ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....

ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....

ಬರಹ

ನಾನು ಚಿಕ್ಕವನಾಗಿದ್ದಾಗ, ಓದಿದ ಕಥೆಯ ನೆನಪು. ನೀವೂ ಅದನ್ನು ಓದಿರಲು ಸಾಧ್ಯ ! ಇದು ಒಂದು ರಶ್ಯದೇಶದ ಕಥೆ. ಅಲ್ಲಿನ ಗ್ರಾಮವೊಂದರಲ್ಲಿ ಕೆಲಸಮಾಡುವ ಬೇಸಾಯಗಾರನ ಮಡದಿ, ತನ್ನ ಹೊಲದಲ್ಲಿ ಕೆಲಸಮಾಡುತ್ತಿರುವಾಗ, ಏನೋಕಾರಣದಿಂದ, ತನ್ನ ಪ್ರೀತಿಯ ಪುಟ್ಟಮಗುವನ್ನು ಸ್ವಲ್ಪಕಾಲ ಅಗಲಿರುತ್ತಾಳೆ. ಮಗು, ಗಟ್ಟಿಯಾಗಿ ಅಳುತ್ತಿರುತ್ತದೆ. ಪಕ್ಕದ ಹೆಂಗೆಳೆಯರು, ತಮ್ಮ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಮಗುವಿನ ರೋದನವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. "ಯಾರು ನಿನ್ನತಾಯಿ, ಅವರ ಹೆಸರೇನು, ಹೇಗಿದ್ದಾರೆ ಅವರು "? ಇದಕ್ಕೆ ಉತ್ತರ, " ವಿಶ್ವದಲ್ಲೇ ಅತಿ ಸುಂದರಿ ನಮ್ಮಮ್ಮ, ಅವರು ನನಗೆ ಬೇಕು " ಮಗು ಅಳುತ್ತಲೇ ಇದೆ. ಯಾರಿಗೂ ಮಗುವಿನ ಅಳಲನ್ನು ಅರ್ಥಮಾಡಿಕೊಳ್ಲಲಾಗಲಿಲ್ಲ. ಸರಿ, ಯಾರನ್ನು ತೋರಿಸಿದರೂ ಮಗು ಸುಮ್ಮನಾಗಲೇ ಇಲ್ಲ. ಸುಂದರವಾಗಿದ್ದ ತಾಯಂದಿಯರೆಲ್ಲಾ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ! ಸ್ವಲ್ಪಸಮಯವಾದಮೇಲೆ, ವಯಸ್ಸಾಗಿದ್ದ, ಜೋಲುಮುಖದ, ನೋಡಲು ಅಷ್ಟೇನೂ ಮುದಕೊಡದ ಹೆಂಗಸು, ಆ ಮಗುವಿನ ತಾಯಿ, ಅಳುತ್ತಾ ಓಡಿಬಂದರು. ಮಗುವನ್ನು ಎತ್ತಿಮುದ್ದಾಡಿ ಸಮಾಧಾನಮಾಡಿದರು. ಖಂಡಿತವಾಗಿ ಆ ಮಗುವಿಗೆ ತನ್ನ ತಾಯಿ, ವಿಶ್ವದಲ್ಲೇ ಅತಿಸುಂದರಿ ! ಮಾತೃವಿನ ಮಮತೆ, ಅತಿಸುಂದರ, ಅಲ್ಲವೇ !

ಆದರೆ ಇಂದಿನಮಕ್ಕಳು, ನನ್ನ ತಾಯಿ ಸುಂದರಿಯಲ್ಲ, ಎಂದು ಕಟುಸತ್ಯವನ್ನು ಬಯಲಿಗೆಳೆಯಬಹುದು ! ಏನಂತೀರ.