ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಮಾಸಗಳಿಗೆ ಹಾಗೆ ಹೆಸರೇಕೆ
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ?
ಕಾರಣ
ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ ಚಂದ್ರ (ತಿಂಗಳ್) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗಳಿಗೆ ಆಯಾ ನಕ್ಷತ್ರದ ಸಂಬಂಧದಿಂದ ಕರೆಯುತ್ತಾರೆ.
ಚೈತ್ರ=ಹುಣ್ಣಿಮೆಯ ದಿನ ಸರಿಸುಮಾರು ಚಂದ್ರ ಚಿತ್ರಾ ನಕ್ಷತ್ರಪ್ರವೇಶ
- Read more about ಮಾಸಗಳಿಗೆ ಹಾಗೆ ಹೆಸರೇಕೆ
- 5 comments
- Log in or register to post comments
ವೈಚಾರಿಕತೆ ಮಂಕಾಯಿತೇ?
ಕನ್ನಡ ಭಾಷೆ ಕುಱಿತಂತೆ ಕನ್ನಡಿಗರಲ್ಲಿ ವೈಚಾರಿಕತೆ ಕಡಿಮೆಯಾಯ್ತೇ? ಯಾಕೆಂದರೆ ನನ್ನ ಹಲವು ವಿಚಾರಗಳಿಗೆ ಪರ ವಿರೋಧ ಹೇೞುವವರ ಸಂಖ್ಹ್ಯೆ ಗಣನೀಯವಾಗಿ ಕಡಿಮೆಯಾಗಿದೆ.
- Read more about ವೈಚಾರಿಕತೆ ಮಂಕಾಯಿತೇ?
- 1 comment
- Log in or register to post comments
ಸಂತೆ ನೆನಪಿಗೆ ಹೊಂಡ
ಈ ಲೇಖನ ಹೋದವಾರ [:http://kannada.indiawaterportal.org/|ಇಂಡಿಯ ವಾಟರ್ ಪೋರ್ಟಲ್ ನಲ್ಲಿ] ಪ್ರಕಟವಾಗಿತ್ತು.
ನಾಡಿನ ವಿಖ್ಯಾತವಾದ ಹಾಗೂ ಅಷ್ಟೇ ವಿಶಿಷ್ಟವಾದ ಜಲಾಗಾರಗಳ ಪೈಕಿ ಪ್ರಮುಖವಾದುದು ಎಂದರೆ ಸಂತೆ ಹೊಂಡ. ಹೆಸರು ಈಚಿನದಾದರೂ, ಹೊಂಡ ಹಳೆಯದೇ. ಐತಿಹಾಸಿಕವಾದುದು.
ದುರ್ಗದ ಊರ ನಡುವಿರುವ ಈ ಹೊಂಡವನ್ನು ಕಟ್ಟಿಸಿದ್ದು ಬಿಚ್ಚುಗತ್ತಿ ಭರಮಣ್ಣ ನಾಯಕರು, ಕ್ರಿಸ್ತ ಶಕ 1693ರಲ್ಲಿ ಎಂದು ದಾಖಲೆಗಳು ಹೇಳುತ್ತವೆ. ದುರ್ಗದ ಐತಿಹಾಸಿಕ ಕೋಟೆಯಿಂದ ಸುಮಾರು ಒಂದು ಮೈಲಿ ದೂರದಲ್ಲಿರುವ ಈ ಹೊಂಡದ ಸುತ್ತಲೂ ಸೈನ್ಯ ಬೀಡ ಬಿಟ್ಟಿರುತ್ತಿತ್ತು. ಸೈನ್ಯದ ಬಳಕೆಗೂ ಆಯಿತು. ನಾಗರಿಕರೂ, ದಾರಿಹೋಕರ ದಾಹಕ್ಕೂ ಆಗುತ್ತಿತ್ತು. ಕಾಲಾಂತರದಲ್ಲಿ ಈ ಹೊಂಡದ ಸುತ್ತ ಸಂತೆ ನೆರೆಯಲು ಆರಂಭಿಸಿದ್ದರಿಂದ, ಇದಕ್ಕೆ ಸಂತೆ ಹೊಂಡ ಹೆಸರು ಬಂತು.
ದುರ್ಗದ ಪ್ರಖ್ಯಾತ ಪಾಳೆಗಾರರಾಗಿದ್ದ ಭರಮಣ್ಣನಾಯಕರು ಶೌರ್ಯ, ಪರಾಕ್ರಮಕ್ಕೆ ಹೆಸರಾಗಿದ್ದರಿಂದ ಅವರಿಗೆ ಬಿಚ್ಚುಗತ್ತಿ ಎಂಬ ಅಭಿದಾನ ಬಂದಿತ್ತು. ಬರೀ ಶೌರ್ಯ, ಪರಾಕ್ರಮಗಳ ಕುರಿತು ಐತಿಹಾಸಿಕ ದಾಖಲೆಗಳು, ಜಾನಪದ ಕತೆಗಳೂ ಉಂಟು. ಆದರೆ, ಅವರ ವ್ಯಕ್ತಿತ್ವದ ಮತ್ತೊಂದು ಮಹತ್ವದ ಮಗ್ಗುಲಿಗೆ ಸಾಕಷ್ಟು ಸಾಕ್ಷ್ಯಗಳು ಇನ್ನೂ ಕಣ್ಣೆದುರೇ ಇವೆ. ನೀರುಣಿಸಲು ಜಲಾಗಾರಗಳ ನಿರ್ಮಾಣದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕರ ಕೊಡುಗೆ ಅತಿ ಮಹತ್ವದ್ದು. ದುರ್ಗದ ಸಂತೆ ಹೊಂಡವೂ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಹೊಂಡಗಳನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ.
- Read more about ಸಂತೆ ನೆನಪಿಗೆ ಹೊಂಡ
- Log in or register to post comments
ಸತ್ಯ ಮತ್ತು ಸೌಂದರ್ಯ
ಅವರ ಸತ್ಯ ಇವರ ಸತ್ಯ ಹೇಗೆ ಪಥ್ಯ ಬರೀ ಸದ್ದು ಕಲರವ
ಸತ್ಯದಾಳ ತಿಳಿಯದೆ ತೇಲಿ ವಿಹರಿಸಿ ಮೇಲ್ಪದರದ ಮಿಥ್ಯೆಯಲಿ
ವ್ಯರ್ಥ ಜಿಜ್ಞಾಸೆ ಚರ್ಚೆಯಾಯಿತು ಸುದ್ದಿಗೆ ಗ್ರಾಸ ಇನ್ನೇನು ಫಲ
ಮರೆತರೆ ಸೌಂದರ್ಯ ಪ್ರಜ್ಞೆಯ - ಶಿವ ಸತ್ಯದ ಆಳವ ಅಗಾಧವ
ಆಳ್ವ ಜನದ ಸಂಸ್ಕೃತಿ ನಿಜ ಪ್ರಕೃತಿ ತಿಳಿಯದ ವಿಕೃತಿ
ಅಂಧ ಸಂಸ್ಕೃತಿ ವಿಜೃಂಭಣೆ ನಿಜ ಸಂಸ್ಕೃತಿ ಪರೀಕ್ಷಣೆ
- Read more about ಸತ್ಯ ಮತ್ತು ಸೌಂದರ್ಯ
- Log in or register to post comments
ಬದುಕು
ಅಗಮ್ಯ ಚೇತನ,
ನಿನ ಬದುಕಿನಲ್ಲೇಕೆ ಚಿಂತನ
ಬಾಳೆಂಬ ನದಿಯು ಓಡಲು,
ಸನಿಹವಾಯಿತೆ ಸಾವೆಂಬ ಕಡಲು,
ತಡೆಯಲಾಗದು, ಈ ಪಯಣ,
ನಗುವುದಾ ಕಲಿ
ನೀ, ಇಷ್ಟೇ ಜೀವನ.......
ಹಣವೆಂಬ ಹುಚ್ಚು ಹೊಳೆಯಲಿ,
ನಿನತನವು ಕೊಚ್ಚಿ, ಹೋಗದೆ ಇರಲಿ,
ಮೋಹದೀ, ಬದುಕಿನಾಟದಲಿ,
ಬದುಕು ಬವಣೆಯ
ಕೂಪವ, ಸೇರದೆ ಇರಲಿ.......
- Read more about ಬದುಕು
- Log in or register to post comments
"ಈ ಕನಸು"
" ಬದುಕಿನ ಈ ಪಯಣದಲ್ಲಿ
ಕವಲೊಡೆದ ದಾರಿಯಲ್ಲಿ
ಕ್ಯೆ ಚಲ್ಲಿ ನಿಂತಿದೆ ಈ ಕನಸು
ಭಾವನೆಗಳ ಸಂಘರ್ಷದಲ್ಲಿ
ಏದುಸಿರು ಬಿಡುತ್ತ ಬೆವರು ಸುರಿಸುತ್ತಾ
ಸಾಗಿದೆ ಈ ಕನಸು.
ನೆನಪುಗಳ ಸರಮಾಲೆಯಲ್ಲಿ
ಭವ್ಯ ಕನಸುಗಳ ಹಾವಳಿಯಲ್ಲಿ
ದಿವಾಳಿಯಾಗಿ,
ಅಲೆಮಾರಿಯಾಗಿ ನಿಂತಿದೆ, ಈ ಕನಸು
ಮಾತನಾಡದೆ, ಮೌನವಾಗಿರದೆ
ಚಂಚಲೆ ಕನ್ಯೆಯಾಗಿ
- Read more about "ಈ ಕನಸು"
- Log in or register to post comments
ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
’ಱ’ ಕನ್ನಡ, ತಮಿೞ್, ತೆಲುಗು, ಮಲಯಾಳಂಗಳಲ್ಲಿ ಉಪಯೋಗದಲ್ಲಿದೆ. ಹೆಚ್ಚಾಗಿ ತಮ್ಮ ಅಜ್ಞಾನದ ಕಾರಣ ಕನ್ನಡ ಮತ್ತು ತೆಲುಗರು ’ಱ’ ಬದಲು ’ರ’ ಬೞಸುವುದನ್ನು ನೋಡುತ್ತೇವೆ. ತುಳುವಿನಲ್ಲಿ ’ಱ’ ಬದಲು ’ದ/ಜ’ ಬೞಕೆಯಾಗುತ್ತಿದೆ.
- Read more about ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
- 9 comments
- Log in or register to post comments
ರಾಷ್ಟ್ರಪತಿ ಹುದ್ದೆಗೆ ಘನತೆ ತಂದವರು
1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.
- Read more about ರಾಷ್ಟ್ರಪತಿ ಹುದ್ದೆಗೆ ಘನತೆ ತಂದವರು
- 3 comments
- Log in or register to post comments