"ತುಳಸಿವನ", "ಭಾವಬಿಂಬ"

"ತುಳಸಿವನ", "ಭಾವಬಿಂಬ"

ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ. ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ.

ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು, ಕೈ ಕುಲುಕಲು, ನೆತ್ತಿ ಸವರಿ ಹರಸಲು. ಯಾಕೇಂದ್ರೆ... ಆದಿನ, ಇವರಿಬ್ಬರೂ ಆಸಕ್ತ ಓದುಗರ ಸಂಗ್ರಹಕ್ಕೆ ಸೇರಿಸಲು, ತಮ್ಮ ಹೊಸ ಕೃತಿಗಳ ಪೊರೆ ಕಳಚುವ ಹಂಚಿಕೆಯಲ್ಲಿದ್ದಾರೆ... ಅವರಿಬ್ಬರು ಯಾರು‍-ಯಾರೆಂಬ ಕುತೂಹಲವೆ? "ತುಳಸಿಯಮ್ಮ" ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾಯರು "ತುಳಸಿವನ"ದ ಘಮಲು ಹಬ್ಬಿಸುವ ಹಂಬಲ ಹೊತ್ತಿದ್ದಾರೆ.

"ಸುಪ್ತದೀಪ್ತಿ" ಕಾವ್ಯನಾಮದ ಜ್ಯೋತಿ ಮಹಾದೇವ್ ತನ್ನ "ಭಾವಬಿಂಬ"ಕ್ಕೆ ಕನ್ನಡಿ ಹಿಡಿಯಲಿದ್ದಾರೆ. ಒಂದೇ ವೇದಿಕೆಯಲ್ಲಿ ಇಬ್ಬರು ಸಾಹಿತ್ಯ ಸೋದರಿಯರ ಕಲ್ಪನೆಯ ನೌಕೆಗಳು ದುಗಭಿಯಾನ ಹೊರಡಲಿವೆ.. ಅಂದು ಇನ್ನೂ ಯಾರು-‍ಯಾರಿರುತ್ತಾರೆ? ಆ ವಿವರಗಳಿಗೆ ನಿಮ್ಮ ಕೌತುಕದ ಮರಿ ಗರಿಗೆದರಿ ಕಾದಿರಲಿ.