ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Abroad ಅನ್ನೋ ಮಾಯೆ...

ಕೆಲ ವರ್ಷಗಳ ಹಿಂದೆ ಯರಾದರು ಹೊರದೇಶಕ್ಕೆ ಹೊಗುತ್ತಿದಾರೆಂದರೆ ಅದು ಒಂದು ಘನತೆಯ ವಿಷಯ ವಾಗಿತ್ತು. ಆದರೆ ಈಗ ಅದು ಸರ್ವೇ ಸಾಮಾನ್ಯ ವಾಗಿ ಬಿಟ್ಟಿದೆ.

ಯಾವಾಗ IT ಮತ್ತು BPO ಕಂಪೆನಿಗಳು ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಶುರು ಮಾಡ್ತೊ ಆಗಿನಿಂದ ಹೊರದೆಶಕ್ಕೆ ಹೊಗೊದು ಸಮಾನ್ಯ ಆಗ್ಬಿಟ್ಟಿದೆ.

ಆದಾಯ ತೆರಿಗೆ ತಾಣದಲ್ಲಿ ಟ್ರೋಜನ್

ನನ್ನ ಬಳಿ ಫೈರ್ಫಾಕ್ಸ್ 3 ಇದೆ. ಈಗ ತಾನೆ ಗೂಗಲ್ ತಾಣಕ್ಕೆ ಭೇಟಿ ನೀಡಿ 'income tax department government of india' ಎಂದು ಹುಡುಕಿದೆ. ಬಂದ ಫಲಿತಾಂಶ ನೋಡಿ ತಲೆ ಧಿಮ್ ಎಂತು. ನಮ್ಮ ಆದಾಯ ತೆರಿಗೆ ತಾಣದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದಿವೆಯಂತೆ. ಅದು ಅನೇಕ ಟ್ರೋಜನ್ ಗಳನ್ನು ಭೇಟಿ ನೀಡಿದ ಕಂಪ್ಯೂಟರಗಳಿಗೆ ಕಳಿಸಿದೆಯಂತೆ. ಇದು ನಿಜವಾಗಿಯೂ ಆತಂಕಕಾರಿ ವಿಷಯವೇ?

ಅಂತೂ ಇಂತೂ ಥ್ರೆಡ್ ಮಿಲ್ ಬಂತು

ಹೋದ ತಿಂಗಳು ನೆಂಟರೊಬ್ಬರು ಬಂದಿದ್ದರು
"ರೂಪ ಬರ್ತಾ ಬರ್ತಾ ತುಂಬಾ ಗುಂಡು ಗುಂಡುಗೆ ಆಗ್ತಾ ಇರೋ ಹಾಗಿದೆ, ಸ್ವಲ್ಪ ಕೆಲಸ ಮಾಡ್ಬೇಕು" ಎಂದಿದ್ದರು ಅವರಿಗೆ ಅದು ಹೇಗೆ ನಾನು ಕೆಲಸ ಮಾಡುವುದಿಲ್ಲ ಎಂಬ ಅರಿವು ಉಂಟಾಯ್ತೋ ನಾ ಕಾಣೆ
ಅಮ್ಮ "ರೂಪ ಸ್ವಲ್ಪ ವಾಕ್ ಮಾಡು ದಪ್ಪ ಆಗ್ತಾ ಇದ್ದೀಯಾ " ಅಂತ ಆದೇಶಿಸಿದರು

‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಮಾತು, ಸದ್ದು, ಗೌಜು, ಗದ್ದಲ, ದಾಂಧಲೆ, ಗೊಂದಲ...ಒಟ್ಟಾರೆ ತಲೆ ಚಿಟ್ ಹಿಡಿಸುವ ವಾತಾವರಣ. ಈ ಜೀವನಕ್ಕೆ ‘ಹೋರಾಟದ ಬದುಕು’ ಎನ್ನಲಡ್ಡಿಯಿಲ್ಲ! ಪ್ರತಿ ಕ್ಷಣ ಒತ್ತಡ, ಅಶಾಂತ ಸ್ಥಿತಿ. ಅಂತಿಮವಾಗಿ ಪ್ರತಿಯೊಂದರಲ್ಲೂ ನಿರಾಸಕ್ತಿ. ಏಕಾಗ್ರತೆಗೆ ತೀವ್ರ ಭಂಗ. ಸಿಟ್ಟಿನ ಪರಮಾವಧಿ; ಹೀಗೆಯೇ ಪಟ್ಟಿ ಬೆಳೆಯುತ್ತದೆ. ಇಷ್ಟಕ್ಕೆಲ್ಲ ಕಾರಣ ನಮ್ಮ ಕಿವಿ!

ವಾಹನಗಳಿಂದ ವಾತಾವರಣ ಕಲುಷಿತಗೊಂಡರೆ ಹೊಗೆ ಕಣ್ಣಿಗೆ ಕಾಣುತ್ತದೆ. ಹೊಲಸು ತುಂಬಿ ಗಟಾರು, ಚರಂಡಿ ಗಬ್ಬೆದ್ದು ‘ನಾತಾವರಣ’ ಸೃಷ್ಠಿಸಿದರೆ ವಾಸನೆ ಮೂಗಿಗೆ ಹೊಡೆಯುತ್ತದೆ. ಕೊಳಚೆ ತುಂಬಿ ನೀರು ಕೆಟ್ಟರೆ ಕಣ್ಣು-ಮೂಗು ಕೂಡೇ ನಿರ್ಧರಿಸುತ್ತವೆ. ಆದರೆ ಶಬ್ದ ಮಾಲಿನ್ಯ ಕಣ್ಣಿಗೆ ಕಾಣುವುದಿಲ್ಲ. ಸದ್ದಿಲ್ಲದೇ ನಮ್ಮ ಕಿವಿಗಳಿಗೆ ಹಾನಿ ಮಾಡುತ್ತದೆ. ಕ್ರಮೇಣ ಆರೋಗ್ಯ ಕೆಡಿಸುತ್ತದೆ.

ವಯಸ್ಸಾದಂತೆ ಶ್ರವಣೇಂದ್ರಿಯದ ಚುರುಕುತನ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ಇದು ನೈಸರ್ಗಿಕ. ಆದರೆ ನಿತ್ಯ ಶಬ್ದಗಳಿಗೆ ನಾವು ನಮ್ಮ ಕಿವಿಗಳನ್ನು ಒಡ್ಡುತ್ತಿರುವುದರಿಂದ ಕ್ರಮೇಣವಾಗಿ ಕಿವುಡುತನ ನಮ್ಮನ್ನು ಆವರಿಸುತ್ತದೆ. ವಯಸ್ಸು ಹೆಚ್ಚುವ ಮೊದಲೇ ಕಿವಿಗಳು ತಮ್ಮ ಸಂವೇದನೆ ಕಳೆದುಕೊಳ್ಳುತ್ತಿವೆ!

ನಾಲಿಗೆ ಚಪಲ

ನಾಲಿಗೆ ಚಪಲಕ್ಕೆ, ಮನೆಯಲ್ಲಿ ರಜಾದಿನ ಟೈಂ ಪಾಸ್ ಗೆ ಏನಾದ್ರೂ ಬೇಕನ್ಸುತ್ತೆ ಅಲ್ವಾ. ಮೊನ್ನೆ ಗಾಂಧಿ ಬಜಾರಿಗೆ ಹೋದವನು ಒಂದಷ್ಟು ಒಬ್ಬಟ್ಟು ತಂದೆ. ಆದರೆ ಏನೋ ಒಂಥರಾ ಕಮಟು ವಾಸನೆ. ತಿನ್ನಲಾಗಲಿಲ್ಲ. ಜಯನಗರ/ಜೆ.ಪಿ ನಗರಗಳಲ್ಲಿ ಉತ್ತಮವಾದ ಬೇಳೆ ಹೋಳಿಗೆ ಸಿಗುವುದೇ?

ಏನಪ್ಪಾ ಇದಕ್ಕೂ ಒಂದು ಬ್ಲಾಗಾ ಅನ್ಕೋತೀರಾ? :-)

’ಭೂಮಿಗೀತ’ ಕೆಲವು ಸಾಲುಗಳು

ಬಹಳ ದಿನಗಳ ನಂತರ ಭೂಮಿಗೀತ ಚಿತ್ರದ ಹಾಡುಗಳನ್ನ ಕೇಳ್ತಾ ಇದ್ದೆ... ಕೆಲವು ಇಷ್ಟವಾದ ಸಾಲುಗಳನ್ನ (ಎರಡನೆ ಚರಣ) ನಿಮ್ಮೊಂದಿಗೆ ಹಂಚಿ ಕೊಳ್ತಿದ್ದೇನೆ... ನಿಮಗೆ ಇದರ ರಚನೆಕಾರರು ಗೊತ್ತಿದ್ದರೆ ತಿಳಿಸಿ, ಹಾಗೆ ನಿಮ್ಮ ಅನಿಸಿಕೆಗಳನ್ನೂ ತಿಳಿಸಿ...

ಹಿಂಗೆ ಒಂದು ಕಾಡು,
ಕಾಡಾಗೆ ನಮ್ಮ ಹಾಡು
ಕೇಳೊ ಕೇಳೊ ಜಾಣ...
ಬೆಟ್ಟ ನದಿ ಕಡಲು ಮರಳುಗಾಡು

ಓ ಗೆಳತಿ!!!

ಚಿಗುರೊಡೆದಿಲ್ಲವೇ, ನನ್ನ ಮೇಲೆ ನಿನ್ನ ಪ್ರೀತಿ
ಮನದಲಿ,
ಝೇಂಕರಿಸುತ್ತಿಲ್ಲವೇ, ನಾ ಕಳುಹಿದ ದುಂಬಿಯ ನಾದ
ನಿನ್ನ ಸುತ್ತ-ಮುತ್ತಲಿನಲಿ,
ಅರ್ಥವಾಗುತಿಲ್ಲವೇ, ಎನ್ನ ಪ್ರೇಮದ ಪರಿ
ಈ ಶೂನ್ಯ ಜಗದಲಿ,
ಓ ಗೆಳತಿ, ತಿಳಿದಿದೆಯಾ ಗುಡಿಯೊಂದ ಕಟ್ಟಿ
ನಿನ್ನ ಪೂಜಿಸುತಿರುವೆ ನನ್ನಂತರಂಗದಲಿ...

ಶಿವಮೂರ್ತಿ ಶರಣರು, ಚಂಪಾ ಹಾಗು ಬಿ.ಎಲ್.ವೇಣು ಚಪ್ಪಲಿ ಸಲಹೆ

ಹಾರ ಹಾಕುವ ಬದಲು ಇನ್ನು ಸಭೆ, ಸಮಾರಂಭಗಳಲ್ಲಿ ಚಪ್ಪಲಿ ಹಾರ ಹಾಕಲು ಶಿವಮೂರ್ತಿ ಶರಣರು ಹೇಳಿದರಂತೆ- ಸುದ್ದಿ. ಮುಂದುವರೆದು ಚಂಪಾ, ಬಿ.ಎಲ್.ವೇಣು ಪತ್ರಿಕೆಗಳಲ್ಲಿ ಪರಸ್ಪರ ಅಕ್ಷರ ಪ್ರೌಢಿಮೆ ಮೆರೆಯುತ್ತ, ವೈಚಾರಿಕ ಎತ್ತರ!