ತಿಮಿರ

ತಿಮಿರ

ಬರಹ

ತಿಮಿರ, ತಿಮರು, ತಿಮಿರು, ತಿಮುರು (ನಾಮಪದ) {ದ್ರಾವಿಡರೂಪ}
[ತಮಿಳು, ಮಲಯಾಳ: ತಿಮಿರ್‍; ತೆಲುಗು: ತಿಮ್ಮಿರಿ, ತಿಮಿರಿ, ತಿಮುರು]
೧. ತೀಟೆ; ತುರಿಕೆ; ನವೆ (ತೋಳ ತಿಮಿರವದುಳ್ಳೊಡೆಮ್ಮೊಳು ಕಾಳಗವ ಮಾಡಲ್ಲದಿದ್ದರೆ ಹೇಳಿದಾ ಕಪ್ಪವನು ತೆತ್ತೀ ತಲೆಯನುಳುಹಿಕೊಳು-ಸಾಳ್ವಕವಿ; ತಿಮರು ತುರುಸಿದರೆ ಅರಸಿನ ಹಾಗೆ-ಗಾದೆ)
೨. ಸೊಕ್ಕು; ಪೊಗರು; ಗರ್ವ; ಅಹಂಕಾರ (ಒಬ್ಬೊಬ್ಬರಿಗೆ ತಿಮುರು ಇಳಿಸಿಬಿಟ್ಟೇನು-ರೂಢಿ)
೩. ಸೊಕ್ಕಿದವನು; ಬಲಿಷ್ಠನಾದವನು (ಒಳ್ಳೇ ತಿಮುರಾಗಿದ್ದ ಮಗ . . -?)

ತಿಮಿರ (ನಾಮಪದ) {ಸಂಸ್ಕೃತರೂಪ}
೧. ಕತ್ತಲೆ; ಅಂಧಕಾರ (ಭವರೋಗವೆಂಬ ತಿಮಿರ ಹರಿಯದನ್ನಕ್ಕ ಕೂಡಲಸಂಗಯ್ಯನೆತ್ತ ನೀನೆತ್ತ ಮರುಳೆ-ಬಸವ; ತಿಮಿರಕ್ಕೆ ರವಿ ದಸ್ಯು, ಜ್ಞಾನಮಜ್ಞಾನಕ್ಕೆ ದಸ್ಯು-ಶ್ರೀರಾಮಾಯಣದರ್ಶನಂ). ೨. ಕಣ್ಣಿನ ಒಂದು ರೋಗ ೩. ತಮೋಗುಣ ೪. ದುಃಖ, ಶೋಕ ೫. ರಾಹು ೬. ದಡ್ಡತನ, ತಿಳಿಗೇಡಿತನ ೭.ಠಕ್ಕತನ, ಕುಟಿಲತಂತ್ರ, ಕುಯುಕ್ತಿ ೮. ತಪ್ಪು, ದೋಷ ೯. ಕುರುಡುತನ, ಅಂಧತ್ವ

(ಇತರ ಪ್ರಯೋಗಗಳು: ತಿಮಿರಗಣ್ಣು=ಕುರುಡಾದ ಕಣ್ಣು; ತಿಮಿರಪಟಲ=ಕತ್ತಲೆಯ ರಾಶಿ; ತಿಮಿರರೋಗ=ಕಣ್ಣಿನ ಒಂದು ರೋಗ, ಕುರುಡುತನವನ್ನುಂಟುಮಾಡುವ ರೋಗ; ತಿಮಿರವಾತ=ವಾತರೋಗಗಳಲ್ಲಿ ಒಂದು ಬಗೆ; ತಿಮಿರಾಕ್ಷ=ಕುರುಡ, ದೃಷ್ಟಿಹೀನ; ತಿಮಿರಾಪಹ=ಕುರುಡುತನವನ್ನು ಕಳೆಯಬಲ್ಲ; ತಿಮಿರಾರಿ=ಕತ್ತಲೆಯ ಶತ್ರು, ಸೂರ್ಯ; ತಿಮಿರಾಸ್ತ್ರ=ಕತ್ತಲೆಯನ್ನುಂಟುಮಾಡುವ ಬಾಣ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet