ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒರೆ, ಒಱೆ

ಒರೆ (ಕ್ರಿಯಾಪದ ಹಾಗು ನಾಮಪದ)= ಧ್ವನಿ, ಹೇೞು, ಉಲಿ
ಉದಾಹರಣೆ: ಕನಕದಾಸರ ಹರಿಭಕ್ತಿಸಾರದಲ್ಲಿ

ಮಱೆದೆನಭ್ಯುದಯದಲಿ ನಿಮ್ಮನು
ಮಱೆಯೆನಾಪತ್ತಿನಲಿ ಪೊರೆಯೆಂ-
ದೊರೆಯುವೆನು ಮನಮೇಕಭಾವದೊಳಿಲ್ಲ ನಿಮ್ಮಡಿಯ

ಒಱೆ= ಕತ್ತಿ ಅಥವಾ ಇನ್ನಾವುದೇ ಆಯುಧವನ್ನು ಸರಿಯಾಗಿ ಹಿಡಿಯುವಷ್ಟು ಅವಕಾಶ(ಜಾಗ)ವಿರುವ ಚೀಲ.
ಉದಾಹರಣೆಗೆ: ರಾಜನು ಒಱೆಯಿಂದ ಕತ್ತಿ ತೆಗೆದನು.

ಇವಳಿಗೆ ಓಟು ಕೊಡಿ ಪ್ಲೀಸ್!

ಮೊನ್ನೆ ಸ್ಟಾರ್ ಪ್ಲಸ್ ನಲ್ಲಿ ಬರುವ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನೋಡುತ್ತ ಕುಳಿತಿದ್ದೆ. ಹಾಡು ಹಾಡಿದ ನಂತರ ಪ್ರತಿ ಸ್ಪರ್ಧಿಯೂ ತನ್ನ ಭಾಷಯಲ್ಲಿ ಓಟು ಕೇಳುತ್ತಿದ್ದ/ದ್ದಳು. ನಾನು "ನಮ್ಮ ಕನ್ನಡದವರು ಒಬ್ಬರೂ ಇಲ್ಲಿ ಬಂದಿಲ್ಲ. ಕನ್ನಡದಲ್ಲಿ ಓಟು ಕೇಳಿಲ್ಲ.." ಅಂತ ಗೊಣಗುತ್ತ ಎದ್ದು ಹೋದೆ.

Interpolಗೆ ಕನ್ನಡದಲ್ಲಿ ದೂರೇ?

ಮೊನಾಕೋ ದೇಶದಲ್ಲಿ ಅಡಗಿಕೊಂಡಿರುವ ರವಿ ಪೂಜಾರಿ ಎಂಬ ಕುಖ್ಯಾತ ಕೇಡಿಯನ್ನು ಹಿಡಿಯಲಿಕ್ಕೆ ಇಂಟರ್‍ ಪೋಲಿನ ಸಹಾಯ ಬೇಡಿರುವ ಬೆಂಗಳೂರಿನ ಪೋಲಿಸರು ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಕನ್ನಡದಲ್ಲಿ ಸಲ್ಲಿಸುವುದೇ?

ಸಿಬಿಐ ನವರು ಅದನ್ನು ವಾಪಸು ಕಳಿಸಿದರಂತೆ.

ಇದಕ್ಕೇನನ್ನುತ್ತೀರಿ ? ಕನ್ನಡ ಪ್ರೇಮವೇ ?

ಸುದ್ದಿಯನ್ನು ಓದಿ ನೋಡಿ .

- - - - - - - - - - - - - - - - - - - - - - -

ಮಿನಿಗವನ

ಕಾದಿಹಳು ಕಾತುರದಿ ಕಾಂತೆ

ಜಗವು ನಿದ್ರಿಸುವ ಸಮಯದಲಿ

ಕಣ್ಣೆವೆಗಳಿಗೆ

ವಿರಹವೇದನೆಯನುಣಿಸಿ,

ನಾಡಿಮಿಡಿತ ಹೃದಯಬಡಿತ ತೀವ್ರಗತಿಯಲ್ಲಿರಲು...

ಆ ಸೊಬಗಿಗೆ ಸೋನೆ ಹಾಡಿದ ತಿಳಿಗಾಳಿಯ

ಪ್ರಶಾಂತತೆಯಲಿ,

ಬೆಳ್ಳನೆಯ ಬೆಳದಿಂಗಳಡಿಯ ಬಿಸಿಯುಸಿರಿನ ಬೆಸುಗೆಯಲಿ,

ಅಂದುಸುರಿದ ಭಾವಪೂರಿತ ಮೆಲುನುಡಿಗಳ ಮೆಲುಕು

ಕಣ್ಮುಂದೆ ದಾಟಿ ಹೋಗುತ್ತಿರಲು,

ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ

ಪುರಂದರ ದಾಸರು ಕೆಲವು ಕಗ್ಗಂಟಿನಂತಹ ಕೀರ್ತನೆಗಳನ್ನು ರಚಿಸಿರುವುದು ತಿಳಿದಿರುವ ವಿಷಯವೇ. ಅವಕ್ಕೆ ಅರ್ಥ ಹುಡುಕುವುದು ಬಹಳ ತ್ರಾಸದಾಯಕವೇ ಸರಿ. ನಮ್ಮ ಸಂಪದ್ಬಾಂಧವರು ಅರ್ಥ ನೀಡಿಯಾರೆಂದು ಆಶಿಸುತ್ತೇನೆ. ಕೀರ್ತನೆ ಇಂತಿದೆ:

ರಾಗ: ಕಾಂಬೋಜಿ, ಆಟತಾಳ:

ಸ್ಥಳವಿಲ್ಲವಯ್ಯ ಭಾಗವತರೆ |
ಒಳಗೆ ಹೊರಗೆ ಸಂದಣಿಭಾತತುಂಬಿದೆ || ಪ ||
ಐದಕ್ಕೆ ಇದರೊಳು ಉಂಟು | ಮ |

ಬರಹ ಸೈಟಿನಲ್ಲಿ ಬರಹ ಐ ಎಮ್ ಇ ಸಾಫ್ಟ್ವೇರ್ ಕರಪ್ಟ್ ಆಗಿದೆ .please help me to get it

ಬರಹ ಸೈಟಿನಲ್ಲಿ ಬರಹ ಐ ಎಮ್ ಇ ಸಾಫ್ಟ್ವೇರ್ ಕರಪ್ಟ್ ಆಗಿದೆ
i could not type even a single letter in kannada
i typed it using converter
my system has been crashed and hence using other system.
can any body mail me or give me the link of baraha IME software please

ಮುಸ್ಸಂಜೆ.

ಪ್ರತೀ ಬೆಳಗಿಗೂ ಒಂದು ಆಪ್ತ ಮುಸ್ಸಂಜೆ ಇರುವಂತೆ ಪ್ರತೀ ಬದುಕಿಗೂ ಒಂದು ಆತ್ಮೀಯ ಮುಸ್ಸಂಜೆ ಇರಲಿ ಅಂತ ಬಯಸುವುದು ಸಾಮಾನ್ಯರಿಂದ ಹಿಡಿದು ಎಲ್ಲರೂ ಬಯಸುವ ವಿಷಯ. ಆದರೆ ಇಂತಹ ಮುಸ್ಸಂಜೆಗಾಗಿ ನಾವು ಒಂದು ಕ್ಷಣ ಯೋಚಿಸಿದರೆ ಬದುಕು ಸಾರ್ಥಕ.

ಬಯಲು

 

ಹುಡುಗ-ಹುಡುಗಿ

ಬಯಲಲ್ಲಿ ಓಡಿದರು

ಓಡಿದರು, ಓಡಿದರು

ಓಡಿ ಓಡಿ ನಿಂತರು

ಎದುಸಿರು ಬಿಡುತ್ತ

ಕೈಯ್ಯಿಂದ ಮಣ್ಣ ಹೆಕ್ಕಿದರು

ಹೆಕ್ಕಿದರು, ಹೆಕ್ಕಿದರು

ಹೆಕ್ಕಿ, ಹೆಕ್ಕಿ ಸೋತರು

ಕಾದರು ಅಲ್ಲಾಡದೆ

 

 

ನಾಕೇ ಸಾಲಿನ ಕತೆ

" ಹಲೋ .... ದೇಸಾಯಿ ಇದ್ದಾರಾ ?"
" ಅವರು ಹೊರಗ ಹೋಗ್ಯಾರ್ರಿ "
"ನಾನ್ರೀ , ವೈನಿ , ಮುಂಬೈಯಿಂದ ಮಿಶ್ರಿಕೋಟಿ ಮಾತಾಡೋದು. ಆರಾಮ್ ಇದ್ದೀರಾ?"
"... ಹೂನ್ರಿ ......... ರೀ ...... ನಿಮಗ ಫೋನು" .

ಶಾಲ್ಮಲೆಯ ತಟದ ಗುಪ್ತಗೆರೆಯ ಜಾಡು ಹಿಡಿದು..

‘ಅರಿವೆ ಗುರು’ ಧ್ಯೇಯೋಕ್ತಿ; ನನ್ನ ಅನ್ನ ಗೆಲ್ಲಲು ಯಶಸ್ವಿಯಾಗಿಸಿದ ಮಹಾನ್ ವಿಶ್ವವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಸುರಿದ ಮಳೆ ನೀರು ಎರಡು ಧಾರೆಯಾಗಿ ಒಂದು ಅರಬ್ಬೀ ಸಮುದ್ರಕ್ಕೂ ಮತ್ತೊಂದು ಬಂಗಾಳ ಕೊಲ್ಲಿಗೂ ಸೇರುತ್ತದೆ!

ಹೇಗೆ ಸಾಧ್ಯ? ಶಾಲ್ಮಲೆ ಕಲಘಟಗಿ ರಸ್ತೆಯ ಶ್ರೀಕ್ಷೇತ್ರ ಸೋಮೇಶ್ವರನ ಅಡಿಯಲ್ಲಿ ಹುಟ್ಟಿ ಈ ಕ್ಯಾಂಪಸ್ಸಿನಲ್ಲಿ ಗುಪ್ತಗಾಮಿನಿಯಾಗಿ ಹರಿದಿದ್ದು ಗೊತ್ತು. ಹಾಗಾಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ನಿರತ ವಿದ್ಯಾರ್ಥಿಗಳ ವಸತಿ ಗೃಹಕ್ಕೆ ‘ಶಾಲ್ಮಲಾ ಹಾಸ್ಟೆಲ್’ ಎಂದು ಸಹ ನಾಮಕರಣ ಮಾಡಲಾಗಿದೆ. ೭ ಗುಡ್ಡಗಳು ಹಾಗು ೭ ಕೆರೆಗಳ ಮಧ್ಯೆ ಭವ್ಯವಾಗಿ ಕಂಗೊಳಿಸುವ ವಿಶ್ವವಿದ್ಯಾಲಯ ಪ್ರಕೃತಿ ಸೌಂದರ್ಯದ ಖಣಿ. ಎಲ್ಲರಿಗೂ ಗೊತ್ತಿರುವ ವಿಚಾರವೇ?