ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದ್ರಾವಿಡ ಪ್ರಾಣಾಯಾಮ ನೆನಪಿಸುವ ತೋಳು ಬಾವಲಿಗಳ ಕಲರವ ಹುಬ್ಬಳ್ಳಿ-ಧಾರವಾಡದಲ್ಲಿ!

ನಾವು ಧಾರವಾಡದವರು ಸಾಕಷ್ಟು ವಿಷಯಗಳಲ್ಲಿ ಭಾಗ್ಯವಂತರು. ನಿತ್ಯ ಒಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತೇವೆ. ನಾಳೆಗೆ ಏನು ಎಂಬ ಪ್ರಶ್ನೆ ಬರಹಗಾರರಿಗೆ ಸಹಜ. ಆದರೆ ಧಾರವಾಡದ ಬರಹಗಾರರಿಗೆ ವಿಷಯಗಳಿಗೆ ಬರವಿಲ್ಲ. ವಿಷಯ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಗೂ ನಮ್ಮಲ್ಲಿ ಕೊರತೆ ಇಲ್ಲ. ‘ಓಯಾಸಿಸ್’ ತರಹ ತಂಪೆರೆಯುವ ಸಂಗ ಅವರ ಒಡನಾಟ.

ಮಾಣ್(ಮಾಣು)

ಮಾಣ್/ಮಾಣು(ಕ್ರಿಯಾಪದ)= ಬಿಡು, ನಿವಾರಿಸು. ಸಾಮಾನ್ಯವಾಗಿ ಹೊಸಗನ್ನಡದಲ್ಲಿ ಬೞಸದೆ ನಡುಗನ್ನಡದವರೆಗೆ ಸಾಮಾನ್ಯವಾಗಿ ಬೞಕೆಯಾಗುತ್ತಿರುವ ಪದ. ಹೊಸಗನ್ನಡದಲ್ಲಿ ಇದರ ಬೞಕೆ ಜನಕ್ಕೆ ಅರ್ಥವಾಗುತ್ತದೆ. ಯಾಕೋ ಜನ ಬೞಸುತ್ತಿಲ್ಲ.

ಉದಾಹರಣೆಗೆ
ಹೞಗನ್ನಡದಲ್ಲಿ ಕವಿರಾಜಮಾರ್ಗದಲ್ಲಿ
ಜಾಣರ್ಕಳಲ್ಲದವರುಂ
ಪೂಣಿಗರಱಿಯದೆಯುಮಱಿವವೋಲವಗುಣದಾ
ತಾಣಮನಿನಿಸೆಡೆವೆತ್ತೊಡೆ

ಬೇವು

ಬೇವು=ಕಹಿಯಾದ ಎಲೆಗಳನ್ನುಳ್ಳ ಸಸ್ಯ. ನಾವು ಎರಡು ತೆಱನಾದ ಬೇವು ಕಂಡಿದ್ದೇವೆ. ಒಂದು ಕರಿದು ತಿನ್ನಲು ಯೋಗ್ಯವಾದ ಕರಿಬೇವು. ಕರಿಬೇವನ್ನು ಎಣ್ಣೆಯಲ್ಲಿ ಕರಿದು (ಕೆಲವೊಮ್ಮೆ ಹುರಿದು) ರುಚಿ ಹೆಚ್ಚಿಸಲು ಬೞಸುತ್ತೇವೆ. ಎರಡನೆಯದು ಕಹಿಬೇವು. ಏನೇ ಮಾಡಿದರೂ ಕಹಿ ಬಿಡದ ಬೇವು. ಯುಗಾದಿ ಹಬ್ಬದಂದು ಬೆಲ್ಲದ ಜೊತೆ ಸೇರಿಸಿ ಬೞಸುವ ಕಹಿ ಬಿಡದ ಕಹಿಬೇವು

ಮರದಂತಹ ಮನಸ್ಸು

 

ನೆರೆನಂಬಿದವರಿಗೆ ನೆರಳನ್ನೀಯುತ
ಬಿಸಿಲಲಿ ತಾವೇ ನವೆಯುತಲಿ
ತನಿವಣ್ಣುಗಳನೆಲ್ಲ ಇತರರಿಗೀಯುವ
ಮರಗಳಂತಲ್ಲವೆ ಅಗ್ಗಳರು?

ಸಂಸ್ಕೃತ ಮೂಲ:

ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ|
ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ||

-ಹಂಸಾನಂದಿ

 

 

ಪೂರ್ಣ ಸೂರ್ಯಗ್ರಹಣ- ಚೈನಾದಿಂದ ನೇರ ಪ್ರಸಾರ(ದ ಮುದ್ರಿಕೆ)

ಇವತ್ತಿನ ಗ್ರಹಣದ ನೇರ ಪ್ರಸಾರದ ರೆಕಾರ್ಡಿಂಗ್ ಗಾಗಿ ಕೆಳಗಿನ ಕೊಂಡಿಯನ್ನು ಚಿಟಕಿಸಿ:

http://www.exploratorium.edu/eclipse/2008/index.html

 ಕೃಪೆ: ನಾಸಾ ಗ್ರಹಣ ಪುಟ ಮತ್ತು ಎಕ್ಸ್‍ಪ್ಲೊರೇಟೇರಿಯಮ್

http://sunearthday.gsfc.nasa.gov/2008eclipse/

 

-ಹಂಸಾನಂದಿ

ಕಿಱು, ಗಿಱು

ಕಿಱು=ಕ್ರಿಯಾಪದವಾದಾಗ ಕಿಱುದಾಗಿಸು, ತಡೆಯೊಡ್ಡು, ಕೂಡಿಹಾಕು, ಇತ್ಯಾದಿ. ಸರಿಸುಮಾರು ಇದೇ ಅರ್ಥದಲ್ಲಿ ವಿಶೇಷಣವಾಗಿ ಕಿಱು=ಸಣ್ಣ ಎಂಬರ್ಥ.
ಕೆಱೆ=ಹೇಗೇ ಬೇಕೋ ಹಾಗೆ ಹರಿಯುವ ನೀರನ್ನು ತಡೆದು ಅದಱ ಹರಿವನ್ನು ಒಂದೆಡೆ ಕೂಡಿ ಹಾಕಿ ಅದಱ ಬೞಕೆ ಮಾಡಲು ನಿರ್ಮಿಸಿದ ಕಟ್ಟೆ. ಇದು ಕಿಱುವಿನ ಭಾವನಾಮ.

ಗಿಱು=ಭಾವಿಸು, ರೂಪಗೊಡು.

ಬಾಂಬ್ ಬ್ಲಾಸ್ಟ್ ಆಯ್ತಾ ? ಯಾವ ಹಾಡು ಹಾಕ್ಲಿ ?

ಮೊನ್ನೆ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟವಾದ ದಿನ . ಸಂಜೆ ಎಂಟರ ಸುಮಾರಿಗೆ ಮನೆಕಡೆ ಹೊರಟಿದ್ದೆ. ಪ್ರಯಾಣಿಸುತ್ತಿದ್ದ ಗಾಡಿಯಲ್ಲಿ ಎಫ್ ಎಮ್ ರೇಡಿಯೋ ಎಂದಿನಂತೆ ಶಬ್ಡಮಾಲಿನ್ಯದ ಮೂಲಕ ನಗರದ ನಾಗರೀಕರಿಗೆ ಕೈಲಾದಮಟ್ಟಿಗೆ ಸೇವೆ ಸಲ್ಲಿಸುತ್ತಿತ್ತು.