ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂಥ ಮಕ್ಕಳನ್ನು ಬೆಳೆಸುವುದು ಹೇಗೆ?

ನೀವೆಲ್ಲ ’ಬ್ಲ್ಯಾಕ್’ ಸಿನಿಮಾ ನೋಡಿದ್ದೀರಿ ಅಂತ ಅಂದುಕೊಂಡಿದ್ದೇನೆ. ವಿಕಲಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅವರು ಬಡವರಿರಲಿ, ಶ್ರೀಮಂತರಿರಲಿ, ಓದಿದವರಿರಲಿ, ಅನಕ್ಷರಸ್ಥರಿರಲಿ- ಪ್ರತಿಕ್ರಿಯೆ ಒಂದೇ. ದೇವರು ನಮಗೆ ಹೀಗೇಕೆ ಮಾಡಿದ? ಎಂದು ದುಃಖಿಸುತ್ತಾರೆ.

ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

ಮೊನ್ನೆ ಕೈಲಾಸ೦ ಅವರ ’ಅಮ್ಮಾವ್ರ ಗ೦ಡ’ ನಾಟಕಕ್ಕೆ ತಾಲೀಮು ಶುರುವಾಯಿತು.ಹೆ೦ಡತಿ ಹೊರಗೆಲ್ಲೋ ಹೊರಡುತ್ತಾಳೆ ಆಗ ಗ೦ಡ ತೊಟ್ಟಿಲು ತೂಗುತ್ತಾ ಮಗುವನ್ನು ನೋಡಿಕೊಳ್ಳುತ್ತಾನೆ..ಹೀಗೊ೦ದು ಸನ್ನಿವೇಶ. ಆಗಿನ ಕಾಲಕ್ಕೆ ತಮಾಷೆಯಾದ ಒ೦ದು ವಿಷಯ ಈಗ ಸಾಮಾನ್ಯ ದೃಶ್ಯ. ಈಗಿನ ದ೦ಪತಿಗಳು ಪ್ರಾಯಶಃ ಈ ದೃಶ್ಯದಲ್ಲಿ ತಮಾಷೆಯನ್ನೇನು ಕಾಣಲಾರರು ಎ೦ದೆನಿಸಿತು.

ಸಂಗಾತಿ

ಹಳ್ಳಿಯ ಹೈದನಾದ ನಾನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಂದಾಗ ನನ್ನ ಮನಸಿನಲ್ಲಿ ಮೂಡಿದ ಕೇಲವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ.

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೀಗೆ

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ಎಂಬ ಪ್ರಬಂಧವನ್ನು ಓದಿ ಮನಸ್ಸಿಗೆ ಬಹಳ ನೋವಾಯಿತು. ನಮ್ಮವರೇ ಹಾಗೆ. ದೇವರ ಕೆಲಸ ಎಂದರೆ ಸರಕಾರದ ಕೆಲಸದಂತೆ ಮಾಡಿದರೂ ಆಯಿತು ಬಿಟ್ಟರೂ ಆಯಿತು. ದೇವಸ್ಥಾನವೆಂದರೆ ಬೀಚಿಯವರು ಹೇಳಿರುವಂತೆ ಊರ ಮುಂದಿನ ಇಸ್ಪೀಟ್ ಆಡುವ ಜಾಗವೆಂದೇ ಅರ್ಥ.

ಹದಿನೆಂಟು ಪುರಾಣಗಳು ಹಾಗೂ ಅಷ್ಟಸಿದ್ಧಿಗಳು

ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್|
ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ||

ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ
ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨)
ಭದ್ವಯಂ=ಭವಿಷ್ಯ, ಭಾಗವತ(೨)
ಬ್ರತ್ರಯಂ=ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ(೩)
ವಚತುಷ್ಟಯಂ=ವರಾಹ, ವಾಮನ, ವಾಯು, ವಿಷ್ಣು (೪)
ಅ=ಅಗ್ನಿ (೧)
ನಾ=ನಾರದ(೧)
ಪ=ಪದ್ಮ(೧)
ಲಿಂ=ಲಿಂಗ(೧)

ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..

****************************************************
ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು
****************************************************
Bend it like beckham____________ಬಸಪ್ಪನ ಗತೆ ಬಗ್ಗಿಸು
What Lies Beneath?____________ಬಡ್ಯಾಗ್ ಏನ್ ಐತಿ?
Saving Private Ryan____________ಹವಾಲ್ದಾರ್ ರಾಮ್ಯಾನ ಉಳಸ್ರಿ
Honey I shrunk the kids!________ಏ ಇಕಿನ,ನಾ ಹುಡುಗನ್ನ ಈಟ ಮಾಡೀನಿ
Body heat ___________________ಮೈಯಾಗಿನ್ ಬಿಶಿ
V for vendetta________________ವ ಅಂದ್ರ ವಂಡತನ

ಜಿ ಟಿ ಎನ್ ಹಾಗೂ ನೆನಪುಗಳು

ನೆನ್ನೆ ಸಂಜೆ ಸಂಪದ ನೋಡಿದಾಗ ಕಂಡದ್ದು ಇದು.

ಇಸ್ಮಾಯಿಲ್ ಬರೆದ ಅತೀ ದುಃಖದ ಸಮಾಚಾರ.

ಜಿಟಿಎನ್ ಇನ್ನಿಲ್ಲ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನಲೇ? ಅದು ಕೇವಲ ಔಪಚಾರಿಕವಾಗುತ್ತೆ. ಅಷ್ಟೇ.

ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಎಂದಾಗ ಮೊತ್ತಮೊದಲು ಮನಸ್ಸಿಗೆ ಬರುವ ಹೆಸರೇ ಜಿಟಿನಾರಾಯಣರಾಯರದ್ದು.  ಸುಧಾ ಮೊದಲಾದ ಪತ್ರಿಕೆಗಳಲ್ಲಿ ಅವರ ಹಲವು ಬರಹಗಳು ಬೆಳಕು ಕಾಣುತ್ತಿದ್ದವು.

ಆಗ ಪ್ರಕಟವಾಗುತ್ತಿದ್ದ ಕನ್ನಡ ವಿಶ್ವಕೋಶ ಸ್ವಂತಕ್ಕೆ ಕೊಳ್ಳಲು ಬೆಲೆ ಕೈಗೆಟುಕುವಂತಿರಲಿಲ್ಲ.  ಲೈಬ್ರರಿಯಲ್ಲಿ ಸಿಗುವುದರ ಮಾತಂತೂ ಸ್ವಲ್ಪ ಕಷ್ಟವೇ! ಮತ್ತೆ ಐದನೇ ತರಗತಿಯವರೆಗೆ ಇಂಗ್ಲಿಷ್ ಕಲಿತಿಲ್ಲದ ಕಾರಣ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಅಂತಾಹವಂತೂ ನನಗೆ ಸ್ವಲ್ಪ ದೂರವೇ. ಇದೆಲ್ಲಾ ಸೇರಿ, ನಾನು  ಜಿಟಿಎನ್ ಅವರ ಬರಹಗಳು ಎಲ್ಲಿ ಕಂಡರೂ ತುಂಬ ಆಸಕ್ತಿಯಿಂದ ಓದುತ್ತಿದ್ದೆ.

ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

ಜಮ್ಮು ಕಾಶ್ಮೀರದಿಂದ ಅಸ್ಸಾಮಿನವರೆಗೂ ಭಾರತದ ಮಹಾಗೋಡೆಯಾಗಿ ನಿಂತಿದೆ ಹಿಮಾಲಯ. ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. ಇಂತಹ ಒಂದು ಸ್ಥಳ ರೂಪ್‌ಕುಂಡ್. ಉತ್ತರಾಂಚಲ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ ೭೦೦೦ಮೀ ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಕೆರೆ ರೂಪ್‌ಕುಂಡ್.

ಒಂದು ನಾಯಿ ಕತೆ

ಹೀಗೆ ಒಬ್ಬ ತನ್ನ ಹೆಂಡತಿಯೊಂದಿಗೆ ಜಗಳಾಡಿಕೊಂಡು ಮನೆ ಬಿಟ್ಟು ಹೊರಟ. ಮನೆ ಬಿಟ್ರೆ ಕಚೇರಿ, ಕಚೇರಿ ಬಿಟ್ರೆ ಮನೆ ಅಂತಿದ್ದೋನಿಗೆ ಈಗ ಎಲ್ಲಿಗೆ ಹೋಗಲೂ ತೋಚಲಿಲ್ಲ. ಸುಮ್ಮನೆ ಒಂದು ಪಾರ್ಕಿನಲ್ಲಿ (ಉದ್ಯಾನದಲ್ಲಿ) ಬೆಂಚಿನ ಮೇಲೆ ಕುಳಿತುಕೊಂಡ. ಮನ ಖಾಲಿಯಾಗಿತ್ತು.