ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೂಡು...

ನಕಲಿ ಹಕ್ಕಿಗಳ
ಗೂಡು ಬದಲಾಗಲು
ಅಸಲಿ ಹಕ್ಕಿಗಳಿಗೆ
ಗೂಡೇ ಇಲ್ಲದಾಯಿತು...!

-- ಶ್ರೀ

( ಇದೋ ಹತ್ತು ಹದಿನೊಂದು ಹನ್ನೆರಡು ಹದಿಮೂರು...)

ತಿಮಿರ

ತಿಮಿರ, ತಿಮರು, ತಿಮಿರು, ತಿಮುರು (ನಾಮಪದ) {ದ್ರಾವಿಡರೂಪ}
[ತಮಿಳು, ಮಲಯಾಳ: ತಿಮಿರ್‍; ತೆಲುಗು: ತಿಮ್ಮಿರಿ, ತಿಮಿರಿ, ತಿಮುರು]
೧. ತೀಟೆ; ತುರಿಕೆ; ನವೆ (ತೋಳ ತಿಮಿರವದುಳ್ಳೊಡೆಮ್ಮೊಳು ಕಾಳಗವ ಮಾಡಲ್ಲದಿದ್ದರೆ ಹೇಳಿದಾ ಕಪ್ಪವನು ತೆತ್ತೀ ತಲೆಯನುಳುಹಿಕೊಳು-ಸಾಳ್ವಕವಿ; ತಿಮರು ತುರುಸಿದರೆ ಅರಸಿನ ಹಾಗೆ-ಗಾದೆ)

ಮುತ್ತಿನ-ಶೃಂಗಾರ

ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ

ನಾನಿರುವುದೆ ನಿಮಗಾಗಿ :REMIX

ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ

ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದು ನಾನು ಬಂದು
ನಿಮ್ಮೊಡನಿಂದು ನಾನು ಬಂದು

ಚಾ(ವ)ಡಿ ಪಟ್ಟಾಂಗ

ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ!

ಒ೦ದು ನೆನಪು

ನೀರು ಬತ್ತಿದ ಮೇಲೆ ಬಾಯರಿದರೆನು
ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು
ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ
ನಡೆವ ದಾರಿಯು ಕಾಣದಾಗಿದೆ....

ನೋಟಕ್ಕೆ ಎಲ್ಲವು ಚ೦ದವಾಗಿದೆ
ಆದರೆ ಎಲ್ಲವು ನನ್ನದ್ದಲ್ಲವಲ್ಲ...
ಬೇಕೆ೦ದಾಗ ಮಾತ್ರ ಅದು ನನ್ನದು
ಬೇಡ ವಾದಾಗ ಅದು ಮತ್ಯಾರದ್ದೋ...

ನೆನಪುಗಳು ಕಾಡುತಿವೆ ನನ್ನ
ಮೆತ್ತೆಲ್ಲಿ ಬರುವುದ್ದಯ್ಯ ಆ ಬಾಲ್ಯದಲ್ಲಿ

‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ನಮ್ಮ ಧಾರವಾಡ ಎರಡು ಸಂಗತಿಗಳಿಗಾಗಿ ತುಂಬ ಪ್ರಸಿದ್ಧ. ಒಂದು ಧಾರವಾಡದ ಲೈನ್ ಬಜಾರದ ಬಾಬುಸಿಂಗ ಠಾಕೂರ್ ಅವರ ಪೇಢ ರುಚಿಗಾಗಿ. ಮತ್ತೊಂದು ಬೆಳಗಾವಿ ರಸ್ತೆಯ..ಹುಚ್ಚರ ಆಸ್ಪತ್ರೆಗಾಗಿ!

ಆಕಾಶವಾಣಿಯ ಅಧಿಕಾರಿಯಾಗಿದ್ದ ಹಿರಿಯ ಸಾಹಿತಿ, ಹರಟೆಗಾರ ಹಾಗು ಬೇಂದ್ರೆ ಅವರ ‘ಗೆಳೆಯರ ಗುಂಪಿ’ನ ಪ್ರಮುಖ ಸದಸ್ಯರಾಗಿದ್ದ ದಿವಂಗತ ಎನ್ಕೆ ಒಂದು ಮಾತನ್ನು ಸದಾ ಹೇಳುತ್ತಿದ್ದರು. ಅದು ವರಕವಿ ಬೇಂದ್ರೆ ಅವರ ಹಾಸ್ಯಪ್ರಜ್ನೆ ಬಿಂಬಿಸುತ್ತಿತ್ತು.

‘ಧಾರವಾಡದಾಗ ಯಾರರೆ ನಿಂತು ಕಲ್ಲು ಒಗದರ(ಹೂವಿನ ಬದಲಾಗಿ!) ಅದು, ಕವಿ ಮನೆ (ಅಥವಾ ತಲೆ!), ಸಾಹಿತಿ, ನಾಟಕಕಾರ ಮತ್ತು ಸಂಗೀತಗಾರನ ಮೇಲೆ ಬೀಳುವುದು ಗ್ಯಾರಂಟಿ’ ..ಕವಿ ಮಾತಿಗೆ ವಿರಾಮ ಕೊಡುವ ಮೊದಲೇ ಯಾರು ಅಡ್ಡ ಪ್ರಶ್ನೆ ಕೇಳಿದರು. ‘ಸರ್..ಹುಚ್ಚರ ಮ್ಯಾಲೂ..?’