ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
ಬೆಂಗಳೂರಿನ ಬಾಂಧವರೇ,
ಇತ್ತೀಚೆಗೆ ಬಂದ ಸುದ್ದಿಯೊಂದರ ಪ್ರಕಾರ ಬೆಂಗಳೂರಿನೆಲ್ಲೆಡೆ ಇನ್ನೂ 2-3 ದಿನಗಳ ಕಾಲ ಬರ ಉಂಟಾಗಲಿದೆ.
ಕಾವೇರಿ 4ನೇ ಹಂತದಲ್ಲಿ ಪ್ರಮುಖ ನೀರು ಪೂರೈಕೆ ಲೈನನ್ನು ಮರುಜೋಡಿಸುವ ಕೆಲಸ ನಡೆಯಲಿರುವುದರಿಂದ ಉಚ್ಚನ್ಯಾಯಾಲಯದ ನಿರ್ದೇಶನದಂತೆ ನೀರು ಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ತಿಳಿದುಬಂದಿದೆ.
ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿ ಚನ್ನಸಂದ್ರದ ಬಳಿ ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಬಳಿ ಹಾದುಹೋಗುವ ಈ ಪೂರೈಕೆ ಮಾರ್ಗವನ್ನು ಒಪ್ಪಿತ ಕಾರಿಡಾರ್ ಜೋಡಣೆಯಂತೆ ಈಗಾಗಲೇ ನಿಗದಿಯಾಗಿರುವಂತೆ ಸ್ಥಳಾಂತರಿಸಲಾಗುವುದು. ಈ ವ್ಯಾಜ್ಯವು ಬಹಳ ದಿನಗಳ ಕಾಲದಿಂದ ನಡೆಯುತ್ತಿದ್ದು, ಉಚ್ಚನ್ಯಾಯಾಲಯವು BWSSBಗೆ ಈ ಪೂರೈಕೆ ಮಾರ್ಗವನ್ನು ಮರುಜೋಡಿಸುವಂತೆ ನಿರ್ದೇಶಿಸಿದೆ.
ಈ ವರ್ಗಾವಣೆಗೆ ಈಗಾಗಲೇ ಇರುವುದರ ಜೊತೆಗೆ ಹೊಸ ಮಾರ್ಗವನ್ನು ಜೋಡಿಸುವ ಅಗತ್ಯವಿದೆ. ಈ ಉದ್ದೇಶಕ್ಕಾಗಿ, ಮೂರು ದಿನಗಳ ಕಾಲ ಪಂಪುಗಳನ್ನು ನಿಲ್ಲಿಸಲಾಗುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
BWSSB ಸಾರ್ವಜನಿಕರು ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ ನೀಡಿದೆ. ಜುಲೈ 20ರಿಂದ ಎಂದಿನಂತೆ ನೀರು ಪೂರೈಕೆಯಾಗಲಿದೆ.
ನೀರು ಪೂರೈಕೆ ವ್ಯತ್ಯಯ ಉಂಟಾಗುವ ಪ್ರದೇಶಗಳೆಂದರೆ:
ಉತ್ತರ ವಿಭಾಗ: ಸಹಕಾರ ನಗರ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರದ ಕೆಲ ಭಾಗಗಳು, ದಾಸರಹಳ್ಳಿ, ಜಾಲಹಳ್ಳಿ ಕೆಲ ಭಾಗಗಳಿ, ಸಿದ್ಧಾರ್ಥನಗರ, ಬಿಐಎಎಲ್
ದಕ್ಷಿಣ ವಿಭಾಗ: ಬಿಟಿಎಂ ಬಡಾವಣೆ, ಜೆಪಿ ನಗರ, ಮಾರುತಿನಗರ, ವಿಜಯಬ್ಯಾಂಕ್ ಬಡಾವಣೆ, ಎಲೆಕ್ಟ್ರಾನಿಕ್ಸ್ ಸಿಟಿ
ದಕ್ಷಿಣ-ಪೂರ್ವ ವಿಭಾಗ: ನಂಜರೆಡ್ಡಿ ಕಾಲೋನಿ , ಮುರುಗೇಶ್ ಪಾಳ್ಯ, ವಿನಾಯಕ ಬಡಾವಣೆ, ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಇಸ್ರೋ ಬಡಾವಣೆ, ಎನ್ಎಎಲ್, ಕೋಡಿಹಳ್ಳಿ,ಮ ಐಐಎಂ ವಿಮಾನನಿಲ್ದಾಣ, ಕೋರಮಂಗಲ ಮೊದಲನೇ ಬ್ಲಾಕ್, ಟೀಚರ್ಸ್ ಕಾಲೊನಿ, ಜಕ್ಕಸಂದ್ರ ಬಡಾವಣೆ, ಸಿಪಿಡಬ್ಲುಡಿ ಕ್ವಾರ್ಟ್ರಸ್, ಕೆಎಸ್ಆರ್ಪಿ ಕ್ವಾರ್ಟ್ರಸ್ (4ನೇ ಬ್ಲಾಕ್ ವರೆಗೆ), ಎಚ್ ಎಸ್ ಆರ್ ಬಡಾವಣೆ
ಕೇಂದ್ರ ವಿಭಾಗ: ಓಕಳೀಪುರಂ
ಪೂರ್ವ ವಿಭಾಗ: ಕೊನೇನ ಅಗ್ರಹಾರ, ಬಿಡಿಎ ಬಡಾವಣೆ, ಎ ಎಚ್ ಎಲ್ ಫ್ಯಾಕ್ಟರಿ, ಮಾರತಹಳ್ಳಿ ಡಿಫೆನ್ಸ್ ಕ್ವಾರ್ಟ್ರಸ್, ಆಕಾಶ್ ವಿಹಾರ್ ಕೆಲ ಭಾಗಗಳು, ಎ ಇ ಸಿ ಎಸ್ ಬಡಾವಣೆ, ಗರುಡಾಚಾರ್ ಪಾಳ್ಯ, ಮಹಾದೇವಪುರದ ಕೆಲ ಭಾಗಗಳು, ಬಿ-ನಾರಾಯಣಪುರ, ಕೆಐಎಡಿಬಿ ಪ್ರದೇಶ, ಐಟಿಪಿಎಲ್.
ಪಶ್ಚಿಮ ವಿಭಾಗ: ನಾಗರಬಾವಿ (ಎಲ್ಲಾ ಹಂತಗಳು), ಚಂದ್ರ ಬಡಾವಣೆ, ವಿಜಯನಗರ, ಹಂಪಿನಗರ, ಆರ್ ಆರ್ ನಗರ, ಕೆಂಗೇರಿ, ಡಬ್ಲುಸಿಆರ್ 2ನೇ ಹಂತ, ಮಹಾಲಕ್ಷ್ಮಿ ಬಡಾವಣೆ, ಮಾಗಡಿ ರಸ್ತೆ
Comments
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
In reply to ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! by hpn
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
In reply to ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! by shashikannada
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
In reply to ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! by vikashegde
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
In reply to ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! by madhava_hs
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!