ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಒಂದಿಷ್ಟು ನೀಲುಗಳು
"ಮುಂದಿನ ಜನ್ಮ ಅಂತ ಒಂದಿದ್ದರೆ
ಗಂಡಿನ ಚಪಲ ಇರುವ ಹೆಣ್ಣಾಗಿ ಹುಟ್ಟಿಸಯ್ಯಾ"
ಅಂತ ಗಂಡ ಬರೆದ ಪದ್ಯ ಸಿಕ್ಕು
ಮದುವೆ ರ್ರೇಷ್ಮಸೀರೆಗಳ ನಡುವೆ ಅಡಿಗಿಸಿಟ್ಟ
ನೂರಾರು ಗ್ರೀಟಿಂಗ್ ಕಾರ್ಡುಗಳನ್ನು ನೆನೆಸಿಕೊಂಡು
ಮುಸಿ ಮುಸಿ ನಕ್ಕಳು
-----------------------------------------------------------
ಪಾಂಡಿತ್ಯದ ಭಾರದಿಂದ ಹತ್ತು ಓದಿಗೂ ದಕ್ಕದ ಕವಿತೆ
- Read more about ಒಂದಿಷ್ಟು ನೀಲುಗಳು
- Log in or register to post comments
'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ.
- Read more about 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
- 7 comments
- Log in or register to post comments
ಶ್ವಾನ ಮಹಾಸಭೆಗೆ ಕರೆಯೋಲೆ
ನಮ್ಮದು ಬನಶಂಕರಿ ಮೂರನೆ ಹಂತದ ಶ್ವಾನ ಕ್ಷೇಮಾಭಿವೃದ್ಧಿ ಸಂಘ. ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅದನ್ನು ವಿವರವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಭೆಯನ್ನು ಕರೆದಿದ್ದೇವೆ.
ಸಮಯ: ಮಧ್ಯರಾತ್ರಿ, ಎಂದರೆ ಸುಮಾರು ಹನ್ನೆರಡು ಗಂಟೆ
- Read more about ಶ್ವಾನ ಮಹಾಸಭೆಗೆ ಕರೆಯೋಲೆ
- 6 comments
- Log in or register to post comments
ಪುರೋಹಿತ ಪುಡಾರಿಗಳು ಮತ್ತು ದೇವರು
(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ ಅವಹೇಳನ ಮಾಡುವ ಅಥವಾ ಯಾವುದೋ ಒಂದು ವರ್ಗದ ದ್ವೇಷಿಯಾಗಿ ಏಕಮುಖಿ ಚಿಂತನೆಯೊಂದಿಗೆ ಬರೆಯುತ್ತಿರುವ ಬರಹವಲ್ಲ. ಪ್ರಸ್ತುತದ ಒಂದು ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದರ ಎಡ ಬಲಗಳ ಸುತ್ತ ಅವಲೋಕಿಸಲು ಹೊರಟ್ಟಿದ್ದೇನೆ . ಇಲ್ಲಿ ಪರ ವಿರೋದಗಳ ದ್ವಂದ ಮಿಶ್ರಣದ ಎರಡು ಮಜಲುಗಳ ಅವಲೋಕನ ಇದೆ. ಆ ನಿಲುವು ನನ್ನೊಳಗಿನ ಗೊಂದಲ ಅಂತಾನೂ ನೀವು ಭಾವಿಸಬಹುದು. ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ. ಇಲ್ಲಿನ ಬರಹಕ್ಕಿಂತ ಭಿನ್ನವಾದೊಂದು ಆಲೋಚನೆ ನಿಮ್ಮಿಂದ ಹರಿದು ಬಂದರೆ ಖಂಡಿತಾ ಅದನ್ನು ನಾನು ಸ್ವೀಕರಿಸುತ್ತೇನೆ.)
ಅದ್ಯಾಕೋ ಬೆಂಗಳೂರೆಂಬ ಈ ಹಾಳು ಕಾಂಕ್ರೀಟು ಜಂಗಲ್ಲು ಸೇರಿದ ಮೇಲೆ ನನಗಂತೂ ದೇವರಿಗೆ ಕೈ ಮುಗಿಯಬೇಕು, ದೇವಸ್ಥಾನಕ್ಕೆ ಎಂಟ್ರಿಕೊಡಬೇಕು ಅಂತಾನೆ ಅನ್ನಿಸ್ತಾ ಇಲ್ಲ. ಮನೆಯಲ್ಲಿದ್ದರೆ ಕನಿಷ್ಟಪಕ್ಷ ಬೆಳಿಗ್ಗೆ ಎದ್ದವನಾದರೂ ದೇವರಿಗೆ ಕೈಮುಗಿಯುತ್ತಿದ್ದೆ. ಆದರೆ ಬೆಂಗಳೂರೆಂಬ ಮಹಾನಗರಿಯ ಒಂದಿಷ್ಟು ಪುಡಾರಿ ಪುರೋಹಿತರನ್ನು ಕಂಡ ಮೇಲೆ ಆ ಸಂಪ್ರದಾಯವೂ ನನ್ನಿಂದ ದೂರವಾಗಿದೆ. ನಿನ್ನಿಂದ ದೂರವಾಗಿರುವ ಸಂಪ್ರದಾಯವೊಂದಕ್ಕೆ ಬಡಪಾಯಿ ಪುರೋಹಿತನ್ನ ಯಾಕೆ ಬಲಿಪಶು ಮಾಡ್ತಿಯಾ ಅಂತಾ ಗೆಳೆಯನೊಬ್ಬ ಕೇಳಿದ್ದ. ಅಲ್ಲೋ ಆ ದೇವರಿಗೆ ತನ್ನ ಬಳಿಯಿರುವ ಅರ್ಚಕನೇ ದೇವರ ಹೆಸರುಹೇಳಿಕೊಂಡು ಲಫಡಾ ಮಾಡಲು ಹೊರಟಿರುವುದು ಕಣ್ಣೆದುರಿಗೆ ಕಾಣುತ್ತಿದ್ದರು ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಅಂತಾದರೆ ಅವನೆಂತಹ ದೇವರೋ! ಅಂತಾ ತಿರುಗಿ ಉತ್ತರ ನೀಡಿದ್ದೆ!
ಹೌದು ಇವತ್ತು ದೇವಸ್ಥಾನವೆಂಬುದು ಹಣಗಳಿಕೆಯ ಕೇಂದ್ರವಾಗಿದೆ! ಬೆಂಗಳುರಿನಲ್ಲಿ ಕೆಲ ಪುರೋಹಿತ ಪುಡಾರಿಗಳು ದೇವರ ಹೆಸರು ಹೇಳಿಕೊಂಡು, ಇಲ್ಲಸಲ್ಲದ ವಿಚಿತ್ರ ಕಥೆಗಳನ್ನೆಲ್ಲಾ ಹೇಳಿಕೊಂಡು ಅದ್ಯಾವ ಪರಿ ಹಣ ಮಾಡ್ತಾ ಇದ್ದಾರೆ ಅಂದ್ರೆ? ಅದನ್ನು ನೆನಸಿಕೊಂಡ್ರೇನೆ ಭಯವಾಗತ್ತೆ. ಇವತ್ತು ಪೂಜೆಗಳಿಗೂ ಕಾಂಟ್ರಾಕ್ಟ್ ಪದ್ದತಿ ತಂದಿದ್ದಾರೆ! ಅಂದರೆ ಯಾವುದೋ ಒಂದು ಕಾರ್ಯಕ್ರಮವನ್ನು ಇಡಿ ಇಡಿಯಾಗಿ ಕಂಟ್ರಾಕ್ಟ್ ತೆಗೆದುಕೋಳ್ಳೋದು! ಬಿಲ್ಡ್‍ರ್ಸ ಎಲ್ಲಾ ಬಿಲ್ಡಿಂಗ್ ಕಾಂಟ್ರಾಕ್ಟ್ ಹಿಡಿತಾರಲ್ಲ ಅಂತಹದ್ದೇ ಅದು! ಇನ್ನೂ ಅವರು ಬರೆದುಕೊಡುವ ಪೂಜಾ ಸಾಮಾಗ್ರಿಗಳ ಪಟ್ಟಿಯೋ! ಪುಜಾರಿ ಮನೆಯಲ್ಲಿ ಖಾಲಿಯಾದ ಬೇಳೆಕಾಳುಗಳೆಲ್ಲಾ ಆ ಪಟ್ಟಿಯಲ್ಲಿ ಇರತ್ತೆ ಅಂದ್ರೆ ತಪ್ಪಾಗಲಾರದೇನೋ! ದೇವರು ಇದ್ದಾನೋ, ಇಲ್ಲವೋ ಅನ್ನೋದು ಸೆಕೆಂಡರಿ ವಿಚಾರ. ಆದ್ರೆ ಆತನ್ನನ್ನು ನಂಬಿಕೊಂಡು ಆತನ ಆರಾಧನೆಗೆ ನಾವು ಅಳವಡಿಸಿಕೊಂಡ ಪೂಜಾವಿಧಾನಗಳಿದೆಯಲ್ಲಾ ಅವುಗಳ ಹಿಂದಿರುವ ಕಲ್ಪನೆ ನಿಜಕ್ಕೂ ಅದ್ಬುತ. ನಾನು ಒಂದ್ಸಾರಿ ಹೀಗೆ ಮೂರ್ತಿರಾಯರ “ದೇವರು” ಅನ್ನೋ ಪುಸ್ತಕ ಓದಿಕೊಂಡು ನಂತರ ಹಿರಿಯ ಸಂಸ್ಕೃತ ವಿದ್ವಾಂಸ ಹತ್ತಿರ ಸಾರ್ ನಂಗೆ ಆ ಪುಸ್ತಕದ ಕುರಿತಾಗಿ ನನ್ನಲೇ ಒಂದಿಷ್ಟು ಅನುಮಾನಗಳಿವೆ ಅಂತಾ ಕೇಳಿದೆ. ಅದ್ಕೆ ಅವರು ಕೊಟ್ಟಿದ್ದು ಒಂದೇ ಸಾಲಿನ ಉತ್ತರ. “ನೀನು ದೇವರ ಕುರಿತಾಗಿ ಎಷ್ಟು ಪುಸ್ತಕ ಓದಿದ್ದೀಯಪ್ಪಾ” ಅಂತಾ. ಅಷ್ಟೊತ್ತಿಗೆ ನಂಗೆ ನನ್ನ ಬಾಲಿಶತನದ ಅರಿವಾಗಿತ್ತು.
- Read more about ಪುರೋಹಿತ ಪುಡಾರಿಗಳು ಮತ್ತು ದೇವರು
- 15 comments
- Log in or register to post comments
ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ
ಇತ್ತೀಚಿಗೆ ನಾನು ನನ್ನ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಗೆ ಬದಲಾಗಿ ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಗೆ ಬದಲಾಯಿಸಿಕೊಳ್ಳಲು ಯೋಚಿಸುತ್ತಿದ್ದೇನೆ.
ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಸ್ಪೀಡ್ ಹೇಗೆ ಉಪಯೋಗಿಸಿ ತಿಳಿದವರು ಹೇಳಿ ಉಪಕರಿಸಿ
ತಾಂತ್ರಿಕ ವಿವರಗಳು
http://www.airtel.in/level2_t7.aspx?path=1/106
ರೂಪ
ಕೆರೆ
- Read more about ಕೆರೆ
- 1 comment
- Log in or register to post comments
ಜಲ ಜಲ ಜಲಜಾಕ್ಷಿ !
ಈಗಿನ ಕೆಲ ಹಾಡುಗಳ ಸಾಹಿತ್ಯ ಹೀಗಿವೆ ನೋಡಿ..
’ಚಿಂದಿ ಮಾಡೆ ಚಂದ್ರಿಕಾ’
’ಕೊಡೆ ಕೊಡೆ ಕೊಡೆ ಕೊಬ್ರಿ ಮಿಠಾಯಿ’..
’ಜಲ ಜಲ ಜಲ ಜಲಜಾಕ್ಷಿ, ಮಿನ ಮಿನ ಮಿನ ಮೀನಾಕ್ಷಿ’..
ಆಹಾ ಎಂಥ ಅದ್ಬುತ ಸಾಹಿತ್ಯ ! :-)
ಕುವೆಂಪು ಬದ್ಕಿರ್ಬೇಕಾಗಿತ್ತು ಇದನ್ನೆಲ್ಲಾ ನೋಡ್ಲಿಕ್ಕೆ !
- Read more about ಜಲ ಜಲ ಜಲಜಾಕ್ಷಿ !
- 7 comments
- Log in or register to post comments
ಫೆಡೋರಾ-೯ ಕನ್ನಡದಲ್ಲಿ...
ಕನ್ನಡದಲ್ಲಿ ಫೆಡೋರಾ -೯
ಫೆಡೋರಾ-೯ ಸಂಪೂರ್ಣ ಕನ್ನಡಕ್ಕೆ ಅನುವಾದಿತಗೊಂಡಿದೆ!
(http://translate.fedoraproject.org/languages/kn/fedora-9)
ಆದರೆ, gnome ಕೇವಲ ೫೦% ಆಗಿರೋದರಿಂದ, ಫೆಡೋರಾ-೯ ರ ಡೆಸ್ಕ್‍ಟಾಪ್ ಸಂಪೂರ್ಣ ಕನ್ನಡದಲ್ಲಿ ಇರೋದಿಲ್ಲ ಎನ್ನುವುದು ಖೇದದ ವಿಷಯ!
(http://l10n.gnome.org/languages/...kn/gnome-2-22)
- Read more about ಫೆಡೋರಾ-೯ ಕನ್ನಡದಲ್ಲಿ...
- Log in or register to post comments
ಜಿಂಬಾಬ್ವೆ ಯುಗಾದಿ
ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.
- Read more about ಜಿಂಬಾಬ್ವೆ ಯುಗಾದಿ
- 1 comment
- Log in or register to post comments