ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅವಳು ಕಥೆಯಾಗಿಯೇ ಉಳಿದಳು!

ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎ.ಸಿ ರೂಮಿನಲ್ಲಿ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ "ಲಗೋರಿ" ಎಂದು ಕಿರುಚುತ್ತಾ ಕುಣಿದು ಕುಪ್ಪಳಿಸುತ್ತಿದ್ದ. "ಜುಮುರು ಮಳೆಯಲ್ಲಿ ತೊಯ್ಯ ಬೇಡವೋ ಥಂಡಿ ಆಗತ್ತೆ" ಅಂತಾ ಕೂಗಿ ಹೇಳಲು ತುಟಿ ತೆರೆದರೆ ಸ್ವರ ಸಹಕಾರ ನೀಡಲಿಲ್ಲ. ಅವಳ ನೆನಪು ಮಾಸಿಯೇ ಹೋಗಿದೆ.

ಮೊಗ್ಗಿನ ಮನಸು.. ಉತ್ತಮವಾದ ಸಂದೇಶ

ಕನ್ನಡದಲ್ಲಿ ’ಸಮಾಜಕ್ಕೆ ಸಂದೇಶವನ್ನು ರವಾನಿಸುವ’ ಸಿನಿಮಾ ಅತೀ ವಿರಳ ಎಂದರೆ ತಪ್ಪಾಗಲಾರದು. ಮಚ್ಚು, ಲಾಂಗು, ದುರ್ಭಾಷೆ, ಅರೆನಗ್ನ ಸಂಸ್ಕೃತಿಯನ್ನು ನಿರ್ಭಯವಾಗಿ  ಸಾರುತ್ತಿರುವ ಸಿನಿಮಾಲೋಕದಲ್ಲಿ ಈಗೀಗ ಒಂದು ಮೊಗ್ಗು ಅರಳಿದ.

ಪೊಳೆ, ಪೊೞೆ, ಹೊಳೆ, ಹೊೞೆ

ಪೊಳೆ(ಹೊಳೆ)=ಮಿಱುಗು, ಪ್ರಕಾಶಿಸು.
ಪೊೞೆ(ಹೊೞೆ)=ನದಿ, ತೊಱೆ, ನದಿ/ತೊಱೆಯಾಗಿ ಹರಿ

ಉದಾಹರಣೆ:- ಮೞೆಯೆಲ್ಲಾ ಹೊೞೆಯಾಗಿ ಹರಿದಿತ್ತು. ಹುಲ್ಲಿನ ತುದಿಯಲ್ಲಿ ಹತ್ತಿದ್ದ ಹೊೞೆಯ ನೀರು ಮುತ್ತಿನಂತೆ ಹೊಳೆಯುತ್ತಿತ್ತು.

ದೋಣಿ

ದೋಣಿ (ನಾಮಪದ) {ಕನ್ನಡರೂಪ}
ದೊಡ್ಡ ಹೊಟ್ಟೆಯವಳು; ಡೊಳ್ಳುಹೊಟ್ಟೆಯವಳು (ಆ ದೋಣಿ ಹೇಗೆ ಓಡಬಲ್ಲಳು?-ರೂಢಿ)

ದೋಣಿ (ನಾಮಪದ) {ಪಾಳಿ, ಪ್ರಾಕೃತರೂಪ}

ತೊರೆ, ತೊಱೆ

ತೊರೆ= ಸ್ತನ/ಕೆಚ್ಚಲಿನಲ್ಲಿ ಹಾಲ್ದುಂಬಿ ಸುರಿ. ಉದಾಹರಣೆ:- ತೊರೆವ/ತೊರೆಯುವ ಮೊಲೆ. ಇದು ಕ್ರಿಯಾಪದ.

ತೊಱೆ=ಬಿಡು ಕ್ರಿಯಾಪದವಾದಾಗ. ನೋಡಿ:- ತೊಱೆದು ಜೀವಿಸಬಹುದೆ ಹರಿ ನಿನ್ನ ಚರಣವ.
ಹಾಗೆಯೇ ತೊಱವಿ=ಸಂನ್ಯಾಸಿ (ಎಲ್ಲಾ ಬಿಟ್ಟವನು)

’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !

ಡಿಸ್ನಿಲ್ಯಾಂಡ್ ನ ಮೇನ್ ಸ್ಟ್ರೀಟ್ ಯು.ಎಸ್.ಎ, ನಲ್ಲಿ ಹಾಗೇ ಅಡ್ಡಾಡುತ್ತಾ ಹೋದರೆ, ವಾಲ್ಟ್ ಡಿಸ್ನೆ ಚೌಕವನ್ನು ತಲುಪುತ್ತೇವೆ. ನೇರವಾಗಿ ಹೋದರೆ, ಫ್ಯಾಂಟಸಿ ಲ್ಯಾಂಡ್, ಕೊನೆಗೆ, ಮಿಕಿಸ್ ’ಟೂನ್ ಟೌನ್’ ಸಿಗುತ್ತದೆ. ಚೌಕದ ಬಲಭಾಗದಲ್ಲಿ, ಟುಮಾರೊ ಲ್ಯಾಂಡ್, ಸಿಗುತ್ತದೆ. ಅಲ್ಲಿ " ಸ್ಪೇಸ್ ಮೌಂಟೆನ್" ಇದೆ.

ಪರಿಧಿಯಿಂದ ಹೊರಗೆ ಹೋದ ವ್ಯಾಸ

ವ್ಯಾಸರು ಚಿರನಿದ್ರೆಗೆ ಮರಳಿದ್ದಾರೆ, ನಿಜ. ಆದರೆ ಅವರ ಮುನ್ನೂರಕ್ಕೂ ಹೆಚ್ಚಿನ ಕತೆಗಳಲ್ಲಿ ವ್ಯಾಸರು ಸದಾ ಜೀವಂತವಾಗಿ ಮಾತನಾಡುತ್ತಿದ್ದಾರೆ, ಉಸಿರಾಡುತ್ತಿದ್ದಾರೆ. ಒಬ್ಬ ಸತ್ವಶಾಲಿ ಬರಹಗಾರನಿಗೆ ಸಾವೆಂಬುದೇ ಇಲ್ಲ. ಭೌತಿಕವಾಗಿ ವ್ಯಾಸರು ಇದ್ದಿದ್ದು ಕೆಲವೇ ಕೆಲವು ನಿಕಟವರ್ತಿಗಳ ಮಟ್ಟಿಗೆ.

ಕನ್ನಡದಲ್ಲಿ ಓಸಿಆರ್‍ ಇದೆಯೇ?

ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ?