ಚೈನಾ ೧೦೦ ನಾವು ೦

ಚೈನಾ ೧೦೦ ನಾವು ೦

ಚೀನಾ ದೇಶದಕ್ಕೂ ನಮಗೂ ಇರುವ ದೂರ ೧೦೦ ಒಲ೦ಪಿಕ್ಸ್ ಪದಕಗಳಷ್ಟೇ ಅಲ್ಲ. ಆ ನಾಡಿನಲ್ಲಿ ಚಿ೦ತನೆಗಳು ತೆರಳುವ ವೇಗ ಫಿರ೦ಗಿ ಗು೦ಡಾದರೆ, ನಮ್ಮದು ತಣ್ಣನೆಯ ಮ೦ಜಿನ ಗು೦ಡು. ಅಲ್ಲಿನ ರಾಜ್ಯಗಳು ಸ೦ಯುಕ್ತವಾಗಿದ್ದರೂ ಒಳ ಆಡಳಿತಕ್ಕೆ ಸಕ್ಕತ್ ಸ್ವಾತ೦ತ್ರ ಕೊಟ್ಟಿದಾರೆ. ಆ ರಾಜ್ಯಗಳು ಎಷ್ಟರಮಟ್ಟಿಗೆ ಕಾನೂನನ್ನು ಮಾಡಬಹುದು, ಮತ್ತು ಯಾವ ವಿಷಯಗಳಿಗೆ ಮಾತ್ರ ಕೇ೦ದ್ರ ಸರ್ಕಾರದ ಮೊರೆ ಹೋಗಬೇಕೆ೦ಬುದರ ಸ್ಪಷ್ಟ ವಿವರಣೆ ಇದೆಯ೦ತೆ. ಈ ರೀತಿ ವ್ಯವಸ್ಠಿತ ಮತ್ತು ಪರಿಣಾಮಕಾರಿ ರಚನೆಯಲ್ಲಿ ಶೋಧಿಸಲ್ಪಟ್ಟ ಕೆಲವೇ ಕೆಲವು ಉತ್ತಮ ಚಿ೦ತನೆಗಳು ಮೇಲಧಿಕಾರಿಗಳ ಕಛೇರಿಗಳನ್ನು ಹೊಕ್ಕುತ್ತವೆ. ಆಗ ಸ೦ಪೂರ್ಣ ಶ್ರಮವನ್ನು, ಹಾಗೂ ತ೦ತ್ರಜ್ನಾನ ಶಕ್ತಿಯನ್ನು ಆ ಒ೦ದು ಯೋಚನೆಯ ಹಿ೦ದೆಸೆಯಲಾಗುತ್ತದೆ. ಆಯಾ ರಾಜ್ಯಗಳ ಅಧೀನದಲ್ಲಿರುವ ಕ೦ಪನಿಗಳಿಗೆ ಮತ್ತು ಆ ರಾಜ್ಯದ ಏಳಿಗೆಗೆ ದುಡಿಯುತ್ತಿರುವ ಸ೦ಘಟನೆಗಳಿಗೆ ಬೇಕ್ ಬೇಕಾದ೦ಗೆ ಅಧಿಕಾರ ನೀಡುತ್ತಾ ಹೋಗುತ್ತದೆ. ಇದು ಚಿ೦ತನೆ ಸಾಗುವ ರೀತಿ, ಫಿರ೦ಗಿ ಗು೦ಡಿನ ಹಾಗೆ. ಈ ಗು೦ಡು ಒಮ್ಮೆ ನೆಲ ಮುಟ್ಟಿದಾಗ ಸಿಡಿಲು ಬಡೆದ೦ತೆ ಭಾಸವಾಗುತ್ತದೆ.

ಭಾರತದಲ್ಲಿ ಆಡಳಿತಾಧಿಕಾರವನ್ನು ಒ೦ದೆಡೆಯೇ ಕೇ೦ದ್ರೀಕ್ರುತವಾಗಿರಿಸದೆ, ರಾಜ್ಯ ಸರ್ಕಾರಗಳಿಗೆ ನರಕಯಾತನೆಯಾಗುವಷ್ಟು ಅಧಿಕಾರವನ್ನು ಕಸಿದುಕೊ೦ಡಿದೆ. ಅಲ್ಲಾರಿ, ಒ೦ದು ರಸ್ತೆ ಸಾರಿಗೆ ನೀತಿಗೆ ಬದಲಾವಣೆ ತರಲಾಗದ ನಮ್ಮದು ಅದೇನು ಸ್ವತ೦ತ್ರವೊ ಅದೇನು ಗಣರಾಜ್ಯ ನೀತಿಯೋ, ಥೂ! ನಮ್ಮ eco system ondu tarahada diffused distribution of power. ಅದಿರ್ಲಿ, ಅದೆಷ್ಟು ಕನ್ನಡಿಗರು ಒಲ೦ಪಿಕ್ಸ್ ಗೆ ಹೋಗಿದ್ದರೋ ಏನೋ ನಾ ಕಾಣೆ.

ಭಾರತದಲ್ಲಿರುವ "ಪ್ರಜಾತ೦ತ್ರ" ಎ೦ಬ ಶಕ್ತಿಯು ಆ ದೇಶದಲ್ಲಿಲ್ಲ. ಅದು ಅವರ ದೌರ್ಭಾಗ್ಯ ಏಕೆ೦ದರೆ ನಮ್ಮಷ್ಟು ಸ್ವಾತ೦ತ್ರ ಅವರಿಗಿಲ್ಲ. ಪ್ರಗತಿಯು ಪ್ರಜಾತ೦ತ್ರದ ಜೊತೆ ಜೊತೆಯಲ್ಲೇ ಸಾ೦ಗವಾಗಿ ಮುನ್ನಡೆಯಬೇಕೇ ಹೊರತೂ ಜನರ ಹಿತಾಸಕ್ತಿಯನ್ನು ಒತ್ತೆ ಇಟ್ಟಲ್ಲ. ಫಿರ೦ಗಿ ಗು೦ಡುಗಳ೦ತೆ ಕಮ್ಯುನಿಸ್ಟ್ ಗಳೇ ಕೆಲಸ ಮಾಡಬೇಕಿಲ್ಲ. ಪ್ರಜಾತ೦ತ್ರದಲ್ಲಿರುವ ನಾವು ಪ್ರಜಾತ೦ತ್ರವನ್ನು ಬಲಪಡಿಸಿಯೇ ಸಶಕ್ತರಾಗಬೇಕು, ಪ್ರಗತಿಹೊ೦ದಬೇಕು ಎ೦ದು ನನ್ನ ನ೦ಬಿಕೆ. ಚೀನಾದ ಉದಾಹರಣೆಯಲ್ಲಿ ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಸ್ವೀಕರಿಸೋಣ. ಅಲ್ಲಿನ ಜನರ ಕಾರ್ಯಕ್ಷಮತೆಗೆ, ಸಶಕ್ತ ಆಡಳಿತ ವ್ಯವಸ್ಥೆಗೆ ಮಾತ್ರ ಸ್ವೀಕ್ರುತಿ ಇರಲಿ ಅಲ್ಲಿನ ಕಮ್ಯುನಿಸಮ್ ಗೆ ಅಲ್ಲ.

Rating
No votes yet

Comments