ಓದಿದ್ದು ಕೇಳಿದ್ದು ನೋಡಿದ್ದು-14 ವಿಶ್ವದ ಅಂತ್ಯ ಸದ್ಯಕ್ಕಂತೂ ಆಗದು!

ಓದಿದ್ದು ಕೇಳಿದ್ದು ನೋಡಿದ್ದು-14 ವಿಶ್ವದ ಅಂತ್ಯ ಸದ್ಯಕ್ಕಂತೂ ಆಗದು!

ಬಿಗ್ ಬ್ಯಾಂಗ್ ಎನ್ನುವ ಸಿದ್ಧಾಂತ ಸರಿಯೇ ಎನ್ನುವುದನ್ನು ಖಚಿತ ಪಡಿಸಿ ಕೊಳ್ಳಲು ಪ್ರಯೋಗಗಳು ಇಂದಿನಿಂದ ಆರಂಭವಾಗಲಿವೆ. ಇದರಿಂದ ಭೂಮಿಗೆ ಅಪಾಯ ಎದುರಾಗಬಹುದು ಎನ್ನುವ "ಸಿದ್ಧಾಂತ" ಪ್ರಚಲಿತದಲ್ಲಿದೆ. ಆದರೆ ಈ ಪ್ರಯೋಗದಲ್ಲಿ ಭಾಗವಹಿಸಲಿರುವ ವಿಜ್ಞಾನಿಗಳು ವದಂತಿಗಳನ್ನು ತಳ್ಳಿ ಹಾಕಿದ್ದಾರೆ. 

-------------------------------------------------

ಸತೀಶ್

 

 

ಡಾ.ಸತೀಶ್ ಶೃಂಗೇರಿ ವ್ಯಂಗ್ಯಚಿತ್ರ

----------------------------------------------

ಕುನ್ನಕುಡಿ ಅವರ ದೊಡ್ದಗುಣ

ತಂಜಾವೂರಿನ ಬಳಿಯ ತಿರುವಯಾರಿನಲ್ಲಿ ತ್ಯಾಗರಾಜ ಉತ್ಸವ ಪ್ರತಿವರ್ಷ ನಡೆಯುತ್ತದೆ. ಅದರಲ್ಲಿ ದಕ್ಷಿಣ ಭಾರತೀಯರೇ ಭಾಗವಹಿಸುತ್ತಿದ್ದರಂತೆ. ಮೊನ್ನೆ ನಿಧನರಾದ ಕುನ್ನಕುಡಿಯವರ ಆಹ್ವಾನ ಮೇರೆಗೆ ಸರೋದ್ ವಾದಕ ಅಮ್ಜದ್ ಅಲಿಖಾನ್ ಅವರು ಭಾಗವಹಿಸಿ,ತ್ಯಾಗರಾಜ ಸಂಗೀತ ಉತ್ಸವದಲ್ಲಿ ಪಾಲ್ಗೊಂಡ  ಮೊದಲ ಉತ್ತರ ಭಾರತೀಯ ಎನಿಸಿದರಂತೆ.ಅಲ್ಲಿ ತ್ಯಾಗರಾಜರ ಕೃತಿಗಳನ್ನು ನುಡಿಸುವುದು ಕಡ್ಡಾಯವಾದ್ದರಿಂದ, ಅಮ್ಜದ್ ಅಲಿಖಾನ್ ಕೃತಿಯನ್ನು ಕಲಿತು ಹಾಡಿದರಂತೆ!

-------------------------------------------------

dna

-------------------------------------------------------

ಬ್ಲಾಗ್ ಮೂಲಕ  ಆರೋಗ್ಯ ಸುಧಾರಣೆ!

ವೈದ್ಯಮಿತ್ರ ಡಾ.ಸತೀಶ್ ಶೃಂಗೇರಿ ಅವರು "TOON CLINIC: Be ready for Cartoon remedy!" ಅನ್ನು ಶಿಫಾರಸು ಮಾಡುತ್ತಾರೆ.
ಆದರೆ ರೋಗಿಗಳೇ ಬ್ಲಾಗು ಬರೆದರೆ ಅವರ ಆರೋಗ್ಯ ಸುಧಾರಿಸಿದ ಉದಾಹರಣೆಗಳಿವೆಯಂತೆ. ತಮ್ಮ ಕಷ್ಟವನ್ನು ಇತರರೊಂದಿಗೆ ಹಂಚಿಕೊಂಡು ಹಗುರಾಗುವ ಮೂಲಕ ಅವರ ಆರೋಗ್ಯ ಉತ್ತಮವಾಗುತ್ತದೆ.

--------------------------------------------------------

ie

blog

Rating
No votes yet