ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಜ್ಞಾನಿ

ನಿದ್ರಾರಹಿತರಿಗೆ ರಾತ್ರಿ ದೀರ್ಘ; ಬಳಲಿದವರಿಗೆ ದಾರಿ ದೀರ್ಘ; ಅಜ್ಞಾನಿಗೆ ಬದುಕೇ ದೀರ್ಘ.

ಮೌನ ...

ನುಡಿಯದ ಮೌನ ಸಾಲಾಯಿತು...
ಮಿಡಿದ ಹೃದಯ ಸ್ತಬ್ಧವಾಯಿತು...
ಆದ್ರೆ, ನಿನ್ನ ನೋವು ಎಂದೂ ನನ್ನದಾಗಲಿಲ್ಲ.
- ರೇವನ್...

ಜ್ಯೇಷ್ಟ ಮಾಸದ ಶ್ರೇಷ್ಟ ಪುಷ್ಪ - ಬ್ರಹ್ಮಕಮಲ

ಜ್ಯೇಷ್ಟ ಮಾಸಕ್ಕೂ ಬ್ರಹ್ಮಕಮಲಕ್ಕೂ ಅದೇನು ಅನುಬಂಧವೋ ತಿಳಿಯಿದು. ಮುಂಗಾರಿನ ಮಳೆ ಹನಿಗಳು ಧರೆಗಿಳಿದಂತೆ ಕ್ಯಾಕ್ಟಸ್ ಜಾತಿಯ ಬ್ರಹ್ಮಕಮಲದ ಗಿಡದಲ್ಲಿ ಮೊಗ್ಗುಗಳು ಹೊರಹೊಮ್ಮತೊಡಗುತ್ತವೆ. ಕೆಲವೇ ದಿನಗಳಲ್ಲಿ ಮೊಗ್ಗರಳಿ ಹೂವಾಗಿ ಮನಸ್ಸನ್ನಾಕರ್ಷಿಸುತ್ತವೆ. ಆದರೆ ಈ ಸುಂದರ ಬ್ರಹ್ಮಕಮಲಕ್ಕೂ ಸೂರ್ಯನಿಗೂ ಬದ್ದ ದ್ವೇಶವಿರಬೇಕು.

ಕನ್ನಡ ಪುಸ್ತಕಗಳ online ಖರೀದಿ

ಸಪ್ನಾ ಪುಸ್ತಕದ ಅಂಗಡಿಗೆ ಧನ್ಯವಾದಗಳು!

ಕನ್ನಡ ಪುಸ್ತಕಗಳ online ಖರೀದಿಗಾಗಿ ಈ ಕೊಂಡಿಯನ್ನು ವಿಕ್ಷಿಸಿ:

http://www.sapnaonline.com/KannadaBookDetails.aspx?lcPType=D

'ವರ್ಧಕ'ದೊಳಗಿನ 'ಧ್ವನಿ'

"ಹಲೋ...ಹಲೋ...ಮೈಕ್ ಚೆಕ್..ಮೈಕ್ ಚೆಕ್.." ಹುಂ.ಶುರುವಾಯ್ತು,ಇವ್ರ ಪ್ರವರ.ಇನ್ನು ಇಡೀ ದಿನ ಬಿಡುವಿಲ್ಲ ನಂಗೆ. ಬಂದು,ಬಂದು ಬಡ್ಕೊಳ್ಳೋರ್‍ಗೆಲ್ಲಾ ತಲೆಯೊಡ್ಡಿ ನಿಲ್ಬೇಕು. ಅಂದ್ ಹಾಗೆ,ನಾನ್ಯಾರು ಅಂತ ಗೊತ್ತಾಯ್ತಾ? ನಾನು ರೀ,ನೀವ್ ಭಾಷ್ಣ ಬಿಗಿಯೋವಾಗ,ಹಾಡೋವಾಗ,ನಿಮ್ ಧ್ವನೀನ ಊರಾಚೆಗೂ ಕೇಳೋ ಹಾಗ್ ಮಾಡೋವಲ್ಲಿ ಪ್ರಮುಖ ಪಾತ್ರ ವಹಿಸೋನು. ಧ್ವನಿವರ್ಧಕ ಅಲಿಯಾಸ್ ಮೈಕ್. ನಾನಿಲ್ದಿರೋ ಸಭೆ ಸಮಾರಂಭಗಳುಂಟೇ? "ಎಲ್ಲೆಲ್ಲಿ ನೀವ್ ನೋಡಿರೀ...ನನ್ನನೇ ಕಾಣ್ವಿರೀ..." ಹುಂ,ನಾನೇನೋ ಹೀಗಂತ ಹಾಡ್ತಾ ಇದೀನಿ. ಆದ್ರೆ ಸಂತೋಷ್ದಿಂದ ಏನಲ್ಲ ಬಿಡಿ,ನನ್ ಮನಸ್ಸಿನ್ ದುಃಖನ ಮರೆಮಾಚೋಕೆ. ಇವತ್ತ್ ಏನೇ ಆಗ್ಲಿ,ಎಲ್ಲಾ ನಿಮ್ ಹತ್ರ ಹೇಳ್ಬೇಕೂಂತಿದೀನಿ. ಅವ್ನೊಬ್ಬ,ಇಪ್ಪತ್ತೈದ್ ಸಲ ಬಂದು "ಮೈಕ್ ಚೆಕ್ ಮೈಕ್ ಚೆಕ್" ಅನ್ನೋಷ್ಟ್ರೊಳ್ಗೆ ಮುಗುಸ್ಬಿಡ್ತೀನಿ.

ಮೊದ್ ಮೊದ್ಲು ಜನ್ರೆಲ್ಲ ನನ್ನನ್ನ ಆಶ್ಚರ್ಯದಿಂದ ನೋಡ್ತಿದ್ರು. ಅವ್ರ್‍ಗೆಲ್ಲಾ ನಾನೊಬ್ಬ ವಿಶಿಷ್ಟ ವಸ್ತು ಆಗಿದ್ದೆ. ಅದೇನೋ ಒಂದ್ ರೀತಿ ಗೌರವ ಇತ್ತು. ಅವಾಗ್ಲೆ ಚೆನ್ನಾಗಿತ್ತು. ಈಗ್ ನನ್ ಕೇರ್ ಮಾಡೋರೇ ಇಲ್ಲ. ಶೀತ,ತಲೆನೋವ್ ಏನಾದ್ರು ಬಂದು,ನಾನ್ ಸರಿಯಾಗ್ ಕೆಲ್ಸ ಮಾಡ್ದೆ ಹೋದ್ರೆ,ಡಬ್ ಡಬ್ ಅಂತ ನನ್ ತಲೇಗ್ ಸರ್‍ಯಾಗ್ ಹೊಡೀತಾರೆ. ನಾನ್ ಸರಿಯಾಗ್ ಇದ್ರೂನು,ಹಲವು ಜನ,ಮಾತ್ ಶುರುಹಚ್ಕೊಳ್ಳೋಕ್ ಮೊದ್ಲು ನನ್ಗೆರಡ್ಸಾರಿ ಹೊಡೀದೇ ಇಲ್ಲ ನೋಡಿ. ದಿನಾ ಸುಮ್ ಸುಮ್ನೇ ಪೆಟ್ ತಿಂತೀನಿ. ನನ್ ಸಹೋದ್ಯೋಗಿಗಳ್ಗೆ(ಬ್ಯಾಟರಿ,ಸ್ಪೀಕರ್...)ನನ್ನಷ್ಟು ಕಷ್ಟ ಇಲ್ಲ. ನನ್ಗೆ ಇಲ್ಲಿಂದ ಭಡ್ತೀನೂ ಇಲ್ಲ!

ವೆಬ್ ಸೈಟನ್ನು ತಿಳಿಸಿ

ಈ ಟೀವಿ ಕನ್ನಡ ತುಂಬ ಚೆನ್ನಾಗಿ ಮೂಡಿಬರ್ತಿದೆ, ಅದ್ರಲ್ಲೂ ಟಿ.ಎನ್ ಸೀತಾರಾಮ್ ಸೀರಿಯಲ್ಸ್ ಅಂದ್ರೆ ಹೇಳ್ಬೇಕಾ,
ಕನ್ನಡದ ಬಗ್ಗೆ ಎಷ್ಟೋ ಜನರ ಮನೋಭಾವನೆಯನ್ನು ಚೈಂಜ್ ಮಾಡಿದ್ದೇ ಈ ಚಾನೆಲ್. ಅದನ್ನು ನೋಡದೆ ಬಹಳ ದಿನಗಳಾಯ್ತು, ತುಂಬ ಬೇಜಾರಾಗ್ತಿದೆ. ದಯವಿಟ್ಟು ತಿಳಿಸಿ ಯಾವ ವೆಬ್ ಸೈಟ್ನಲ್ಲಿ ಈ ಚಾನೆಲ್ ಬರುತ್ತೆ ಅಂತ.

ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ?

ನಮ್ಮೆ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವಾಗ ಗುಲ್ಬರ್ಗ,ಬಿಜಾಪುರ,ಬೀದರ್,ಶಿವಮೊಗ್ಗ ಈ ಎಲ್ಲ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳ ಅವಶ್ಯಕತೆ ಇದಯೆ?
ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ, ದಯವಿಟ್ಟು ಆ ಸ್ಥಳಗಳಲ್ಲಿ ಈ ವಿಮಾನ ನಿಲ್ದಾಣದ ಯೋಜನೆಯ ಪ್ರಾಮುಖ್ಯತೆ ಎಷ್ಟಿದೆ ಅಂತ ತಿಳಿಸಿ.

ಲೀಲಾವತಿ

ಲೀಲಾವತಿ
ಭಾಸ್ಕರಾಚಾರ್ಯರು ಕನ್ನಡದ ಗಣಿತ ತಜ್ಞರು ಇವರ ’ಲೀಲಾವತಿ ಗ್ರಂಥ’ ಇವರ ಮೇಧಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣಿತದ ಜೊತೆಗೆ ಸಾಹಿತ್ಯದ ಬೆಸುಗೆ ಇವರ ವೈಶಿಷ್ಟ್ಯ.