ತೊರೆ, ತೊಱೆ
ಬರಹ
ತೊರೆ= ಸ್ತನ/ಕೆಚ್ಚಲಿನಲ್ಲಿ ಹಾಲ್ದುಂಬಿ ಸುರಿ. ಉದಾಹರಣೆ:- ತೊರೆವ/ತೊರೆಯುವ ಮೊಲೆ. ಇದು ಕ್ರಿಯಾಪದ.
ತೊಱೆ=ಬಿಡು ಕ್ರಿಯಾಪದವಾದಾಗ. ನೋಡಿ:- ತೊಱೆದು ಜೀವಿಸಬಹುದೆ ಹರಿ ನಿನ್ನ ಚರಣವ.
ಹಾಗೆಯೇ ತೊಱವಿ=ಸಂನ್ಯಾಸಿ (ಎಲ್ಲಾ ಬಿಟ್ಟವನು)
ತೊಱೆ (ನಾಮಪದ):- ನದಿ. ಉದಾಹರಣೆ:- ಬಾಂದೊಱೆ=ಬಾನ್+ತೊಱೆ=ಆಕಾಶದ ನದಿ=ಗಂಗೆ. ಪುರಾಣದ ಪ್ರಕಾರ ಗಂಗೆ ಆಕಾಶದಿಂದ ಬಿದ್ದವಳು. ಅಥವಾ ಆಕಾಶದೆತ್ತರಕ್ಕಿರುವ ಹಿಮಾಲಯದಿಂದ ಹರಿದು ಬಂದವಳು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ