ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ಸುಳ್ಳು

ರಾತ್ರಿ  ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು  ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ  ಮನೆಗೆ  ಫೋನ್  ಮಾಡಿದೆ. 

ಊಟ  ಆಯ್ತೇನೋ ಅಂತ ಅಮ್ಮ ಕೇಳಿದ್ಳು.   ನಮ್ಮ ಹೊತ್ತಲ್ಲದ ಹೊತ್ತಿನ  ರಗಳೆ  ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ... 

 

ಗೆಳೆಯ

ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ


ಸಂಸ್ಕೃತ ಮೂಲ:

ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ

೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ?

ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು

ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು

(ಇದು ಸ೦ಪದದಲ್ಲಿ ನನ್ನ ಮೊದಲನೆ ಬರಹ. ತಪ್ಪಿದ್ದಲ್ಲಿ ಮನ್ನಿಸಿ)

ಡಿವಿಜಿ ರಸ್ತೆ ದೇವೇಗೌಡ್ರದ್ದಾ ?

ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್‌ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ.

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

ಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ್ಕಿಂತ ಇವನದು ಇದೇ ಖಯಾಲಿ. ಆಕಾಶಕ್ಕೆ ಮುಖ ಮಾಡಿ ಏರಲಾಗದ ಏಣಿಗಾಗಿ ಹಂಬಲಿಸುವುದು. ಅಚ್ಚಾಗದ ಚಿತ್ರವನ್ನು ಮತ್ತೆ ಮತ್ತೆ ಬಿಡಿಸುವುದು. ಸುರುಳಿ-ಸುರುಳಿಯಾಗಿ ಗಂಟುಹೊಸೆದುಕೊಳ್ಳುವ ಬಣ್ಣಗಳ ಮೊಂಡಾಟ ಬಿಡಿಸುವುದು.

ಒಂದು-ಒಂದೇ ಬಾರಿ ಇವನಂದುಕೊಂಡಂತೆ ಅದೊಂದು ಅದ್ಭುತ ಕಲಾಕೃತಿಯಾಗಿಬಿಟ್ಟರೆ, ಅದಕ್ಕೊಂದು ಚೌಕಟ್ಟು ಕಟ್ಟುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಯಾಕೆಂದರೆ ಚೌಕಟ್ಟು ಕಟ್ಟುವುದು, ಕಟ್ಟಿಕೊಳ್ಳುವುದು ಎರಡೂ ಇವನಿಗಿಷ್ಟ. ಇಷ್ಟಪಟ್ಟದ್ದು ಎಂದೂ ಕಷ್ಟದ ಕೆಲಸವಲ್ಲವಲ್ಲ?

ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??

ಪ್ರಪಂಚದಲ್ಲಿ ಸುಮಾರು ಶೇ೫೦ಕ್ಕೂ ಹೆಚ್ಚು ಜನ ಇಂದು ಇಂಗ್ಲೀಷನ್ನು ಬಲ್ಲವರಾಗಿದ್ದಾರಂತೆ. ಗಮನಿಸಿ ಈ ಶೇ ೫೦ ಜನದಲ್ಲಿ ತಮ್ಮ ಮಾತೄಭಾಷೆ, ಆಡು ಭಾಷೆ ಬೇರೆಯಾಗಿದ್ದಾರೂ ಉದ್ಯೋಗಕ್ಕಾಗಿ ಇಂಗ್ಲೀಷನ್ನು ಕಲಿತವರೂ ಇದ್ದಾರೆ.

ಹೊಸ ಸೇರ್ಪಡೆ

ಎಲ್ಲಾ ಸ೦ಪದಿಗರಿಗೆ ನನ್ನ ನಮಸ್ಕಾರ.

ಸ೦ಪದಕ್ಕೆ ನನ್ನದೊ೦ದು ಹೊಸ ಸೇರ್ಪಡೆ. ನಾನು ಬೆ೦ಗಳೂರಿನಲ್ಲಿ ಒಬ್ಬ ಐ.ಟಿ ಕಾರಕೂನ. ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದ ವಿಷಯಗಳನ್ನು ತಿಳಿಯುವ ಆಸೆ. ಹರಿದಾಸ ಸಾಹಿತ್ಯದಲ್ಲಿ ಆಸಕ್ತಿ. ಕನ್ನಡದಲ್ಲಿ ಟೈಪಿಸಲು ತು೦ಬಾ ಕಷ್ಟ ಎ೦ದುಕೊ೦ಡಿದ್ದೆ. ಈಗ ಪರವಾಗಿಲ್ಲ.

ಮತ್ತೊಮ್ಮೆ ಎಲ್ಲಾರಿಗೂ ನಮಸ್ಕಾರ
-ಸಾಗರ ಜೀವಿ

ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ

ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂದು

ಕನ್ನಡ ಮಾತಾಡಿ, ಮಜಾ ಮಾಡಿ

ಬಿಲ್ ಗೇಟ್ಸ್ ತನ್ನ ಕಂಪೆನಿ ಮೈಕ್ರೋಸಾಫ್ಟ್ ಯೂರೋಪಿಗೆ ಚೇರ್ಮನ್ನನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ ಮಾಡಲು ಒಂದು ಸಖತ್ ದೊಡ್ಡ ಸೆಶನ್ ಅರೆಂಜ್ ಮಾಡಿದ. ಆ ಚೇರ್ಮನ್ ಪೋಸ್ಟಿಗೆ 5000 ಜನ ಅಪ್ಲಿಕೇಶನ್ ಹಾಕಿ ಅಲ್ಲಿ ನೆರೆದಿದ್ದರು.
ಅದ್ರಲ್ಲಿ ನಮ್ಮ ಬೆಂಗಳೂರಿನ ರಘು ಕೂಡಾ ಒಬ್ಬ. ಅಪ್ಪಟ ಬೆಂಗಳೂರಿನ ಕನ್ನಡಿಗ.