ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓಪನ್ ಮೂವಿ Big Buck Bunny

ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ :)
ಮೇ ೧೮, ೨೦೦೬ ನಲ್ಲಿ ಬ್ಲೆಂಡರ್ ತಂಡದಿಂದ "Elephants Dream" ಎಂಬ ಮೊದಲನೇ ಓಪನ್ ಮೂವಿ ಬಿಡುಗಡೆ ಮಾಡಿದರು.
ಮೇ ೩೧, ೨೦೦೮ ರಲ್ಲಿ "Big Buck Bunny" ಎಂಬ ಓಪನ್ ಮೂವಿ ಬಿಡುಗಡೆ ಮಾಡಿದರು.(ಇದೇ ಇಂದಿನ ಈ ಲೇಖನಕ್ಕೆ ಸ್ಪೂರ್ತಿ)

ಮುತ್ತು-ಗಾಯ

ಕೆನ್ನೆಯ ಮೇಲೆ ಮುತ್ತನಕ್ಕಿದೆ
ನಿನ್ನ ನೆನೆಪಿಗೊನ್ಧು ಬರಿಯ ಚಾಯೇ
ದಿನ ದಿನವು ನೆನೆ ನೆನೆದು ನಗುತಿಹೆನು
ಅದನೆನ್ಧು ಮರೆಯುಹುದಿಲ್ಲ.

ಮನಸ ಮೇಲೆ ಚುಚ್ಚದೆ ಗಾಯವ ಮಾದಿದೆ
ನನ್ನ ಚಿರ ಪ್ರೆಮಕ್ಕದು ಶಾಶ್ವತ ಚಿಹ್ನೆ
ದಿನೆ ದಿನೆವು ನೆನೆ ನೆನೆದು ಅಲುತಿಹೆನು
ಗಾಯವಿದೆನ್ದು ಮಾಸುಹುದಿಲ್ಲ.

ಕವಿತೆ ಬರೆಯೋಣ್ವಾ?

ಇದು ಒಂದು ಪುಟ್ಟ ಸವಾಲು.

ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್‌ ಮಾಡಬಾರದು. ಕವಿತೆಯಲ್ಲಿ ’ಪಂಚ್‌’ ಇರಲಿ. ಧಾರವಾಡದ ಭಾಷೆಯಲ್ಲಿ ಹೇಳುವುದಾದರೆ, ’ಧಾಡಸಿ’ ಇರಲಿ.

ಒಂದು ಚುಟುಕದ ಮೂಲಕ ನಾನು ಪ್ರಾರಂಭಿಸುತ್ತೇನೆ.

ಮೊದಲ ದಿನ ಮೌನ...

ನನ್ನ ಗೆಳತಿಯೊಬ್ಬಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹಳೆಯ ಗೆಳತಿಯರೆಲ್ಲ ಸೇರಿದ್ದೆವು. ಮಾತಿಗೆ ಸಡಗರದ ಸೊಗಸು, ನೆನಪುಗಳ ಅಲಂಕಾರ, ನಗುವಿನ ಉಡುಗೊರೆ. ನಮ್ಮ ನಗು, ಕೇಕೆ, ಉಲ್ಲಾಸ ಕಂಡು ವೇದಿಕೆ ಮೇಲೆ ಗಂಡನೊಂದಿಗೆ ಕೂತಿದ್ದ ಮಾಧವಿ ಸಿಕ್ಕಾಪಟ್ಟೆ ಅಸೂಯೆಪಟ್ಟಿದ್ದಳು.

ಬೇಸ್ತು ಬಿದ್ದ ಪ್ರಸಂಗ

ಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ  "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ್ರು. ಇಷ್ಟೊತ್ತೂ ಏನೂ ಹೇಳದಿದ್ದವರು ಈಗ ಕೂತ್ಕೊಳಕ್ಕೆ ಹೇಳ್ತಿದಾರಲ್ಲಾ ಅಂತ ಅಂದುಕೊಂಡು, "ಇರಲಿ  ಪರವಾಗಿಲ್ಲ" ಅಂದೆ.

ಚಿತೆಗೆ ಒಂದು "ಪಫ್"

ಸಿಗರೇಟಿನ ಒಂದು ತುದಿಗೆ ಬೆಂಕಿ ಹಚ್ಚಿ ಗಾಳಿಯಲ್ಲಿ ಹೊಗೆ ಹೊರಬಿಟ್ಟಾಗ ತನ್ನ ಜೀವಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂಬುದನ್ನು ಯಾವುದೇ ವ್ಯಕ್ತಿಯು ಯೋಚಿಸುವುದಿಲ್ಲ. "ಧಂ" ಎಳೆದರೆ ಮನಸ್ಸು ನಿರಾಳವಾಗುತ್ತದೆ, ಸಂತೋಷವಾದಾಗ ಅಥವಾ ಚಿಂತೆಯಾದಾಗ ತುಟಿಗಳ ನಡುವೆ ಹೊಗೆಬತ್ತಿ ಇಟ್ಟುಕೊಳ್ಳುವ ಅಭ್ಯಾಸ ಇಟ್ಟುಕೊಂಡವರು ಹಲವಾರು. ಧೂಮಪಾನ ವ್ಯಸನಿಗಳಿಗೆ ಯಾವುದೇ ಲಿಂಗ, ಪ್ರಾಯ ಭೇಧವಿಲ್ಲ. ಎಳೆ ಮಕ್ಕಳು ಕೂಡಾ ಈ ಚಟಕ್ಕೆ ಬೇಗನೆ ದಾಸ್ಯರಾಗುವುದನ್ನು ನಮ್ಮ ಕಣ್ಣ ಮುಂದೆಯೇ ಕಾಣಬಹುದು. ಧೂಮಪಾನ ನಿಷೇಧ ಅದರ ಪರಿಣಾಮಗಳ ಬಗ್ಗೆ ಎಷ್ಟೇ ವಿವರಣೆ ನೀಡಿದರೂ ಧೂಮಪಾನಿಗಳಿಗಂತೂ "ಧಂ" ಎಳೆಯದೆ ನಿದ್ದೆ ಹತ್ತುವುದಿಲ್ಲ. ಸಿಗರೇಟ್ ಪ್ಯಾಕೆಟಿನ ಮೇಲೆ 'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬುದಾಗಿ ಬರೆದಿದ್ದರೂ, ಅದನ್ನು ಓದಿಕೊಂಡೇ ಸಿಗರೇಟು ಸೇದುತ್ತಾರೆ. ಇವುಗಳಿಂದಾಗಿ ಮಾನಸಿಕ ಉಲ್ಲಾಸ ಸಿಗುತ್ತದೆ ಎಂಬ ಪೊಳ್ಳು ವಾದ ಮಂಡಿಸುವವರಿಗೆ ಶಾರೀರಿಕವಾಗಿ ತಾವು "ಲಾಸ್" ಆಗುತ್ತಿರುವ ವಿಷಯ ತಿಳಿದಿರುವುದಿಲ್ಲ.

ಸಿಗರೇಟು ಅಥವಾ ಬೀಡಿ ಸೇವನೆ ಒಂದು ಕೆಟ್ಟ ಚಟ. ಅಂತಹ ಚಟದಿಂದ ಮುಕ್ತಿ ಪಡೆಯಬೇಕು ಎಂದಾದರೆ ಮನಸ್ಸು ಗಟ್ಟಿಯಾಗಿರಬೇಕು.ಯಾವುದೇ ವ್ಯಕ್ತಿಗೆ ಇಂತಹ ಚಟವನ್ನು ಒಂದೇ ನಿಮಿಷದಲ್ಲಿ ಬಿಟ್ಟು ಬಿಡಲು ಅಸಾಧ್ಯ. ಆದರೆ ಪ್ರಯತ್ನ ಮಾಡಿದಲ್ಲಿ ಅಗತ್ಯ. ಪ್ರತಿ ದಿನದಲ್ಲಿ 10 ಪ್ಯಾಕೆಟ್ ಸಿಗರೇಟು ಸೇದುವ ವ್ಯಕ್ತಿ ಬಾಹ್ಯವಾಗಿ ಯಾವುದೇ ರೋಗಕ್ಕೊಳಪಡದವನಂತೆ ಕಂಡು ಬಂದರೂ ಆಂತರಿಕವಾಗಿ ಅವನ ಶ್ವಾಸಕೋಶಗಳು ಶಕ್ತಿ ಕಳೆದು ಕೊಂಡಿರುತ್ತವೆ. ಧೂಮಪಾನದಿಂದಾಗಿ ಕ್ಯಾನ್ಸರ್, ಶ್ವಾಸಕೋಶವನ್ನು ಬಾಧಿಸುವ ರೋಗಗಳು, ಕೆಮ್ಮು, ಅಧಿಕ ರಕ್ತದೊತ್ತಡ ಮೊದಲಾದ ರೋಗಗಳು ಬರುತ್ತವೆ ಎಂದು ತಿಳಿದಿದ್ದರೂ ಸಿಗರೇಟ್‌ಗೆ ವಿದಾಯ ಹೇಳುವ ಜನರು ಕಡಿಮೆ. ಪ್ರತ್ಯಕ್ಷ ಧೂಮಪಾನ ಒಂದೆಡೆಯಾದರೆ,ಅದರ ಫಲ ಅನುಭವಿಸಬೇಕಾಗಿ ಬರುವ ಪರೋಕ್ಷ ಧೂಮಪಾನಿಗಳ ಸಂಕಟ ಹೇಳತೀರದು. ಪರೋಕ್ಷ ಧೂಮಪಾನವು ಅತೀ ಹಾನಿಕರ ಎಂಬುದು ಸಾಬೀತು ಪಡಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಲಾಗಿದೆ. ಆದರೆ ಅಲ್ಲಿಯೂ ಕಾನೂನು ಪಾಲಕರ ಕಣ್ತಪ್ಪಿಸಿ ಹೊಗೆ ಬಿಡುವ ವ್ಯಕ್ತಿಗಳಿಂದ ಮುಕ್ತಿ ಪಡೆಯಲು ಅನುಭವಿಸಬೇಕಾದ ಕಷ್ಟ ಅಷ್ಟಿಷ್ಟಲ್ಲ.

ಹೀಗೊಂದು ಕಥೆಯ ಹೆಸರು- ಮರೀಚಿಕೆ

ಊಹುಂ ಕಥೆ ಬರೆಯಲು ನಾನು ಒಲ್ಲೆ…. ಹಾಗಂದುಕೊಂಡೆ ಗೀಚಿದ ಕಥೆ ಅದು. ನನ್ನ ವಯಸ್ಸನ್ನು ಗುರುತಿಸಬಹುದಾದ ಕಥೆ. ಅದ್ಯಾಕೋ ಅದಕ್ಕೆ ಮರೀಚಿಕೆ ಅಂತಾ ಹೆಸರು ಕೊಡಬೇಕು ಅನ್ನಿಸಿತ್ತು. ಹಾಗೇ ಹೆಸರಿಟ್ಟಿದ್ದೆ. ಅದೊಂದು ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಕಥೆ ಮೆಚ್ಚಿ ಹಲವು ಪತ್ರಗಳು ಬಂತು.

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ

"ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ..."

(ಮುಕುರ - ಕನ್ನಡಿ)

ಎಂದು ಶುರುವಾಗುತ್ತದೆ ಪಾಲ್ಕುರಿಕೆ ಸೋಮನ (’ಹರಹರಾ ಶ್ರೀಚನ್ನಸೋಮೇಶ್ವರಾ’ ಖ್ಯಾತಿ) ಒಂದು ಪದ್ಯ. ಈ ಪದ್ಯವನ್ನು ಮೊದಲು ಓದಿದ್ದು ಇಲ್ಲೇ ಕಾಣುವ ನುಡಿಮುತ್ತುಗಳಲ್ಲಿ. ಈ ಸಾಲಿನ ಭಾವಾರ್ಥ ಸರಳವಾಗಿದೆ.

ಇದಕ್ಕೆ ಪ್ರತ್ಯುತ್ತರವೋ ಎಂಬಂತೆ ಇಲ್ಲಿ: