ಸಮುದಾಯ ರೇಡಿಯೋ

ಸಮುದಾಯ ರೇಡಿಯೋ

ಸಮುದಾಯ ರೇಡಿಯೋ ನಮ್ಮ ಭಾರತ ದೇಶದಲ್ಲಿ ಹೊಸದು ಆದರೆ ನೇಪಾಳ್, ಶ್ರೀಲಂಕಾ, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ , ಇಂಗ್ಲೆಂಡ್, ಆಪ್ರಿಕಾ, ಯುರೋಪ್ ಮುಂತಾದ ದೇಶಗಳಲ್ಲಿ ಪ್ರಚಲಿಥದಲ್ಲಿ ಇದ್ದು ತುಂಬಾ ಪ್ರಸಿದ್ದಿಯನ್ನು ಪಡೆದಿವೆ. ನಮ್ಮ ಭಾರತದಲ್ಲಿ ಸುಮಾರು ಸ್ವಯಂಸೇವಾ ಸಂಸ್ಥೆಗಳು ಸಮುದಾಯ ರೇಡಿಯೋ ಕೇಂದ್ರಗಳನ್ನು 5-6 ವರ್ಷಗಳ ಹಿಂದೆಯೇ ಪ್ರಾರಂಭ ಮಾಡಿದ್ದು ತರಂಗಗಳಲ್ಲಿ ಪ್ರಸಾರ ಮಾಡಲು ಸರ್ಕಾರ ಅನುಮತಿ ನೀಡಿರಲಿಲ್ಲ. ಅದಕ್ಕಾಗಿ ಯಾರೂನು ಸಹ ಸಮುದಾಯ ರೇಡಿಯೋ ಕೇಂದ್ರಗಳನ್ನು ಪ್ರಾರಂಭ ಮಾಡಲು ಮುಂದೆ ಬರಲಿಲ್ಲ. ಮೊದಲು ಪ್ರಾರಂಭ ಮಾಡಿದವರು ವಿವಿದ ಮಾದರಿಗಳಲ್ಲಿ ಕಾರ್ಯಕ್ರಮವನ್ನು ಜನರಿಗೆ ಕೇಳಿಸುತ್ತಿದ್ದರು. ವಿಧಾನಗಳು ಯಾವುವೆಂದರೆ ನ್ಯಾರೋಕಾಸ್ಟಿಂಗ್, ಕೇಬಲ್ ಕಾಸ್ಟಿಂಗ್, ಲೌಡ್ ಸ್ವಿಕರ್ ವಿಧಾನ ಇತ್ಯಾದಿ.
"ನ್ಯಾರೋಕಾಸ್ಟಿಂಗ್" ವಿಧಾನ ಎಂದರೆ ತಾವು ತಯಾರಿಸಿದ ಕಾರ್ಯಕ್ರಮವನ್ನು ಟೇಪ್ ರೆಕಾರ್ಡರ್ ಮುಖಾಂತರ ಜನ ಸೇರುವ ಕಂಡೆ, ಸಂಘಗಳಲ್ಲಿ ಹೋಗಿ ಜನರಿಗೆ ಕೇಳಿಸುವುದು.
"ಕೇಬಲ್ ಕಾಸ್ಟಿಂಗ್ " ವಿಧಾನ ಎಂದರೆ ತಾವು ತಯಾರಿಸಿದ ಕಾರ್ಯಕ್ರಮವನ್ನು ಸ್ಥಳೀಯ ಕೇಬಲ್ ಅಪ್ ರೇಟರ್ ಸಹಾಯದಿಂದ ಟಿ.ವಿ ಗಳಲ್ಲಿ ಮತ್ತು ರೇಡಿಯೋಗಳಲ್ಲಿ ಜನರಿಗೆ ಕೇಳಿಸುವಂತೆ ಮಾಡುತ್ತಿದ್ದರು. ಈ ವಿಧಾನ ಬುದಿಕೋಟೆಯ ನಮ್ಮಧ್ವನಿ ಕೇಂದ್ರದಲ್ಲಿ ತುಂಬಾ ಪ್ರಸಿದ್ದಿಯಾಗಿತ್ತು.
"ಲೌಡ್ ಸ್ವಿಕರ್ "ವಿಧಾನ ಎಂದರೆ ಇದು ತುಂಬಾ ಡಿಪರೆಂಟ್ ವಿಧಾನ ಇಲ್ಲಿ ಟೇಪ್ ರೆಕಾರ್ಡರ್ ಮುಖಾಂತರ ಕೇಳಿಸುತ್ತಿರಲಿಲ್ಲ, ಟಿ.ವಿ ಗಳಲ್ಲಿ ಮತ್ತು ರೇಡಿಯೋಗಳಲ್ಲಿ ಜನರಿಗೆ ಕೇಳಿಸುವಂತೆ ಮಾಡುತ್ತಿದ್ದರು. ಗ್ರಾಮಗಳಲ್ಲಿ ಲೌಡ್ ಸ್ವಿಕರ್ ನ್ನು ಕಟ್ಟಿ ಅಲ್ಲಿಂದ ಕೇಳಿಸುತ್ತಿದ್ದರು ಅಥವಾ ಸಾಮಾನ್ಯವಾಗಿ ಗ್ರಾಮಗಳಲ್ಲಿ ಪಂಚಾಯ್ತಿ ಹಾಗೂ ದೇವಸ್ಥಾನದ ಬಳಿ ಹಾಡುಗಳಲ್ಲೂ ಹಾಕಲು ಮತ್ತು ಇತರೆ ಸಮಾರಂಭಗಳಲ್ಲಿ ಲೌಡ್ ಸ್ವಿಕರ್ ಹಾಕುತ್ತಿದ್ದರು ಅಂತ ಜಾಗಗಳಲ್ಲಿ ತಾವು ತಯಾರಿಸಿದ ಕಾರ್ಯಕ್ರಮವನ್ನು ಜನರಿಗೆ ಕೇಳಿಸುತ್ತಿದ್ದರು. ಈ ಎಲ್ಲಾ ವಿಧಾನದಲ್ಲೂ ಸಹ ಕೇಳಿದ ನಂತರ ಅನಿಸಿಕೆಗಳನ್ನು ಪಡೆಯುತ್ತಿದ್ದರು.
ಇತ್ತೀಚಿಗೆ ತಾನೇ ನಮ್ಮ ಭಾರತ ಸರ್ಕಾರ ನಮ್ಮ ದೇಶದಲ್ಲಿ ಸಹ ಸಮುದಾಯ ರೇಡಿಯೋಗಳನ್ನು ಪ್ರಾರಂಬಿಸಬಹುದು ಎಂದು ಹೊಸ ಕಾಯಿದೆಯನ್ನು 15-11-2006 ರಲ್ಲಿ ಜಾರಿಗೆ ತಂದಿತು.
ಇದಕ್ಕೂ ಮುಂಚೆ ನಮ್ಮ ಭಾರತದಲ್ಲಿ ಸಮುದಾಯ ರೇಡಿಯೋ ಕೇಂದ್ರಗಳು ಕೆಲಸ ಮಾಡುತ್ತಿದ್ದವು. ಅವುಗಳು ಯಾವುವೆಂದರೆ ಕರ್ನಾಟಕದಲ್ಲಿ "ನಮ್ಮಧ್ವನಿ" ರೇಡಿಯೋ ಕೆಂದ್ರ ಬೂದಿಕೋಟೆಯಲ್ಲಿ, ಅಂದ್ರಪ್ರದೇಶದಲ್ಲಿ "ಸಂಘಂರೇಡಿಯೋ" ಪಸ್ತಾಪುರ್ ಗ್ರಾಮದಲ್ಲಿ, ಉತ್ತರಾಂಚಲ್ ನಲ್ಲಿ "ಹೆವಲ್ ವಾಣಿ" ರೇಡಿಯೋ, ಗುಜರಾತ್ ನಲ್ಲಿ "ಕಚ್ ಮಹಿಳಾ ವಿಕಾಸ್ ಸಂಘಟನ್" ಆದರೆ ಇವು ಯಾವುನೂ ಸಹ ಬ್ರಾಟ್ ಕಾಸ್ಟಿಂಗ್ (ತರಂಗಗಳಲ್ಲಿ ಪ್ರಸಾರ) ಮಾಡುತ್ತಿಲ್ಲ. ಇತ್ತೀಚಿಗೆ ಬ್ರಾಡ್ ಕಾಸ್ಟಿಂಗ್ ಮಾಡಲು ಲೈಸನ್ಸ್ ಗೆ ಎಲ್ಲರೂ ಸಹ ಮನವಿಯನ್ನು ಸಲ್ಲಿಸಿದ್ದಾರೆ. ಸದ್ಯದಲ್ಲೇ ಇವರುಗಳು ಬ್ರಾಡ್ ಕಾಸ್ಟಿಂಗ್ ಮಾಡಲು ಸರ್ಕಾರದಿಂದ ಪರವಾನಗಿ (ಲೈಸನ್ಸ್) ಪಡೆಯಲಿದ್ದಾರೆ. ಇದನ್ನು ನೋಡಿ ನಮ್ಮ ದೇಶದಲ್ಲಿ ಹಲವಾರು ಸಂಸ್ಥೆಯವರು ಸಮುದಾಯ ರೇಡಿಯೋಗಳನ್ನು ಪ್ರಾರಂಭ ಮಾಡಲು ಸರ್ಕಾರದಿಂದ ಪರವಾನಗಿ ಪಡೆಯಲು ಅರ್ಜಿಗಳನ್ನು ಸಹ ಸಲ್ಲಿಸಿದ್ದಾರೆ.

Rating
No votes yet

Comments