ಅನರ್ಥ ಕೋಶ

ಅನರ್ಥ ಕೋಶ

ಬರಹ


ಅಖಂಡ-ಮಾಂಸ ಖಂಡಗಳಿಲ್ಲದ ಜೀವಿಗಳು. ಉದಾ: ಬ್ಯಾಕ್ಟೀರಿಯಾ, ಅಮೀಬಾ, ವೈರಸ್ ಮುಂ.
ಅಗಣಿತ-ಗಣಿತವಲ್ಲದ ಇತರ ವಿಷಯಗಳು. ಉದಾ: ಕನ್ನಡ, ಇಂಗ್ಲೀಷ ಮುಂ.
ಅಜಗಜಾಂತರ-ಸಾಮಾನ್ಯರಿಗೂ, ರಾಜಕಾರಣಿಗಳಿಗೂ ಇರುವ ವ್ಯತ್ಯಾಸ.
ಅಣ್ನ-ತಮ್ಮನ ವಿರುದ್ಧ ಪದ
ಅತ್ತಿಗೆ-ನಾದಿನಿಯ ವಿರುದ್ಧ ಪದ
ಅಧಿಕಾರ-ಜಂಭದ ಹುದ್ದೆ
ಅನಿಲ-ಅಜೀರ್ಣ ವಾಯು(ಇದನ್ನೇ ವೈದ್ಯರು ಗ್ಯಾಸ್ ಟ್ರಬಲ್ ಎನ್ನುವರು
ಅನುನಾಸಿಕ-ಅನು ಎಂಬ ಹುಡುಗಿಯ ಮೂಗು
ಅಭಾವ-ಭಾವನಿಲ್ಲದ ಅಕ್ಕ
ಅಮರ-ಮರವಲ್ಲದ ಸಸಿ
ಅಶರೀರವಾಣಿ-ಅತಿಥಿಗಳು ಮನೆಗೆ ಬಂದಾಗ ಅಡುಗೆ ಮನೆಯಲ್ಲಿ ಉಂಟಾಗುವ ಶಬ್ದ
ಅಷ್ಟಾವಕ್ರ-ಬ್ರೆಕ್ ಡ್ಯಾನ್ ಮಾಡುವವ
ಅಂಗವೈಕಲ್ಯ-ಇದೊಂದು ಕಾಯಿಲೆ. ಹೆಚ್ಚಾಗಿ ಹುಡುಗಿಯರನ್ನು ನೋಡಿದೊಡನೆ ಇದು ಆರಂಭವಾಗುವುದು. ಲಕ್ಷಣಗಳು:ಕಣ್ಣು ಹೊಡೆಯುವುದು, ಸೀಟಿ ಹೊಡೆಯುವುದು, ಮೈ ನುಲಿಯುವುದು ಮುಂ.
ಅಂತರಿಕ್ಷ-ಆಟೋರಿಕ್ಷಾ ತತ್ಸಮ, ಅಂತರಿಕ್ಷ ತದ್ಭವ
-ಸಿದ್ಧರಾಮ ಹಿರೇಮಠ.