ಕೃಷ್ಣ..ಕೃಷ್ಣ

ಕೃಷ್ಣ..ಕೃಷ್ಣ

ನನಗೋ ಸ್ವಲ್ಪ ಆಧ್ಯಾತ್ಮದಕಡೆಗೆ ಒಲವು ಜಾಸ್ತಿ. ಹಾಗಂತ ಲೌಕಿದದಬಗ್ಗೆ ಕೆಲಸ ಬಗ್ಗೆ ಇಲ್ಲವೆಂದಲ್ಲ. ಮನೆಯಲ್ಲಿಯೂ ಅಷ್ಟೆ ಎಷ್ಟು ತಾಂತ್ರಿಕವಿಷಯಗಳ ಬಗ್ಗೆ ಪುಸ್ತಕಗಳಿರುತ್ತವೋ ಅಷ್ಟೇ ಸಂಖ್ಯೆಯ ಆಧ್ಯಾತ್ಮ ಪುಸ್ತಕಗಳಿರುತ್ತವೆ. ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ನಮ್ಮತಾತ ಮೊದಲಾದ ಮನೆಯ ಹಿರಿಯರಿಂದ ಕಲಿತದ್ದು. ರಜಾದಿನವೆಂದರೆ ಬೆಳಗ್ಗೆ ಒಂದು ರೌಂಡು ವಾಕಿಂಗ್, ಬಂದನಂತರ ಪೂಜೆ ಮೊದಲಾದ ದೈವೀ ಕಾರ್ಯಗಳನ್ನು ಮಾಡಿ ನಂತರ ಉಳಿದಕೆಲಸಕಾರ್ಯಗಳಿಗೆ ತೊಡಗಿಕೊಳ್ಳುವುದು. ಇದು ನಮ್ಮ ಮನೆಯ ಕೆಲ ಹಿರಿಯರು ಹಾಕಿಕೊಟ್ಟಿರುವ ಪದ್ಧತಿ. ಹಳೆಯಕೊಂಡಿಗಳು ಕಳಚಿಕೊಂಡಂತೆಲ್ಲಾ ಸಂಸ್ಖೃತಿಯ ಕೊಂಡಿಗಳೂ ಕಳಚಿಹೋಗುತ್ತವೆ ನೋಡಿ. ಮೊದಲ್ ನಮ್ಮ ಅಜ್ಜಿ, ನಂತರ ನಮ್ಮ ತಾತ ತೀರಿಕೊಂಡರು ನೋಡಿ ಮನೆಯಲ್ಲಿ ಕೆಲವರಿಗೆ ಆಸಕ್ತಿ ಕಳಚಿಹೋಯಿತು. ನಾವು ದುಡಿದರೆ ನಾವು ಚೆನ್ನಾಗಿರುತ್ತೇವೆ. ಇದಕ್ಕೆ ದೇವರೇಕೆ ಬೇಕು ಎಂಬ ವಾದ. ಮನೆಗೆ ಬರುವ ಕೆಲವರಿಂದಲೂ ಬಿಟ್ಟೀ ಉಪದೇಶಗಳು. ಇದು ಎಷ್ಟು ಭಯಹುಟ್ಟಿಸಿದೆ ಎಂದರೆ ಕೆಲದಿನದ ಹಿಂದೆ ಮನೆಗೆ ಯಾರೋ ಸಂಭಂಧಿಕರು ಬರುತ್ತಾರೆ ಎಂದು ಗೊತ್ತಾಯಿತು. ತಕ್ಷಣವೇ ಸಮರೋಪಾದಿಯಲ್ಲಿ ಆಧ್ಯಾತ್ಮ ಸಂಭಂಧೀ ಪುಸ್ತಕವನ್ನೆಲ್ಲಾ ಒಂದು ಕಪಾಟಿನಲ್ಲಿಟ್ಟುಬಿಟ್ಟೆ. ಆ ಪುಸ್ತಕದ ನೋಡಿ ಅದರ ಬಗ್ಗೆ ಚರ್ಚಿಸಿದರೆ, ಅಥವಾ ಅವರೂ ಕೇಳಿದರೆ ಸಂತೋಷದಿಂದ ಕೊಡಬಹುದು. ಆದರೆ ಅದನ್ನು ನೋಡಿದರೆ ನನಗೆ ಉಪದೇಶ ಶುರುಮಾಡುತ್ತಾರೆ..’ಅಲ್ಲ ಈಗಿನ ಕಾಲದಲ್ಲಿ ಇದೆಲ್ಲಾ ಯಾಕೆ ಅಂತ....’ ಇತ್ಯಾದಿ..ಇತ್ಯಾದಿ..

ಅದು ಬಿಡಿ ಅವತ್ತೊಂದು ದಿನ ವ್ಯಾಸರಾಯ ಬಲ್ಲಾಳರ ಯಾವುದೋ ಒಂದು ಕಥೆ ಓದುತ್ತಿದ್ದೆ. ಮನೆಗೆ ಬಂದವರೊಬ್ಬರು.."ಸುಮ್ನೆ ಯಾಕೆ ಹೀಗೆ ಕಾಲ ಹರಣ ಮಾಡ್ತೀರ....ವಾರಾಂತ್ಯದ ಬಿಡುವಿನವೇಳೆಯಲ್ಲಿ ಏನಾದರೂ ಕೆಲಸಮಾಡಿ ಇನ್ನೂ ಹಣ ಸಂಪಾದಿಸಬಹುದಲ್ಲ." ಅಂತ ಹೇಳಿದ್ದರು.

ಇವತ್ತ್ತು ಮನೆಯೊಳಗೇ ಕದ್ದು ಮುಚ್ಚಿ ಕನ್ನಡ ಸಾಹಿತ್ಯ ಓದುವ, ದೇವರನ್ನು ನೆನೆಯುವ ಪರಿಸ್ಥಿತಿ ಬಂತಲ್ಲ ಕೃಷ್ಣ....

Rating
No votes yet

Comments