ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಹೊಂಗೇ ಮರ...

ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...!
ಸರಿ ಸುಮಾರು ಮೂರು ವರುಷವಾಯಿತು...
ಅದರ ಬುಡದಲ್ಲೇ ನಾನು ಬೀಡು ಬಿಡುವುದು!
ಅದು ನನ್ನ ಮರ...ನನ್ನ ಹೊಂಗೇ ಮರ...

ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು...
ಕೇವಲ ಹತ್ತೇ ನಿಮಿಷ ಇಡೀ ದಿನದಲ್ಲಿ!
ಹತ್ತು ಹಲವಾರೂ ಮರಗಳುಂಟು ಸುತ್ತ ಮುತ್ತ..
ಆದರೂ ಅದು ಮಾತ್ರವೇ ನನಗೆ ಅಚ್ಚು ಮೆಚ್ಚು!
ಅದು ನನ್ನ ಮರ...ನನ್ನ ಹೊಂಗೇ ಮರ...!

ಅರಿತವರ ತೆರ

ಕಲಿತವರ ದುಡಿಮೆಯನು
ಕಲಿತವರೇ ಬಲ್ಲರು.
ಹೆರದವಳು ಅರಿಯುವಳೆ
ಹೆರಿಗೆ ನೋವನ್ನು?

(ಸಂಸ್ಕೃತದಿಂದ ಅನುವಾದ)

ಮೂಲ ಹೀಗಿದೆ:

ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ
ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ

-ಹಂಸಾನಂದಿ

 

 

ಆ ಗಲ್ಲಿ...

sketch

ಅದೊಂದು ಗಲ್ಲಿ. ಓಣಿಯೊಂದರಲ್ಲಿ ಹಾದಂತೆ. ಮುಖ್ಯದ್ವಾರಕ್ಕೆ ಗೇಟಿಲ್ಲ. ಹೆಚ್ಚಿನ ಸಮಯ ಗೇಟಿರಬೇಕಾದ ಜಾಗದಲ್ಲಿ ಎಮ್ಮೆಯೋ ಹಸುವೋ ಕುಳಿತು ದಾರಿ ಅಡ್ಡಗಟ್ಟಿರುವುದು ಕಾಣಬಹುದು.

ಕೆಲಸಮಯ ಆ ಗಲ್ಲಿಯ ರೌಡಿಗಿಂತ ಜೋರಿರುವ ಬೀದಿ ನಾಯಿ ಆ ಜಾಗವನ್ನಾಕ್ರಮಿಸಿರುತ್ತದೆ. ಆಕ್ರಮಿಸಿರುವ ಸಮಯ ಕಿವಿ ಚುಚ್ಚುವಂತೆ ಅದು ಬೊಗಳುತ್ತಿರುತ್ತದೆ. ಬೊಗಳದಿರುವಾಗ ಅಲ್ಲೇ ಗೇಟಿರಬೇಕಾದ ಜಾಗದಲ್ಲೋ ಇನ್ನೆಲ್ಲೋ ಹಾಯಾಗಿ ಮಲಗಿರುತ್ತದೆ. ಇಷ್ಟು ದಿನ ಓಣಿಗೆ ಬಂದ ಹೊಸಬರಲ್ಲಿ ತನಗೆ ಬೇಡದವರನ್ನು ಓಡಿಸಿ ಅಲ್ಲಿ ಕಾವಲು ಕಾದ ಅದಕ್ಕೆ ಇಲ್ಲಿ ಗೇಟು ಹಾಕೋರು ಯಾರಿಲ್ಲ ಎಂಬುದು ಮನದಟ್ಟಾದಂತಿದೆ.

ಗೇಟಿರಬೇಕಾದಲ್ಲಿ ನಿಂತು ನೋಡಿದರೆ ಓಣಿ ಅಷ್ಟು ದೂರ ಇರುವಂತೆ ಕಾಣದು. ಅತ್ತಿತ್ತ ಮನೆಗಳು, ಒಂದೊಂದು ಮನೆಗೂ ಒಂದೊಂದು ಹೆಸರು. ಅಲ್ಲಿಲ್ಲಿ ಚೆಂದದ ಬಣ್ಣ, ಹೆಸರು, ಹಸಿರು. ಹೆಸರು, ನೋಟದಲ್ಲಿ ಯಾವ ಮನೆ ಯಾವುದೆಂದು ಹೇಳಲು ಹೊರಟರೆ ಅಸಾಧ್ಯವಾಗಿಸುವ ಓಣಿ ಅದು. ಬಾಗಿಲು ತಟ್ಟಿ ನೋಡಿದರೇ ತಿಳಿದೀತು!

ಕುಸೇಲನ್ ಬಿಡುಗಡೆಗೆ ಕರವೇಯ ವಿರೋಧ.

ಹೊಗೆನಕಲ್ ವಿವಾದವಾದಾಗ ತಮಿಳು ಚಿತ್ರನಟರಾದ ಶ್ರೀ.ರಜನಿಕಾಂತ್ ಅವರು ಕನ್ನಡಿಗರನ್ನು ಕುರಿತು, ಕನ್ನಡ ಹೋರಾಟಗಾರರನ್ನು ಕುರಿತು ಕೀಳಾಗಿ ಮಾತನಾಡಿದ್ದು ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದು ’ನನ್ನ ಚಿತ್ರ ನೋಡದಿದ್ದರೆ ನನಗೇನೂ ನಷ್ಟವಿಲ್ಲ’ ಎ೦ದಿದ್ದ ಅವರು ಕನ್ನಡಿಗರ ಕ್ಷಮೆ ಕೇಳಲು ಇಲ್ಲವೆಂದಿದ್ದರು.

ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)

ನಮಸ್ಕಾರ,
ನಾನು ಈವತ್ತು ಉಬುಂಟು 8.04 ನಾ ವಿಂಡೊಸ್ ಒಳಗೆ ಹಾಕ್ಕೊಂಡೆ. ಅಲ್ಲಿ ನನಗೆ ಇಂಟರ್ನೆಟ್ ಹ್ಯಾಂಗ ಚಾಲುಮಾಡ್ಬೆಕು ಗೊತ್ತಾಗಿಲ್ಲ.ನಾನು DSL ಉಪಯೊಗ ಮಾಡ್ತಿನಿ. ಅಲ್ಲಿ ವಿಂಡೊಸ್ ದಾಗ make a new connection ,connect to internet ,setup my connection manually,connect using a broadband connection that requires a user name and password,isp name,

ಛೇ.... ಹೀಗಾಗಬಾರದಿತ್ತು ಅಲ್ವಾ...!

ನಾಲ್ಕು ವರ್ಷದ ಹಿಂದಿನ ಕತೆಯಿದು... ಅಲ್ಲಲ್ಲ... ನೈಜ ಘಟನೆ.. ಹಿಂದೆ ಎಂಎಲ್ಸಿಯಾಗಿದ್ದು, ಈಗ ಸಚಿವರಾಗಿರುವವರ ಕತೆಯೂ ಹೌದು.. ವ್ಯಥೆಯೂ ಹೌದು...!

ಕಾಗೆ ಹಾರಿಸುವುದು...?

ಇತ್ತೀಚೆಗೆ ’ಕಾಗೆ ಹಾರಿಸುವುದು’ ಎಂಬ ಮಾತನ್ನು ಕೆಲವೆಡೆ ಕೇಳಿದ್ದೇನೆ . ಏನು ಹಾಗಂದ್ರೆ?

ಇನ್ನು ಕೆಲವು ಹೊಸ ಉಕ್ತಿಗಳು ಇತ್ತೀಚೆಗೆ ಕೇಳಿದವು..

ಹೊಗೆ ಹಾಕಿಸಿಕೊಳ್ಳುವುದು/ಸನ್ಮಾನ ಮಾಡಿಸಿಕೊಳ್ಳುವುದು -- ಸಾಯುವ ಪ್ರಕ್ರಿಯೆಗೆ ಹೀಗೆ ಹೇಳುತ್ತಾರೆ.

ಉದಾ: ಅಡ್ಡಾ ದಿಡ್ಡೀ ಬೈಕ್ ಓಡಿಸಿದರೆ ಅವನು ಹೊಗೆ ಹಾಕಿಸಿಕೊಳ್ಳುತ್ತಾನೆ/ಸನ್ಮಾನ ಮಾಡಿಸಿಕೊಳ್ಳುತ್ತಾನೆ.

ಹುಡುಗಿಯರ ಹಾಡುಗಳ ಪಾಡು

ನಾನು ಸುತಾರಾಂ ಆ ಸಿನಿಮಾ ನೋಡಬೇಕು ಅನ್ಕಂಡಿರ್ಲಿಲ್ಲ. ಆದ್ರೆ ಆಕಸ್ಮಾತ್ ಹೋದೆ. ಅಲ್ಲೀಯವರಿಗೆ ಆ ಸಿನಿಮಾ ಒಂದು ಹಾಡು ಕೇಳಿರ್ಲಿಲ್ಲ. ಸಿನಿಮಾದಲ್ಲಿ ಒಂದೊಂದು ಹಾಡು ಬರ್ತಿದ್ದಂಗೆ ಇಷ್ಟು ಚೆನ್ನಾಗಿರುವ ಹಾಡುಗಳು ( ಹುಡುಗಿಯರ :) ) ಯಾಕೆ ಹಿಟ್ ಆಗಿಲ್ಲ ?ಅನ್ಕಂಡೆ. ಆಮೇಲೆ ಇವೆಲ್ಲಾ ಹುಡುಗಿಯರ ಹಾಡು ಆಗಿದ್ರಿಂದ ಹಾಗಾಗಿರಬಹುದು ಅನಿಸ್ತು.

ಧಾರವಾಡದಲ್ಲೀಗ ರಾಗಿ ಫೇಡೆ

ಸಿಹಿ-ಖಾರಾ ಕ್ರಾಂತಿಯೊಂದು ಧಾರವಾಡ-ಹುಬ್ಬಳ್ಳಿಯ ಮಧ್ಯಮವರ್ಗದ ಮಹಿಳೆಯರ ಮನೆಯಲ್ಲಿ ಸದ್ದಿಲ್ಲದೇ ಬೀಸತೊಡಗಿದೆ.

ಮನೆಯಲ್ಲಿಯೇ ಹೊಸ ಬಗೆಯ ತಿನಿಸುಗಳನ್ನು ಮಾಡುವುದಲ್ಲದೇ ಅವನ್ನು ಬೇಡಿದ ಪ್ರಮಾಣಕ್ಕೆ ತಾಜಾ ರೂಪದಲ್ಲಿ ಪೂರೈಸುವ ಹೊಸದೊಂದು ಉದ್ಯಮ ಇಲ್ಲೆಲ್ಲ ಸದ್ದಿಲ್ಲದೇ ಬೆಳೆಯತೊಡಗಿದೆ.

ಧಾರವಾಡದಲ್ಲೀಗ ರಾಗಿ ಫೇಡೆ

ಸಿಹಿ-ಖಾರಾ ಕ್ರಾಂತಿಯೊಂದು ಧಾರವಾಡ-ಹುಬ್ಬಳ್ಳಿಯ ಮಧ್ಯಮವರ್ಗದ ಮಹಿಳೆಯರ ಮನೆಯಲ್ಲಿ ಸದ್ದಿಲ್ಲದೇ ಬೀಸತೊಡಗಿದೆ.

ಮನೆಯಲ್ಲಿಯೇ ಹೊಸ ಬಗೆಯ ತಿನಿಸುಗಳನ್ನು ಮಾಡುವುದಲ್ಲದೇ ಅವನ್ನು ಬೇಡಿದ ಪ್ರಮಾಣಕ್ಕೆ ತಾಜಾ ರೂಪದಲ್ಲಿ ಪೂರೈಸುವ ಹೊಸದೊಂದು ಉದ್ಯಮ ಇಲ್ಲೆಲ್ಲ ಸದ್ದಿಲ್ಲದೇ ಬೆಳೆಯತೊಡಗಿದೆ.