ನಮ್ಮಧ್ವನಿ

ನಮ್ಮಧ್ವನಿ

ನಮ್ಮಧ್ವನಿ ಸಮುದಾಯ ರೇಡಿಯೋ ಕೆಂದ್ರ ಬೆಂಗಳೂರುನಿಂದ ಸುಮಾರು 80 ಕಿ.ಮೀ ದೂರದಲ್ಲಿ ಬೂದಿಕೋಟೆಯಲ್ಲಿ ಇದೆ. ಬೂದಿಕೋಟೆ ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಮ್ಮಧ್ವನಿಯನ್ನು ಬೂದಿಕೋಟೆಯಲ್ಲಿ 2002 ರಲ್ಲಿ ಪ್ರಾರಂಭಿಸಿದರು. ಇಲ್ಲಿ ಪ್ರಾರಂಭಿಸಲು ಕಾರಣ ಇದು ಕರ್ನಾಟಕ, ಅಂದ್ರಪ್ರದೆಶ್ ಮತ್ತು ತಮಿಳುನಾಡಿನ ಗಡಿಭಾಗದಲ್ಲಿದ್ದು, ಇಲ್ಲಿ ಅವಿಧ್ಯಾವಂತರು ಜಾಸ್ತಿ ಮತ್ತು ಕೂಲಿಕಾರ್ಮಿಕರು ಜಾಸ್ತಿ ಇದ್ದು ಇವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ ಆದ್ದರಿಂದ ಇಲ್ಲಿ ನಮ್ಮಧ್ವನಿಯನ್ನು ಯುನೆಸ್ಕೋ ಸಹಕಾರದಿಂದ ಪ್ರಾರಂಭಿಸಿದರು. ನಮ್ಮ ಧ್ವನಿಗೆ ಸಹಕಾರವನ್ನು ಬೆಂಗಳೂರುನಲ್ಲಿರುವ ವಾಯ್ಸಸ್ ಸಂಸ್ಥೆಯು ತಾಂತ್ರಿಕ ಸಹಾಯವನ್ನು ಮಾಡುತ್ತಿದ್ದು, ಮೈರಾಡ ಸಂಸ್ಥೆಯು ಸ್ಥಳೀಯ ಮಟ್ಟದಲ್ಲಿ ಜವಾಬ್ದಾರಿಯನ್ನು ವಹಿಸುಕೊಂಡಿದೆ. ಯುನೆಸ್ಕೋ ಸಂಸ್ಥೆಯು ನಮ್ಮಧ್ವನಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ನೀಡಿದೆ.
ನಮ್ಮಧ್ವನಿ ಮುಖಾಂತರ ಹಲವಾರು ವಿಧಾನಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಯಿತು. ನಮ್ಮಧ್ವನಿಯ ತಂಡಕ್ಕೆ ಮೊದಲು ಕಾರ್ಯಕ್ರಮವನ್ನು ಮಾಡಲು ಮತ್ತು ಎಲ್ಲಾ ವಿಧದ ತರಬೇತಿಯನ್ನು ನೀಡಿತು ನಂತರ ಕಾರ್ಯಕ್ರಮಗಳನ್ನು ಸ್ಥಳೀಯ ಜನರಿಂದ ಧ್ವನಿಮುದ್ರಿಸಿ ಸಂಘಗಳಲ್ಲಿ ಹಾಕಿ ಕೇಳಿಸುತ್ತಿದ್ದರು. ತುಂಬಾ ಪ್ರಸಿದ್ದಿಯನ್ನು ಪಡೆಯಿತು ನಂತರದ ದಿನಗಳಲ್ಲಿ ಬೂದಿಕೋಟೆಯಲ್ಲಿ ಪ್ರತಿ ಮಂಗಳವಾರ ಸಂತೆಯು ನಡೆಯುತ್ತಿದ್ದು ಈ ಸಂತೆಗೆ ಹಲವಾರು ಗ್ರಾಮದ ಜನರು ಬರುತ್ತಿದ್ದು, ಇಲ್ಲಿಯು ಸಹ ಲೌಡ್ ಸ್ವಿಕರ್ ಹಾಕಿ ಕಾರ್ಯಕ್ರಮಗಳನ್ನು ಹಾಕಿ ಜನರಿಗೆ ಕೇಳಿಸುತ್ತಿದ್ದರು. ಇಲ್ಲಿ ಜನ ಕಾರ್ಯಕ್ರಮವನ್ನು ಕೇಳಿ ಊರಿನಲ್ಲಿಯೇ ಕಾರ್ಯಕ್ರಮವನ್ನು ಕೇಳಲು ಬಯಸಿದರು ಕಾರಣ ಜಾಸ್ತಿ ಸಮಯ ಸಂತೆಯಲ್ಲಿ ಕಾರ್ಯಕ್ರಮವನ್ನು ಕೇಳೋದಕ್ಕೆ ಕಷ್ಟ. ಇದನ್ನು ಅರಿತ ನಮ್ಮ ಧ್ವನಿಯ ತಂಡ ಕಾರ್ಯಕ್ರಮಗಳನ್ನು ಆಕಾಶವಾಣಿ ಮುಖಾಂತರ ಪ್ರಸಾರ ಮಾಡಿದರು. ಇದರಿಂದ ನೂರಾರು ಗ್ರಾಮದ ಜನರು ತಾವೇ ಮಾಡಿದಂತಹ ಕಾರ್ಯಕ್ರಮಗಳನ್ನು ಕೇಳಿ ಅನಂದಿಸಿದರು.
ಈ ರೀತಿಯಾಗಿ ಸ್ವಲ್ಪ ದಿನಗಳು ನಡೆದ ನಂತರ ಬೂದಿಕೋಟೆಯಲ್ಲಿ ಪ್ರತಿಯೊಬ್ಬರೂ ನಿಗದಿತ ಸಮಯದಲ್ಲಿ ಕಾರ್ಯಕ್ರಮವನ್ನು ಕೇಳುವ ಆಸೆಯ ಮೇರೆಗೆ ಕೇಬಲ್ ಅಪರೇಟರ್ ಸಹಾಯದಿಂದ ನಮ್ಮಧ್ವನಿಯ ಸ್ಟುಡಿಯೋದಿಂದ ಕೇಬಲ್ ಅಪರೇಟರ್ ಮನೆತನಕ ಕೇಬಲ್ ಎಳೆದು ಕೇಬಲ್ ಮುಖಾಂತರ ನಮ್ಮಧ್ವನಿಯ ಒಂದು ಚಾನಲನ್ನು ತಮ್ಮ ಕೇಬಲ್ ಚಾನಲ್ ಗಳ ಮುಖಾಂತರ ಪ್ರಸಾರ ಮಾಡಲಾಯಿತು. ಇದರಿಂದ ತಮ್ಮ ಮನೆಯಲ್ಲಿಯೇ ಟಿ.ವಿಯ ಮುಖಾಂತರ ಕಾರ್ಯಕ್ರಮವನ್ನು ಕೇಳಲು ಪ್ರಾರಂಬಿಸಿದರು ಟಿ.ವಿ ಇಲ್ಲದ ಮನೆಯವರಿಗೆ ಕಡಿಮೆ ದರದಲ್ಲಿ ಅಂದರೆ ೧೨೫ ರೂಗಳಿಗೆ ಒಂದು ರೇಡಿಯೋ ನೀಡಿ ರೇಡಿಯೋಗೆ ಕೇಬಲ್ ಸಂಪರ್ಕ ಕಲ್ಪಿಸಿ ಅದರಿಂದ ನಮ್ಮಧ್ವನಿಯ ಕಾರ್ಯಕ್ರಮವನ್ನು ಕೇಳುವಂತೆ ಮಾಡಿದರು. ನಂತರದ ದಿನಗಳಲ್ಲಿ ಪಕ್ಕದ ಗ್ರಾಮಗಳಾದ ದೊಡ್ಡ ಅಂಬೇಡ್ಕರ್ ಕಾಲೋನಿ, ಚಿಕ್ಕ ಅಂಬೇಡ್ಕರ್ ಕಾಲೋನಿ ಮತ್ತು ಕೊಡಗುರ್ಕಿ ಗ್ರಾಮಗಳಿಗೆ ಲೌಡ್ ಸ್ವಿಕರ್ ಸೆಟ್ ಮಾಡಿ ಕೇಬಲ್ ಸಂಪರ್ಕವನ್ನು ಕಲ್ಪಿಸಿ, ಲೌಡ್ ಸ್ವಿಕರ್ ನಿಂದ ಕಾರ್ಯಕ್ರಮವನ್ನು ಕೇಳುವ ಹಾಗೆ ಮಾಡಿದರು. ಈ ರೀತಿಯ ವಿಧಾನಗಳಿಂದ ಆರೋಗ್ಯ, ವ್ಯವಸಾಯ, ಕಾನೂನು, ಮನರಂಜನೆ, ಮನೆಮದ್ದು, ಸಾಂಸಾರಿಕ ಮೌಲ್ಯಗಳು ಇತ್ಯಾದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಸಂಜೆ 7:00 ರಿಂದ 8:30 ರ ತನಕ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳು ನೇರ ವಿಧದಲ್ಲೂ ಮತ್ತು ಧ್ವನಿ ಮುದ್ರನದಲ್ಲೂ ಸಹ ಇರುತ್ತದೆ. ನಮ್ಮಧ್ವನಿ ರೇಡಿಯೋ ಕೇಂದ್ರಕ್ಕೆ ನಿರ್ವಹಣಾ ಸಂಸ್ಥೆಯು ಇದ್ದು ಪ್ರತಿ 15 ದಿನಕ್ಕೊಮ್ಮೆ ಮೀಟಿಂಗ್ ಮಾಡುತ್ತಿದ್ದು, ಇದರಲ್ಲಿ ಕಾರ್ಯಕ್ರಮಗಳ ಬಗ್ಗೆ , ಕಾರ್ಯಕ್ರಮಗಳ ಬಗ್ಗೆ ಅನಿಸಿಗೆ, ಆದಾಯ ಮತ್ತು ವ್ಯಯ ಇತ್ಯಾದಿಗಳನ್ನು ಚರ್ಚೆ ಮಾಡುತ್ತಾರೆ. ಈ ನಿರ್ವಹಣಾ ಸಮಿತಿಯು ಸಮುದಾಯದಿಂದಲೇ ಆಯ್ಕೆಯನ್ನು ಮಾಡಲಾಗಿದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಕಳೆದ 2-3 ವರ್ಷಗಳಿಂದ ಯಾರಿಂದಲೂ ಸಹ ಹಣದ ಸಹಾಯವಿಲ್ಲದೆ ತಾವೇ ನಡೆಸಿಕೊಂಡು ಹೋಗುತ್ತಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ತಮ್ಮದೇ ತರಂಗಗಳಲ್ಲಿ ಕ್ರಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದಾರೆ.

Rating
No votes yet