ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೈದು, ಖೈದು

ಕೈದು=ಆಯುಧ, ಶಸ್ತ್ರ

ಉದಾಹರಣೆಗೆ ಈ ಅಕ್ಕಮಹಾದೇವಿಯ ವಚನದ ಸಾಲು ನೋಡಿ.
ಕೈದುವ ಕೊಡಬಲ್ಲೆವಲ್ಲದೆ ಕಲಿತನವ ಕೊಡಬಲ್ಲೆವೆ?

ಖೈದು=ಸೆಱೆ, ಜೈಲುವಾಸ. ಈ ಪದ ಅರಬ್ಬಿಯಿಂದಲೋ ಫಾರ್ಸಿಯಿಂದಲೋ ಆಮದಾದ ಶಬ್ದ. ಮಹಾಪ್ರಾಣ ಕನ್ನಡದಲ್ಲಿ ಬೇಡೆಂಬುವವ ಕನ್ನಡಿಗರೇ ಗಮನಿಸಿ ’ಖೈದು’ಗೆ ’ಕೈದು’ ಬೞಸಿದರೆ ತಪ್ಪು ಅರ್ಥ ಬರಬಹುದು. ಅಪಾರ್ಥವೂ ಆಗಬಹುದು.

ಸಪ್ತಸ್ವರಗಳು

ನಿಷಾದರ್ಷಭಗಾಂಧಾರಷಡ್ಜಮಧ್ಯಮಧೈವತಾಃ|
ಪಂಚಮಶ್ಚೇತ್ಯಮೀ ಸಪ್ತ ತಂತ್ರೀಕಂಠೋತ್ಥಿತಾಃ ಸ್ವರಾಃ||
ಸರಿಗಮಪದನಿ ಇವು ಏೞುಸ್ವರಗಳು
ನಿಷಾದ= ಸಂಕೇತ ’ನಿ’
ಋಷಭ=’ರಿ’
ಗಾಂಧಾರ=’ಗ’
ಷಡ್ಜ=’ಸ’
ಮಧ್ಯಮ=’ಮ’ (ಸರಿಗಮಪದನಿಯಲ್ಲಿ ನಡುವಿನದು (ಮಧ್ಯದ್ದು))
ಧೈವತ=’ಧ’
ಪಂಚಮ=’ಪ’ (ಸರಿಗಮಪದನಿಯಲ್ಲಿ ಐದನೆಯದು)
ಇವು ತಂತಿ ಮತ್ತು ಕೊರಲಿಂದ ಹೊಱಬರುವ ಏೞು ಸ್ವರಗಳು.

ಓದಿದ್ದು ಕೇಳಿದ್ದು ನೋಡಿದ್ದು-39 ಛಿದ್ರವಾದ ಕನಸು

ವಿಮಾನ ಟಿಕೆಟಿನಲ್ಲೇ  ರೈಲುಪ್ರಯಾಣವೂ ಸಾಧ್ಯ!

ವಿಮಾನದಲ್ಲಿ ಯುರೋಪು ತಲುಪಿ,ಅದೇ ಟಿಕೆಟ್ ಬಳಸಿ ರೈಲುಯಾನ ಕೈಗೊಳ್ಳಲು ಒಂದೇ ಟಿಕೆಟ್ ಅವಕಾಶ ನೀಡುತ್ತದೆ,

-----------------------------------------------------------------------------------

ಕನಸಿನ ಗುಳ್ಳೆ ಒಡೆದದ್ದು ಯಾಕೆ?

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ

ಆಗಲೇ ಹಬ್ಬದ ಅರ್ಧದಷ್ಟು ದಿನಗಳು ಕಳೆದಾಗಿದೆ. ಸಂಗೀತದ ವಿಷಯ ಮಾತಾಡುತ್ತ ಹೋದರೆ, ನನಗೆ ನಿಲ್ಲಿಸುವುದಕ್ಕೇ ತಿಳಿಯುವುದಿಲ್ಲ ಅನ್ನಿಸುತ್ತೆ! ಯಾವಾಗಲೂ ಯಾವುದರ ಬಗ್ಗೆ ಬರೆಯಬೇಕೆಂದೇ ತಿಳಿಯದೇ ಹೋಗುತ್ತೆ. ಏಕಂದರೆ ಹೇಳಿದಷ್ಟೂ ಮುಗಿಯುವಂತಿಲ್ಲವಲ್ಲ ಸಂಗೀತ ಸಾಗರ?

ಚಲಿಸದ ಸಾಗರ ಅಂತೊಂದು ಸಿನೆಮಾ ಬಂದಿತ್ತು - ನಾನು ನೋಡಿರಲಿಲ್ಲ. ಬಹುಶಃ ನದಿಗಳು ಹರಿಯುತ್ತವೆ, ಸಮುದ್ರ ಇದ್ದಲ್ಲೇ ಇರುತ್ತೆ ಎನ್ನುವುದು ಅದರ ಒಳಗಿನ ಭಾವ ಇರಬಹುದು. ಆದರೆ, ಈ ಸಂಗೀತ ಸಾಗರ ನಿಜವಾಗಿ ಬದಲಾಗುತ್ತ ಹೋಗುತ್ತಿರುತ್ತದೆ. ಹಾಗಾಗಿ ನಮ್ಮ ಸಂಗೀತದ ಕೆಲವು ಅಂಶಗಳು ಸಾವಿರಾರು ವರ್ಷಗಳಿಂದ ಹಾಗೇ ಉಳಿದಿವೆಯಾದರೂ, ಮತ್ತೆ ಕೆಲವು ವಿಷಯಗಳು ಬದಲಾಗುತ್ತ ಹೋಗಿವೆ ಅನ್ನುವುದು ಬಲ್ಲವರ ಮಾತು.

ಸಂಗೀತದಲ್ಲಿ ಒಂದು ರಾಗ ಕೇಳಲು ಹಿತವಾಗಿರಬೇಕಾದರೆ, ಐದು ಸ್ವರಗಳಾದರೂ ಇರಬೇಕು - ಇಲ್ಲದಿದ್ದರೆ ಅದು ಸೊಗಸುವುದಿಲ್ಲ ಅನ್ನುವ ನಂಬಿಕೆ ಇತ್ತು. ಅದನ್ನು ಬುಡಮೇಲು ಮಾಡಿದವರು ೨೦ ನೇ ಶತಮಾನದ ಒಬ್ಬ ಮಹಾನ್ ಕಲಾವಿದರಾದ ಡಾ.ಬಾಲಮುರಳಿಕೃಷ್ಣ ಅವರು. ಒಮ್ಮೆ ಯಾವುದೋ ಲಹರಿಯಲ್ಲಿ ಹಾಡಿಕೊಳ್ಳುತ್ತಿದ್ದರಂತೆ - ಆಮೇಲೆ ಗಮನಿಸಿ ನೋಡಲು ಅದರಲ್ಲಿ ನಾಕೇ ಸ್ವರಗಳಿದ್ದುದ್ದನ್ನು ಕಂಡು, ಆ ರಾಗಕ್ಕೆ ಲವಂಗಿ ಎನ್ನುವ ಹೆಸರಿಟ್ಟು, ಒಂದು ಕೃತಿಯನ್ನು ರಚಿಸಿದರು. ಆನಂತರ, ಇದೇ ದಾರಿಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಿ, ಇನ್ನೂ ಕೆಲವು ಅದೇ ಬಗೆಯ ರಾಗಗಳನ್ನೂ, ಅವುಗಳಲ್ಲಿ ರಚನೆಯನ್ನೂ ಮಾಡಿದ್ದಾರೆ.

ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು

ಸಂಘಪರಿವಾರದ ಮುಖವಾಣಿಯಂತಿರುವ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರಗಳ ಅಂಕಣದಲ್ಲಿ ಇತ್ತೀಚೆಗೆ ಅಮೆರಿಕದ ಟೆಕ್ಸಾಸಿನಿಂದ ವೆಂಕಟೇಶ್ ಎಂಬುವರು ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪ್ರಶ್ನೆಗಳು ಕ್ರಿಶ್ಚಿಯನ್ನರನ್ನೇ ಕುರಿತಿರುವಂತೆ ತೋರುತ್ತದೆ. ನಾನೇನೂ ಬುದ್ಧಿಜೀವಿಯಲ್ಲ, ಹಾಗೆಂದರೇನೆಂದೂ ನನಗೆ ತಿಳಿಯದು.

www.techbangalore.com .. ಏನು ಗೊತ್ತೇ ??????????

ಇದು ಒಂದು ವೆಬ್ ಸೈಟ್. ಇದರಲ್ಲಿ ಹೊಸ ಟೆಕ್ನಾಲಜಿ ಗಳ ಬಗ್ಗೆ ಹಾಗು ಕಂಪ್ಯೂಟರ್ ಸಾಫ್ಟ್ ವೇರ್ ಗಳ ಬಗ್ಗೆ ಹಾಗು ಮೊಬೈಲ್ gprs ಗಳ ಬಳಕೆ ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿ ಸಿಗುತ್ತೆ. ಇದು ಬೆಂಗಳೂರಿನ ಒಬ್ಬ ಹುಡುಗ ಮಾಡಿರುವ ಒಂದು ವೆಬ್ಸೈಟ್. ಇದರಲ್ಲಿ ಬೆಂಗಳೂರಿನ ಟೆಕ್ನಾಲಜಿ ಗಳ ಬಗ್ಗೆ ಮಾಹಿತಿ ಗಳು ತುಂಬ ಇದೆ.

ಬೇಸರದ ದಿನ ಜನುಮ ದಿನ

ಮದ್ಯರಾತ್ರಿ ೧೨ ಘಂಟೆಗೆ ಮೊಬೈಲ್‌ಗೆ ಮೆಸ್ಸೇಜ್ ಬಂತು .
ಯಾರಪ್ಪ ಇಷ್ಟು ಹೊತ್ತಿನಲ್ಲಿ ಮೆಸ್ಸೇಜ್ ಮಾಡಿದವರು ಎಂದು ತೆರೆದು ನೋಡಿದರೆ ನಮ್ಮ ಯಜಮಾನರು.
ಹುಟ್ಟಿದ ದಿನದ ಶುಭಾಷಯಗಳನ್ನು ಪಕ್ಕದಲ್ಲೇ ಇದ್ದೂ ಮೆಸ್ಸೇಜ್ ಮಾಡಿದ್ದರು. (ಅದಕ್ಕೆ ಹಿಂದಿನ ದಿನದ ಜಗಳವೂ ಕಾರಣ ಎನ್ನಿ).
ಆಗಷ್ಟೆ ನೆನಪಾಯ್ತು ಓ ನನ್ನ ಬರ್ತ್ ಡೇ ಎಂದು

ನನ್ನ ಮನಸ್ಸಿನ ಅಜ್ಞಾನ

ನಾನು ಬಹಳ ಗೊಂದಲದಲ್ಲಿ ಬಿದ್ದಿರುವ ಬಾವುಕ ಮನಸ್ಸುವುಳ್ಳವನ್ನು , ಒಂದೊಂದು ಸಲ ಬಹಳ ಸೌಜನ್ಯವುಳ್ಳ ವ್ಯಕ್ತಿಯಂತೆ ತೋರುತ್ತೇನೆ , ಮತ್ತೊಂದು ಸಲ ತುಂಬಾ ಕ್ರೂರ ವ್ಯಕ್ತಿಯಂತೆ, ನನ್ನ ಮನಸ್ಸಿನಲಿ ಎಲ್ಲಿಲ್ಲದ ಆಸೆಗಳನ್ನು, ಅದನ್ನ ತಣಿಸಲು ಪಡಬಾರದ ಕಷ್ಟಗಳನ್ನು ಅನುಭವಿಸುತ್ತೇನೆ ನನಗೆ ಏನಾಗುತ್ತಿದೆ ಎಂಬುದರ ಪರಿಜ್ಞಾನವಿಲ್ಲದೇ, ಆದರೂ ಅದರಿಂದ ನನ್ನನ್ನು ತಪ್ಪಿ

ಕಡೇಹುಟ್ಟು

ಸಂಪದದಲ್ಲಿ ಚರ್ಚೆ ಒಂದು ನಡೆದಿದೆ. ಚರ್ಚೆಯನ್ನು ಪ್ರಾರಂಬಿಸಿದವರು ಅವರ ಮಿತ್ರರ ಪರವಾಗಿ ಒಂದು ಪ್ರಶ್ನೆಯನ್ನು ತೇಲಿಬಿಟ್ಟದ್ದಾರೆ. ಪ್ರಶ್ನೆ ಹೀಗಿತ್ತು ’ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು? ಆಗ ನನಗೆ  ನೆನಪಿಗೆ ಬಂದದ್ದು ಕಡೇಹುಟ್ಟು.  ಇಲ್ಲಿ ಅದರ ಬಗ್ಗೆ ಬರೆಯುತ್ತಿದ್ದೇನೆ.