ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಆರೇಂಜ್ ಕೌಂಟಿ’ ಯಲ್ಲಿನ , ’ಅವೆನ್ಯೂ ಆಫ್ ಆರ್ಟ್ಸ” ಗೆ, ಹೋಗುವ ಮಾರ್ಗ !

ಕ್ಯಾಲಿಫೋರ್ನಿಯ, ಅಮೆರಿಕದ ಒಂದು ವಿಶೇಷ ವಸತಿಗೃಹಗಳ ನೆಲೆವೀಡು. ಹವಾಮಾನವಂತೂ ಭಾರತೀಯರಿಗೆ ಅತಿಯಾಗಿಮುದನೀಡುವ ಈ ಸ್ಥಳವನ್ನು ಭಾರತೀಯರೆಲ್ಲಾ ಅತಿಯಾಗಿ ಪ್ರೀತಿಸುತ್ತಾರೆ. ’ಸಾಫ್ಟ್ವೇರ್ ಉದ್ಯೋಗಮಂದಿರ,’ ಗಳಿಗೇನೂ ಕೊರತೆಯಿಲ್ಲ. ’ಸಿಲಿಕಾನ್ ವ್ಯಾಲಿ’, ಯೂ ಹತ್ತಿರ.

ಬಾಂಬು ತಯಾರಿಸುವ ವಿಧಾನ

ಛೇ..ನೀವು.. ನೀವು!!..ಬಾಂಬು ತಯಾರಿಸುವುದು ಹೇಗೆ ಎಂದು ಕಲಿಯಲು ಹೊರಟಿರಾ?
ದೇವರೇ..
ಬೇಡಾ ಸ್ವಾಮಿ,
ಕಣ್ಣಿಗೆ ಕಣ್ಣು, ಬಾಂಬಿಗೆ ಬಾಂಬು ಇದೆಲ್ಲಾ ನಮ್ಮ ಮಣ್ಣಿನ ಗುಣಕ್ಕೆ ಹೇಳಿಸಿದ್ದಲ್ಲ.
ಬಾಂಬಿಗೆ ತಲೆ ಕೊಟ್ಟೇವು ಹೊರತು ಭಯೋತ್ಪಾದಕರ ಮೇಲೆ ಮಾತಿನ ಬಾಂಬು ಸಹ ಎಸೆಯೆವು.

ಮುಂದಿನ ಸಲ ಬಾಂಬ್ ಸ್ಫೋಟಕ್ಕಿಂತ ಮೊದಲು ಸರಕಾರವೇ ಏನಾದರೂ ಮಾಡೀತೆಂದು ಕಾಯುವ ಕೆಲಸ ನಮ್ಮದು.

ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗ

ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು.

ಈ ನೇಗಿಲಯೋಗಿ ಕಲಿತದ್ದು ಪಿ.ಯೂ.ಸಿ. ಆದರೆ ಪಡೆದದ್ದು ಕೃಷಿ ವಿ.ವಿ.ಯ ಗೌರವ ಡಾಕ್ಟರೇಟ್!

"ರೈತ ಮೊದಲು ಹುಟ್ಟಿದ್ನೋ? ಭೂಮಿ ಮೊದಲು ಹುಟ್ಟಿತೋ? ನೋಡ್ರಿ..ಭೂಮಿ ಆ ದೇವರ ಸೃಷ್ಠಿ ಅಂತ ತಾನಾಗಿಯೇ ಬೆಳಿ ಬೆಳಕೊಂತ ಬಂತಲ್ಲ. ಆದರ ಹೆಚ್ಚಿನ ಬೆಳಿ ಬೆಳಿಬೇಕು ಅಂತ ಹೈಬ್ರೀಡ್ ಬೀಜ, ರಾಸಾಯನಿಕ ಗೊಬ್ಬರ ಬಳಸಲಿಕ್ಕೆ ಶುರು ಮಾಡಿದ್ವಿ. ಘನಮಠದ ಶಿವಯೋಗಿಗಳು ಹೇಳಿಧಾಂಗ ಸಾವಯವ ಪದ್ಧತಿ ಕೃಷಿ ಮಾಡಿದ್ರ ನಾಲ್ಕಾರು ಚೀಲ ಕಡಿಮೆ ಬಂದೀತು. ಆದ್ರ ನಮ್ಮ ಭೂಮಿ ಹೆಚ್ಚು ಬಾಳಕಿ ಬರ್ತದ"

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ೨೦೦೬ನೇ ಸಾಲಿನ ೨೦ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಹುನಗುಂದದ ಪ್ರಗತಿಪರ ಕೃಷಿಕ ಡಾ.ಮಲ್ಲಣ್ಣ ಶೆಂಕ್ರೆಪ್ಪ ನಾಗರಾಳ ಅವರ ಹೃದಯಾಂತರಾಳದ ಮಾತುಗಳವು.

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ
ನರನವೊಲೆ ತರುಗಳಂ ಸುಖದುಃಖಗಳನರಿವ
ಪರಿಯ ತೋರುವ ಯಂತ್ರಚಯವ ರಚಿಸಿ
ಅಣುರೇಣತೃಣಗಳೋಳಮಲ ಚೈತನ್ಯಮಿಹ
ಮರ್ಮವಂ ಲೋಚನಕೆ ಮಿಷಯಮೆನಿಸಿ||
ಭೌತತಾತ್ವಿಕಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ
ಕಣ್ಗೆ ಕಾಣದ ತತ್ವಮಂ ಶ್ರಮಿಸುತರಸಿ
ಮೆರೆವನೀ ಜಗದೀಶನಾರ್ಯಕುಲತೋಷಂ||

ಹೀಗೆ ಕನ್ನಡ ಸಾರಸ್ವತ ಲೋಕದ ಮೇರುಗಳಲಿ ಒಬ್ಬರಾದ ಹಿರಿಯ ಸಾಹಿತಿ ಡಿ.ವಿ.ಜಿ.ಯವರು ಅದೇ ಸಾರಸ್ವತ ಲೋಕದ ಮೇರು ಎನಿಸಿಕೊಳ್ಳುವ ಮಹಾನ್ ವಿಜ್ಞಾನಿಯೋರ್ವರ ಬಗ್ಗೆ ಬರೆದ ಕವನವಿದು. “ಕಪಿಲ ಕಣಾದಾದಿ ಸದಸದ್ವಿಚಾರಕರ ಕುಲದ ಕೀರ್ತಿಗೆ ರನ್ನಗಲಶ” ಎಂದು ಮಹಾನ್ ಸಾಹಿತಿ ಡಿ.ವಿ.ಜಿ.ಯವರ ಮೆಚ್ಚುಗೆಗೆ ಪಾತ್ರರಾದ ಮೇರು ವಿಜ್ಞಾನಿ ಯಾರು ಗೊತ್ತೆ? ಸಸ್ಯಗಳಿಗೂ ಜೀವವಿದೆ, ಅವು ನಮ್ಮ ಹಾಗೆ ಉಸಿರಾಡುತ್ತವೆ ಎಂದು ಈ ಲೋಕಕ್ಕೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು.