ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)

ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)

(ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)

ನಮ್ಮ ಕ್ಲೈಂಟ್ (Client) ಮಹಾಶಯರ ಕೆಲಸದಲ್ಲಿ ಬಿಡುವು ಇದ್ದ ಕಾರಣ ಅವರ ಕಂಪನಿಯ ಎಲ್ಲಾ ಅಂಗ ಕಛೇರಿಗಳಿಗೆ ಒಂದು ವಾರ ರಜೆ ಘೋಷಿಸಿದ್ದರು. ಅದರ ಪರಿಣಾಮವಾಗಿ ನಮಗೂ ಒಂದು ವಾರ ರಜೆ ಪಡೆಯುವ ಸುವರ್ಣ ಅವಕಾಶ ಒದಗಿಬಂದಿತ್ತು. ನನ್ನ ಬಹಳಷ್ಟು ವೃತ್ತಿಮಿತ್ರರು ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಯೋಚಿಸಿ. ಅದರಂತೆ ನಮ್ಮ ಕಂಪನಿಯಲ್ಲಿ ಆಯೋಜಿಸಿದ್ದ ಹಲವಾರು ತರಬೇತಿ ಕಾರ್‍ಯಕ್ರಮಗಳಲ್ಲಿ ಭಾಗವಹಿಸಲು ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಆದರೆ ನಾನು ರಜೆ ಪಡೆದು ನಮ್ಮೂರಿಗೆ ಹೋಗಲು ನಿರ್ಧಾರಿಸಿದೆ.

ಅಂದುಕೊಂಡಂತೆ ನನ್ನೆಲ್ಲ ಕೆಲಸಕಾರ್ಯಗಳನ್ನು ಮುಗಿಸಿಕೊಂಡು ಭಾನುವಾರ ಮಧ್ಯಾಹ್ನ ಒಂದರ ವೇಳೆಗೆ ಬೆಂಗಳೂರನ್ನು ಬಿಟ್ಟು ನಮ್ಮೂರನ್ನು ತಲುಪಿದಾಗ ರಾತ್ರಿ 9.30 ಆಗಿತ್ತು. ಎಲ್ಲೂ ಕೈಕೊಡದೆ ಸರಿಯಾಗಿ ಬಸ್ಸು ಹೋಗಿದ್ದರೆ ಸಂಜೆ 7.30ಕ್ಕೆ ನಮ್ಮೂರಲ್ಲಿ ಇರಬೇಕಿತ್ತು. ಆದರೆ ನಮ್ಮೂರಿಂದ ಹದಿನೈದು ಕಿಲೋಮೀಟರ್ ದೂರವಿರುವ ಚೌಡಿಪಾಳ್ಯದ ಹತ್ತಿರ ಬಸ್ಸಿನ ಇಂಜಿನ್‌ನಲ್ಲಿ ಏನೋ ತಾಂತ್ರಿಕ ದೋಷ ಕಾಣಿಸಿಕೊಂಡು, ಅದನ್ನು ರಿಪೇರಿ ಮಾಡಲು ಎರಡು ಗಂಟೆ ಸಮಯ ತೆಗೆದುಕೊಂಡಿತ್ತು. ರಾತ್ರಿ 9.30ಕ್ಕೆ ನಮ್ಮೂರ ಬಸ್‌ಸ್ಟಾಪ್ಟ್‌ನಲ್ಲಿ ಇಳಿದಾಗ ಬರೀ ಕತ್ತಲು ಆವರಿಸಿಕೊಂಡಿತ್ತು. ಹೇಳಿಕೇಳಿ ನಮ್ಮೂರಲ್ಲಿ ಮೊದಲೇ ಕರಡಿಗಳ ಕಾಟ ಜಾಸ್ತಿ! ಹೇಗೆ? ಮನೆಗೆ ಹೋಗುವುದೆಂದು ಯೋಚಿಸುತ್ತಿರುವಾಗಲೇ. ಆಶ್ಚರ್ಯವೆಂಬಂತೆ ಅಮ್ಮ ಲಾಟೀನ್ ಹಿಡಿದು ನನ್ನ ಸ್ವಾಗತಿಸಲೆಂದು ರಸ್ತೆ ಬದಿಯಲ್ಲಿ ನಿಂತಿದ್ದಳು ಜೊತೆಯಲ್ಲಿ ವಿಶ್ವಣ್ಣ ಇದ್ದರು. ಅಂಜಿಕೆಯು ಮನಸ್ಸಿನಿಂದ ದೂರಾಗಿ ಸಮಾಧಾನದ ನಿಟ್ಟುಸಿರು ಬಿಟ್ಟೆ!

ಊರಿಗೆ ಬಾ, ಮಾಡುವುದಕ್ಕೆ ರಾಶಿರಾಶಿ ಕೆಲಸಗಳು ಇವೆ ಎಂದು ನಾನು ಬೆಂಗಳೂರಿನಲ್ಲಿ ಇರುವಾಗಲೇ ಅಮ್ಮ ಕರೆ ಮಾಡಿ ಹೇಳಿದ್ದಳು. ನಮ್ಮ ಮನೆಯ ಹತ್ತಿರ ಹೋದಾಗ ತಿಳಿಯಿತು ಅಮ್ಮ ಹೇಳಿದ್ದು ನೂರಕ್ಕೆ ನೂರಷ್ಟು ನಿಜವೆಂದು. ದುರಸ್ತಿ ಮಾಡಲೆಂದು ಕೆಲಸಗಾರರು ನಮ್ಮ ಮನೆಯ ಮೇಲ್ಛಾವಣಿಯನ್ನು ಅಲ್ಲಲಿ ಕಳಚಿದ್ದರು, ಒಳಗಡೆ ಮಣ್ಣಿನಗೋಡೆಯ ಚಕ್ಕಳಿಕೆ ತೆಗೆದಿದ್ದರು, ಎಲ್ಲೆಲ್ಲೂ ಧೂಳು ತುಂಬಿ ಕೊಂಡಿತ್ತು. ಅಜ್ಜಿ, ಅಮ್ಮ ಇದನ್ನೆಲ್ಲ ಹೇಗೆ ನಿಭಾಯಿಸುತ್ತಾರೆ ಎಂದು ಮನಸ್ಸಿನಲ್ಲಿ ಯೋಚಿಸಿದೆ. ನಾನು ಅಲ್ಲಿ ಇರುವ ಆರು ದಿನಗಳು ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡಬೇಕೆಂದು ಮನದಲ್ಲೇ ಅಂದುಕೊಂಡೆ. ಅಜ್ಜಿ ಹಾಗೂ ಅಮ್ಮನ ಯೋಗಕ್ಷೇಮ ವಿಚಾರಿಸಿ ನಂತರ ಕೈಕಾಲು ಮುಖ ತೊಳೆದು ಊಟಕ್ಕೆ ಕುಳಿತೆ. ಪ್ರಯಾಣ ಆಯಾಸವೆನ್ನಿಸಿದ್ದರಿಂದ ಊಟ ಮಾಡಿದ ಸ್ವಲ್ಪ ಸಮಯಕ್ಕೆ ಮಲಗಿದೆ.

ಬೆಳಿಗ್ಗೆ ಎದ್ದು ತೋಟಕ್ಕೆ ಹೋಗಿಬರುವುದರೊಳಗೆ ಕೆಲಸಗಾರರು ಆಗಲೇ ಹಾಜರಿದ್ದರು. ನೀನೂ ಸಹ ಅವರೊಂದಿಗೆ ಕೈ ಜೋಡಿಸೆಂದು ಅಮ್ಮ ಹೇಳಿದಳು. ಸರಿ ಅಮ್ಮನ ಆಜ್ಞೆಯನ್ನು ಪಾಲಿಸುವಂತೆ ಗುದ್ದಲಿಯನ್ನು ಕೈಗೆತ್ತಿ ಕೊಂಡೆ. ಅಮ್ಮ ಅಜ್ಜಿ ಕಷ್ಟ ಪಡುತ್ತಿದ್ದುದು, ಕೆಲಸಗಾರರು ಈ ಹಳೆಮನೆಯನ್ನು ಹೇಗೆ? ರಿಪೇರಿ ಮಾಡುವುದೆಂದು ತಲೆ ಕೆಡಿಸಿಕೊಳ್ಳುತ್ತಿದ್ದುದು, ಇವೆಲ್ಲವನ್ನು ನೋಡಿ “ಮನೆ ರಿಪೇರಿ ಮಾಡಿಸುವುದಕ್ಕಿಂತ ಹೊಸ ಮನೆ ಕಟ್ಟಿಸುವುದೇ ಲೇಸೆಂದು ನನಗನ್ನಿಸಿತ್ತು”.

ದಿನ ಮನೆಯಲ್ಲಿ ಮಾಡಲು ಸಾಕಷ್ಟು ಕೆಲಸವಿರುತಿತ್ತು. ಅದರ ನಡುವೆಯೂ ದಿನಕ್ಕೆ ಎರಡು ಬಾರಿ ತಪ್ಪದೆ ನಮ್ಮ ತೋಟಕ್ಕೆ ಹೋಗಿ ಬರುತ್ತಿದ್ದೆ, ಹಾಗೆ ಸಸಿಮರದಿಂದ ಮರೆಯದೆ ಎರಡು ಎಳನೀರನ್ನು ಕಿತ್ತು, ಕುಡಿದು ಬರುತ್ತಿದ್ದೆ. ಬಿಡುವಿದ್ದಾಗಲೆಲ್ಲ ಅದು ಇದು ಬರೆಯುತಾಲೇ ಇದ್ದೆ. ಭೈರಪ್ಪನವರ “ದಾಟು” ಕಾದಂಬರಿಯನ್ನು ಕೊನೆ ಪುಟದವರೆಗೂ ಓದಿದೆ, ಅಲ್ಲದೆ ತ.ರಾ.ಸು ಅವರ “ದುರ್ಗಾಸ್ತಮಾನ”ಕೃತಿಯ ಕೊನೆಯ ಹಂತವ ತಲುಪುವ ನಿಟ್ಟಿನಲ್ಲಿ ಕಾಲುಭಾಗ ಹಾದಿಯನ್ನು ಯಶಸ್ವಿಯಾಗಿ ತಲುಪಿದೆ.

ಆಗಾಗ ನಮ್ಮ ಮನೆಯ ಹಿತ್ತಲಿಗೆ ಹೋಗಿ, ಚಿಕ್ಕವನಿರುವಾಗ ನಾನು ನೆಟ್ಟ, ಅಮ್ಮ ನೀರು ಹಾಕಿ ಬೆಳಸಿದ ಪ್ಯಾರಲೆ, ಸೀತಾಫಲ, ಸಪೋಟ ಗಿಡಗಳು ಬಿಟ್ಟ ಹಣ್ಣುಕಾಯಿಗಳನ್ನು ನಿತ್ಯ ಸ್ವಾಹ ಮಾಡುತ್ತಿದ್ದೆ. ಈಗಲೂ ನನಗೆ ನೆನಪಿದೆ ನಾನು ನಾಲ್ಕನೇ ತರಗತಿಯಲ್ಲಿ ಓದುವಾಗ ನೆಟ್ಟ ಗಿಡಗಳವು ಅದೇ ರೀತಿ ನಮ್ಮ ತೋಟದಲ್ಲಿ ನಾನು ನೆಟ್ಟ ಬೀಟೆ ಯು ಸಹ ಬೆಳೆದು ಯುವಕನಾಗಿದ್ದನೆ. ನನಗೆ ಆ ದಿನಗಳಲ್ಲಿ ಇವರೆಲ್ಲ ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಾರೆ ಹಾಗೂ ಅವರು ಕೊಡುವ ಹಣ್ಣುಕಾಯಿಗಳನ್ನು ನಾನು ತಿನ್ನುತ್ತೇನೆ ಅನ್ನುವ ಕಲ್ಪನೆಯು ಸಹ ನನಗಿರಲಿಲ್ಲ! ಏಕೆಂದರೆ ಆ ಗಿಡಗಳು ಅಷ್ಟು ಎತ್ತರವಾಗುವರೆಗೂ ನಾನು ಬೆಳಸುತ್ತೆನೆ ಎನ್ನುವ ನಂಬಿಕೆ ನನ್ನಲ್ಲಿ ಇರಲಿಲ್ಲ. “ನಾನು ಬರೀ ಆ ಗಿಡಗಳನ್ನು ನೆಟ್ಟಿದ್ದು ಅಷ್ಟೇ, ಅವುಗಳ ಪಾಲನೆ, ಪೋಷಣೆ ಮಾಡಿ ಪ್ರೀತಿಯಿಂದ ಬೆಳಸಿದ್ದು ಅಮ್ಮ”.

ಬುಧವಾರ ಬೆಳಗ್ಗೆ ಮಾಮನ ಸಂಗಡ ಸಿಂಗಟಗೆರೆಗೆ ಹೋಗಿ ಮನೆ ದುರಸ್ತಿಗೆ ಬೇಕಾಗುವ ಸಿಮೆಂಟ್, ಇನ್ನಿತರ ಸಮಾನುಗಳನ್ನು ಲಗೇಜ್ ಆಟೋದಲ್ಲಿ ಹಾಕಿ..ಮನೆಯಲ್ಲಿ ಇಳಿಸಿಕೊಳ್ಳುವುದರ ಹೊತ್ತಿಗೆ ಸಾಕು ಸಾಕು ಎನ್ನಿಸಿತ್ತು.

ಗುರುವಾರ ಬೆಳಗ್ಗೆ ಬೇಗನೆ ಎದ್ದು ತೋಟಕ್ಕೆ ಹೋಗಿ ಬಾಡಿಗೆ ಟ್ರಾಕ್ಟರ್‌ನಲ್ಲಿ ನಮ್ಮ ತೋಟಕ್ಕೆ ಹುಕ್ಕೆ(ಬೇಸಾಯ) ಒಡೆಸಿದೆ. ಅಂದು ಮಧ್ಯಾಹ್ನದ ವೇಳೆಗೆ ಮುಂಗಾರು ಮಳೆ ತನ್ನ ರೌದ್ರ ನರ್ತನ ತೋರಲು ಶುರು ಮಾಡಿತು. “ಬೆಳಗ್ಗೆ ಹುಕ್ಕೆ (ಬೇಸಾಯ) ಒಡೆಸಿದ್ದು..ಮಧ್ಯಾಹ್ನ ಮಳೆ ಬಂದಿದ್ದು ನಮ್ಮ ತೋಟವನ್ನು ಹಿರಿಹಿರಿ ಹಿಗ್ಗುವಂತೆ ಮಾಡಿತ್ತು, ಹಾಗೆ ನನ್ನ ಮನಸ್ಸನ್ನೂ ಸಹ”. ಸಂಜೆಯವರೆಗೂ ಮಳೆ ಬರುತ್ತಲೇ ಇತ್ತು. ಹೊರಗಡೆ ಇರುವ ತಂಪಿನ ವಾತಾವರಣದಿಂದ ದೇಹವನ್ನು ಬೆಚ್ಚಗಿಡಲೆಂದು ಒಳಗಡೆ ಅಮ್ಮ ಬಿಸಿಬಿಸಿ ಬೋಂಡ, ಬಜ್ಜಿ ಮಾಡುವ ತಯಾರಿ ನೆಡೆಸಿದ್ದಳು. ಅರ್ಧತಾಸಿನಲ್ಲಿ ಬಿಸಿಬಿಸಿ ಬೋಂಡ, ಬಜ್ಜಿ ರೇಡಿಯಾಗಿದ್ದವು. ಅಜ್ಜಿ ಅಮ್ಮ ಎಣ್ಣೆ ಪದಾರ್ಥ ತಿನ್ನೋದು ಅಷ್ಟಕ್ಕಷ್ಟೇ. ಅದರಿಂದ ಬೋಂಡ, ಬಜ್ಜಿಯಲ್ಲಿ ಸಿಂಹಪಾಲು ನನ್ನದಾಗಿತ್ತು.
ಕನ್ನಡ ಚಲಚಿತ್ರರಂಗವು ಮಾರ್ಚ್ ೧ ರಂದು ತನ್ನ ಅಮೃತ ಮಹೋತ್ಸವವನ್ನು ಬಹಳ ಸಂಭ್ರಮ, ಸಡಗರ ಹಾಗು ಬಹಳ ಅದ್ದೂರಿಯಾಗಿ ಆಚರಣೆ ಮಾಡಲು ಸನ್ನದ್ದವಾಗುತ್ತಿದೆ.
ಸತಿ ಸುಲೋಚನದಿಂದ ಪ್ರಾರಂಭವಾದ
ಕನ್ನಡ ಚಲಚಿತ್ರರಂಗದ ಓಟ..
ಆಗಿದೆ ಏಳುತಾ..ಬಿಳುತಾ ಸಾಗುವ ಆಟ..
ತೆರೆಯ ಮೇಲಿನ ಬಣ್ಣದ ಪಾಠ
ಕನ್ನಡ ಪ್ರೇಕ್ಷಕ ವೃಂದಕ್ಕೆ ತೋರಿಸಿತು ಹೊಸ ಹೊಸ ನೋಟ
ಕೆಲವೊಮ್ಮೆ ಕಂಡು Remakeಗಳ ಕಾಟ
ಪ್ರೇಕ್ಷಕ ಕೂಟ ಓಡಿತ್ತು ಓಟ ನೋಡದೆ ಆ Copy ಯ ಆಟ
ಶುಕ್ರವಾರ ತೆಂಗಿನ ಕಾಯಿ ಕೀಳುವ ಮೂರ್ತೆಣ್ಣ ನಮ್ಮ ತೋಟದಲ್ಲಿ ಕಾಯಿ ಕಿತ್ತು ಕೊಡಲು ಬಂದಿದ್ದ. ನಾವುಗಳು ಹೂ ಗಿಡದಿಂದ ಹೂ ಬಿಡಿಸುವಂತೆ ಅವನು ಗಳದ (ಬಿದಿರು ಕೋಲು) ಸಹಾಯದಿಂದ ಪರಪರನೆ ತೆಂಗಿನ ಕಾಯಿಯನ್ನು ಕೀಳುತ್ತಿದ್ದ. ನೋಡುವುದಕ್ಕೆ ಅವ ಗಾಳಿ ಬಂದರೆ ಹಾರಿ ಹೋಗುವ ಥರಾ ಇದ್ದರೂ ಗಳವನ್ನು ಬ್ಯಾಲೆನ್ಸ್ ಮಾಡುವುದನ್ನು, ಒಂದೇ ಸಮನೆ ಕಾಯಿ ಕೀಳುವುದನ್ನು ಕಂಡು ನಾನು ಮೂಕವಿಸ್ಮಿತನಾಗಿ ನಿಂತೆ. ನಿಜಕ್ಕು ಬಹಳ ಕಷ್ಟದ ಕೆಲಸವದು. ನಮ್ಮೂರಿನ ಎಲ್ಲರ ತೋಟದಲ್ಲೂ ಅವನೇ ಕಾಯಿ ಕೀಳುವುದು. ಅವನು ಇಪ್ಪತ್ತು ನಿಮಿಷದಲ್ಲಿ ಕಿತ್ತ ಕಾಯಿಗಳನ್ನು ಹೊತ್ತು ಮನೆಗೆ ಹಾಕುವುದರ ಹೊತ್ತಿಗೆ ಮಧ್ಯಾಹ್ನವಾಗಿತ್ತು.

ಶನಿವಾರ ಬಡಗಿಯವರ ಜೊತೆ ಹೊಸದುರ್ಗಕ್ಕೆ ಹೋಗಿ ನಮ್ಮ ಮನೆ ದುರಸ್ತಿಗೆ ಬೇಕಾದ ಉತ್ತಮ ಮರಮುಟ್ಟನ್ನು ಖರೀದಿಸಿ ಅವರನ್ನು ಊರಿನತ್ತ ಕಳುಹಿಸಿ ರಾತ್ರಿ 11ಕ್ಕೆ ಅಲ್ಲಿಂದ ಹೊರಟು ಬೆಳಗಿನ ಜಾವ 5ರ ವೇಳಗೆ ಬೆಂಗಳೂರನ್ನು ತಲುಪಿದೆ. ಬೆಂಗಳೂರಿಗೆ ಬಂದು ಎರಡು ದಿನಗಳು ಕಳೆದರೂ ಊರಿನಲ್ಲಿ ಇದ್ದ ಆ ಆರು ದಿನಗಳ ನೆನಪು ಇನ್ನು ಹಸಿಹಸಿಯಾಗಿ ಕಾಡುತ್ತಿತ್ತು. ಏಕೆಂದರೆ, ಊರಲ್ಲಿದ್ದ ಆರು ದಿನಗಳು ಬಿಡುವಿಲ್ಲದೆ ಕೆಲಸ ಮಾಡಿ ದಣಿದರೂ ಈ ಮಾಯನಗರಿಯಲ್ಲಿ ಸಿಗದ ನೆಮ್ಮದಿ, ಸಂತಸ, ಮನೋಲ್ಲಾಸ ಎಲ್ಲವೂ ನನ್ನದಾಗಿತ್ತು, ಒಂದು ಹೊಸರೂಪದ ಕಳೆ ನನ್ನಾವರಿಸಿತ್ತು. ಆದರೆ ಈ ಮಾಯಾನಗರಿಗೆ ಬರುವ ಹಾದಿಯಲೆಲ್ಲೋ ಆ ಹೊಸರೂಪದ ಕಳೆ ನನ್ನಿಂದ ಕಳೆದುಹೋಗಿತ್ತು.
ಗೆಳೆಯರೇ ನಿಜ ಹೇಳ ಬೇಕೆಂದರೆ,
ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು| -ನಿಮ್ಮ ಸುನಿಲ್ ಮಲ್ಲೇನಹಳ್ಳಿ, http://mallenahallipages.blogspot.com/

Rating
No votes yet

Comments