ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೃಷ್ಣರಾಜೇಂದ್ರ ವಿಮಾನ ನಿಲ್ದಾಣ

ಸುಮ್ನೆ ಯಾಕೆ ಅಶ್ಟುದೂರದಲ್ಲಿ ವಿಮಾನ ನಿಲ್ದಾಣ ಕಟ್ಸಿದ್ರು ಅಂತೀನಿ. ಗುಣಮಟ್ಟ ಚೆನ್ನಾಗಿಲ್ಲ ಅಂತ ಬೇರೆ ಹೇಳ್ತಾಇದ್ದಾರೆ. ಅಷ್ಟು ಕಳಪೆಯಾಗಿ ಮಾಡುವುದಿದ್ದರೆ ಇಲ್ಲೆ ಕೆ.ಆರ್. ಮಾರ್ಕೆಟ್ ನ ಬಸ್ ನಿಲ್ದಾಣದಲ್ಲೇ ನಿಲುಗಡೆ ವ್ಯವಸ್ಥೆಮಾಡಬಹುದಾಗಿತ್ತು. ರನ್ವೇ ಬೇಕಾಗಿದ್ರೆ ಮೈಸೂರ್ ರಸ್ತೆಯ ಮೇಲ್ರಸ್ತೆ ಉಪಯೋಗಿಸ್ಕೋಬೌದಿತ್ತು.ಅಲ್ವೇ !! :-)

ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ?

ನನ್ನ ಪ್ರೀತಿಯ ಕನ್ನಡಿಗರೇ, ನಮ್ಮ ಭಾಷೆ ಕನ್ನಡದ ಸ್ಥಿತಿ ಗತಿ ಏನಾಗಿದೆ ಅನ್ನೋ ವಿಷಯ ಸುಮಾರು ದಿನದಿಂದ ನನಗೆ ಕಾಡ್ತಾನೆ ಇದೆ. ಮೊನ್ನೆ ಹೀಗೆ ಯೋಚನೆ ಮಾಡ್ತಾ ಇದ್ದೆ. ಆಗ ನನಗೆ ಕಾಡಿದ ಪ್ರಶ್ನೆ " ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ? " .

ಸಂಪದದ ಪಾಯಿಂಟ್ ಉಪಯೋಗವೇನು ?

ಸಂಪದದ ಪಾಯಿಂಟ್ ಉಪಯೋಗವೇನು ?

ಬ್ಲಾಗ್ ಲೇಖನಕ್ಕೆ '೨' , ಕಾಮೆಂಟ್ ಗೆ '೧' ಇತ್ಯಾದಿ ...

ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಮುಂದೆ ಹರಿ ಅವರು ಗಿಫ್ಟ್ ಕೊಡ್ತಾರ??? ;)

--ಶ್ರೀ

ನಟಸಾರ್ವಭೌಮನಿಗೆ ನಮಸ್ಕಾರ

ಕನ್ನಡ ನಾಡಿನ ಹೆಮ್ಮೆಯ ಕುವರ
ನಮ್ಮ ನಿಮ್ಮೆಲ್ಲರ ರಾಜಕುಮಾರ
ಹುಟ್ಟಿದ್ದು ತಾಯಿಯ ತವರೂರಾದ ಗಾಜನೂರು
ಹುಟ್ಟಿ ಬೆಳೆಯಿತು ಇವರ ಅಭಿಮಾನಿ ಬಳಗ ಸಾವಿರಾರು
ನಡೆ ನುಡಿಯಲ್ಲಿ ಇವರೆಂದು ಸರಳ ಸಜ್ಜನ
ಆದರು ಸೆಳೆದು ಹಿಡಿದಿಟ್ಟಿತು 108 ದಿನ ಕಾನನ
ಒಲಿದು ಬಂದವು ಇವರಿಗೆ ಪ್ರಶಸ್ತಿಗಳು ಅನೇಕಾನೇಕ
ತರಲಿಲ್ಲ ಅವು ಎಂದು ಗರ್ವ ಅಹಂಕಾರ

ಕುದುರೆ

ಕುದುರೆ=
೧) ನಾಲ್ಕು ಕಾಲಿನ ಗೊರಸಿನ ಹುಲ್ಲು ತಿನ್ನುವ ಸಸ್ತನಿ.
೨) ಕೊಡೆ ತೆಱೆಯಲು ಅಥವಾ ಬಂದೂಕನಿಂದ ಗುಂಡು ಹೊಡೆಯಲು ಬೞಸುವ ಲಾಳ (trigger)

|| ಕಣ್ಣೀರು...||

ಕಣ್ಣೀರ ಧಾರೆ ನಂಗೇಕೆ
ಎನ್ನುವ  ಮನಕೆ...

ಮನದ  ಭಾವ-ಅಭಾವಗಳ  ಭಾವ;
ಮನದ ತರಂಗಗಳ  ನುಡಿ ;
ಸಾಗರದಲೆಗಳ  ದನಿ ;

ಆಸೆ - ಆಕಾಂಕ್ಷೆ - ಗೆಲುವುಗಳ
ಹೊನ್ನುಡಿ ;
ನೋವು-ಹತಾಶೆ-ಸೋಲುಗಳ
ಬೆನ್ನುಡಿ ;
ಮನಧರೆಯ  ಜ್ವಾಲಾಮುಖಿ
ಸೋಕಿಸದೆ  ತಟ್ಟುವ  ತಪರಾಕಿ ;

ಕಲ್ಲಾದ  ಮನಕೆ  ಬದುಕ ಸಿಂಚನ ;
ಅರಳುವ  ಮನಕೆ  ಅರಳಿದ  ಹೂಬನ ;

ರೋಗಿಯನ್ನು ನೋಡಲು ಹೋಗುವವರು

ಆಸ್ಪತ್ರೆ ಸೇರಿದವರನ್ನು ವಿಚಾರಿಸಲು ಹೋಗುವ ರೋಗಿ(ಯ ಬಂಧುಮಿತ್ರರು)ಗಳು-

ಮಾಲಿಗಳು :
ಕೆಲವರು ‘ಮಾಲ್’ಗೆ ಹೋಗುವುದಕ್ಕೂ ಆಸ್ಪತ್ರೆಗೆ ರೋಗಿಯನ್ನು ನೋಡಲು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲ. ಅಲ್ಲಿರುವ ಎಲ್ಲಾ ವಸ್ತುಗಳನ್ನು ನೋಡಿ, ಮುಟ್ಟಿ, ತೆಗೆದು, ವಿಚಾರಿಸಿ.. ಇಡುವರು.

ಸೀರಿಯಲ್‌ ಲವರ್ಸ್ :

ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!

ರಿಲಾಯನ್ಸ್ ನವರು ಬಿಗ್ ಟಿ.ವಿ ಅನ್ನೋ ಡಿ.ಟಿ.ಎಚ್ ಸೇವೆ ಶುರು ಮಾಡ್ತಾ ಇದ್ದಾರಂತೆ, ಅವರ ಸೇವೆಯಲ್ಲಿ ಕನ್ನಡಕ್ಕೆ ಒಳ್ಳೆ ಆದ್ಯತೆ ಕೊಟ್ಟಿದ್ದಾರೆ ಅಂತೆ ಅನ್ನುವ ಅಂತೆ-ಕಂತೆ ಕೇಳಿ ಸಕತ್ ಖುಷಿ ಆದೋರಲ್ಲಿ ನಾನು ಒಬ್ಬ.

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ..

ಪ್ರಿಯ ಓದುಗ ವೃಂದಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರ. ನೀವೇನೋ ಗೌರಿ,ಗಣೇಶ ಹಬ್ಬ ಮಾಡೊದಕ್ಕೆ ನಿಮ್ಮ ನಿಮ್ಮ ಊರಿಗೆ ಹೊರಟ್‌ಹೋಗಿಬಿಟ್ಟಿದ್ರಿ. ಆದ್ರೆ ಇಲ್ಲಿ..ನನ್ನ ಬ್ಲಾಗಿನಲ್ಲಿ ನಾ ಬರೆದ ಕವನಗಳು, ಲೇಖನಗಳು ಓದುವವರು ಯಾರೂ ಇಲ್ವಲಪ್ಪ ಅಂತ ಒಂದೇ ಸಮನೆ ಅಳ್ತಾ ಇದ್ದವು.