ನಮ್ಮ ರಾಜಕೀಯ ನಾಯಕರ ನಡೆವಳಿಕೆ

ನಮ್ಮ ರಾಜಕೀಯ ನಾಯಕರ ನಡೆವಳಿಕೆ

ಬರಹ

ಸಂಪದದ ಮಿತ್ರರೇ,
ಬಹಳ ದಿನದಿಂದ ಇದನ್ನ ಸಮಾನ ಮನಸ್ಕರ ಹತ್ತಿರ ಚರ್ಚೆ ಮಾದಬೇಕು ಅನ್ನುವ ಆಸೆ ಇತ್ತು.

ನಮ್ಮ ಕೆಲವರು ಶಾಸಕರು,ಸಂಸದರು ಇವರೆಲ್ಲ ದೊದ್ದ ದೊದ್ದ ಕಾರ್ಯಕ್ರಮ ಆದಾಗ ಅವರ ಪಾರ್ಟಿ ನಾಯಕರ ಕಾಲಿಗೆ ಬಿದ್ದಿದ್ದೇ ಬಿದ್ದಿದ್ದು. ಇದು ಅವರನ್ನ ಆರಿಸಿ ಕಳಿಸಿದ ನಮಗೆ ಅಂದರೆ ಜನಕ್ಕೆ ಅವಮಾನ ಅಲ್ಲವೆ ? ಮಾಜಿ ಶಾಸಕ / ಸಂಸದ ಆಗಿದ್ರೆ ಏನಾದ್ರೂ ಮಾಡಿಕೊಂಡು ಇರಲಿ , ಅವರ ನಾಯಕರ ಗುಲಾಮರಾಗಿ ತಿರುಗಾಡಲಿ ಇದಕ್ಕೆ ನನ್ನ ವಿರೋಧ ಇಲ್ಲ, ಆದರೆ ಹಾಲಿ ಜನಪ್ರತಿನಿಧಿಗಳು ಹಿಂಗೆಲ್ಲಾ ಮಾದೋದು ನಾಚಿಕೆಗೇಡಿನ ವಿಷಯ ಅಲ್ವಾ?
ಓಟು ಸಿಗೋವರೆಗೂ ಜನದ ಮುಂದೆ ಕೈ ಮುಗಿಯೋದು, ಸಿಕ್ಕಿ ಎಮ್ಮೆಲ್ಲೆ ಆದಮೇಲೆ ಮಂತ್ರಿ / ಬೋರ್ಡ್ ಅಧ್ಯಕ್ಷ ಆಗಕ್ಕೆ ಕಾಲಿಗೆ ಬೀಳೊದು....
ಇದು ಇಡೀ ರಾಜ್ಯ/ದೇಶದಲ್ಲಿ ಟೀವಿ,ಪತ್ರಿಕೇಲಿ ಬರುತ್ತೆ.

ಇದನ್ನೆಲ್ಲ ನಿಲ್ಸೋದು ಮತ್ತೆ ಇವರಿಗೆಲ್ಲ ಬುದ್ದಿ ಕಲ್ಸೋರು ಯಾರು?

ಯಾವ ಪಾರ್ಟೀನೂ ಇದಕ್ಕೆ ಹೊರತಲ್ಲ.

ಸ್ವಾಭಿಮಾನಿ ಕನ್ನದ ಜನ ಇದನ್ನು ಒಪ್ಪುತ್ತೀರಾ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet