ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆನಪು ಚಿಗುರುವ ಸಮಯ

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು.

ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲನ. ಅದು ರಂಗಸ್ಥಳವೇನೋ ಎಂಬಂತೆ ಮಳೆ ಹನಿಗಳು ಉಲ್ಲಾಸದಿಂದ ಸಿಡಿದು, ಚದುರಿ ಮಾಯವಾಗುತ್ತಿದ್ದ ಅಪೂರ್ವ ದೃಶ್ಯವನ್ನು ಗೌರಿ ತನ್ನ ಪುಟ್ಟ ಮನಸ್ಸಿನ ಕುತೂಹಲದಿಂದ ನೋಡಿದಳು.

ನನಗೆ ಊರು ನೆನಪಾಯಿತು.

ಮೇ ತಿಂಗಳಿನ ಈ ದಿನಗಳಲ್ಲಿ ಕೊಪ್ಪಳ ತಾಲ್ಲೂಕಿನ ನನ್ನೂರು ಅಳವಂಡಿಯಲ್ಲಿ ಕಡು ಬೇಸಿಗೆ. ಫೆಬ್ರುವರಿ ತಿಂಗಳಿಂದಲೇ ಚುಚ್ಚತೊಡಗುವ ಬಿಸಿಲಿಗೆ ಮಾರ್ಚ್‌ ತಿಂಗಳ ಹೊತ್ತಿಗೆ ತುಂಬು ಪ್ರಾಯ. ಏಪ್ರಿಲ್‌-ಮೇ ತಿಂಗಳಲ್ಲಂತೂ ಕಡು ಬೇಸಿಗೆ. ಎಂಥಾ ಮಳೆಯನ್ನೂ ಮೊಗೆದು ಕುಡಿದು ಮತ್ತೆ ಒಣಗಿ ನಿಲ್ಲುವ ಬಿಸಿಲ ಬಯಲುಗಳು. ಕಾಲಿನ ಮೀನಖಂಡದವರೆಗೂ ನುಂಗಬಲ್ಲ, ಕಪ್ಪು ಮಣ್ಣಿನ ಬಿರುಕುಗಳು. ಮಸಾರಿ (ಕೆಂಪು) ಹೊಲದ ಬೆಣಚುಕಲ್ಲುಗಳು ಕಾಯ್ದು ಹೆಂಚಿನಂತೆ ಧಗಿಸುತ್ತವೆ. ನಮ್ಮ ಬಡಬಾಲ್ಯದ ಬರಿಗಾಲನ್ನು ಅವು ಅದೆಷ್ಟು ಸಾರಿ ಸುಟ್ಟು ಬೊಬ್ಬೆ ಏಳಿಸಿದ್ದವೋ!

ಹೃದಯದ ತುಂಬ ಅದೇ ಬಿಂಬ !

ರಾತ್ರಿ, ಕನಸಿನಲ್ಲಿ ದಂತದಂಥ,
ಬೆಳದಿಂಗಳ ಬಾಲೆಯ ಕಂಡೆ.

ಮುಂಜಾನೆ ಎದ್ದು ಹೊರಗೆ ಸಾಗಿ,
ಸಂಭ್ರಮದ ಹಕ್ಕಿಯ ಕಂಡೆ.

ಆಗಸಕೆ ಇಟ್ಟ ಕುಂಕುಮದಂತ,
ಅರುಣೋದಯವ ಕಂಡೆ.

ಬೆಳಗಿನ ಅಂದ ಚೆಂದ ಆನಂದದ,
ಮೃಗಪಕ್ಷಿಗಳ ನಾ ಕಂಡೆ.

ಮೂಡುವ ರವಿಯ ನೋಡಿ ಕವನ ಬರೆಯುವ,
ಕವಿಯ ಕಂಡೆ, ಬೆರಗುಗೊಂಡೆ !

ಈ ಪರಿಸರದ ಸಂಭ್ರಮದ ಸನ್ನಿವೇಶವ,
ಕಂಡು ನಾ ಮನಸೋತೆ, ಮಾರುಹೋದೆ !

ಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿ.. ಎಂತು?

ಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿಯನ್ನು ಹೇಗೆ ಓದುವುದು? ಯಾವ ಎನ್ ಕೋಡಿಂಗ್ ಬಳಸಬೇಕು? ಐಇ ನಲ್ಲಿ ಸ್ಪಷ್ಟವಾಗಿ ಕಾಣುವ ಉದಯವಾಣಿ, ಫಯರ್ ಫ್ಯಾಕ್ಸ್ ನಲ್ಲಿ ಕಾಣುವುದಿಲ್ಲ.

ಸಹೃದಯ ಓದುಗರಿಗೆ ಮಾಹಿತಿ ತಿಳಿದಿದ್ದರೆ ದಯವಿಟ್ಟು ತಿಳಿಸುವಿರಾ..?

ಅಂತೂ ಇಂತೂ ಸರ್ಕಾರ ಬಂತು !!

ಅಂತೂ ಇಂತೂ ಸರ್ಕಾರ ಬಂತು !!
೪ ವರ್ಷದ ರಾಜಕೀಯ ನಾಟಕದ ನಂತರ ಕರ್ನಾಟಕದಲ್ಲಿ ಕಡೆಗೂ ಒಂದು ಸ್ಥಿರ ಸರ್ಕಾರ ಬರೋ ಕಾಲ ಕೂಡಿ ಬಂದಿದೆ. ಕರ್ನಾಟಕದ ಮತದಾರ ತನ್ನ ಜಾಣ್ಮೆಯನ್ನು ಮೆರಡಿದ್ದಾನೆ ಅಂದ್ರೆ ತಪ್ಪಿಲ್ಲ.

ಲಿನಕ್ಸಾಯಣ - ೮ - ಲಿನಕ್ಸ್ ನೆಟ್ವರ್ಕಿಂಗ್ ಕಷ್ಟ ಅಲ್ಲ

 ಕಂಪ್ಯೂಟರ್ ಇಂಟರ್ನೆಟ್ ಗೆ ಕನೆಕ್ಟ್ ಆಗಿರ್ರ್ಲಿಲ್ಲ ಅಂದ್ರೆ ದಿನ ದೂಡುವುದು ತುಂಬಾ ಕಷ್ಟ ಅಲ್ವೇ?

ರಘು ದೀಕ್ಷಿತ್ ಗೊತ್ತ?

ಇವತ್ತು ನಾನು ಸೈಕೋ ಚಿತ್ರದ "ಮಹದೇಶ" ಹಾದನ್ನ ಕೇಳಿದೆ. ನಂತರ ಅದರ ಗಾಯಕ ಹಾಗು ಸಂಗೀತ ನಿರ್ದೇಶಕ ರಘು ಅವರ ತಾಣಕ್ಕೆ ಭೇಟಿ ನೀಡಿದ್ದೆ. www.raghudixit.com . ಅವರ ತಾಣದಲ್ಲಿ ಇರುವ ಹಾಡುಗಳನ್ನ ಕೇಳಿ ನೋಡಿ.. ಶಿಶುನಾಳರ ಎರಡು ಹಾಡುಗಳು ಇವೆ. ಜೊತೆಯಲ್ಲಿ ಮೈಸೂರ್ ಸೆ ಆಯಿ ಎಂಬ ಹಾಡು ಸಖ್ಕತ್ ಆಗಿ ಇದೆ. ಇವರ ಹಾಡುಗಳಲ್ಲಿ ಜನಪದ ಜೊತೆಗೆ ಗಿಟಾರ್ ನಾದ ತುಂಬಾ ಚೆನ್ನಾಗಿ ಇರುತ್ತೆ.

ಕೆ.ಎಸ್.ನ ರವರ ಓದಲೇಬೇಕಾದ ಸುಂದರ ಪದ್ಯ.

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆನ್ವರು
ಮಳೆ ಬಿತ್ತೊ ಬಿತದಲ್ಲಿ ಶನಿ ಎಂಬ ಕಾಟ
ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ!

ನಿಂತವರ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ
ಒಡಿದರೆ ಬೆನ್ನ ಹಿಂದಯೇ ಇವರ ಟೀಕೆ
ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ!

ಓದಿದರೆ ಹೇಳುವರು ಮತ್ತೊಮ್ಮೆ ಬರೆಯೋ