ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾವನೆಗಳಿಲ್ಲದ ಬದುಕು.

ಕೆಲವು ಬಾರಿ ಅನಿಸುತ್ತದೆ. ಜೀವನದಲ್ಲಿ ಭಾವನೆಗಳಿಲ್ಲದೆಯೇ ಬದುಕುವುದೇ ಉತ್ತಮ ಎಂದು. ಈ ಪ್ರೀತಿ, ಪ್ರೇಮ, ವಾತ್ಸಲ್ಯ ಇವುಗಳಮೂಲಕ ಮಾಡುವ ಕೆಲಸವನ್ನು ಕರ್ತವ್ಯ ಎಂದು ಮಾಡಿದರೆ ಮನಸ್ಸಿಗೆ ಏನೂ ಅಂಟುವುದಿಲ್ಲ ಅಲ್ಲವೇ.

‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!

"ನಿನ್ನದು ಒಂದು ವರ್ಷದ ಯೋಜನೆಯಾಗಿದ್ದರೆ-
ಧಾನ್ಯದ ಬೀಜ ಬಿತ್ತು;
ಒಂದು ದಶಕದ ಯೋಜನೆಯಾಗಿದ್ದರೆ-
ಗಿಡ-ಮರ ಬೆಳೆಸು;
ಒಂದಿಡೀ ಪೀಳಿಗೆಯ ಯೋಜನೆಯಾಗಿದ್ದರೆ-
ಶಿಕ್ಷಣ ಕೊಡಿಸು."

ಚೀನಿ ದಾರ್ಶನಿಕ ಕ್ವಾನ್ ತ್ಸು ಉದ್ಧರಿಸಿದ ವಾಕ್ಯಗಳಿವು. ಈ ಚೀನಿ ದಾರ್ಶನಿಕನಿಗೆ ಹಾಗು ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ್ ಗುನಗಾ ಅವರಿಗೆ ಏನಾದರೂ ಸಂಬಂಧ?.. ಇದೆ. ಅದು ಬಾದರಾಯಣ ಸಂಬಂಧ! ಬೇಕಾದರೆ.. ಗುನಗಾ ದಂಪತಿ ಹಾಗು ಅವರ ಕರುಳ ಕುಡಿ ಮಧುರಾ ಜಪಾನ್ ದೇಶದ ಸಹಜ ಕೃಷಿಕ ಮಸನೊಬು ಫುಕುವೊಕ ಅವರ ಹತ್ತಿರದ ಸಂಬಂಧಿ ಅಂದರೂ ತಪ್ಪಿಲ್ಲ!

ನೀಱೆಯ ವಸ್ತ್ರವೈಖರಿ

ಅಂಗನೆಯುಡುವ ಸೀರೆ ಕುಪ್ಪಸ ಪ್ಯಾಂಟು ಷರ್ಟು
ಲಂಗ ಕಿಱುಲಂಗ ಱವಕೆಯ
ರಂಗಿನ ಚೂಡಿದಾರ ಪಱಕಾಱಗಳಿಗೆ
ದಂಗುವಡೆಯವೇಡ ನೀನು||೧||

ತೋಱುವಂತಿರಬೇಕು ತೋಱದಿರಬೇಕು
ಸಾಱಬೇಕು ಮೆಯ್ಮಾಟ
ಜಾಱಬಾರದು ನೀಱನೋರೆನೋಟವಿದು
ನೀಱೆಯ ಜಾಣು ಕಾಣೆಂಬೆ||೨||

- ಚೌಕಟ್ಟು -

ನನ್ನ ಕವಿತೆಗಳು ಅಡಿಗೆ ಮನೆಯಿಂದ ಹೊರ ಬರುವುದೇ ಇಲ್ಲ.

ಪಾತ್ರೆ ತೊಳೆಯುವಾಗ ಅಕ್ಕಿ ಬೇಯಿಸುವಾಗ
ಚಪಾತಿ ಲಟ್ಟಿಸುವಾಗ ಹಪ್ಪಳ ಕಾಯಿಸುವಾಗ
ಪದಗಳು ಜೋಡುತ್ತವೆ.

ತೊಳೆದ ಪಾತ್ರೆಯಲ್ಲಿ
ಬೇಯಿಸಿದ ಅನ್ನದಲ್ಲಿ
ಕಾಯ್ದ ಹಪ್ಪಳದಲ್ಲಿ
ನನ್ನ ಕವಿತೆಗಳು ಹುಟ್ಟಿಕೊಳ್ಳುತ್ತವೆ.
ಚಪ್ಪರಿಸಿದವರ ಬಾಯಿಗಳಲ್ಲಿ ನಲಿಯುತ್ತವೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?

ಕನ್ನಡ ನಾಡು, ನುಡಿಯ ಬಗ್ಗೆ ಕಾಳಜಿಯ ಲೇಖನವೊಂದನ್ನು ಬರೆಯದೆ ತುಂಬಾನೇ ದಿನಗಳಾಗಿ ಹೋದವಲ್ಲ ಎನ್ನುವ ಸಂಗತಿಯು ಮನವನ್ನು ಹಗಲಿರುಳು ಕಾಡುತ್ತಲೇ ಇತ್ತು. ಅದನ್ನು ಅರಿತು ನನ್ನ ಮನದಲ್ಲೇ ಕ್ರೋಢೀಕರಿಸಿದ್ದ ಅಭಿಪ್ರಾಯದ ನುಡಿಗಳನ್ನು ಬಿತ್ತರಿಸುವ ಸಲುವಾಗಿ ಈ ಲೇಖನವನ್ನು ಬರೆದಿರುವೆನು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?