ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಷಾಢ ಮಾಸ ಅಶುಭವೇಕೆ ?

ಇದೀಗ ಆಷಾಡ ಮಾಸ ಬಂದಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ತವರು ಮನೆಗೆ ಹೋಗುವ ಸಂಭ್ಹಮ, ಕಾರಣ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದಂತೆ. ಕಾರಣ ಏಕೋ ಗೊತ್ತಿಲ್ಲ.

ಚಂದದ ನಗು

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ,
ಕಣ್ಣಿದ್ದೋ ಮನದ ಮೌನ ಭಾಷೆಗೆ ಮುನ್ನುಡಿ,
ನಗುವಿದೋ ಸೊಬಗಿನ ಸಂತಸ ನುಡಿ,
ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ,
ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ ಬಲು ಚಂದ ನೋಡಿ.

ಚಂದದ ನಗು

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ,
ಕಣ್ಣಿದೋ ಮನದ ಮೌನ ಭಾಷೆಗೆ ಮುನ್ನುಡಿ,
ನಗುವಿದೋ ಸೊಬಗಿನ ಸಂತಸ ನುಡಿ,
ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ,
ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ, ಬಲು ಚಂದ ನೋಡಿ.

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?
ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವೇ? ಹೈಕೋರ್ಟಿನ ತೀರ್ಪು ಎಷ್ಟರ ಮಟ್ಟಿಗೆ ಸರಿ?

ತಾಯಿ ಮತ್ತು ಮಗಳಿಗೆ.

ಸೀತೆ ನಿನ್ನ ಮಗಳೆ?
ನಿಜ ಹೇಳೆ ಭೂಮಿ
ಹೌದೆ! ಹಾಗಾದರೆ
ನೀನೇಕೆ ಕಲಿಸಲಿಲ್ಲ
ಅವಳಿಗೆ
ತಪ್ಪಿಲ್ಲದಾಗ ಸಿಡಿಯುವುದನ್ನು
ಎದೆಯ ಮೇಲೆ ನಿಂತು
ನೋಯಿಸುವವರ ಎದೆ
ನಡುಗಿಸುವುದನ್ನು
ಇಡೀ ಜೀವಮಾನದಲಿ
ಎಂದಾದರೂ ವರ್ತಿಸಿದಳೆ
ಆಕೆ ನಿನ್ನಂತೆ
ಇಲ್ಲಾ ನಿನ್ನುದರದಲ್ಲಿ
ಜನಿಸಿದ ದುರ್ಬಲ
ಶಿಶುವೆ
ಸೀತೆ;ನಿನ್ನ ಮಗಳೆ?
*
ಜಗತ್ತು ಬಲ್ಲ
ನಿನ್ನ ಕತೆಯನ್ನು

ಚಿಕ್ಕಮಗಳೂರಿನ ತಿಪ್ಪನಹಳ್ಳಿ ಗೊತ್ತೇನು?

ಸುಮಾರು ೨೩೦ ವರ್ಷಗಳ ಹಿಂದಿನಿಂದಲೂ ಚಿಕ್ಕಮಗಳೂರಿನಲ್ಲಿರುವ ಮನೆತನವೊಂದು ತನ್ನ ಕಾಫಿ ತೋಟಗಾರಿಕೆಯಿಂದಲೇ ಹೆಸರುವಾಸಿಯಾಗಿದೆ. ಅರಳುಗುಪ್ಪೆ ಚಂದ್ರೇಗೌಡ ಅವರು ೧೯೩೪ರಲ್ಲಿ ತಿಪ್ಪರಹಳ್ಳಿ ಎಂಬ ಎಸ್ಟೇಟ್ ಅನ್ನು ಪ್ರಾರಂಭಿಸಿದ್ದು, ಈಗ ಅದು ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಚಾರಣಕ್ಕೆ ಹೋಗಲು ಆಸಕ್ತಿವುಳ್ಳವರಿಗಂತು ಈ ಪ್ರದೇಶ ಹೇಳಿ ಮಾಡಿಸಿದಂತಿದೆ.

ಮೊದಲು

ಮೊದಲ್, ಮುದಲ್, ಮುದ್ದಲು, ಮೊದಲು (ನಾ)
೧.ಆರಂಭ; ಆದಿ; ಪ್ರಥಮ
ಮೊದಲಿನನಿತ್ತೋರಾನಿತ್ತನ್ತೆ ಬಿಟ್ಟ (ಎಪಿಗ್ರಾಫಿಯಾ ಕರ್ನಾಟಿಕಾ VI ಕೊಪ್ಪಳ ೩೮.೭ ಸುಮಾರು 675); ಇನಿಯವು ಮೊದಲೊಳ್ ನಂಜಿನ ಪನಿವೊಲ್ ಬೞಿಕೆಯ್ದೆ ಮುಳಿದು ಕೊಂದಿಕ್ಕುವುವು (ಆದಿಪುರಾಣ ೧೯.೧೨೩); ಅಭಿಮಾನದ ಜನ್ಮಭೂಮಿ ಮಾನ್ತನದ ಮೊದಲ್ (ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್XI.i ೬೫.೩೯ 1028)
೨.ಪಕ್ಕ; ಬದಿ; ಪಾರ್ಶ್ವ

ಗುರುಗ್ರಹ, ಅತಿ ಹತ್ತಿರದಲ್ಲಿ

ಇವತ್ತು ಜುಲೈ ೯, ೨೦೦೮.

ಭೂಮಿ ಮತ್ತು ಗುರುಗ್ರಹಗಳು ಅವುಗಳ ಹಾದಿಯಲ್ಲಿ ಸುತ್ತುತ್ತಿರುವಾಗ, ಅತಿ ಹತ್ತಿರಕ್ಕೆ ಬಂದಿವೆ ( ಇದಕ್ಕೆ planetary opposition ಎಂಬ ಹೆಸರಿದೆ - ಕನ್ನಡದಲ್ಲಿ ಏನು ಹೇಳುವುದೋ ತೋರಲಿಲ್ಲ).

ಹಾಗಾಗಿ, ಗುರುವು ಸೂರ್ಯ ಮುಳುಗುವ ವೇಳೆಗೆ ಹುಟ್ಟುತ್ತಾನೆ, ಹಾಗೂ ಸೂರ್ಯ ಹುಟ್ಟುವ ವೇಳೆಗೆ ಮುಳುಗುತ್ತಾನೆ.

Accident Zone - ಆಕಸ್ಮಿಕ ವಲಯ

ರಸ್ತೆಯ ತಿರುವು ಸಿಗುತ್ತಿದ್ದಂತೆ ಬದಿಯಲ್ಲಿ "Accident Zone" (ಆಕಸ್ಮಿಕ ವಲಯ) ಎಂದು ಕೆಂಪಗೆ ಬರೆದಿತ್ತು. ಆ ರಸ್ತೆಯಲ್ಲಿ ಮೊದಲು ಬರುತಿದ್ದ ಬೈಕ್ ಸವಾರನಿಗೆ ಎಲ್ಲರೂ ಹೇಳುತಿದ್ದ ಅಪಾಯದ ತಿರುವು ಇದೆ ಎನಿಸಿತು. ಇಲ್ಲಿ ಬಹಳಷ್ಟು ಅಪಘಾತಗಳು ನಡೆದಿದೆ, ಅಲ್ಲಿ ಸತ್ತವರ ಉಪದ್ರ ಇದೆ ಎಂದೆಲ್ಲ ಹೇಳುತ್ತಿದ್ದನ್ನು ನೆನಪಿಸಿದ.

ಒಂದೆಲಗ (ಬ್ರಾಹ್ಮಿ)

ಬ್ರಾಹ್ಮೀತೈಲ (ರಾಮತೀರ್ಥ ಬ್ರಾಹ್ಮೀತೈಲ) ಹೆಸರು ಕೇಳದವರು ಇರಲಿಕ್ಕಿಲ್ಲ.
ತಲೆಗೆ, ಮೆದುಳಿಗೆ, ಕಣ್ಣಿಗೆ ತಂಪು. Cool, cool.

ಈ ಎಣ್ಣೆ ತಲೆಗೆ ಹಚ್ಚಿ ತಿಕ್ಕಿ ಮಲಗಿದರೆ- ಫಸ್ಟ್ ಕ್ಲಾಸ್ ನಿದ್ರೆ ಬರುವುದು.
ತಲೆಗೆ ಹಚ್ಚಿದಾಗಲೇ ಇಷ್ಟು ಕೆಲಸ ಮಾಡುವ ಈ ‘ಬ್ರಾಹ್ಮಿ’ಯ ಬಗ್ಗೆ ಕೆಲ ವಿವರ-