ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದು ಒಳಿತಲ್ಲವೇ?

ಬೀಜಿಂಗ್ ಒಲಿಂಪಿಕ್ಸ್ ಮುಗಿಯಿತು.
ನಾವು ಪದಕ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದೇ ಸಾಧನೆ.
ಈಗ ನೋಡಿ-ಈ ಸಲ ಭಾರತ ಒಲಿಂಪಿಕ್ಸ್ ಹಾಕಿಯಲ್ಲಿ ಭಾಗವಹಿಸುವ ಅರ್ಹತೆಯನ್ನೇ ಪಡೆದಿಲ್ಲ. ಏನೂ ನಷ್ಟವಿಲ್ಲ. ಹೋಗಿದ್ದರೂ ಗೆಲ್ಲುವುದು ಅಷ್ಟರಲ್ಲಿಯೇ ಇತ್ತು. ಇದನ್ನೇ ಮುಂದುವರಿಸಿ ಈ ಚರ್ಚೆಯ ವಿಷಯ ನೀಡಿದ್ದೇನೆ.
ಅದೇ ರೀತಿ ಇತರ ಸ್ಪರ್ಧೆಗಳಲ್ಲೂ ಭಾಗವಹಿಸದಿದ್ದರೆ ಏನು?

ದಕ್ಷಿಣ ಭಾರತದ ಉದ್ದಿಮೆ ಮೊಗಸಾಲೆ!

ಕೇ೦ದ್ರ ಸರ್ಕಾರದ ಒ೦ದು ವಿಶಿಷ್ಟ ಯೋಜನೆಯಡಿ ೩೫೦ ಕಿ.ಮಿ. ಉದ್ದದ ಗ್ರೀನ್ ಫೀಲ್ಡ್ ಹೆದ್ದಾರಿಯನ್ನು ಮಾಡುವ ಪ್ರಯತ್ನ ನಡೆಯುತ್ತಿದೆ. ಒ೦ದು ಕಿ.ಮಿ ಗೆ ತಗಲುವ ವೆಛ್ಚ ಸುಮಾರು ೧೫-೧೬ ಕೊಟಿ. ಈ ವರ್ಷದ ಡಿಸೆ೦ಬರ್ ತಿ೦ಗಳಲ್ಲಿ, ಹೆದ್ದಾರಿ ರಚನೆಯ ಸಲಹಾಗಾರರ ತ೦ಡವು ಈ ಹೆದ್ದಾರಿಗೆ ಬೇಕಾದ ಉಪಗ್ರಹ ಛಾಯಚಿತ್ರದ ಕೆಲಸವನ್ನು ಸಿದ್ದ ಪಡಿಸಲಿದ್ದಾರೆ.

ಒಂದು ಸರಳ ಸುಂದರ ಕವಿತೆ

‘ಮಳೆಯ ಮೇಲೇಕೆ ದೂರು?’ ಎಂಬ ಸತೀಶ್ ಅವರ ಬ್ಲಾಗ್ ಓದಿ, ಪಲ್ಲವಿಯವರು ಬರೆದ ಪ್ರತಿಕ್ರಿಯೆ ಓದಿದಾಗ ನನಗೆ ನೆನಪಾದ ಈ ಕವಿತೆ ಇಲ್ಲಿ ಕಳಿಸಿದ್ದೇನೆ
ಇಕ್ಕಳ
ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು,
ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು;
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ;
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!
ಚಿಗುರ ಚಿನ್ನದ ನಡುವೆ ಹೂವ ಬಯಸುವರು;

ಕಚೇರಿ ಎಂಬ ನರಕ-೧

ನನ್ನ ಬರಹಕ್ಕೆ ಪ್ರತಿಕ್ರಿಯೆ ಹಾಕುತ್ತಾ ಶ್ರೀದೇವಿ ಕಳಸದ ಅವರು ಒಂದು ಸವಾಲು ಒಡ್ಡಿದ್ದಾರೆ. ಅದು ಸವಾಲೆಂದರೇ ಸರಿ. ಏಕೆಂದರೆ, ಅವರ ಪ್ರಕಾರ ನಾನು, ಜಿಟಿಜಿಟಿ ಮಳೆಯಲ್ಲಿ ಬೆಚ್ಚಗೇ ಕೂತು, ಭಾವನಾತ್ಮಕ ಪ್ರಪಂಚದಲ್ಲಿ ವಿಹರಿಸುತ್ತಿದ್ದೇನಂತೆ. ಲೋಕದ ಕಷ್ಟಗಳ ಬಗ್ಗೆ ನನಗೆ ಗೊತ್ತಿಲ್ಲವಂತೆ. ’ನಾವಾದರೆ, ಕಚೇರಿಯಲ್ಲಿ ಕೆಲಸ ಮಾಡಿ, ಹೈರಾಣಾಗಿ ಮನೆಗೆ ಬರುತ್ತೇವೆ. ಹೀಗಾಗಿ, ಬರವಣಿಗೆಯಲ್ಲಿ ಪೂರ್ತಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ’ ಎಂಬುದು ಅವರ ದೂರು.

ಈ ದೂರಿಗೆ ಅಥವಾ ಅಸಮಾಧಾನಕ್ಕೆ ನಾನೊಬ್ಬಳೇ ಉತ್ತರ ಬರೆಯುವುದು ಸೂಕ್ತವಲ್ಲ ಅಂದುಕೊಂಡಿದ್ದೇನೆ. ಸಂಪದದ ನಿಯಮಿತ ಬರಹಗಾರ್ತಿಯರಾದ ಕಲ್ಪನಾ, ರೂಪಾ, ಜಯಲಕ್ಷ್ಮೀ ಕೂಡಾ ಈ ಪ್ರಶ್ನೆಯನ್ನು ತಮಗೇ ಸಂಬಂಧಿಸಿದ್ದು ಎಂಬಂತೆ ತೆಗೆದುಕೊಂಡು ಉತ್ತರ ನೀಡಬೇಕೆಂದು ನನ್ನ ವಿನಂತಿ.

ಕಚೇರಿಯಲ್ಲಿ ನಾನು ಕೆಲಸ ಮಾಡಿಲ್ಲ. ಅಲ್ಲಿಯ ಸಮಸ್ಯೆಗಳ ಬಗ್ಗೆ ನನಗೆ ನೇರ ಅನುಭವವಿಲ್ಲ. ಆದರೆ, ಕಚೇರಿಯ ವಾತಾವರಣ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಕಾಲೇಜಿನ ದಿನಗಳಲ್ಲಿ ಆಗಷ್ಟು, ಈಗಷ್ಟು ಕಚೇರಿಯ ರಗಳೆಯನ್ನು ಅನುಭವಿಸಿದ್ದಾಗಿದೆ. ಅಡ್ಮಿಶನ್‌ ಸಮಯದಲ್ಲಂತೂ ಗುಮಾಸ್ತರು ಜೀವ ಹಿಂಡುತ್ತಿದ್ದರು. ನಮ್ಮವೇ ಮಾರ್ಕ್ಸ್‌‌ಕಾರ್ಡ್‌‌ಗಳ ಮೇಲೆ ಮುಖ ಗೊತ್ತಿಲ್ಲದ ಗೆಜೆಟೆಡ್‌ ಆಫೀಸರ್‌ನ ಅಟೆಸ್ಟೇಶನ್‌ ಮಾಡಿಸಿ ತರಬೇಕಿತ್ತು. ಸರಕಾರಿ ಕಚೇರಿಗಳ ಕ್ರೂರತೆ ಮತ್ತು ಕೆಟ್ಟ ವೃತ್ತಿಪರತೆ ಹೇಗಿರುತ್ತದೆ ಎಂಬುದು ನನ್ನ ಅನುಭವಕ್ಕೆ ಬಂದಿದ್ದು ಆಗ.

ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...

ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ?

ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾರಿ ಅಧಿಕಾರಿಗಳು ನಿಮ್ಮ ಗಮನಕ್ಕೆ ಬಂದಲ್ಲಿ ನಮಗೆ ತಿಳಿಸಿ

ನಮ್ಮ ಇ-ಮೇಲ್ ವಿಳಾಸ : nammabengaluru08@gmail.com

ತಮಿಳು ಸಾಫ್ಟ್ ವೇರ್ ಕ೦ಪನಿ

ಮು೦ದಿನ ಶತಮಾನದಲ್ಲಿ ಯಾವ ಭಾಷಿಕರು ತ೦ತ್ರಜ್ನಾನವನ್ನು ತಮ್ಮ ಭಾಷೆಯಲ್ಲಿ ತರುವುದಿಲ್ಲವೋ, ಅ೦ತಹ ಭಾಷೆಯು ನಶಿಸಿಹೋಗುವುದರಲ್ಲಿ ಅನುಮಾನ ಬೇಡ. ತಮಿಳರು ೪-೫ ವರ್ಷಗಳ ಮು೦ಚೆಯೇ ಈ ಸತ್ಯ ಅರಿತು ಕನಿತಮಿಳ್ ಎ೦ಬ ಗು೦ಪೊ೦ದನ್ನು ರಚಿಸಿದರು http://www.kanithamizh.in/ .

’ಥಾಮಸ್ ಜೆಫರ್ಸನ್ ಮೆಮೋರಿಯಲ್ ಹಾಲ್ !

ಅಮೆರಿಕದ ಹಿಂದಿನ ಚರಿತ್ರೆ ಅತಿಗಹನವೂ ಸ್ಫೂರ್ತಿದಾಯಕವೂ ಆಗಿದೆ. ಯೂರೋಪಿನಲ್ಲಿನ ಚರ್ಚಿನದಬ್ಬಾಳಿಕೆ ದರ್ಪಯುತವಾದಆಡಳಿತ, ಹಲವರನ್ನು [ಪಿಲ್ಗ್ರಿಮ್ ಫಾದರ್ಸ್] ದೇಶಬಿಟ್ಟು ಹೊಸಪ್ರದೇಶವನ್ನು ಅರಸಿಕೊಂಡು ಹೋಗಲು ಪ್ರೇರಣೆನೀಡಿತು.

ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

೧. ಕರ್ನಾಟಕದಲ್ಲಿ ಕೂಗುವ ಬಂಡೆ ಎಲ್ಲಿದೆ?
೨. ಕನ್ನದ ಚಲನಚಿತ್ರದಲ್ಲಿ ಮೊದಲ ಮಹಿಳಾ ನಿರ್ದಶಕಿ ಯಾರು?
೩. ರಾಜಕುಮಾರ ಹಾಡಿರುವ ಮೊದಲ ಚಲನಚಿತ್ರ ಗೀತೆ ಯಾವುದು?
೪. ರಾಷ್ಟ್ರೀಯ ’ನವಿಲು ಅಭಯಾರಣ್ಯ’ ಎಲ್ಲಿದೆ?
೫. ಶ್ರೀರಂಗಪಟ್ಟಣದ ದೇವಾಲಯ ಕಟ್ಟಿಸಿದವರು ಯಾರು?