ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಗ್ರಹ

ಮನದಿ ಬಚ್ಚಿಟ್ಟ ನೆನಪುಗಳು
ಮರುಕಳಿಸುತ್ತವೆ
ನಗೆಯಿಲ್ಲದ ಮುಖಗಳಲ್ಲಿ
ವಿಷಾದದ ಗೆರೆ ಇಣುಕುವಾಗ

ಅತೃಪ್ತ ಮನದಲ್ಲಿ
ನೂರಾರು ಬಯಕೆಗಳು
ಹುಚ್ಚೆದ್ದು ಕುಣಿವಾಗ
ನೆಲ- ಆಗಸಕ್ಕೆ ಅಂತರವಿಲ್ಲವೆನುವಿರಿ
ನೀವು...
ಕಿರುನಗೆಯೊಂದ ಸೂಸಲು
ಅಷ್ಟೊಂದು ಚಿಂತೆಯೇಕೆ?

ಇಹಲೋಕದ ನಾಲ್ಕು ದಿನದ
ಜೀವನದ ಪಯಣದೊಳು
ಬಡವ ಬಲ್ಲಿದನೆಂದು
ಭೇದ ಕಾಣುವಿರೇಕೆ
ಮಂದಹಾಸಕ್ಕೂ ಇದೆಯೇ

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೩

ಬದುಕಿನ ಬಗ್ಗೆ ಬೇಂದ್ರೆ ಅವರು ಇಟ್ಟುಕೊಂಡಿದ್ದು ಅನನ್ಯವಾದ ಪ್ರೀತಿ. ಜೀವನದ ಆಭಾರ ಸಹಿಸಲು ಅಸಾಧ್ಯವಾದರೂ ಸಿಹಿ-ಕಹಿಯ ಸಮತೂಕದ ರಸಪಾಕದಂತೆ ಬೇಂದ್ರೆ ಇದ್ದರು. ಬೇಂದ್ರೆ ಮಾತಿನಲ್ಲಿ ವಿವರಿಸುವುದಾದರೆ.."ಇದ್ದಕ್ಕಿದ್ದಂತೆ ಮಗ ತೀರಿಹೋದ. ಈ ಆಘಾತದಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಮತ್ತೊಬ್ಬ ಮಗ ವಿಧಿ ವಿಲಾಸಕ್ಕೆ ಬಲಿಯಾದ.

ಆ ಹುಡುಗಿ

ಲಾಲ್‌ಬಾಗ ಪುಷ್ಪಪ್ರದರ್ಶನ, ಎಲ್ಲೆಡೆ ಜನ ಜಂಗುಳಿ, ಒಂದು ಹುದುಗರ ಗುಂಪೂ ಅಲ್ಲಿ ಬಂದಿತ್ತು
ಆ ಹುಡುಗಿ ಸುಮಾರು 19 ವರ್ಷವಿರಬೇಕುಎರೆಡು ಜಡೆ ಭುಜದ ಮೇಲೆ ಕುಣಿಯುತ್ತಿತ್ತು. ಜೀನ್ಸ್ ಮೇಲೆ ಜಾಕೆಟ್ ಧರಿಸಿದ್ದಳು ಒಳಗೆ ಬಂದು ನಿಂತಳು. ಹುಡುಗರ ಕಣ್ಣುಗಳು ಸಹಜವಾಗಿಯೇ ಅವಳತ್ತ ವಾಲಿದವು . ಆಗಂತೆ ಅರಳಿದ ಸುಮದಂತೆ ಚೆಲುವಾಗಿದ್ದಳು

ಬೆಂಗಳೂರ ಬೀದಿಗಳಲ್ಲಿ......

ಹಗಲು ಇರುಳು ಅತಂತ್ರನಾಗಿ
ವಾರವೆಲ್ಲ ಯಂತ್ರವಾಗಿ
ವಾರದಕೊನೆ ಮನುಜನಾಗಿ,
ಬದುಕಿರುವೆ ನಾ ಬೆಂಗಳೂರ ಬೀದಿಗಳಲ್ಲಿ।

ನಗುವ ಮುಸುಡುಗಳ ನಗುವಿಲ್ಲಿ
ನಂಬುವ ಹಾಗೆ ಇರುವುದಿಲ್ಲ
ನಡೆವುದೆಲ್ಲ ಇಲ್ಲಿ ನಿಜವು ಎಂದು
ತೋರುವ ಹಾಗೆ ಕಾಣುವುದಿಲ್ಲ

ಯಾವ ವಾರ, ಯಾವ ತಿಥಿ
ಯಾವುದೊಂದು ತಿಳಿವುದಿಲ್ಲ
ಎಷ್ಟು ಜನರೊ, ಎಷ್ಟು ಮಾತೋ
ಯಾವುದೊಂದು ಅರಿವುದಿಲ್ಲ

ಕವಿತಳಿಲ್ಲದೆ, ಕವಿತೆ

ಕವಿತಳಿಲ್ಲದೆ, ಕವಿತೆ
ಮನಕೆ ಒಗ್ಗಿತು ಹೇಗೆ?
ಗಾಳಿಯಿಲ್ಲದೆ, ಗಂಧ
ಜಗಕೆ ಹಬ್ಬಿತು ಹೇಗೆ?

ಕವಿತಳನು, ಕವಿತೆಯನು
ಎದೆಯಲದುಮಿಕೊಂಡು
ಹೊಳೆಯ ದಾಟಿ, ಕಡಲನಾರಿ
ಪರನಾಡಲಿಳಿದುಕೊಂಡೆ।

ಅವಕಾಶವೊ, ಅನಿವಾರ್ಯವೊ?
ಬಾಳ್ವೆಯ ಸುದಿನವೊ, ದುರ್ದಿನವೊ
ಆರನರಿಯೆ, ಆರಕಾಣೆ
ಬರಿ ಗೊಂದಲವು, ಮನದೊಳಗೆ....

ಎದುರು ಗೊಂಡವರೆಲ್ಲ
ಹಲ್ಲು ಕಿರಿವಾಗ
ಇಷ್ಟವೊ, ಅನಿಷ್ಟವೊ

ಮುನ್ನಡೆ ಮನವೆ

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ

ಏನ ನೆನೆದು, ಏನ ಕರೆದು ನೀನು ಕೊರಗುವೆ

ಹಿರಿದು ಕಿರಿದು ಎಲ್ಲ ಸುಳ್ಳು

ಮೇಲು ಕೀಳು ಬರಿ ಜೊಳ್ಳು

ನಂಬದಿರು, ನೆಚ್ಚದಿರು

ಮಾಯೆಯ ಮಾಯೆಯಲಿ ನೀನು ಸಿಲುಕದಿರು।

ಆರಿಗಿಲ್ಲ ಆರು ಸಾಟಿ

ಆರಮೇಲೋ ಆರ ಪೈಪೋಟಿ।

ಒಬ್ಬರಂತೆ ಒಬ್ಬರಲ್ಲ

ಅರಿತು ಅರಿಯದಿರುವೆಯಲ್ಲ।

ಬಾಳಿನಲ್ಲಿ ಎಲ್ಲ ಉಂಟು,

ನಿಮ್ಮ ಸ್ವಭಾವ ಅರಿಯಬೇಕೆ?

ಇದು ನಾನು ಕಾಲೇಜಿನಲ್ಲಿ ಇದ್ದಾಗ ನನ್ನ ಗೆಳೆಯರೊಬ್ಬರು ಕೊಟ್ಟ್ ಟ್ರಿಕ್
ತುಂಬಾ ಜನರಿಗೆ ಇದು ನಿಜವಾಗಿದೆ ಈಗ ಇದನ್ನುನಿಮ್ಮ ಮುಂದೆ ಇಡುತ್ತೇನೆ
ಒಂದು ಪುಟ್ಟ ಕತೆ. ಮನ ಮಿಡಿಯುವ ಕತೆ

ಒಂದು ಸುಂದರವಾದ ಹುಡುಗಿ ಅವಳ ಹೆಸರು s ಎಂದಿಟ್ಟುಕೊಳ್ಳೋಣಾ.
ಆಕೆ ಒಬ್ಬ ಮುದ್ದಾದ ಹುಡುಗನ ಪ್ರೇಮದಬಲೆಯಲ್ಲಿ ಬೀಳುತ್ತಾಳೆ. ಆ ಹುಡುಗನ ಹೆಸರು L ಎಂದಿರಲಿ

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೨

ಬೇಂದ್ರೆ ಚಿಕ್ಕವರಾಗಿದ್ದಾಗ ತಾಯಿ(ಅಂಬಾಬಾಯಿ) ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ಇದು ಬೇಂದ್ರೆ ಅವರಿಗೂ ವಂಶಪಾರಂಪರ್ಯವಾಗಿ ನಡೆದು ಬಂತು ಅದು ವಿಧಿ ಲಿಖಿತ. ಒಮ್ಮೆ ಯೋಗಿಗಳೊಬ್ಬರು ಬಂದು ಬೇಂದ್ರೆ ಅವರ ತಾಯಿಯನ್ನು ಕಂಡು "ಅಮ್ಮ..ನೀವು ದತ್ತನನ್ನು ಪೂಜೆ ಮಾಡಿ. ಸಂಕಷ್ಠಗಳು ದೂರವಾಗುವವು" ಎಂದರಂತೆ.

ಗೆಳೆತನ

ಈ ನಮ್ಮ ಸ್ನೇಹದ ಮನನ
ನಾ ಮಾಡುವೆ ಪ್ರತಿದಿನ
ನಮ್ಮ ಸ್ನೇಹದ ಕುರುಹು ಈ ಕವನ

ಆಗಾಗ್ಗೆ ನಮ್ಮಿಬ್ಬರ ಕಲಹ
ಹೆಚ್ಚಿಸಲಿ ನಮ್ಮಿಬ್ಬರ ಸ್ನೇಹ
ಎಂದಿಗೂ ನೀ ಇರು, ನನ್ನೀ ಹೃದಯದ ಸನಿಹ

ತುಂಡಾಗಲು ನಿನ್ನ ಸ್ನೇಹವು
ಬದುಕಲು ಬಯಸದು ಈ ಜೀವವು
ಎಂದೆಂದಿಗೂ ಬಯಸುವೆ, ಆ ನಿನ್ನ ಸ್ನೇಹದ ಒಲವು

ಕಷ್ಟದಿ ಆಗುವ ಗೆಳೆಯ
ಕಟ್ಟಲಾಗದು ಈ ನಿನ್ನ ಸ್ನೇಹಕೆ ಬೆಲೆಯ

ಮರಳು ಗೂಡು,

ಸಂಜೆ ಕಾಫಿ ಹೀರುತ್ತಾ, ತಾರಸಿಯ ಮೇಲೆ ನಿಂತಾಗ ಮುಳುಗುತ್ತಿರುವ ಸೂರ್ಯನ ಹೊಂಬಣ್ಣ, ಕಂಗಳಲ್ಲಿ ಹೊಂಬೆಳಕನ್ನೇ ತುಂಬುತ್ತದೆ, ಇನ್ನೂ ಸಂಜೆಯಾಗುತ್ತಲೇ ಗೂಡು ಸೇರುವ ತವಕದಲ್ಲಿ ಚಿತ್ತಾಕರ್ಶಕವಾಗಿ ಸಾಗಿ ಹೋಗುವ ಹಕ್ಕಿಗಳು, ಅವುಗಳ ಕಲರವ ಹೊಸ ಲೋಕಕ್ಕೆ ಒಯ್ಯುತ್ತವೆ.