ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಸಿಗೆ

ಹಾಸಿಗೆ (ನಾಮಪದ)

ಪಾಸುಗೆ (ಬೀಸುವುದೊಮ್ಮೆ ಪಿಡಿದು ಬಿಜ್ಜಣಿಗೆಯ ಪಾಸುವುದೊಮ್ಮೆ ಪಾಸಿಗೆಯ - ಹದಿಬದೆಯಧರ್ಮ; ಹಾವು ಎನ್ನ ಹಾಸಿಗೆಯಂತೆ ಕದ್ದು ಬೆಣ್ಣೆಯ ನಾ ತಿಂದೆನಂತೆ - ಪುರಂದರದಾಸರು; ಹಾಸಿಗೆಯಿದ್ದಷ್ಟು ಕಾಲುಚಾಚು - ಗಾದೆ)

[ತುಳು: ಹಾಸಿಗೆ]

ರಾಧೆಗೊಬ್ಬನಿದ್ದ ಕೃಷ್ಣ

ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು
ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು
ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ
ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು
ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು
ಒಡಲ ಬೇಗೆಗೆ ಇಂದು ಬೇಡ ಮೃಗತೃಷ್ಣ

ಹರಿವ ಯಮುನೆಗು ಇಲ್ಲಿ ನಿನ್ನ ವಿರಹದ ತಪನ

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..

ರಾಜರ ಕಾಲದಲ್ಲಿ ಆನೆಗಳು ಯುದ್ಧಕ್ಕೆ, ಸರಕು ಸಾಗಿಸಲು ಬೇಕಾಗುತಿತ್ತು.
ಹಬ್ಬದ ಸಮಯದಲ್ಲಿ ಜನರಿಗೆ ತನ್ನ ಸೈನ್ಯಬಲ ತೋರಿಸಲು ಕುದುರೆ, ಆನೆಗಳೊಂದಿಗೆ ಮೆರವಣಿಗೆ ಹೋಗುವುದು ರಾಜರಿಗೆ ಹೆಮ್ಮೆಯ ವಿಷಯ.

ಅದೇ ಈಗ ವಿಜಯದಶಮಿಗೆ ಎಲ್ಲೋ ಇದ್ದ ಅರ್ಜುನ,ದ್ರೋಣ,ಬೀಷ್ಮ..ರನ್ನು ಒಟ್ಟುಗೂಡಿಸಿ ಮೆರವಣಿಗೆ ಮಾಡುವ ಅಗತ್ಯವಿದೆಯಾ?

ರಾಧೆಗೊಬ್ಬನಿದ್ದ ಕೃಷ್ಣ

ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು
ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು
ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ
ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು
ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು
ಒಡಲ ಬೇಗೆಗೆ ಇಂದು ಬೇಡ ಮೃಗತೃಷ್ಣ

ಹರಿವ ಯಮುನೆಗು ಇಲ್ಲಿ ನಿನ್ನ ವಿರಹದ ತಪನ
ಗೋಪ ನಂದನದಲ್ಲು ಇಲ್ಲ ಚಿಲಿಪಿಲಿ ರಣನ
ಹೂಗೆ ಧನ್ಯತೆಯಿಲ್ಲ ನೀ ಬರದೆ ರಂಗ
ಹಸಿರ ತೃಣಗಳಿಗಿಲ್ಲ ನಿನ್ನ ಪಾದಸ್ಪರ್ಶ
ಮೇವ ಗೋಗಳಿಗಿಲ್ಲ ನಿನ್ನ ಕೊಳಲಿನ ಕರ್ಷ
ಮಂಕು ಬಡಿದಂತಿಹವು ಜಿಂಕೆ ಸಾರಂಗ

ಕಿರಿಯರ ನುಡಿ

ಕಿರಿಯರು ನುಡಿದರೂ ಕೇಳುವರು
ಅರಿತಂತಹ ಹಿರಿಮನದವರು; ನೇ
ಸರ ಕಿರಣವು ತಲುಪದೆಡೆಗೂ ಸೊ-
ಡರಿನ ಬೆಳಕು ತೊಳಗುವುದೆಂದು

(ಹಿತೋಪದೇಶದ ಒಂದ ಶ್ಲೋಕದ ಅನುವಾದ)

ಮೂಲ ಹೀಗಿದೆ:

ಬಾಲಾದಪಿ ಗೃಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ
ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಂ

-ಹಂಸಾನಂದಿ

ಹರಿ-ಗಿರಿ ಸವಿ ದಿನ

ತಿಂಗಳ ಕೊನೆಯ ಕಡೆಯ ದಿನ
ಸಂಬಳದ ಕನಸ ನೆನೆವ ದಿನ
ನಡೆದ ಹಾದಿಯಲಿ ಸೈಕಲ್ ತುಳಿದ ದಿನ
ಮರೆಯಲಿ ನಿಂತು ಜಗವ ಮರೆತ ದಿನ
ಮರೆಯದಿರು ಗೆಳೆಯ
ಮೋಟು ಬೀಡಿಯ ಸವಿದ ದಿನ

ಬದುಕಲ್ಲಿ ಸವಿಯಲು ಬೇಕು
ಸವಿ ಸವಿ ನೆನಪು
ನನ್ನ ಗೆಳೆತನದ ಕೋಟೆಯ
ಕೋಟಿ ಸವಿನೆನಪುಗಳ ಸಾಲಿನಲ್ಲಿ
ಈ ನೆನಪು ಅಮರ
ಓ ನನ್ನ ಸುಂದರ ಗೆಳೆಯ
ಮರೆಯದಿರು ಆ ರುಚಿಯ
ಸವಿದ ಸವಿಯ ದಿನ

ಭಾಷೆ ಮತ್ತು ನದಿ

ಹಿಂದೆ ನದಿ ಪಾತ್ರದಲ್ಲಿ ಜನ ವಾಸಿಸುತ್ತಿದ್ದರು. ಅವರದೇ ಒಂದು ಜನಾಂಗವಾಗುತ್ತಿತ್ತು. ಅವರ ಸಮೂಹ ನಡವಳಿಕೆಗಳು ಕ್ರಮೇಣ ನಾಗರೀಕತೆಗಳಾಗಿ ಸಮಾಜ, ಸಹಕಾರ, ನೀತಿ ಸಂಹಿತೆಗಳು ಆಚಾರಕ್ಕೆ ಬಂದವು ಅಂದುಕೊಳ್ಳೋಣ. ಮಾನವ ಮೊದಮೊದಲು ಎರಡು ಕಲ್ಲನ್ನು ಕುಟ್ಟಿ ಬೆಂಕಿ ಹುಟ್ಟಿಸಿ ನಂತರ ಆಹಾರ ತಯಾರಿಸಲು ಕಲಿತ. ಅದು ಶಿಲಾಯುಗವಾಯ್ತು.