ಬೇಸರದ ದಿನ ಜನುಮ ದಿನ
ಮದ್ಯರಾತ್ರಿ ೧೨ ಘಂಟೆಗೆ ಮೊಬೈಲ್ಗೆ ಮೆಸ್ಸೇಜ್ ಬಂತು .
ಯಾರಪ್ಪ ಇಷ್ಟು ಹೊತ್ತಿನಲ್ಲಿ ಮೆಸ್ಸೇಜ್ ಮಾಡಿದವರು ಎಂದು ತೆರೆದು ನೋಡಿದರೆ ನಮ್ಮ ಯಜಮಾನರು.
ಹುಟ್ಟಿದ ದಿನದ ಶುಭಾಷಯಗಳನ್ನು ಪಕ್ಕದಲ್ಲೇ ಇದ್ದೂ ಮೆಸ್ಸೇಜ್ ಮಾಡಿದ್ದರು. (ಅದಕ್ಕೆ ಹಿಂದಿನ ದಿನದ ಜಗಳವೂ ಕಾರಣ ಎನ್ನಿ).
ಆಗಷ್ಟೆ ನೆನಪಾಯ್ತು ಓ ನನ್ನ ಬರ್ತ್ ಡೇ ಎಂದು
ಬೆಳಗಾಯ್ತು ಮಗಳೂವಿಷ್ ಮಾಡಿದಳು (ಅವಳ ಅಪ್ಪ ಹೇಳಿಕೊಟ್ತಿದ್ದರು)
ಒಂದೇ ಸಮನೆ ಕುತ್ತಿಗೆ ನೋವು ಸ್ನಾನ ಮಾಡಲೂ ಆಗಲಿಲ್ಲ
ಕೆಲವು ವಿದ್ಯಾರ್ಥಿಗಳು ಸ್ನೇಹಿತರಿಂದ ಶುಭಾಶಯಗಳು ಬಂದವು
ನಾನು ನಿರಿಕ್ಷೆ ಮಾಡುತ್ತಿದ್ದವರಿಂದ ಬರಲಿಲ್ಲ.
ಇವರ ಆಫೀಸ್ ಟೈಮ್ ಆಯ್ತು ಅಂತ ಇವರೂ ಹೊರಟರು
ನಾನು ಯಾವುದೋ ಫೋನ್ ರಿಂಗ್ಗೆ ಕಾಯುತ್ತಿದ್ದೆ .
ಹೌದು ನಾನು ಅಮ್ಮ ಹಾಗು ಅಕ್ಕನ ವಿಷ್ಸಗೆ ಕಾಯುತ್ತಿದ್ದೆ.
ಬೇಕೆಂದೇ ಫೋನ್ ಮಾಡಿ ಮಾತಾಡಿದೆ ಆದರೂ ಅವರಿಗೆ ಬರ್ತ್ ಡೆ ನೆನಪೂ ಇರಲಿಲ್ಲ.
ಕಣ್ನಲ್ಲಿ ಧಾರಾಕಾರಾವಾಗಿ ನೀರು ಬರುತಿತ್ತು
ನನ್ನ ಅಂದಿನ ಜನುಮ ದಿನದ ಆಚರಣೆಗಳು ಎಷ್ಟು ಚೆನ್ನಾಗಿದ್ದವು
ಬೆಳಗ್ಗೆ ೪ ಘಂಟೆಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ ಹೊಸ ಬಟ್ಟೆ ಧರಿಸಿ ಅಮ್ಮನ ಕಾಲಿಗೆ ಬೀಳುತ್ತಿದ್ದ ಆ ಸಡಗರ ನೆನಪಾಯ್ತು
ಅಷ್ಟರಲ್ಲಿ ಅಕ್ಕ ಎದ್ದು ನನಗೆ ಏನಾದ್ರೂ ಗಿಫ್ಟ್ ತರುತ್ತಿದ್ದಳು . ಅಮ್ಮ ಮಾಡಿದ ಸ್ವೀಟ್ಸ್ ತಿಂದು ದೇವಸ್ಥಾನಕ್ಕೆ ಹೋಗಿ ಹಾಗಿಂದ ಹಾಗೆ ಹೋಟೆಲಿಗೆ ಹೋಗಿ ತಿಂಡಿ ತಿಂದು ಯಾವುದಾದರೂ ಪಿಚ್ಚರ್ ನೋಡಿಕೊಂಡು ಬರುತ್ತಿದ್ದೆವು
ಅಬ್ಬಾ ಎಷ್ಟೊಂದು ಚೆನ್ನಾಗಿದ್ದವು ಆ ದಿನಗಳು
ಈ ಧಾವಂತ ದ ದಿನಗಳಲ್ಲಿ ಅವೆಲ್ಲಾ ಸಾಧ್ಯವೇ ಇಲ್ಲ ಎನಿಸುತ್ತದೆ
ಮದ್ಯಾಹ್ನ ಅಯ್ತು ಮಗಳಿಗೆ ಹೋಟೆಲಿನಿಂದ ತಿಂಡಿ ತರಿಸಿಕೊಟ್ಟೆ . ನಾನು ಏನೂ ತಿನ್ನಲಿಲ್ಲ . ಮೊದಲ ಬಾರಿಗೆ ನನ್ನ ಅಮ್ಮ ನನ್ನ ಬರ್ತ್ ಡೇ ಮರೆತಿದ್ದಳು. ಹಾಗೊಂದು ವಿಷಯವೇ ನನ್ನ ಮನಸನ್ನು ಇರಿಯುತ್ತಿತ್ತು.
ಎಲ್ಲೂ ಹೋಗಲಿಲ್ಲ .
ಕೊನೆಗೆ ಸಂಜೆ ನಾನೆ ಫೋನ್ ಮಾಡಿದೆ
"ಅಮ್ಮ ಇವತ್ತು ಮರೆತು ಬಿಟ್ಟೆಯಾ?"
ನನ್ನ ಅಮ್ಮನಿಗೆ ಆಗ ನೆನಪಾಯ್ತು .
ನಾನು ಗಂಟಲು ಗದ್ಗದಿತವಾತ್ತು.
ಅಮ್ಮನೂ ಅತ್ತಳು. ಸ್ವಲ್ಪ ಹೊತ್ತಿನ ನಂತರ ಅಕ್ಕನಿಂದ ಫೋನ್ ಬಂತು . ಅವಳೂ ತುಂಬಾ ಬೇಸರಗೊಂಡಿದ್ದಳು
ಕೊನೆಗೆ ನನ್ನ ಬರ್ತ್ ಡೇ ಯನ್ನ ಪೋಸ್ಟ್ ಪೋನ್ ಮಾಡಿ ಅಕ್ಟೋಬರ್ ೮ ಕೀ ಇಡುವುದೆಂದು ತೀರ್ಮಾನಿಸಲಾಯ್ತು
ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಜನುಮ ದಿನ ಬೇಸರ ತಂದಂತಹ ದಿನವಾಗಿತ್ತು ನನ್ನ ಪಾಲಿಗೆ
.
Comments
ಉ: ಬೇಸರದ ದಿನ ಜನುಮ ದಿನ
In reply to ಉ: ಬೇಸರದ ದಿನ ಜನುಮ ದಿನ by vikashegde
ಉ: ಬೇಸರದ ದಿನ ಜನುಮ ದಿನ
ಉ: ಬೇಸರದ ದಿನ ಜನುಮ ದಿನ
In reply to ಉ: ಬೇಸರದ ದಿನ ಜನುಮ ದಿನ by Deeparavishankar
ಉ: ಬೇಸರದ ದಿನ ಜನುಮ ದಿನ
ಉ: ಬೇಸರದ ದಿನ ಜನುಮ ದಿನ
In reply to ಉ: ಬೇಸರದ ದಿನ ಜನುಮ ದಿನ by hpn
ಉ: ಬೇಸರದ ದಿನ ಜನುಮ ದಿನ
ಉ: ಬೇಸರದ ದಿನ ಜನುಮ ದಿನ
In reply to ಉ: ಬೇಸರದ ದಿನ ಜನುಮ ದಿನ by kalpana
ಉ: ಬೇಸರದ ದಿನ ಜನುಮ ದಿನ
In reply to ಉ: ಬೇಸರದ ದಿನ ಜನುಮ ದಿನ by kannadakanda
ಉ: ಬೇಸರದ ದಿನ ಜನುಮ ದಿನ
ಉ: ಬೇಸರದ ದಿನ ಜನುಮ ದಿನ
ಉ: ಬೇಸರದ ದಿನ ಜನುಮ ದಿನ
In reply to ಉ: ಬೇಸರದ ದಿನ ಜನುಮ ದಿನ by gururajkodkani
ಉ: ಬೇಸರದ ದಿನ ಜನುಮ ದಿನ
In reply to ಉ: ಬೇಸರದ ದಿನ ಜನುಮ ದಿನ by Nagaraj.G
ಉ: ಬೇಸರದ ದಿನ ಜನುಮ ದಿನ