ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಾಯಿಯ ನಾಕನೇ ಮುಖ

ಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು "ಮಾಯಿಯ ಮೂರು ಮುಖಗಳು" ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು ಸ್ವಾತಂತ್ಯ್ರದ ಬಗ್ಗೆಯೂ ಇದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಪದ್ಯ. ಆದರೆ ಅದರೊಳಗಿನ ಒಂದು ಅಂಶ ಮಾತ್ರ ನನ್ನ ನೆನಪಿನಲ್ಲಿ ಉಳಿದಿದ್ದೇ ಅದನ್ನು ಮತ್ತೆ ಓದಲು ಪ್ರೇರಣೆಯಾಯಿತು.

ಮಾಯಿ, ಮಹಾಮ್ಮಾಯಿ
ಮೂರು ವಿಧದಿಂದ ನೀನೆಮ್ಮ ತಾಯಿ.
(ಸಾಕು ತಾಯಿ; ದತ್ತ ತಾಯಿ; ಹೆತ್ತತಾಯಿ.)
...
ತಾಯಿಯನ್ನು ಭಾವನಾತ್ಮಕವಾಗಿ ನೋಡುವುದಷ್ಟೇ ಅಲ್ಲದೆ ಒಂದು ವಿಶ್ಲೇಷಣೆಯೂ ಅದರಲ್ಲಿದೆ. ಆ ಪದ್ಯದಲ್ಲಿ ಮೂರು "ತಾಯಿ"ಗಳನ್ನು ಪಟ್ಟಿ ಮಾಡುತ್ತಾರೆ. ೧. ಸಾಕು ತಾಯಿ ೨. ದತ್ತ ತಾಯಿ ಮತ್ತು ೩. ಹೆತ್ತ ತಾಯಿ. ಅದು ಕಾಲದ ಗೆರೆಯೆಳೆದು ಮಾಡಿದ ಸರದಿಯ ಪಟ್ಟಿಯಲ್ಲ ಎಂದು ತಕ್ಷಣ ಹೊಳೆಯುವಂತದೆ.

ಮೊಟ್ಟ ಮೊದಲಿಗೆ ಬರುವಿ ಸಾಕುತಾಯಾಗಿ
ಬಳೆಸುವೆಯೆ ಬಾಳ ಬೆಳೆಸುತ್ತ ಹಾಯಾಗಿ ...

ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !

ತಾ. ಹಂತ ಮ್ಯಾಚ್ ಗಳು ಸ್ಥಳ ಫಲಿತಾಂಶ ಸ್ಲೋರ್ ವಿವರ

೧೯, ಜೂನ್ ೨೦೦೮ (ಗುರುವಾರ) ಕ್ವಾರ್ಟರ್ -ಪ್ಜೈನಲ್ (೧) ಜರ್ಮನಿ, ಪೋರ್ಚುಗಲ್ ನ್ನು ಬೇಸೆಲ್ ನಲ್ಲಿ ಸೋಲಿಸಿತು - ಸೇಂಟ್. ಜ್ಯಾಕೊಬ್ಪಾರ್ಕ್ ನಲ್ಲಿ - ೩-೨

ನಿರಂತರ

 (ಮಂಗಳೂರು ಆಕಾಶವಾಣಿಗಾಗಿ ಬರೆದು ಪ್ರಸಾರವಾದ ಕಥೆ)

ನನಗೆ ಚೆನ್ನಾಗಿಯೇ ಗೊತ್ತು. ಈ ಇಡೀ ಕತೆ ಕೇಳಿ ಮುಗಿದದ್ದೆ ನೀವು ಅರೆರೆ, ಇದೆಂಥ ಕತೆಯಪ್ಪ, ಒಂಚೂರೂ ಅರ್ಥವಾಗ್ಲಿಲ್ಲ, ಎಂಥ ಕಥೆಯೋ ಏನೋ ದೇವ್ರೇ ಬಲ್ಲ ಎನ್ನುತ್ತೀರಿ. ಅದಕ್ಕೇ ಈ ಕಥೆಯ ಅರ್ಥ ಏನು ಅಂತ ನಾನು ಮೊದಲೇ ನಿಮಗೆ ಹೇಳಿ ಬಿಡ್ತೇನೆ. ಆ ಮೇಲೆ ನೀವು ಆರಾಮಾಗಿ ಕತೆ ಕೇಳಬಹುದು.

ಈಗ ನಾನು ಹೇಳ್ತೇನೆ, ನೀವು ಯಾರನ್ನೋ ಹುಡುಕ್ತಾ ಇದ್ದೀರಿ, ಅವರು ನಿಮಗೆ ಇನ್ನೂ ಸಿಕ್ಕಿಯೇ ಇಲ್ಲ ಅಂತ. ಆದರೆ ನೀವೆಲ್ಲಿ ಒಪ್ತೀರಿ? ಇಲ್ಲಪ್ಪ, ಯಾರು ಹೇಳಿದ್ದು ನಿಮಗೆ, ನಾವು ಯಾರನ್ನೂ ಹುಡುಕ್ತಾ ಇಲ್ಲ, ಇಶಿಶಿ,ನಮಗೆ ಬೇರೆ ಕೆಲಸ ಇಲ್ಲಂತ ಎಣಿಸಿದ್ದೀರಾ ಹೇಗೆ, ಎಂದೆಲ್ಲ ಸುರು ಮಾಡುತ್ತೀರಿ. ಆದ್ರೆ ನಂಗೆ ಗೊತ್ತಿದೆ, ನಿಮಗೆ ಗೊತ್ತಿಲ್ಲ ಅಷ್ಟೆ ವ್ಯತ್ಯಾಸ. ಅಥವಾ, ನೀವು ಎಣಿಸಿರಬಹುದು, ನೀವು ಹುಡುಕ್ತಾ ಇದ್ದ ಜನ ಆಗಲೇ ಸಿಕ್ಕಿದೆ ಅಂತ. ತುಂಬ ಪಾಪದವ್ರು ನೀವು. ಸುಳ್ಳು ಹೇಳಿದ್ರೂ ಸತ್ಯ ಅಂತ ನಂಬಿ ಬಿಡ್ತೀರಿ. ಆದ್ರೆ ನಾನು ಮಾತ್ರ ಸುಳ್ಳು ಹೇಳ್ತ ಇಲ್ಲ. ನಿಮಗೆ ಸಿಕ್ಕಿದ ಜನ ನೀವು ಹುಡುಕ್ತಿದ್ದ ಜನ ಅಲ್ಲವೆ ಅಲ್ಲ. ನೋಡಿ ನೋಡಿ, ನಿಮಗೆ ಸಿಟ್ಟೇ ಬಂತಲ್ಲ! ಸ್ವಲ್ಪ ಸಮಾಧಾನದಿಂದ ಕೇಳಬಾರದ? ಪ್ಲೀಸ್!

ಮೊದಲು ನಿಮಗೆ ಸಹ ಅದು ಇವರಲ್ಲವೇನೋ ಅಂತನೇ ಅನಿಸಿತ್ತು, ನೆನಪು ಮಾಡಿಕೊಳ್ಳಿ. ಅನುಮಾನ ಇತ್ತು ನಿಮಗೂ. ಇರಲಿಕ್ಕಿಲ್ಲ ಇರಲಿಕ್ಕಿಲ್ಲ ಅಂತ ನಿಮಗೆ ನೀವೇ ನೂರು ಸರ್ತಿಯಾದರೂ ಹೇಳಿಕೊಂಡಿದ್ರಿ. ಆಗಲೂ ನಿಮ್ಗೆ ಒಳಗೊಳಗೆ ಒಂದು ಆಸೆ, ಅದು ಇವರೇ ಆಗಿರ್ಲಿ ಅಂತ! ಮತ್ತೆ ದಿನಕಳೆದ ಹಾಗೆ ಅದು ಇದೇ ಜನ ಅಂತ ವಿಶ್ವಾಸ ಕುದುರಲಿಕ್ಕೆ ಸಹ ಸುರುವಾಯ್ತು. ನಂಗೆ ಗೊತ್ತಿತ್ತು, ಇದು ಹೀಗೇ ಆಗ್ತದೆ ಅಂತ. ಕೊನೆಗೆ ನೀವು ನಂಬಿ ಬಿಟ್ರಿ, ನಿಮಗೇ ಗೊತ್ತಾಗದ ಹಾಗೆ! ಸುಳ್ಳ ನಾನು ಹೇಳಿದ್ದು? ಇವರನ್ನೇ ಹುಡುಕ್ತಾ ಇದ್ದಿದ್ದು ಅಂತ ನೀವು ನಂಬಿದ್ದು.

ಮದುವೆ ಕರೆಯೋಲೆ ತಯಾರಿ !!

ಹರಿ : ಹಲೋ ಗಣೇಶ್, ಸ್ವಲ್ಪ ಬಿಡುವು ಮಾಡಿಕೊಂಡು ಟೌನ್‌ಹಾಲ್ ಎದುರು ಬರಲು ಸಾಧ್ಯವೇ ?


 ನಾನು : ಅದಕ್ಕೇನಂತೆ.. .. .. ಏನು ವಿಷಯ?


ಹರಿ : ಏನಿಲ್ಲಾ.. .. ಮಹೇಶನಿಗೆ ಕನ್ನಡದಲ್ಲೊಂದು ಮದುವೆ ಕರೆಯೋಲೆ ತಯಾರಿ ಮಾಡೋಣವೆಂದು ನಾವೆಲ್ಲಾ ಇಲ್ಲಿ ಸೇರಿದ್ದೇವೆ. ಹಂಸಾನಂದಿಯವರು ಗ್ರಹ ನಕ್ಷತ್ರಗಳ ಕಡೆ ಗಮನಿಸುತ್ತಿದ್ದಾರೆ. ಸುನಿಲ್,ಸವಿತೃ,ವೈಭವ್,ಕನ್ನಡಕಂದ.. ... ಎಲ್ಲಾ ಸೇರಿ ಕನ್ನಡದಲ್ಲಿ ಕರೆಯೋಲೆ ತಯಾರಿ ಮಾಡುತ್ತಿದ್ದಾರೆ..


ನಾನು : ಫೈನ್. ನಾನು ಸಹ ೨ ಕರಡು ಪ್ರತಿ ಬರೆದಿದ್ದೇನೆ.ಅದನ್ನೂ ತರುತ್ತೇನೆ.

ಕನ್ನಡ ಅಕ್ಷರ ಗುರುತಿಸುವ (Character recognition) ಸಾಫ್ಟ್ ವೇರ್‍ ಇದೆಯಾ ?

ಕೈ ಬರಹವನ್ನು ಮುದ್ರಿತ ಬರಹಕ್ಕೆ ಬದಲಾಯಿಸುವಂತಹದ್ದು ಸಾಫ್ಟ್ ವೇರ್‍ ಇದೆಯೇ ?.

ಗೂಗಲ್ ಮಾಡಿದಾಗ ಈ ಕೆಳಗಿನ ಲಿಂಕ ಅಷ್ಟೆ ಸಿಕ್ಕಿದ್ದು:

http://www.ias.ac.in/sadhana/Pdf2002Feb/pe992.pdf

ಬಲ್ಲವರು ತಿಳಿಸಿ.

ಧನ್ಯವಾದ,

ಕೇಶವ ಮುರಳಿ.

 

 

ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ

ಮತ್ತೆ ಬಂತು ಆ ದಿನ ನೋಡು ಮತ್ತೆ ನೀನು ಹಾಜರ್. ನೀನೇನು ಸುಮ್ನೆ ಬರ್ತೀಯೋ ಇಲ್ಲ ಹೃದಯಾನ ಮಿಡಿಯೋಕೆ ಬರ್ತೀಯೊ ಅಂತ ಗೊತ್ತಾಗ್ತಿಲ್ಲ .

ಮೊದಲ ಹೆಜ್ಜೆ

ಎಲ್ಲರಿಗು ನಮಸ್ಕಾರ,

ಸಂಪದದಲ್ಲಿ ಇದು ನನ್ನ ಮೊದಲ ಬರಹ. ಕನ್ನಡದ ಮೇಲೆ ನಿಮಗೆಲ್ಲರಿಗು ಇರುವ ಅಭಿಮಾನವನ್ನು ನೂಡಿ ಬಹಳ ಸಂತೊಷವಾಯ್ತು. ಸಂಪದವನ್ನು ಉಪಯೊಗಿಸುವುದರ ಬಗ್ಗೆ ನಾನು ಇನ್ನು ಹೆಚು ತಿಳಿಯ ಬೇಕಿದೆ. ಸಂಪದ ಇನ್ನು ಚೆನ್ನಾಗಿ ಬೆಳೆಯಲೆಂದು ಆಶಿಸುತ್ತೇನೆ.

ಧನ್ಯವಾದಗಳು,

ನೀತಾ

positive thinking ಅಂದರೆ?

ಎಸ್ಟೋ ಸಲ, ’ಇಂತದನ್ನು ಮಾಡಬೇಡ’ ಅಂತ ಎಸ್ಟು ಹೇಳಿದರೂ ಮಕ್ಕಳು ಅದೇ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾರೆ,./ ಎಸ್ಟೋ ಸಲ ನಾವೇ, ’ಅದನ್ನು ಮಾಡಬಾರದು’ ಅಂತ ಎಸ್ಟು ಸಲ ಅಂದುಕೊಂಡರೂ ಆ ತಪ್ಪು ಮತ್ತೆ ಮರುಕಳಿಸುತ್ತದೆ.../

ಯಾವಾಗಲು ಅದನ್ನು ಮಾಡಬಾರದು, ಅದನ್ನು ಮಾಡಬಾರದು ಅಂದುಕೊಳ್ಳುತ್ತಾ,.. ಅದನ್ನೇ ನಮಗೇ ತಿಳಿಯದಂತೆ ಮಾಡಿ ಬಿಡುತ್ತೇವೆ,.. ಇದಕ್ಕೇನು ಕಾರಣ?

ಶೋಷಣೆ ?

ಅದೊಂದು ದೊಡ್ಡ ಮಾಲ್ . ದಿನಸಿಯಿಂದ ಹಿಡಿದು ಎಲ್ಲಾ ರೀತಿಯ ಸಾಮಾಗ್ರಿ ಗಳೂ ಅಲ್ಲಿ ಸಿಗುತ್ತಿದ್ದವು.
ಜನ ನಿರಂತರವಾಗಿ ಬಂದು ಹೋಗಿ ಮಾಡುತಿದ್ದರು. ತುಂಬಾ ಜನ

ಆಕೆಯೂ ಆ ಮಾಲ್‌ಗೆ ಬಂದಳು . ಅವಳುಟ್ಟಿದ್ದ ಸುಮಾರಾದ ಸೀರೆ ಅವಳ ಅಂತಸ್ತನ್ನು ವಿವರಿಸುತ್ತಿತ್ತು.
ಸೆಕ್ಯೂರಿಟಿ ತಡೆದು ಏನೆಂದು ಕೇಳಿದ