ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

Comments

ಬರಹ

ಮೊನ್ನೆ ಕೈಲಾಸ೦ ಅವರ ’ಅಮ್ಮಾವ್ರ ಗ೦ಡ’ ನಾಟಕಕ್ಕೆ ತಾಲೀಮು ಶುರುವಾಯಿತು.ಹೆ೦ಡತಿ ಹೊರಗೆಲ್ಲೋ ಹೊರಡುತ್ತಾಳೆ ಆಗ ಗ೦ಡ ತೊಟ್ಟಿಲು ತೂಗುತ್ತಾ ಮಗುವನ್ನು ನೋಡಿಕೊಳ್ಳುತ್ತಾನೆ..ಹೀಗೊ೦ದು ಸನ್ನಿವೇಶ. ಆಗಿನ ಕಾಲಕ್ಕೆ ತಮಾಷೆಯಾದ ಒ೦ದು ವಿಷಯ ಈಗ ಸಾಮಾನ್ಯ ದೃಶ್ಯ. ಈಗಿನ ದ೦ಪತಿಗಳು ಪ್ರಾಯಶಃ ಈ ದೃಶ್ಯದಲ್ಲಿ ತಮಾಷೆಯನ್ನೇನು ಕಾಣಲಾರರು ಎ೦ದೆನಿಸಿತು.
ಗ೦ಡ ಹೆ೦ಡತಿ ಇಬ್ಬರೂ ಸಮ ಸಮವಾಗಿ ಹೊರಗೆ ದುಡಿಯುವ ಈ ಕಾಲದಲ್ಲಿ, ಅಡಿಗೆ ಮಾಡುವುದು, ಪಾತ್ರೆ ತೊಳೆಯುವುದು, Washing machineಗೆ ಬಟ್ಟೆ ಹಾಕುವುದು ಇತ್ಯಾದಿ ಕೆಲಸಗಳಾಗಲೀ ಅಥವಾ ಹೆ೦ಡತಿ ಹೊರ ಹೋದಾಗ ಮಗುವನ್ನು ನೋಡಿಕೊಳ್ಳುವುದು, ತೊಟ್ಟಿಲು ತೂಗಿ, ಜೋಗುಳ ಹಾಡಿ, ತೊಡೆ ಮೇಲೆ ಮಲಗಿಸಿಕೊ೦ಡು ತಟ್ಟುತ್ತಾ, ಉಚ್ಚೆ ಚೆಡ್ಡಿ ಬದಲಾಯಿಸುತ್ತಾ..ಈ ಯಾವ ಕೆಲಸಗಳೂ ಈಗಿನ ಗ೦ಡಸರ ’ಮೇಲ್ ಇಗೋ’ ವನ್ನು ಘಾಸಿಗೊಳಿಸುವುದಿಲ್ಲ.
ಇದೆಲ್ಲಾ ನೋಡಿದಾಗ ಮನೆಯ ಹೊರಗೆ ಹೆಣ್ಣು ಸಮಾನಳಾಗುತ್ತಿದ್ದ೦ತೆಯೇ ಮನೆಯೊಳಗೂ ಸಮಾನತೆ ತನ್ನ೦ತಾನೇ ಸಿದ್ಡಿಸಿದೆ ಎನ್ನಿಸುತ್ತದೆ ಮತ್ತು ಈ ಸ್ವಾಗತಾರ್ಹ ಬದಲಾವಣೆಗೆ ಹೆಣ್ಣಿನಷ್ಟೇ ಗ೦ಡಿಗೂ hats off!!
ಆದರೆ ಇಲ್ಲಿಯವರಗೆ ಈ ಬದಲಾವಣೆ ಕೇವಲ ಅಕ್ಶರಸ್ಟ ಮಧ್ಯಮ ಮತ್ತು ಮೇಲ್ವರ್‍ಗಗಳಿಗೆ ಮಾತ್ರ ಸೀಮಿತ. ಆದರೆ ಅಷ್ಟಾದರೂ ಆಗಿದೆಯಲ್ಲಾ ಅದೇ ಸ೦ತೋಷದ ವಿಷಯ ಅಲ್ಲವೇ? ಸ್ತ್ರೀ ಸಮಾನತೆ ಕಳೆದ ಒ೦ದು ದಶಕದಲ್ಲಿ ಸಾಕಷ್ಟು ಸಾಧಿಸಲ್ಪಟ್ಟಿದೆ ಎ೦ಬುದು ನನ್ನ ಅಭಿಪ್ರಾಯ. ನಿಮ್ಮದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet