ಕಾಡ ಬೆಳದಿಂಗಳು

ಕಾಡ ಬೆಳದಿಂಗಳು

ನೆನ್ನೆ ಅಂದರೆ ಭಾನುವಾರ ಈ ಚಿತ್ರ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಯಿತು. ಬೇರೆ ಕಾರ್ಯಕ್ರಮಗಳನ್ನು ಬದಿಗೊತ್ತಿ ಇದನ್ನು ನೋಡಿದೆ ಭಾನುವಾರ ಬೆಳಗ್ಗೆ. ಬಹಳ ಚೆನ್ನಾಗಿತ್ತು. ಕ್ಯಾಮರಾ ವರ್ಕ್ ಸಹ ಅದ್ಭುತ. ತೀರ ಡಿಜಿಟಲ್ ತಂತ್ರಜ್ಞಾನದಷ್ಟು ಉತ್ತಮ ದೃಷ್ಯಗಳು, ಹಿನ್ನೆಲೆ ಧ್ವನಿ. ದತ್ತಾತ್ರೇಯ, ಭಾರ್ಗವಿ ನಾರಾಯಣ್ ಮತ್ತು ಲೋಕನಾಥ್ ರವರ ಉತ್ತಮ ಅಭಿನಯ ಇತ್ತು. ಹಳ್ಳಿಯೊಂದರಲ್ಲಿ ವಾಸವಾಗಿರುವ ವೃದ್ಧರ ಜೀವನದ ಆಗುಹೋಗುಗಳು, ಮಕ್ಕಳು ಅವರಿಂದ ದೂರವಾಗಿದ್ದು, ಅವರ ಒಂಟಿ ಜೀವನ ಇದರ ಸುತ್ತ ಕಥೆ ಹೆಣೆಯಲಾಗಿದೆ. ಇದನ್ನು ಚಿತ್ರೀಕರಿಸಲು ಸುದ್ಧಿವಾಹಿನಿಯ ತಂಡ ಹಳ್ಳಿಗೆ ಬರುತ್ತದೆ, ಆದರೆ ಅದನ್ನು ಬೇರೆ ರೀತಿಯಲ್ಲೇ ಪ್ರೇಕ್ಷಕರಿಗೆ ಭಿತ್ತರಿಸಿ ಆ ವೃದ್ಧರಿಗೂ, ಟಿ.ವಿ ಸುದ್ಧಿಗಾರರಿಗೂ ಇರುಸುಮುರುಸು ತರುತ್ತದೆ. ಮಗ ಪೋಲೀಸರ ಗುಂಡೇಟಿನಿಂದ ಸತ್ತದ್ದು ಗೊತ್ತಿದ್ದರೂ ಸದಾಶಿವಯ್ಯ ಅದನ್ನು ಹೆಂಡತಿಗೆ ಹೇಳದೆ ಅನುಭವಿಸುವುದು, ಸಂದರ್ಭ ಬಂದಾಗ ತಡೆದುಕೊಳ್ಳಲಾಗದೆ ಗೆಳೆಯನೊಡನೆ ಹೇಳಿಕೊಳ್ಳುತ್ತಾನೆ.
ನಿರೂಪಣೆ ಚೆನ್ನಾಗಿದೆ. ಹಿನ್ನೆಲೆಯ ಧ್ವನಿಗಳಲ್ಲಿಯ ಕಪ್ಪೆ ವಟಗುಟ್ಟುವ ಶಬ್ದಗಳು, ಹಕ್ಕಿಗಳ ಕಲರವ, ಗಾಳಿ ಬೀಸುವ ಶಬ್ದ ಎಲ್ಲವನ್ನೂ ಎಷ್ಟು ಉತ್ತಮವಾಗಿ ಸಂಯೋಜಿಸಿದ್ದಾರೆ.

Rating
No votes yet