು│
ಶಬ್ಧವೇದಿಯ ಜಾಡನ್ನು ಹಿಡಿದು│
ದೂರದ ಬೆಟ್ಟ ಏರಿ ಗಿರಿ ಕನ್ಯೆ ರೂಪಕ್ಕೆ ಕರಗಿ│
ಗುರಿ ಮರೆತು ದಾರಿ ತಪ್ಪಿದ ಮಗನಾಗಿ│
ಪ್ರಾಯಶ್ಚಿತ್ತಕೊಸ್ಕರ ಮನದಲ್ಲಿ ಅನುರಾಗ ಅರಳಿಸಿಕೊಂಡು│
ಅದೇ ಕಣ್ಣಲ್ಲಿ ಸಾಧನೆಗೈದು│ ತ್ರಿಮೂರ್ತಿಗಳ ವರ ಪಡೆದು│
ಭಲೇ ಹುಚ್ಚನಾಗಿ ಜಾಣ್ಮೆಯನ್ನು ತೋರಿ│
ಬಹದ್ದೂರ್ ಗಂಡಾಗಿ ಶೌರ್ಯವನ್ನು ಬೀರಿ│

ಬಂಗಾರದ ಮನುಷ್ಯನಿಗೆ ಹೃದಯಸ್ಫರ್ಶಿ ನಮನ (ರಾಜಣ್ಣನವರ ಕುರಿತು ಒಂದು ಕವನ)

ಶಿವಪ್ಪನಿಗೆ ಕಣ್ಣನ್ನು ಕೊಟ್ಟು│
ಶಬ್ಧವೇದಿಯ ಜಾಡನ್ನು ಹಿಡಿದು│
ದೂರದ ಬೆಟ್ಟ ಏರಿ ಗಿರಿ ಕನ್ಯೆ ರೂಪಕ್ಕೆ ಕರಗಿ│
ಗುರಿ ಮರೆತು ದಾರಿ ತಪ್ಪಿದ ಮಗನಾಗಿ│
ಪ್ರಾಯಶ್ಚಿತ್ತಕೊಸ್ಕರ ಮನದಲ್ಲಿ ಅನುರಾಗ ಅರಳಿಸಿಕೊಂಡು│
ಅದೇ ಕಣ್ಣಲ್ಲಿ ಸಾಧನೆಗೈದು│ ತ್ರಿಮೂರ್ತಿಗಳ ವರ ಪಡೆದು│
ಭಲೇ ಹುಚ್ಚನಾಗಿ ಜಾಣ್ಮೆಯನ್ನು ತೋರಿ│
ಬಹದ್ದೂರ್ ಗಂಡಾಗಿ ಶೌರ್ಯವನ್ನು ಬೀರಿ│

ನಿರೀಕ್ಷೆ

ಮೋಡದ ಮರೆಯಲಿ, ಚಂದೀರ ಅವಿತಂತೆ,
ಹೆಣ್ಣೇ, ನೀನೇಕೆ ಕುಳಿತೆ ಕಾಣದಂತೆ,
ಗೊತ್ತೈತಿ ನಿನ್ನ ರೂಪ ಚಂದವಂತೆ,
ತೋರಬಾರದೆ ಆ ಮೊಗವ,
ಬಾಯಾರಿದವನಿಗೆ ಸಿಗುವ ನೀರಿನಂತೆ....

ನನ್ನೀ ಮನಸಿನ ಕನ್ನಡಿಯಲ್ಲೇ,
ಸಿಂಗಾರ ಮಾಡುವೆ, ಬಾ ನನ್ನ ನಲ್ಲೆ,
ಮುಡಿಸಿ ನಿನಗೆ, ಮೈಸೂರ ಮಲ್ಲೆ,
ನಾಚುತ್ತ ಕುಳಿತ ಆ ಮೊಗವ,
ತೋರದೆ ಕೊಲ್ಲುತಿಹೆ, ನಿನ್ನೀ ಕಣ್ಣೀನಲ್ಲೇ..............

"ಫೂ೦ಕ್"

ಇದೇನಪ್ಪಾ ಅಪ್ಪಟ ಕನ್ನಡ ಸೈಟ್ ನಲ್ಲಿ ಹಿ೦ದಿ ಚಿತ್ರದ ಪ್ರಚಾರ ಮಾಡುತ್ತಿದ್ದೇನೆ ಎ೦ದುಕೊಳ್ಳಬೇಡಿ,ಕನ್ನಡ ಚಿತ್ರವಲ್ಲದಿದ್ದರೂ ಕನ್ನಡ ನಾಯಕನ ಚಿತ್ರ "ಫೂ೦ಕ್".ಚಿತ್ರವನು ಒಬ್ಬರೇ ಕುಳಿತು ನೋಡಿದವರಿಗೆ ೫ ಲಕ್ಷ ಬಹುಮಾನ ಘೋಷಿಸಲಾಗಿತ್ತು(ಅದನ್ನು ಆಗಲೇ ಒಬ್ಬ ಬೆ೦ಗಳೂರಿಗ ಪಡೆದುಬಿಟ್ಟಿದ್ದಾರೆ).ಅದೇನಪ್ಪಾ ಅ೦ಥಾದ್ದೇನಿದೆ ಆ ಚಿತ್ರದಲ್ಲಿ ಎ೦ದುಕೊ೦ಡು ಹೋದವನಿಗೆ

"... ಸ್ಥಳಾಂತರ.... ಅಂದ್ರೆ ಏನೇ ?"

ಒಂದು ದಿನ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವಿನ ಒಂದು ಬೀದಿಯಲ್ಲಿ ಹೋಗ್ತಾ ಇದ್ದೆ . ಎದುರಿನಿಂದ ಇಬ್ಬರು ಹುಡುಗಿಯರು ಬಂದರು . ಅಕ್ಕ-ತಂಗಿ ಇದ್ದಿರಬೇಕು. ಅಲ್ಲಿನ ಅಂಗಡಿ ಮುಂದೆ ನಿಂತರು . ಅದರ ಶಟರ್ ಹಾಕಿತ್ತು. ಅಲ್ಲಿ ಒಂದು ಹಾಳೆಯ ಮೇಲೆ " ಈ ಅಂಗಡಿಯನ್ನು ಮುಂದಿನ ಬೀದಿಗೆ ಸ್ಥಳಾಂತರ ಮಾಡಲಾಗಿದೆ" ಅಂತ ದೊಡ್ಡದಾಗಿ ಬರೆದಿತ್ತು.

ಗ್ರೀನ್ ಪೆನ್ನಿನ ಮಹಿಮೆ !

ಮೊನ್ನೆ ಹೀಗೆ ಆಫೀಸ್ನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಮಾತಿನ ನಡುವೆ ಯಾರೋ ಪೆನ್ ಕೇಳಿದರು. ಮಾತು ಹೊರಳಿ ಪೆನ್ನುಗಳತ್ತಲೇ ತಿರುಗಾದತೊಡಗಿತು. ಆಗ ನನಗೆ ನೆನಪಾದದ್ದು... ನನ್ನ ಗ್ರೀನ್ ಪೆನ್ನು ! ಅದರ ಹಿಂದೆ ದೊಡ್ಡದೊಂದು ಕತೆ ಇದೆ. ನಂಗೆ ಬರೆಯೋದು ಹುಚ್ಚು, ಸಿಕ್ಕವನಿದ್ದಗಲೇ, ಕೈಗೆ ಸಿಕ್ಕಿದ್ದೆಲ್ಲವನ್ನೂ ಗೀಚುತ್ತಿದ್ದೆ.

ಪ್ರೀತಿ ಇರಬೇಕು

ಶ್ರೀನಾಥ್. ಎಸ್‌
ಬೆಂಗಳೂರು
98454 89452

ಪ್ರೀತಿ ಇರಬೇಕು
ನಾಡ ಮೇಲೆ
ಗೌರವ ಇರಬೇಕು
ಪಕ್ಕದ ನಾಡ ಬಗ್ಗೆ
ಅತಿಯಾದರೆ ಆ ಪ್ರೀತಿ
ಆದೀತು ಫಜೀತಿ...

ನಮ್ಮ ಕರುನಾಡ ಜನತೆಯಲ್ಲೂ ಅಂದರೆ ನನ್ನನ್ನೂ ಸೇರಿ ಈ ಅತಿಥಿದೇವೂಭವಗುಣ ಅತಿಯಾದದ್ದೇ ಇದಕ್ಕೆಲ್ಲಾ ಕಾರಣ.
ಗೌರವವಿರಲಿ, ಪ್ರೀತಿಯಿರಲಿ, ಸ್ನೇಹವಿರಲಿ ಆದರೆ ತಲೆ ಬಾಗದಿರಲಿ...

ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?

ಶ್ರೀಕಾಂತರವರು "ನಮ್ಮಮೂಗಿನ ನೇರಕ್ಕೆ" ಎಂಬ ತಲೆಬರಹದ http://sampada.net/blog/shreekantmishrikoti/22/08/2008/11064 ಈ ಲೇಖನ ಓದಿದ ಮೇಲೆ ತುಂಬ ದಿನಗಳಿಂದ ನಾನು ತಲೆ ಕೆಡುಸ್ಕೊಂತ ಇದ್ದ ಒಂದು ವಿಷಯದ ಬಗ್ಗೆ ಬರೆಯೂಣ ಅನಿಸುತ್ತಿದೆ....