ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಸ್ನೋಕಾಲ್ಮಿ ಫಾಲ್ಸ್', ಸಿಯಾಟಲ್ ನಗರದ ಬಳಿಯ ಪ್ರಮುಖ ಜಲವಿದ್ಯುತ್ ತಯಾರಿಕೆಯ ಘಟಕಗಳಲ್ಲೊಂದು !

ಸ್ನೋಕಾಲ್ಮಿ ಫಾಲ್ಸ್ ಇದು ಅಮೆರಿಕದ ಸಿಯಾಟಲ್ ನಗರದ ಅತಿ ಮುಖ್ಯ ಆಕರ್ಷಣೆಯ ಕೇಂದ್ರ. ಅದೇಹೆಸರಿನ ಸ್ನೊಕುಲ್ಮಿ ನದಿಯಪಾತ್ರದಲ್ಲಿ ದೈವ -ನಿರ್ಮಿತ ಜಲಪಾತದ ಅದ್ಭುತ ದೃಷ್ಯ. ಅಮೆರಿಕದ ’ಕಲ್ಟ್ ಟೆಲಿವಿಶನ್ ಧಾರಾವಾಹಿಯಲ್ಲಿ ’ಟ್ವಿನ್ ಪೀಕ್ಸ್’ ಎಂಬ ಶೀರ್ಷಿಕೆಯಲ್ಲಿ ಈ ಜಲಪಾತ ಪ್ರಪ್ರಥಮವಾಗಿ ಕಾಣಿಸಿಕೊಂಡಮೇಲೆ ಜನರ ಗಮನ ಸ್ನೊಕುಲ್ಮಿ ಫಾಲ್ಸ್ ನ ಮೇಲೆ ಕೇಂದ್ರೀಕೃತವಾಯಿತು.

‘ಬಾಲ ಬಳಗ’ - ಇದು ಶಾಲೆಯಲ್ಲ! ಬಾಲ-ಬಾಲೆಯರ ಕನಸು ಅರಳುವ ಮನೆ!

ಕಣ್ಣುಗಳ ತುಂಬ ನೀರು.. ಒಲ್ಲದ ಮನಸ್ಸು..ಹೊರಲಾಗದ ಆ ಮಣಭಾರದ ಪಾಟಿಚೀಲ..
ಇದಕ್ಕೆ ಕಿರಿಟಪ್ರಾಯವಾಗಿ ಆ ಜೈಲರ್ ನಿಲುವಿನ ಕೆಂಪು ಕಣ್ಣುಗಳ ಕೈಯಲ್ಲಿ ಛಡಿ ಹಿಡಿದ ‘ಬಾಲ ವೈರಿ ಮಾಸ್ತರು’! ಎಲ್ಲವನ್ನು ಕಡ್ಡಾಯವಾಗಿ ತಲೆತುಂಬಿ, ತುಂಬಿದ್ದು ಹೆಚ್ಚಾಗಿ ತುಳುಕಿ, ಸಂಬಂಧ ಪಟ್ಟ ಹಾಗು ಪಡದ ಎರಡೂ ವಿಷಯಗಳ ಬಗ್ಗೆ ಈ ಸೂಕ್ಷ್ಮ ಮತಿಗೆ ಹೇಸಿಗೆ ಹುಟ್ಟಿ.. ಎ,ಬಿ,ಸಿ,ಡಿ..ಗಳು ಮಾತ್ರ ಜೀವನ..ಸರ್ವಸ್ವ ಎಂದೆನಿಸಿ..ಹೋಂವರ್ಕ್ ಮಾಡುವುದೇ ದೊಡ್ಡ ಸಾಧನೆ ಅನ್ನಿಸಿಬಿಡುವಮಟ್ಟಿಗೆ ಈ ಕಾಂಪೀಟಿಷನ್ ಜಗತ್ತಿನಲ್ಲಿ ‘ಶಾಲೆ’ ಎಂದು ಕರೆಯಿಸಿಕೊಳ್ಳುವ ‘ಜೈಲ್’ ಗಳು ಇಂದು ಬೆಳೆದು ಬಿಟ್ಟಿವೆ.

ಇನ್ನು ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಗೌರವ ವಂತಿಗೆ, ಕಟ್ಟಡ ನಿಧಿ, ಪಾಲಕರ ಸಂದರ್ಶನ, ಮಕ್ಕಳ ಪ್ರವೇಷ ಪರೀಕ್ಷೆ ಇತ್ಯಾದಿ, ಜೊತೆಗೆ ಶಾಲೆಯಲ್ಲಿ ಸರಿಯಾಗಿ ಕಲಿಸದ ಮಾಸ್ತರ್ ಮನೆಗೆ ಕಡ್ಡಾಯದ ಟ್ಯೂಷನ್! ಇವು ಇಂದಿನ ಅಭಿವೃದ್ಧಿ ಹೊಂದಿದ ಶಾಲೆಯ ಕುರುಹುಗಳು.

"ಮೊದಲ ನಗು"

ನನಗೆ ತಿಳಿಯದ ಲೋಕದಲ್ಲಿ ನಾನು ಇದ್ದೆ. ಎಲ್ಲೊ ಒ೦ದು ತರಹದ ಸದ್ದು. ಆ ಸದ್ದು ನನ್ನನ್ನು ಕೆರಳಿಸುವ೦ತೆ ಜೋರಾಗಿ ಆಗುತ್ತಿತ್ತು ಕೊನೆಗೆ ತಿಳಿಯಿತು ನಾನು ಮಲಗಿದ್ದೆ ಅ೦ತಾ

ಮತ್ತು ಆ ತಿಳಿಯದ ಲೋಕವೆ ಕನಸಿನ ಲೋಕ.ಆ ಸದ್ದೆ ಅಲಾರಾಮ ಬೆಲ್ಲ್. ಎಚ್ಚರ ಆದ ತಕ್ಷಣವೆ ಇ೦ದಿನ ಪ್ರವಾಸದ ನೆನಪು ಬ೦ತು. ಸಮಯ ೬ ಗ೦ಟೆ. ಬಸ್ಸು ೭.೩೦ ಕ್ಕೆ ಬರುತ್ತೆ.

ಸೋಜಿಗ

ಸೋಜಿಗ

ಪ್ರಾಮಾಣಿಕತೆಗೆ
ಬೇಕಾದ ಮನಸ್ಥಿತಿ
ಸಂಸ್ಕೃತಿ ಚರಿತ್ರೆ ದೇಶ ಕಾಲಕ್ಕೆಲ್ಲಾ
ತಳುಕು ಹಾಕಿಕೊಂಡಿದೆ ಅನ್ನುವುದನ್ನು
ಅಪ್ರಾಮಾಣಿಕರೆಲ್ಲಾ ತೀವ್ರವಾಗಿ ಅಲ್ಲಗಳೆಯುತ್ತಾರಲ್ಲಾ...

ಮಾತೆ ಮಹಾದೇವಿಗೆ ನಮೊಃ

ಇವತ್ತಿನ ಪತ್ರಿಕೆಯಲ್ಲಿ ಮಾತೆ ಮಹಾದೇವಿಯ ಮತ್ತೊಂದು ಅವಾಂತರದ ಕುರಿತು ಓದಿ ನಿಜಕ್ಕು ತುಂಬಾ ಬೇಸರವಾಯ್ತು. ಯಾಕೆ ಇವರೆಲ್ಲ ಹೀಗಾಡ್ತಾರೆ?

ಕನ್ನಡ, ತಮಿೞ್, ಮಲಯಾಳಂ, ತೆಲುಗು

ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು.

ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈಗಲೂ ತಮಿೞರು ’ತಮಿೞ್’ ಅಂದರೆ ಅಮೃತ ಕುಡಿದಂತೆ ಎನ್ನುತ್ತಾರೆ.

ಕನ್ನಡ, ತಮಿೞ್, ಮಲಯಾಳಂ, ತೆಲುಗು

ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು.

ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈಗಲೂ ತಮಿೞರು ’ತಮಿೞ್’ ಅಂದರೆ ಅಮೃತ ಕುಡಿದಂತೆ ಎನ್ನುತ್ತಾರೆ.

ಬಸವಣ್ಣನವರ ವಚನಗಳು ಭಾಗ ೧

ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರ ಘನವೆಂಬೆನೆ?
ಪಾರ್ವತಿಯ ಕಿಱುಕುಣಿಕೆಯ ಮುದ್ರಿಕೆಯಾಯಿತ್ತು.
ಅಂತಹ ಪಾರ್ವತಿ ಘನವೆಂಬೆನೆ?
ಪರಮೇಶ್ವರನ ಅರ್ಧಾಂಗಿಯಾದಳು.
ಅಂತಹ ಪರಮೇಶ್ವರನ ಘನವೆಂಬೆನೆ?
ನಮ್ಮ ಕೂಡಲ ಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು ||೧||