ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವೈದ್ಯನಾರಾಯಣಕಥೆ

’ನಿಮ್ಮನ್ನು ನೋಡಿದ್ರೆ ಇನ್ನೂ ಕಾಲೇಜ್ ವಿದ್ಯಾರ್ಥಿ ಹಾಗೆ ಕಾಣ್ತೀರಿ ’ ಅಂತ ನನ್ನ ಮುಂದೆ ಕೂತ ೨೮ ವರ್ಷದ ಜವಾನ್ತಿ(ಯುವತಿ) ಹೇಳಿದಾಗ ನಾಕನೇ ದಶಕ ಓಡುತ್ತಿರುವ ನನ್ಗೆ (ನಾನೇನೂ ೪೦+ ಅಲ್ಲ ಮಾರಾಯ್ರೇ..ಬರೀ ೩೦+…ಅಷ್ಟೇ ಅಲ್ಲ..೩೦ ರ ನಂತರ ವಯಸ್ಸು ಓಡ್ಲಿಕ್ಕೆ ಶುರು ಆಗ್ತದೆ ಮಾರಾಯ್ರೆ) ಒಂದುಸಲ ಭಯಂಕರ ಖುಷಿ ಆಗಿ ಪುಗ್ಗದ ಹಾಗೆ ಹಿಗ್ಗಿದ ನಾನು ಕೂಡ್ಲೇ ಟುಸ್ಸ್…ಅಂತ ಮುಖ ಸಣ್ಣದು ಮಾಡಿಕೊಂಡೆ. ಯಾಕೆ ಹೀಗೆ ಆಯ್ತು?..ಕಥೆ ಕೇಳಿ..
ಕರ್ಮಸಿದ್ಧಾಂತದ ಪ್ರಕಾರ ಹೇಳ್ಬೇಕಾದ್ರೆ ಘನಘೋರ ಪಾಪ ಮಾಡಿದ ನರಮಾನಿ (ಮನುಷ್ಯ) ಮರುಜನ್ಮದಲ್ಲಿ ಡಾಕ್ಟರಾಗುವುದು ಖಂಡಿತ. ಇಲ್ಲಸಲ್ಲದ ಸಮಯದಲ್ಲಿ ಫೋನ್ ಬರುವುದು, ಊಟಮಾಡುವಾಗಲೇ ಕರೆಗಂಟೆ ಬಾರಿಸುವುದು, ನೆಂಟರು ಬಂದ ದಿನವೇ ಎಮರ್ಜೆನ್ಸಿ ಕೇಸ್ ಬರುವುದು, ಡಯೇರಿಯಾ ಕೇಸ್ ನೋಡಿದ ಮೇಲೆ ಹಲಸಿನಹಣ್ಣಿನ ಪಾಯಸದ ಮೇಲೂ ಗುಮಾನಿ ಬರುವುದು..ಇದೆಲ್ಲ ಎಲ್ರಿಗೂ ಗೊತ್ತುಂಟು. ಆದ್ರೆ ಇಲ್ಲಿ ಕಥೆಯೇ ಬೇರೆ.. ವೈದ್ಯೋನಾರಾಯಣೋ ಹರಿಃ ಅನ್ನುವುದನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ನಾರಾಯಣನೇ ವೈದ್ಯನೆಂದು ಅಥವಾ ವೈದ್ಯನೇ ನಾರಾಯಣನೆಂದೂ ಅರ್ಥಮಾಡಿಕೊಳ್ಳುವ ಚಾಲಾಕ್ ರೋಗಿಗಳು ಇನ್ನು ಕೆಲವು ವಿಷಯಗಳಲ್ಲಿ ಸ್ವಲ್ಪ confused ಇರ್ತಾರೆ. ಮುಖ್ಯವಾಗಿ ಎಲ್ರಿಗೂ ಡಾಕ್ಟರೆಂಬ ಪ್ರಾಣಿಯೂ ತಮ್ಮ ಹಾಗೇ ಮನುಷ್ಯ ಜಾತಿಯಲ್ಲಿ ಬರುತ್ತದೆ, ಅದಕ್ಕೂತಮ್ಮ ಹಾಗೆ ೨ ಕಣ್ಣು , ೨ ಕಿವಿ, ೧ ಮೂಗು (ಹೋಗ್ಲಿ ಬಿಡಿ, ನಿಮಗೆ ಎಷ್ಟು ಮಾಂಸಖಂಡ, ಎಲುಬು, ನರಗಳು ಅಂತ ಹೇಳಲಿಕ್ಕೆ ಇದೇನು ಅನಾಟಮಿ ಕ್ಲಾಸಲ್ಲವಲ್ಲ..)ಮಾತ್ರವಲ್ಲ , ಒಂದು ಮನಸ್ಸೂ ಇರ್ತದೆ ಅಂತ ನೆನಪಿರುವುದಿಲ್ಲ. ಹೀಗಾಗಿ ಈ ವಿಚಿತ್ರ ಪ್ರಾಣಿಯ ಬಗ್ಗೆ ಒಂಥರ ಪೂರ್ವಾಗ್ರಹಪೀಡಿತ ಅಭಿಪ್ರಾಯ ಇಟ್ಟುಕೊಂಡಿರುವುದು ಪಂಜುರ್ಲಿ ,ಗುಳಿಗ ,ರಕ್ತೇಶ್ವರಿಯ ಆಣೆಗೂ ಸತ್ಯ. ಇವು ತಮ್ಮ ಡಾಕ್ಟರ್ ಎಷ್ಟು ಅನುಭವಿಗಳು ಅಂತ ತೀರ್ಮಾನಿಸಲು ಇರುವ ಕ್ರೈಟೀರಿಯ ಅಂತಲೂ ಹೇಳಬಹುದು.

Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?

ಈ ಪ್ರಶ್ನೆ ನಮ್ಮ ಉದ್ಯೋಗ ಸಮೂಹದ ಉದ್ಯೋಗಿಯೊಬ್ಬರು ಕೇಳಿದ್ದು.

Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?

(ಇಲ್ಲಿ ನಾವು ಎಂದರೆ ಕಂಪ್ಯೂಟರ್‍ ಬಳಸುವ ಜನಸಾಮಾನ್ಯರು )

ಸಂಪದದ ಸಮುದಾಯದಲ್ಲಿ ಇದಕ್ಕೆ ಉತ್ತರ ಗೊತ್ತಿರುವವರು ಖಂಡಿತ ಇದ್ದಾರೆ ಅಂತ ಗೊತ್ತಿದೆ.

ಅದಕ್ಕೇ ಇಲ್ಲಿ ಹಾಕಿದ್ದೇನೆ.

"ತುಳಸಿವನ", "ಭಾವಬಿಂಬ"

ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ. ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ.

ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು, ಕೈ ಕುಲುಕಲು, ನೆತ್ತಿ ಸವರಿ ಹರಸಲು. ಯಾಕೇಂದ್ರೆ... ಆದಿನ, ಇವರಿಬ್ಬರೂ ಆಸಕ್ತ ಓದುಗರ ಸಂಗ್ರಹಕ್ಕೆ ಸೇರಿಸಲು, ತಮ್ಮ ಹೊಸ ಕೃತಿಗಳ ಪೊರೆ ಕಳಚುವ ಹಂಚಿಕೆಯಲ್ಲಿದ್ದಾರೆ... ಅವರಿಬ್ಬರು ಯಾರು‍-ಯಾರೆಂಬ ಕುತೂಹಲವೆ? "ತುಳಸಿಯಮ್ಮ" ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾಯರು "ತುಳಸಿವನ"ದ ಘಮಲು ಹಬ್ಬಿಸುವ ಹಂಬಲ ಹೊತ್ತಿದ್ದಾರೆ.

"ಸುಪ್ತದೀಪ್ತಿ" ಕಾವ್ಯನಾಮದ ಜ್ಯೋತಿ ಮಹಾದೇವ್ ತನ್ನ "ಭಾವಬಿಂಬ"ಕ್ಕೆ ಕನ್ನಡಿ ಹಿಡಿಯಲಿದ್ದಾರೆ. ಒಂದೇ ವೇದಿಕೆಯಲ್ಲಿ ಇಬ್ಬರು ಸಾಹಿತ್ಯ ಸೋದರಿಯರ ಕಲ್ಪನೆಯ ನೌಕೆಗಳು ದುಗಭಿಯಾನ ಹೊರಡಲಿವೆ.. ಅಂದು ಇನ್ನೂ ಯಾರು-‍ಯಾರಿರುತ್ತಾರೆ? ಆ ವಿವರಗಳಿಗೆ ನಿಮ್ಮ ಕೌತುಕದ ಮರಿ ಗರಿಗೆದರಿ ಕಾದಿರಲಿ.

ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳು ಸೇರಿಸುವುದು ಹೇಗೆ?

ಸಂಪದಕ್ಕೇ ಅಪ್ಲೋಡ್ ಮಾಡುವುದಿದ್ದರೆ ಮೊದಲು ಈ ವಿಧಾನ ಬಳಸಿ ಚಿತ್ರ ಅಪ್ಲೋಡ್ ಮಾಡಿ, ಅದರ URL ಕಾಪಿ ಮಾಡಿಟ್ಟುಕೊಂಡು ನಂತರ ಕೆಳಗಿನಂತೆ ಕ್ರಮಗಳನ್ನು ಅನುಸರಿಸಿ. 

  • ಬರಹ ಸೇರಿಸುವ ಪುಟದಲ್ಲಿ "enable rich-text" ಎಂಬ ಆಯ್ಕೆ ಕ್ಲಿಕ್ ಮಾಡಿ. 

  • ನಂತರ ಚಿತ್ರ ಸೇರಿಸುವ ಬಟನ್ ಮೇಲೆ ಕೆಳಗಿನಂತೆ ಕ್ಲಿಕ್ ಮಾಡಿ. 

  • ಚಿತ್ರದ URL ಪೇಸ್ಟ್ ಮಾಡಿ. 

  • ಚಿತ್ರ ರೆಡಿ! 

ಚಿರನಿದ್ರೆ

ಚಂದ್ರನಿರದ ಮೋಡದ ರಾತ್ರಿಯಲಿ, ಆ ಕಗ್ಗತ್ತಲಿನ ಕಪ್ಪು ನೆರಳಲಿ
ಕುಳಿತಿರಲು, ದಿಗಂತವ ನೊಡುತಾ...
ನೆನಪೊಂದು ಮನಸ್ಸೊಳಗೆ ಮೂಡಿ ನನಾತ್ಮವ ಮುಟ್ಟಲು,
ಕಣ್ಣಂಚಿಂದ ಹನಿಯೊಂದು ಉದರಲು, ನನ್ನೆದುರಿನ ನೋಟ ಮುಸಕಾಗಲು...
ದೂರ ದೂರದಲ್ಲಿಯೂ ಭರವಸೆಯ ಬೆಳಕು ಕಾಣಲಿಲ್ಲವಾಗಿ....

ದಿಕ್ಕಿಲ್ಲದ ಸಾಗರದಿ, ಒಂಟಿ ನೌಕೆಯ ಎಕಾಂಗಿ
ನಾವಿಕನಾಗಿರಲು, ಸೂರ್ಯನಡೆಗೆ ಸಾಗುತಾ....