ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
ಕನ್ನಡದಲ್ಲಿ ’ಸಮಾಜಕ್ಕೆ ಸಂದೇಶವನ್ನು ರವಾನಿಸುವ’ ಸಿನಿಮಾ ಅತೀ ವಿರಳ ಎಂದರೆ ತಪ್ಪಾಗಲಾರದು. ಮಚ್ಚು, ಲಾಂಗು, ದುರ್ಭಾಷೆ, ಅರೆನಗ್ನ ಸಂಸ್ಕೃತಿಯನ್ನು ನಿರ್ಭಯವಾಗಿ ಸಾರುತ್ತಿರುವ ಸಿನಿಮಾಲೋಕದಲ್ಲಿ ಈಗೀಗ ಒಂದು ಮೊಗ್ಗು ಅರಳಿದ.
ಕ್ಷಮಿಸಿ, ಸಿನಿಮಾ ವೃಂದದ ಎಲ್ಲಾ ಹೆಸರುಗಳು ನನಗೆ ನೆನಪಿಲ್ಲ. ಪ್ರಮುಖ ಪಾತ್ರದಲ್ಲಿ ನಟಿ ಚಂಚಲಳ ಅಭಿನಯ ಮೆಚ್ಚುವಂತದ್ದು. ಹದಿಹರೆಯದ ಹುಡುಗಿಯರ ಉತ್ಸುಕತೆ, ಚಂಚಲತೆಯನ್ನೂ ಹಾಗು ಭಯ, ಮಾನಸಿಕ ದುರ್ಬಲತೆಯನ್ನೂ ಪರದೆಯ ಮೇಲೆ ತಂದಿರುವ ರೀತಿ ಮೆಚ್ಚುವಂತದ್ದು. ಹದಿಹರೆಯದ ಪಾತ್ರಗಳಾದ್ದರಿಂದ ಮೊದಲ ೨೦ ನಿಮಿಷ ಭಾರೀ ಗಜಿಬಿಜಿಯಿದೆ.
ಇದು ಹುಡುಗಿಯರ ಸಿನಿಮಾ ಎಂದು ನಾನು ಹೇಳಲಾರೆ. "ಹದಿಹರೆಯದ ಹುಡುಗಿಯರು ಹೀಗ್ಯಾಕೆ?" ಎಂಬ ಹುಡುಗರ, ತಂದೆ ತಾಯಂದಿರ ಪ್ರಶ್ನೆಗೆ ಈ ಸಿನಿಮಾದಲ್ಲಿ ಉತ್ತರೆವಿದೆ. ಹಾಗಾಗಿ ಇದು ಹುಡುಗರ, ತಂದೆ ತಾಯಂದಿರ ಸಿನಿಮಾ. ಚಿಕ್ಕ ಮಕ್ಕಳಿಗೆ ಎಷ್ಟು ಸೂಕ್ತವೆಂಬುದು ನನಗೂ ತಿಳಿಯದಂತಾಗಿದೆ.
ಜಯಂತ ಕಾಯ್ಕಿಣಿ ಮತ್ತು ಮನೋಮೂರ್ತಿ, ಇಬ್ಬರೂ ಸೇರಿ ಕವನ-ಸಂಗೀತಗಳ ಲಹರಿಯಲ್ಲಿ ಕೇಳುಗರನ್ನು ತೇಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾಟೋಗ್ರೆಫಿಯಲ್ಲಿ ಅದ್ಬುತ ದೃಶ್ಯಗಳನ್ನು ಸೆರೆಹಿಡಿದು ಪರೆದೆಯ ಮೇಲೆ ತರಲಾಗಿದೆ.
ಮತ್ತೊಮ್ಮೆ ಸದಭಿರುಚಿಯ ಸಿನಿಮಾಗಳನ್ನು ಮಾತ್ರ ತೆಗೆಯುವ ಮೂಲಕ ನಿರ್ಮಾಪಕರಾದ ಕೃಷ್ಣಪ್ಪನವರು ಜನಮನವನ್ನು ಗೆದ್ದಿದ್ದಾರೆ. ಹದಿಹರೆಯದ ಹುಡುಗ ಹುಡುಗಿಯರಿಗೆ, ಅವರ ತಂದೆ ತಾಯಂದಿರಿಗೆ ಸಂದೇಶವನ್ನು ನೀಡುವ ಮೂಲಕ ಕಲ್ಯಾಣಕರವಾದ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಅವರಿಗೆ ನಮ್ಮ ಅನಂತ ವಂದನೆಗಳನ್ನು ಸಲ್ಲಿಸಬೇಕು.
ನನ್ನ ದೃಷ್ಟಿಯಲ್ಲಿ... ಒಳ್ಳೆಯ ಕನ್ನಡ ಸಿನಿಮಾ.