ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊದಲ ಹೆಜ್ಜೆ

ಎಲ್ಲರಿಗು ನಮಸ್ಕಾರ,

ಸಂಪದದಲ್ಲಿ ಇದು ನನ್ನ ಮೊದಲ ಬರಹ. ಕನ್ನಡದ ಮೇಲೆ ನಿಮಗೆಲ್ಲರಿಗು ಇರುವ ಅಭಿಮಾನವನ್ನು ನೂಡಿ ಬಹಳ ಸಂತೊಷವಾಯ್ತು. ಸಂಪದವನ್ನು ಉಪಯೊಗಿಸುವುದರ ಬಗ್ಗೆ ನಾನು ಇನ್ನು ಹೆಚು ತಿಳಿಯ ಬೇಕಿದೆ. ಸಂಪದ ಇನ್ನು ಚೆನ್ನಾಗಿ ಬೆಳೆಯಲೆಂದು ಆಶಿಸುತ್ತೇನೆ.

ಧನ್ಯವಾದಗಳು,

ನೀತಾ

positive thinking ಅಂದರೆ?

ಎಸ್ಟೋ ಸಲ, ’ಇಂತದನ್ನು ಮಾಡಬೇಡ’ ಅಂತ ಎಸ್ಟು ಹೇಳಿದರೂ ಮಕ್ಕಳು ಅದೇ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾರೆ,./ ಎಸ್ಟೋ ಸಲ ನಾವೇ, ’ಅದನ್ನು ಮಾಡಬಾರದು’ ಅಂತ ಎಸ್ಟು ಸಲ ಅಂದುಕೊಂಡರೂ ಆ ತಪ್ಪು ಮತ್ತೆ ಮರುಕಳಿಸುತ್ತದೆ.../

ಯಾವಾಗಲು ಅದನ್ನು ಮಾಡಬಾರದು, ಅದನ್ನು ಮಾಡಬಾರದು ಅಂದುಕೊಳ್ಳುತ್ತಾ,.. ಅದನ್ನೇ ನಮಗೇ ತಿಳಿಯದಂತೆ ಮಾಡಿ ಬಿಡುತ್ತೇವೆ,.. ಇದಕ್ಕೇನು ಕಾರಣ?

ಶೋಷಣೆ ?

ಅದೊಂದು ದೊಡ್ಡ ಮಾಲ್ . ದಿನಸಿಯಿಂದ ಹಿಡಿದು ಎಲ್ಲಾ ರೀತಿಯ ಸಾಮಾಗ್ರಿ ಗಳೂ ಅಲ್ಲಿ ಸಿಗುತ್ತಿದ್ದವು.
ಜನ ನಿರಂತರವಾಗಿ ಬಂದು ಹೋಗಿ ಮಾಡುತಿದ್ದರು. ತುಂಬಾ ಜನ

ಆಕೆಯೂ ಆ ಮಾಲ್‌ಗೆ ಬಂದಳು . ಅವಳುಟ್ಟಿದ್ದ ಸುಮಾರಾದ ಸೀರೆ ಅವಳ ಅಂತಸ್ತನ್ನು ವಿವರಿಸುತ್ತಿತ್ತು.
ಸೆಕ್ಯೂರಿಟಿ ತಡೆದು ಏನೆಂದು ಕೇಳಿದ

ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?

ನನ್ನ ಎರಡು ವರ್ಷವಿನ್ನೂ ಮೀಱದ ಮಾತಿನ್ನೂ ಆಡದ ಮಗ ಚಿತ್ರಗಳಲ್ಲಿ ಕಾಣುವ ರಾಣಿ ಮಹಾರಾಣಿಗಳ ಚಿತ್ರ ತೋಱಿಸಿದರೆ ಚಿತ್ರದಲ್ಲಿ ಅವಳು ತನ್ನ ತಾಯಿ ಎಂದೇ ಹೇೞುತ್ತಾನೆ. ಉದಾಹರಣೆಗೆ ಸುಂದರ ಸ್ತ್ರೀಯರ ಚಿತ್ರ ತೋಱಿಸಿ ನಿನ್ನ ತಾಯಿಯ ಚಿತ್ರ ಎಲ್ಲಿ ಎಂದರೆ ಆ ಸುಂದರ ಸ್ತ್ರೀಯರ ಚಿತ್ರಗಳನ್ನೇ ತೋಱಿಸುತ್ತಾನೆ.

ಆ ಚಿಕ್ಕ ಹುಡುಗಿ..

ಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿಯುತ್ತಿತ್ತು.

ಬಂದವಳೇ "ಅರ್ಧ ಕಾಲು ಕೆಜಿ ಕಡ್ಲೆಹಿಟ್ಟು ಕೊಡಿ" ಎಂದಳು.
ಅಂಗಡಿಯಾತನಿಗೆ ಅರ್ಥವಾಗಲಿಲ್ಲ.

ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು

ವೈಜ್ಞಾನಿಕ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು
“ಕಾರ್ಯೇಷು ದಾಸಿ, ಕರಣೇಷು ಮಂತ್ರಿ,
ರೂಪೇಷು ಲಕ್ಷ್ಮಿ, ಕ್ಷಮಯಾ ಧರಿತ್ರಿ
ಭೋಜ್ಯೇಷು ಮಾತಾ, ಶಯನೇಷು ರಂಭಾ,
ಷಡ್ಗುಣ ಭಾರ್ಯಾ ಕುಲಮುದ್ಧರಂತಿ.”
ಎಂದು ಒಂದು ಶ್ಲೋಕ ರಚಿಸಿ ಹೆಣ್ಣನ್ನು ಒಂದು ಚೌಕಟ್ಟಿನೊಳಗೆ ಬಂಧಿಸಿ ಅವಳನ್ನು ನಿರುಪಯುಕ್ತಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಕೆಟ್ಟ ಸಂಪ್ರದಾಯಗಳ ಒತ್ತಡದಿಂದಾಗಿ ಅನುಪಯುಕ್ತವಾದ ಕಟ್ಟುಪಾಡುಗಳಿಂದಾಗಿ ಎಲ್ಲಾ ಸೌಲಭ್ಯಗಳಿಂದಲೂ ಮಹಿಳೆ ವಂಚಿತಳಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ, ಜಗತ್ತಿನ ಬೆಳಕು ಅವರಿಗೆ ಅನಾವಶ್ಯಕ. ಲೋಕಜ್ಞಾನ ಕಟ್ಟಿಕೊಂಡು ಅವರೇನು ಮಾಡಬೇಕು? ಮನೆ, ಗಂಡ, ಮಕ್ಕಳು ಇವರನ್ನು ಪೋಷಿಸಿಕೊಂಡು ಬದುಕುವುದೇ ಉತ್ತಮ ಮಾರ್ಗ ಎಂದು ಮನೆಯಲ್ಲೇ ಮಹಿಳೆಯನ್ನು ಕೊಳೆಯಬಿಟ್ಟು ಅವಳ ಅನೇಕ ರೀತಿಯ ಪ್ರತಿಭೆಗಳು ಬೆಳಕಿಗೆ ಬಾರದೇ ನಶಿಸಿ ಹೋಗಿ, ಅವಳಿಗೆ ಮಾತ್ರವಲ್ಲದೇ ದೇಶಕ್ಕೂ ಕೂಡ ಅನ್ಯಾಯವೆಸಗಿದ ಹಾಗಾಗಿದೆ. ದೈವ ನಿಯಾಮಕದಲ್ಲಿ ಸರಿಸಮಾನವಾದ ಮಾನಸಿಕ ಸಾಮರ್ಥ್ಯವನ್ನು ಹೊಂದಿರುವ ಮಹಿಳೆ, ಪುರುಷರಂತೆಯೇ ಪ್ರತಿಯೊಂದು ಕ್ಷೇತ್ರದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಅಧಿಕಾರ ಮಹಿಳೆಗೂ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು. ಮಹಿಳೆಯ ಪರಿಸ್ಥಿತಿ ಈಗ 5 ದಶಕಗಳಿಂದ ಎಷ್ಟೋ ಸುಧಾರಿಸುತ್ತಾ ಬಂದಿದೆ ಎಂದಾದರೂ ಇನ್ನೂ ಸಾಕಷ್ಟು ಮಹಿಳೆಯರು ಅನೇಕ ಕಾರಣಗಳಿಂದ ತಮ್ಮ ಗೂಡಿನಿಂದ ಹೊರ ಬರಲಾರದೇ ತೊಳಲಾಡುತ್ತಿದ್ದಾರೆ. ಸಾಧಾರಣ ವಿಚಾರಗಳಲ್ಲೇ ಹೀಗಿರ ಬೇಕಾದರೆ ಇನ್ನು ಪ್ರಗತಿಪರ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗಳನ್ನು ಸಾಧಿಸಲು ಅವರಿಗೆಲ್ಲಿ ಅವಕಾಶವಿತ್ತು? ಹೀಗಾಗಿ ಈ ಸಮಾಜದೊಂದಿಗೆ ಹೋರಾಡುತ್ತಲೇ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗೈದ ಮಹಿಳೆಯರು ಎಂದರೆ ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲೂ ಕೂಡ ಅ ಉನ್ನತ ಮಟ್ಟವನ್ನು ತಲುಪಲು ಹೆಣಗಾಡಿ ತೊಳಲುತ್ತಿರುವ ಭಾರತೀಯ ಮಹಿಳೆಯರ ಬಗ್ಗೆ ಓದಿದಾಗ (ನೇಮಿ ಚಂದ್ರರವರ ಮಹಿಳಾ ಅಧ್ಯಯನ) ಮನಸ್ಸಿಗೆ ಖೇದವೆನಿಸಿತು. ಬಹುಷಃ ಇನ್ನೊಂದು 50,60 ವರ್ಷಗಳಲ್ಲಾದರೂ ನಮ್ಮ ಈ ಕೊರಗು ನೀಗಬಹುದೇನೋ.

ಕನ್ನಡ ತಮಿೞಿಗಿಂತ ಹೞೆಯದೇ?

ಕನ್ನಡ ತಮಿೞಿಗಿಂತ ಹೞೆಯದಿರಬಹುದೆನ್ನುವುದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ.
೧) ದಿಕ್ಕು
೨) ತಾಲವ್ಯೀಕರಣ

೧) ದಿಕ್ಕು: