ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆದಾಯ

ಆದಾಯ ಎನ್ನುವುದು ಒಂದು ಪಾದರಕ್ಷೆ ಇದ್ದಂತೆ.

ಚಿಕ್ಕದಾದರೆ ಕಚ್ಚುತ್ತದೆ,

ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ

ಧರ್ಮಿಷ್ಟರ ದಂಧೆ

"ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!" ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು. ಒಪ್ಪಿಗೆಯಾಗದವರು ಒಂದೆರಡು ಕ್ಷಣ ದುರುದುರು ಎಂದು ನೋಡಿ "ಹಾಳಾಗಿ ಹೋಗಲಿ" ಎಂಬಂತೆ ಇನ್ನೊಂದತ್ತ ತಿರುಗಿದರು.

ಈ ಒಂದು ವಾರದಲ್ಲಿ ಸಿಡ್ನಿಯ ಮಂದಿಗೆ ತಮ್ಮ ನಂಬಿಕೆಯ ಬಗ್ಗೆಯಷ್ಟೇ ಅಲ್ಲ - ಆದರೆ ಕ್ಯಾತಲಿಕ್ ಎಂಬ ಬಹುದೊಡ್ಡ  ಸಂಯೋಜಿತ ಧರ್ಮದ ಬಗ್ಗೆ ತಲೆಯಲ್ಲಿ ಹಲವು ಯೋಚನೆ ಅನುಮಾನ ಅಭಿಮಾನ ಎಲ್ಲ ಮೂಡಿ ಮುಳುಗುತ್ತಿದೆ. ನೂರಾರು ಸಾವಿರ ಮಂದಿ ಸೇರಬೇಕೆ ಅದೂ ಈ ಕಾಲದಲ್ಲಿ ಅಂದಾಗ ಇಸ್ಲಾಂ ಧರ್ಮದ ಹಜ್ ಯಾತ್ರೆಯನ್ನು ನೆನಪಿಸುತ್ತಾರೆ. ಹಿಂದೂಗಳ ಪ್ರತಿ ಹಬ್ಬಕ್ಕೂ ಹತ್ತಾರು ಸಾವಿರವಾದರೂ ಸೇರುವುದನ್ನೂ, ಕುಂಭಮೇಳಕ್ಕೆ ಕೋಟಿ ಕೋಟಿಯಲ್ಲಿ ಸೇರುವುದನ್ನು ಎತ್ತಿ ತೋರಿಸುತ್ತಾರೆ. ಒಬ್ಬರಿಗಿರುವ ನಂಬಿಕೆ ಇನ್ನೊಬ್ಬರಿಗೆ ಬೇಡವೇ ಎಂಬಂತೆ ಮುಖ ನೋಡುತ್ತಾರೆ.

ಜಾಗತಿಕ ಯುವ ದಿನ ಎಂದು ಕ್ಯಾತಲಿಕ್ ಚರ್ಚ್ ಹಮ್ಮಿಕೊಳ್ಳುವ ಈ ಉತ್ಸವ ಎರಡು ವರ್ಷಕೊಮ್ಮೆ ನಡೆಯುತ್ತದಂತೆ. ಸಿಡ್ನಿಗೆ ನೂರಾರು ಸಾವಿರ ಮಂದಿ ಬಂದಿಳಿದು ಗದ್ದಲ ಶುರುಮಾಡಿದ್ದಾರೆ. ಸಿಡ್ನಿಯ ಮುಖ್ಯ ಬೀದಿಗಳೆಲ್ಲಾ ಮುಚ್ಚಲಾಗಿದ್ದು ಧರ್ಮಿಷ್ಟರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ. ಸಿಡ್ನಿಯ ನಡುವಲ್ಲಿರುವ ಚಂದವಾದ ಡಾರ್ಲಿಂಗ್ ಹಾರ್ಬರಿನಲ್ಲಿ ಪೋಪಜ್ಜನ ಮಾಸ್ ಅಂತೆ. ನಂತರ ಸಿಡ್ನಿಯನ್ನು ಆವರಿಸಿರುವ ಸಾಗರದ ಒಳನೀರುಗಳಲ್ಲಿ ಪೋಪಜ್ಜನ ಬೋಟಕೇಡ್ ಅಂತೆ.

ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)

ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ ..

ಎರಡು ಪುಟ್ಟಾತಿಪುಟ್ಟ ಕತೆಗಳು ..

೧) ಜಯಂತ ಕಾಯ್ಕಿಣಿಯವರ ಕತೆಗಳು ನಿಜಕ್ಕೂ ಅದ್ಭುತ ಕತೆಗಳು. ನನ್ನ ಗೆಳೆಯನೊಬ್ಬನಿಗೆ ಅವುಗಳನ್ನು ಕೊಟ್ಟು ಓದಿಸೋಣ ಅಂತ ಆ ಮೂರೂ ಕಥೆ ಪುಸ್ತಕಗಳನ್ನು( ತೂಫಾನ್ ಮೇಲ್ , ಜ.ಕಾ.ಕಥೆಗಳು , ಬಣ್ಣದ ಕಾಲು) ಕೊಂಡು ಅವನ ಮನೆಗೆ ಹೋದೆ . ಅವನಿಗೆ ಕೊಟ್ಟೆ. ಅವನು ಟೇಬಲ್ ಮೇಲೆ ಇಡೋ ಹೊತ್ತಿಗೇ ಅವನ ಮಾವ ಬಂದ್ರು . ನಾನು ಓದ್ತೀನಿ ಅಂತ ತಕೊಂಡೋದ್ರು.

ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

ಬೆಂಗಳೂರಿನ ಬಾಂಧವರೇ,

ಇತ್ತೀಚೆಗೆ ಬಂದ ಸುದ್ದಿಯೊಂದರ ಪ್ರಕಾರ ಬೆಂಗಳೂರಿನೆಲ್ಲೆಡೆ ಇನ್ನೂ 2-3 ದಿನಗಳ ಕಾಲ ಬರ ಉಂಟಾಗಲಿದೆ.

ಕಾವೇರಿ 4ನೇ ಹಂತದಲ್ಲಿ ಪ್ರಮುಖ ನೀರು ಪೂರೈಕೆ ಲೈನನ್ನು ಮರುಜೋಡಿಸುವ ಕೆಲಸ ನಡೆಯಲಿರುವುದರಿಂದ ಉಚ್ಚನ್ಯಾಯಾಲಯದ ನಿರ್ದೇಶನದಂತೆ ನೀರು ಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ತಿಳಿದುಬಂದಿದೆ.

ಮಕ್ಕಳ ಮುಗ್ಧ ಪ್ರೀತಿ

ಇವತ್ತು ಬೆಳಗ್ಗೆ ಕಛೇರಿಗೆ ಹೊರಡ್ತಾ ನನ್ನ ಪತ್ನಿ ಊರಿನಿಂದ ತಂದ ಸಿಹಿತಿಂಡಿಯನ್ನು ಕಟ್ಟಿಕೊಟ್ಟಳು. ಇದನ್ನು ನೋಡಿದ ನಮ್ಮ ಎರಡು ವರ್ಷದ ಮಗರಾಯ ತನ್ನ ಸೇವೆಯನ್ನೂ ಮಾಡಲು ಹೊರಟ. ಅವನಿಗೆ ಸುಲಭವಾಗಿ ಸಿಗುವುದು ತಂಗಳ ಪೆಟ್ಟಿಗೆಯ (ಪ್ರಿಜ್ ) ಪ್ರೀಜರ್ ವಿಭಾಗ. ಅಲ್ಲಿರುವ ಐಸ್ ಕ್ರೀಮ್ ಅವನಿಗೆ ಅತಿ ಪ್ರೀತಿಯ ವಸ್ತು, ಅದರಿಂದ ಅವನಿಗೆ ಆ ವಿಭಾಗ ಚಿರಪರಿಚಿತ.

ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

ಈತನ ಹೆಸರು ಬಸಪ್ಪ ಫಕೀರಪ್ಪ ಮುಳಗುಂದ. ವಯಸ್ಸು ೭೫ ವರ್ಷ.

ಧಾರವಾಡದ ವಿರಕ್ತಮಠ ಓಣಿಯ ಮೂವತ್ತಡಿಯ ಪುಟ್ಟ ರಸ್ತೆಯ ಒಂದು ಪಕ್ಕದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ಈತ ಠಿಕಾಣಿ ಹೂಡ್ಡಿದ್ದಾನೆ. ಯಾರನ್ನೂ ಏನೂ ಕೇಳುವುದಿಲ್ಲ. ಯಾರಾದರೂ ಹಣ ಅಥವಾ ಆಹಾರ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ರಸ್ತೆ ಪಕ್ಕ, ಚರಂಡಿ ಮೇಲೆ ದಿನಕ್ಕೆ ಎರಡು ಹೊತ್ತು ಅಡುಗೆ ಮಾಡುತ್ತಾನೆ. ಉಳಿದಂತೆ ಅವರಿವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ರಾತ್ರಿಯಾಗುತ್ತಲೇ ಅಲ್ಲೇ ರಸ್ತೆ ಪಕ್ಕ ಮಲಗಿ ಬಿಡುತ್ತಾನೆ.

ಕಳೆದ ಮೂವತ್ತೆರಡು ವರ್ಷಗಳಿಂದ ಒಂದು ದಿನವೂ ವ್ಯತ್ಯಾಸವಾಗದಂತೆ ಈತ ಇಂತಹ ಬದುಕನ್ನು ನಡೆಸುತ್ತ ಬಂದಿದ್ದಾನೆ. ಒಂದು ವೇಳೆ ಈತ ಯಾರಿಂದಾದರೂ ಏನನ್ನಾದರೂ ಕೇಳ್ದಿದರೆ ಅದು ‘ವೇಳೆ ಎಷ್ಟು?’ ಎಂದು ಮಾತ್ರ.

ಅಕೇಷಿಯಾ ಹಾಗು ಯುಕೆಲಿಪ್ಟಸ್ ‘ತೋಪಿ’ಗೆ ಧಾರವಾಡದ ಅಂತರ್ಜಲ ‘ತೋಪು’!

"ಹೂವು ಹೊರಳುವವು
ಸೂರ್ಯನ ಕಡೆಗೆ,
ನಮ್ಮ ದಾರಿ ಬರಿ
ಚಂದ್ರನ ವರೆಗೆ..."

‘ಚೆಂಬೆಳಕಿನ ಕವಿ’ ನಾಡೋಜ ಚೆನ್ನವೀರ ಕಣವಿ ಅವರು ಅತ್ಯಂತ ಸುಂದರವಾಗಿದ್ದ ಧಾರವಾಡದ ಅಂದಿನ ಸ್ವಚ್ಛಂದ ಪರಿಸರವನ್ನು ಆಸ್ವಾದಿಸುತ್ತ ಮನದುಂಬಿ ಉದ್ಧರಿಸಿದ ವಾಕ್ಯಗಳಿವು.

ಆದರೆ ಇಂದು ಕವಿಯ ಕಲ್ಯಾಣನಗರದ ಮನೆಯಿಂದ ಕೇವಲ ಹತ್ತಾರು ಹೆಜ್ಜೆ ದೂರದ ಆ ಸ್ವಚ್ಚಂದ ಗಿರಿ-ಕಾನನದ ಪರಿಸರ ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಂಡಿದೆ. ಗುಡ್ಡಗಳಂತೂ ನೆಲಸಮವಾಗಿವೆ. ಕಾಡು ಪ್ರಾಣಿಗಳು, ಪಕ್ಷಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ನೆರಳು ನೀಡುವ ಗಿಡಗಳು ಸಹ ಇನ್ನಿಲ್ಲವಾಗಿವೆ. ಕೆರೆಗಳು ಮರಣಶಯ್ಯೆಯಲ್ಲಿವೆ. ಸಾಂಸ್ಕೃತಿಕ ರಾಜಧಾನಿ ಕ್ರಮೇಣ ಬಂಜೆಯಾಗುತ್ತಿದೆ. ಧಾರವಾಡ ಕಳೆದ ಕೇವಲ ೩೦ ವರ್ಷಗಳಲ್ಲಿ ಸಾಧಿಸಿದ ‘ಪ್ರಗತಿ’ಯ ಓರೆ ನೋಟ ಇದು!