ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಲೇಹೊಸೂರಿನ ನವಿಲುಗಳನ್ನು ಕೊಂದವರು ಮಾಧ್ಯಮದವರು!

ಶೀರ್ಷಿಕೆ ನೋಡಿ ನೀವು ಹೌಹಾರಿರಲು ಸಾಕು.

ನಾಡಿನ ಬಹುತೇಕ ರಾಜ್ಯ ಹಾಗು ರಾಷ್ಟ್ರಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಮುಖಪುಟದಲ್ಲಿ ತಮ್ಮ ವರದಿಗಾರರ ‘ಬೈಲೈನ್’ಗಳ ಸಮೇತ ಪ್ರಕಟಿಸಿ ಕ್ರಾಂತಿ ಮಾಡಿದ್ದವು. ‘ಬಾಲೇಹೊಸೂರಿನಲ್ಲಿ ನೂರಾರು ನವಿಲುಗಳ ಮಾರಣಹೋಮ’; ‘ರೈತರ ವಿಷಮಿಶ್ರಿತ ಬೀಜಗಳಿಗೆ ರಾಷ್ಟ್ರಪಕ್ಷಿಗಳ ಬಲಿ’; ‘ಪೀಕಿನ ಆಸೆಗಾಗಿ ನೂರಾರು ನವಿಲುಗಳ ಹತ್ಯೆ’; ಹೀಗೆಯೇ ತರಹೇವಾರಿ ಶೀರ್ಷಿಕೆಗಳನ್ನು ನೀಡಿ ಮಾಧ್ಯಮವೀರರು ಪೌರುಷ ಮೆರೆದು, ರಾಜ್ಯ ಸರಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಪಾಪ ಬಾಲೇಹೊಸೂರಿನ ರೈತರು ಹಾಗು ಸಮುದಾಯದ ಎಲ್ಲರನ್ನು ಹಾದಿ ತಪ್ಪಿಸಿದ್ದರು. ಅಕ್ಷರಶ: ಪತ್ರಿಕಾ ಧರ್ಮದ ಕಗ್ಗೋಲೆ. ಪತ್ರಿಕಾಕರ್ತರ ನೈತಿಕ ಮೌಲ್ಯಗಳ ನಿಚ್ಚಳ ಅಧ:ಪತನ.

ಬುದ್ಧಿವಂತರಿಗೆ ಕಾಲವಲ್ಲ, ಈ ದೇಶದಲ್ಲಿ!

(ನಗೆ ನಗಾರಿ ಸಂಶಯ-ಚೋದನಾ ಬ್ಯೂರೋ)

‘ನಮ್ಮ ಸಮಾಜದಲ್ಲಿ ಬುದ್ಧಿವಂತರು ಎಲ್ಲರಿಗಿಂತ ಶೋಷಿತರಾದ ವರ್ಗದವರು. ಶೋಷಿತರಲ್ಲೇ ಆತ್ಯಂತ ಶೋಷಿತರೂ, ಅಸಂಘಟಿತರೂ ಆಗಿರುವಂಥವರು ಇವರು. ಮೇಲಾಗಿ ಇವರು ಅಲ್ಪಸಂಖ್ಯಾತರು. ಇದಕ್ಕೆ ನಮ್ಮ ಸರಕಾರವನ್ನು ಅಭಿನಂದಿಸಬೇಕೆಂಬ ಅಂಶ ನನ್ನ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ’ ಎಂದು ಖ್ಯಾತ ಚಿಂತಕ, ದಾರ್ಶನಿಕ ಶ್ರೀಯುತ ಹಂಗ್ಯಾಕ ಹಾರುತಿಯವರು ನಮ್ಮ ವರದಿಗಾರನಿಗೆ ತಿಳಿಸಿದ್ದಾರೆ.

ಪರಮಪದ

ಮೆದುಹತ್ತಿಯ ಹಾಸುಗಳಂತೆ ತೇಲುತಲಿರಲು ಮುಗಿಲ ಸಾಲು
ಝಗಮಗಿಸುತ್ತ ಸರಸರನೆ ಹರಿದಿರಲು ಕೋಲ್ಮಿಂಚು
ನೇಪಥ್ಯಕೆ ಸರಿದ ಉದಯರವಿ ಕಾದು ಕುಳಿತನಲ್ಲಿ
ಹನಿಮುತ್ತುಗಳ ಭೂಚುಂಬನ ನೋಡುವ ತವಕದಲ್ಲಿ

ಮೋಡಗಳೊಡಲಿನಿಂದ ಜಾರಿತು ಹನಿಯೊಂದು
ಧರೆಯಂಗಳದಿ ಏನಿದೆಯೆಂದು ತಿಳಿಯಲೆಂದು
ಹನಿಯ ಮನವ ಕಾಡುವ ಜಿಜ್ಞಾಸೆ
ಭೂರಮೆಗೇಕಿಷ್ಟು ನೀರಿನಾಸೆ?!!!

ಗ್ರಹಣ

ಇವತ್ತು ಆಟಿ ಅಮಾವಾಸ್ಯೆ. ಗ್ರಹಣ ಬೇರೆ ನಡೆಯಲಿದೆ.
ಟಿವಿ ಚಾನೆಲ್‌ಗಳು ಜ್ಯೋತಿಷಿಗಳು ಕೆಟ್ಟದ್ದು ನಡೆಯಲಿದೆ ಎನ್ನುತ್ತಾರೆ.
ಬಹುಶ: ನೀವೂ ಉಪವಾಸ,ವ್ರತ ಮಾಡಲಿದ್ದೀರಿ.
ಗ್ರಹಣದ ಬಗ್ಗೆ ನಿಮ್ಮ ನಂಬಿಕೆಗಳೇನು?
ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಿರಾ?

ಬಾಳಿಗೊಂದು ಮುನ್ನೋಟವಿದ್ದಿದ್ದರೆ _________ ?

"ನಾಳೆ ಏನಾಗುತ್ತದೆ ಎಂದು ಇಂದೇ ಗೊತ್ತಾಗುವಂತಿದ್ದರೆ?" ಇದೊಂದು ಸರಳವಾದ ಪ್ರಶ್ನೆ. ಆದರೆ ಉತ್ತರ ಮಾತ್ರ ಅಷ್ಟು ಸರಳವಾಗಿಲ್ಲ. ಇದರ ಬಗ್ಗೆ ಪುಟಗಟ್ಟಲೆ ಬರೆಯಬಹುದು, ದಿನಗಟ್ಟಲೆ ಮಾತನಾಡಬಹುದು, ಚರ್ಚಿಸಬಹುದು. ನಮಗ್ಯಾರಿಗೂ ನಾಳೆಯ ಬಗ್ಗೆ ಅಥವಾ ನಮ್ಮ ಭವಿಷ್ಯದ ಬಗ್ಗೆ ನಿರ್ದಿಷ್ಟವಾದ ಕಲ್ಪನೆ ಇರುವುದಿಲ್ಲ.

ಒಂದು ಕೋಳಿಯ ಕಥೆ

ಇದು ನನ್ನ ಚಿಕ್ಕಂದಿನಲ್ಲಿ ನಡೆದ ಘಟನೆ. ಈ ಘಟನೆ ಪದೇ ಪದೇ ನನ್ನ ಮನಸಿನ ಪುಟಗಳ ನಡುವೆ ಸುಳಿದಾಡುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದ ಅತ್ಯಂತ ಸ್ವಾರಸ್ಯಕರ ಘಟನೆ ಎಂದು ಹೇಳಬಹುದು.

ನನ್ನ ಹುಟ್ಟೂರು ಚಿತ್ರದುರ್ಗ. ನಾನು ಆಗ ಬಹುಶಃ ೩ನೇ ತರಗತಿಯಲ್ಲಿದ್ದೆ. ಬೇಸಿಗೆ ರಜೆ ಇತ್ತು. ಬೇಸಿಗೆ ಬಂತೆಂದರೆ ಸಾಕು,ನನ್ನ ಮಾವನ ಮಕ್ಕಳಾದ ವಿನಯ ಮತ್ತು ಉದಯ ರೊಂದಿಗೆ ಬೆಳಗಿನಿಂದ ಸಂಜೆಯವರೆಗೂ ಆಟವಾಡುವುದೇ ಪರಿಪಾಠವಾಗಿರುತ್ತಿತ್ತು.

ಒಂದು ದಿನ ಬೆಳಿಗ್ಗೆ ಅವರ ಮನೆಗೆ ಹೋದೆ. ಅಂದು ಏಕೋ ಇಬ್ಬರೂ ಮನೆಯಲ್ಲಿ ಇರಲಿಲ್ಲ (ಅವರೆಲ್ಲಿ ಹೋಗಿದ್ದರು ಎಂದು ಇಂದಿಗೂ ನನಗೆ ಜ್ಞಾಪಕವಿಲ್ಲ). ಸರಿ. ಕೂತೆ,ನಿಂತೆ,ಮನೆಯಲ್ಲಿದ್ದವರೆಲ್ಲರ ಜೊತೆಯಲ್ಲೂ ಮಾತನಾಡಿದೆ. ನನ್ನ ಅತ್ತೆ ಅಂದು ಬೆಳಗ್ಗೆ ಮಾಡಿದ ತಿಂಡಿ ಕೊಟ್ಟರು,ತಿಂದೆ. ಅವರಿಬ್ಬರು ಇದ್ದಿದ್ದರೆ ಮನೆಯಲ್ಲಿದ್ದವರೊಡನೆ ಅಷ್ಟು ಸಮಯ ಕಳೆಯುತ್ತಲೇ ಇರಲಿಲ್ಲ. ಟಿ.ವಿ.ನೋಡೋಣ ಎಂದು ಕುಳಿತರೆ ಆ ಸಮಯದಲ್ಲಿ ಆ ಟಿ.ವಿ ತುಂಬಾ ನನ್ನ ಬೇಜಾರು ಇಮ್ಮಡಿಗೊಳಿಸುವಂತಹ ಘನಕಾರಿ ಕಾರ್ಯಕ್ರಮಗಳೇ ತುಂಬಿಕೊಂಡಿದ್ದವು. ಅವರು ಏಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಒಟ್ಟಿನಲ್ಲಿ ಅಂದು ನನಗೆ ರುಚಿಸುವಂತಹದ್ದು ಏನೂ ಇರಲಿಲ್ಲ ಅಲ್ಲಿ.

ಒಮ್ಮೊಮ್ಮೆ ಹೀಗೂ ಆಗುವುದು...

ಅವರಿಬ್ಬರೂ ಬಹಳ ದಿನಗಳಿಂದ ಗೆಳೆಯರು. ಸಿದ್ದು ಮತ್ತು ಅಭಿ. ಸಿದ್ದುಗೆ ಪಾನಿಪುರಿ ಎಂದರೆ ಬಲು ಇಷ್ಟ. ಹಾಗೆ ಅಭಿಗೆ ಗೋಬಿ ಮನ್ಚೂರಿ ಎಂದರೆ ಪ್ರಾಣ. ಇಬ್ಬರ ಮನೆಗಳು ಒಂದರಿಂದ ಇನ್ನೊಂದು ಸ್ವಲ್ಪ ದೂರದಲ್ಲಿದ್ದರೂ ಅವೆರಡಕ್ಕೂ ಹತ್ತಿರವಾಗುವಂತೆ ಒಂದು ಪಾರ್ಕ್ ಇತ್ತು. ಅಲ್ಲಿ ಎರಡು ಗಾಡಿಗಳು. ಒಂದು ಪಾನಿಪುರಿ ಮತ್ತೊಂದು ಗೋಬಿ.

ಪ್ರಶಸ್ತಿಗಳು: ಅಪ್ಪ, ಮಗ

ಅಪ್ಪ ಮಗ ಇಬ್ಬರಿಗೂ ಪ್ರಶಸ್ತಿ ಬಂದರೆ ಆ ಕುಟುಂಬದವರ ಬಗ್ಗೆಯೇ ಗೌರವ ಮೂಡುತ್ತದೆ, ಅಲ್ವ? ಬಾಬಾ ಆಮ್ಟೆಯವರಿಗೆ ೧೯೮೫ ರಲ್ಲಿ ಮ್ಯಾಗ್ಸೆಸೆ ಲಭಿಸಿತ್ತು. ಈ ವರುಷ ಅವರ ಮಗ ಪ್ರಕಾಶ್ ಆಮ್ಟೆಗೆ ಈ ಪ್ರಶಸ್ತಿ.

ಹೀಗೆ ಅಪ್ಪ ಮಕ್ಕಳಿಗೆ ದೊರಕಿದ ಗೌರವದ ಪ್ರಶಸ್ತಿಗಳ ಬಗ್ಗೆ ಮಾತನಾಡುವಾಗ ನನ್ನದೊಂದು ಪ್ರಶ್ನೆ:

ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ

ಡಾಕ್ಟರುಗಳಾದ ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.