positive thinking ಅಂದರೆ?
ಎಸ್ಟೋ ಸಲ, ’ಇಂತದನ್ನು ಮಾಡಬೇಡ’ ಅಂತ ಎಸ್ಟು ಹೇಳಿದರೂ ಮಕ್ಕಳು ಅದೇ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾರೆ,./ ಎಸ್ಟೋ ಸಲ ನಾವೇ, ’ಅದನ್ನು ಮಾಡಬಾರದು’ ಅಂತ ಎಸ್ಟು ಸಲ ಅಂದುಕೊಂಡರೂ ಆ ತಪ್ಪು ಮತ್ತೆ ಮರುಕಳಿಸುತ್ತದೆ.../
ಯಾವಾಗಲು ಅದನ್ನು ಮಾಡಬಾರದು, ಅದನ್ನು ಮಾಡಬಾರದು ಅಂದುಕೊಳ್ಳುತ್ತಾ,.. ಅದನ್ನೇ ನಮಗೇ ತಿಳಿಯದಂತೆ ಮಾಡಿ ಬಿಡುತ್ತೇವೆ,.. ಇದಕ್ಕೇನು ಕಾರಣ?
ಅಂದರೆ ನುಡಿ ಅನ್ನುವದು ನಮ್ಮ ಬದುಕಲ್ಲಿ ಏಟೊಂದು ನಿಕ್ಕುವ ಪರಿಣಾಮ ಬೀರುತ್ತದೆಯೆಂದರೆ, ಒಂದೊಂದು ಪದವೂ ನಮ್ಮ ಮಿದುಳಿನಲ್ಲಿ ಒಂದು ಪಾಪೆ(picture)ಅನ್ನು ಮೂಡಿಸುತ್ತದೆ. ’ಜೈಲು’ ಅಂದಾಗ ಜೈಲಿನ ಪಾಪೆ ಮಿದುಳಲ್ಲಿ ಮೂಡುತ್ತದೆ.
"ಇಂತದನ್ನು ಮಾಡುವದು" ಅನ್ನುವದನ್ನು ಕಾಣುವದಕಿಂತ "ಇಂತದನ್ನು ಮಾಡಬಾರದು" ಅನ್ನುವದನ್ನು ಕಾಣುವದು ನಮ್ಮ ಮಿದುಳಿಗೆ ತುಂಬಾ ತ್ರಾಸು. ಒಮ್ಮೆ ನಡೆದದ್ದು,.. ನನ್ನ ಇಬ್ಬರು ಗೆಳೆಯರು, ತುಂಬ ಚಿಕ್ಕವನಿದ್ದಾಗ, ಇಬ್ಬರಿಗೂ ಸುಮಾರು ಎಂಟು ವರುಶ ವಯಸ್ಸು,.. ಮರವೊಂದರ ಮೇಲೆ, ಕೊಂಬೆಗಳನ್ನು ಹಿಡಿದುಕೊಂಡು ತೂಗಾಡುತ್ತಿದ್ದರು,.. ಅಸ್ಟರಲ್ಲಿ ಜೋರಾಗಿ ಗಾಳಿ ಬೀಸತೊಡಗಿತು,.. ಅವರು ಬೀಳುವಂತಾದುದನ್ನು ಒಬ್ಬನ ತಂದೆ, ಮತ್ತು ಇನ್ನೊಬ್ಬನ ತಾಯಿ ನೋಡಿದರು,.. ಮೇಲಿನ ಕೊಂಬೆಯಲ್ಲಿ ತೂಗಾಡುತ್ತಿದ್ದವನ ತಂದೆ,. "ಸಂದೀಪಾ,.. ಗಟ್ಟಿಯಾಗಿ ಕೊಂಬೆನಾ ಹಿಡಿದುಕೋ" ಅಂತ ಕೂಗಿದರು,.,. ಅಸ್ಟರಲ್ಲಿ ಕೆಳಗಿನ ಕೊಂಬೆಗೆ ತೂಗಾಡುತ್ತಿದ್ದ ಮಲ್ಲು ಬಿದ್ದು ಬಿಟ್ಟ.., ಆತನ ತಾಯಿ, "ಮಲ್ಲ,. ಕೆಳಗೆ ಬೀಳಬೇಡ" ಅಂತ ಕೂಗಿದ್ದರು. ಅದಕ್ಕೆ ಆ ಮಗುವಿನ ಎಂಟು ವರುಶದ ಮೆದುಳು ಮೊದಲು ತಾನು ಬೀಳುತ್ತಿರುವಂತೆ ಪಾಪೆಯನ್ನು ಕಂಡು ಆಮೇಲೆ ಅದು ಆಗದಂತೆ ತಡೆಯಬೇಕು ಅನ್ನುವ ಜತನದಲ್ಲಿ ತೊಡಗಿತು.
actually ಜತನ(ಪ್ರಯತ್ನ)ಗೈಯಲು ಹೇಳುವದೆಂದರೆ ನೀವು ಮೆದುಳಿಗೆ ಸೋಲು ಅಂತ ಹೇಳಿದಂತೆ. ಹೌದು., ಒಂದು ಸಣ್ಣ ಎಕ್ಸ್‍ಪೆರಿಮೆಂಟ್ ಮಾಡಿ ನೋಡಿ,.. ಒಬ್ಬ ಹುಡುಗನ ಕೈಯಲ್ಲಿ ಪೆನ್ಸಿಲ್ ಒಂದನ್ನು ಕೊಟ್ಟು, "ಇದನ್ನು ಬೀಳಿಸಲು ಜತನಗೈ" ಅಂತ ಹೇಳಿ. ಹೆಚ್ಚಿನವರು ಹಿಡಿದಿರುವ ಪೆನ್ಸಿಲ್ ಅನ್ನು ಬಿಟ್ಟು ಅದು ಬೀಳುವದನ್ನು ನೋಡುತ್ತಾರೆ,.. ನೀವು ಮತ್ತೆ ಹೇಳಿ, "ನನ್ನ ಮಾತನ್ನು ತುಸು ಗಮನದಿಂದ ಕೇಳಿ,. ನಾನು ಹೇಳುತ್ತಿರುವದು ಪೆನ್ಸಿಲ್ ಅನ್ನು ಬೀಳಿಸಲು ಜತನಗಯ್(ಟ್ರೈ ಮಾಡು) ಎಂದು" .... ಆಗ ಹೆಚ್ಚಿನವರು ಪೆನ್ಸಿಲ್ ಅನ್ನು ಕೈಯಲ್ಲಿ ಹಿಡಿದು ತಿನುಕುವಂತೆ ಮಾಡುತ್ತಾರೆ,. ಆದರೆ ಪೆನ್ಸಿಲ್ ಅನ್ನು ಬೀಳಿಸುವದಿಲ್ಲ,. ಅಂದರೆ,.. ಅವರು ಅದನ್ನು ಪೆನ್ಸಿಲ್ ಬೀಳಿಸುವದಲ್ಲಿ ಸೋಲು ಅಂದಂತೆ ಪರಿಗಣಿಸುತ್ತಾರೆ,.
ಅದಕ್ಕಾಗಿ "ಪ್ರಯತ್ನಪಡುವೆ","ಟ್ರೈ ಮಾಡ್ತೀನಿ" ಅನ್ನುವ ಪದಗಳನ್ನು ತೆಗೆದು ಹಾಕಿ.