ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪೊಲೀಸರಂದ್ರೇ ಭಯಾ ಯಾಕೆ ?

ಹೀಗೆ ಎಂದಿನಂತೆ ಶನಿವಾರ ಸಂಜೆ ಸ್ಟುಡಿಯೋದಲ್ಲಿ ಲೈವ್ ಕಾರ್ಯಕ್ರಮ ನಡೆಸುತ್ತಿದ್ದೆ. ಅದು ಒರಿಸ್ಸಾದಲ್ಲಿನ ಕ್ರೈಸ್ತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕ್ರೈಸ್ತ ಶಾಲೆಗಳು ರಾಜ್ಯದಲ್ಲಿ ಬಂದ್ ಮಾಡಿದ್ದ ಬಗ್ಗೆ ಪರ ವಿರೋದ ಚರ್ಚೆ ನಡೆಯುತ್ತಿತ್ತು. ಹಠಾತ್ತಾಗಿ ಒಂದು ಘಟನೆ ನಡೆಯಿತು.

ಮಾನವತೆಯ ಬೆಳೆಗಾರ ಫುಕುವೋಕಾ

ಮಾನವತೆಯ ಬೆಳೆಗಾರ ಫುಕುವೋಕಾ

ನಮ್ಮ ಬಹು ಪ್ರಾಚೀನ 'ಪ್ರಗತಿಪರ' ರೈತರಾದ ಶಿವಮೊಗ್ಗದ ಪ್ರಫುಲ್ಲಚಂದ್ರ ಕೊನೆಗೂ ತಮ್ಮ ಗದ್ದೆಯ ಕೂಳೆಯನ್ನು ಕಡಿದು ಹಾಕಿದ ದಿನವೇ, ಕೃಷಿಋಷಿ ಮಸನೊಬು ಫುಕುವೊಕಾ ನಿಧರಾದ ಸುದ್ದಿ ಬಂದಿದೆ! ಪ್ರಫುಲ್ಲಚಂದ್ರ 28 ವರ್ಷಗಳ ಕಾಲ ಕಬ್ಬಿನ ಕೂಳೆ ಕಡಿಯದೆ, ಅದರ ಮೇಲೇ ಕಬ್ಬು ಬೆಳೆಯುತ್ತಾ, ಹೆಚ್ಚಿನ ಇಳುವರಿಯ ಸಾಧನೆಯನ್ನೂ ಮಾಡಿ ನಮ್ಮೆಲ್ಲರ ಗಮನ ಸೆಳೆದಿದ್ದವರು. ನಮಗೆ ಅವರೇ 90ರ ದಶಕದಲ್ಲಿ ಫುಕುವೊಕಾರ ಕೃಷಿ 'ದರ್ಶನ'ವಾಗುವ ಮುನ್ನ ಪ್ರಾಕೃತಿಕ ಬೇಸಾಯದ ಮರ್ಮವನ್ನು ತಮ್ಮ 'ಪ್ರಯೋಗಶೀಲತೆ'ಯ ಮೂಲಕ ಪರಿಚಯ ಮಾಡಿಕೊಟ್ಟಿದ್ದವರು.

ಆದರೆ ಫುಕೊವೊಕಾ ತಮ್ಮ 'ಒಂದು ಹುಲ್ಲಿನ ಕ್ರಾಂತಿ'ಯ ಮೂಲಕ (ಕನ್ನಡ ಅನುವಾದ: ಸಂತೋಷ ಕೌಲಗಿ ಪ್ರ: ಜನಪದ ಸೇವಾಟ್ರಸ್ಟ್, ಮೇಲುಕೋಟೆ) ನಮಗೆ ಪರಿಚಯವಾದ ಮೇಲೆ, 'ಪ್ರಗತಿಪರತೆ' ಮತ್ತು 'ಪ್ರಯೋಗಶೀಲತೆ' ಎಂಬ ಶಬ್ದಗಳ ಅರ್ಥಗಳೇ ಸಂಪೂರ್ಣ ಪಲ್ಲಟಗೊಂಡಿವೆ. ಹಾಗೆ ನೋಡಿದರೆ, ಫುಕುವೊಕಾರನ್ನು ಕೃಷಿಋಷಿ ಅಥವಾ ಅವರ ವಿಚಾರಗಳನ್ನು ಕೃಷಿದರ್ಶನ ಎಂದು ಕರೆಯುವುದು ಫುಕುವೊಕಾರಿಗೆ ಅನ್ಯಾಯ ಮಾಡಿದಂತೆ. ಏಕೆಂದರೆ, ನಾನೇನೂ ರೈತನಲ್ಲ. ಆದರೆ ಅವರ 'ಒಂದು ಹುಲ್ಲಿನ ಕ್ರಾಂತಿ' ಓದಿದ ನಂತರ ಬದುಕನ್ನು ಕುರಿತ ನನ್ನ ನೋಟವೇ ನಿರ್ಣಾಯಕ ರೀತಿಯಲ್ಲಿ ಬದಲಾಯಿತು. ನನ್ನ ಗ್ರಂಥ ಭಂಡಾರದಲ್ಲಿ ನೂರಾರು ಪುಸ್ತಕಗಳಿವೆ. ಅದರಲ್ಲಿನ ಅತಿ ಶ್ರೇಷ್ಠ ಪುಸ್ತಕ ಯಾವುದು ಎಂದು ಯಾರಾದರೂ ಕೇಳಿದರೆ, ನನ್ನ ಸರಳ ಉತ್ತರ: 'ಒಂದು ಹುಲ್ಲಿನ ಕ್ರಾಂತಿ'. ಭತ್ತದ ಬೆಳೆಯ ಪ್ರಾಕೃತಿಕ ಕೃಷಿಯ ತತ್ವಗಳನ್ನು ಪರಿಚಯಿಸುತ್ತಾ ಹೊರಡುವ ಈ ಪುಟ್ಟ ಪುಸ್ತಕ ಸಹಜ ಕಾವ್ಯದಂತೆ ನಮ್ಮನ್ನು ಸೆಳೆಯುತ್ತಾ, ಬುದ್ಧದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಇದನ್ನು ನಾನು ಒಂದಲ್ಲ ಒಂದು ನೆಪದಲ್ಲಿ ವರ್ಷಕ್ಕೆರಡು ಬಾರಿ ಕಡ್ಡಾಯವಾಗಿ ಓದುತ್ತೇನೆ. ದಿನನಿತ್ಯದ ವ್ಯವಹಾರಗಳಲ್ಲಿ ಮನಸ್ಸಿನ ಮೇಲೆ ಬೀಳುವ ಧೂಳು ಮತ್ತು ಕಟ್ಟಿಕೊಳ್ಳುವ ಕಿಟ್ಟವನ್ನು ಸ್ವಚ್ಛಗೊಳಿಸಿಕೊಳ್ಳಲು!

ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ

ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ

ಕಾಶ್ಮೀರದ ನಾಡ್ಗಿಚ್ಚು ನಂದೀತು ಎಂದು?

ಪ್ರಸ್ತುತ ಕಾಶ್ಮೀರದಲ್ಲಿ ಉಂಟಾಗಿರುವ ಅಮರ್‌ನಾಥ್ ಭೂವಿವಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿನ್ನೆ "ಕಾಶ್ಮೀರ ಯಾರಿಗೆ ಸೇರಿದ್ದು" ಎನ್ನುವ ಲೇಖನವನ್ನು ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದ್ದೆ.

ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?

 ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ‌(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ?

 ಬರತ್ತೆ, ನಿಮ್ಮ ಉಬುಂಟುವಿನ ಮೆನು System -> Administration ನಲ್ಲಿ Language Support ಆಯ್ಕೆ ಮಾಡಿಕೊಳ್ಳಿ.

ಒದ್ದಾಡುವ ನೆನಪುಗಳು..

ನೀನಲ್ಲಿ ಹಾಯಾಗಿ
ಮಗ್ಗಲು ಬದಲಿಸಿದರೆ
ನನ್ನೊಳಗಿನ ಜೀವ
ಮುದದಿ ಮಿಸುಕಾಡುವುದು…

ಮಿದು ಪಾದಕ್ಕೊಂದು
ಕಟು ಕಲ್ಲು ಚುಚ್ಚಿದರೆ
ನನ್ನೀ ಕಾಲುಗಳಲ್ಲಿ
ರಕುತ ಜಿನುಗುವುದು…

ಕಣ್ಣ ಹನಿಯುಕ್ಕಿ
ಉದುರುವ ಧೈರ್ಯ ತೋರಿದರೆ
ನನ್ನೆದೆಯ ನೀಲಿ ಹೂವು
ಧಗಧಗಿಸುವುದು…

ಅಂತೆಯೇ ನಿನಗೆ
ಅವನ ಮೇಲೆ ಪ್ರೀತಿಯುಕ್ಕಿದಾಗ
ಮನದ ಮೂಲೆಯಲ್ಲಿ ನನ್ನ ನೆನಪಿನ ಅಲೆಯೊಂದು

ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!

ಹೊರಗೆ ಹೊಟ್ಟೆಕಿಚ್ಚಾಗುವಷ್ಟು ಮಳೆ ಸುರೀತಿದೆ. ಇದೇ ಸರಿಯಾದ ಸಮಯ ಅಂದುಕೊಂಡ ನಿನ್ನ ನೆನಪುಗಳು ಅಂತ ಜಡಿಮಳೆಗೆ ಪ್ರತಿಸ್ಪರ್ದಿಯೇನೊ ಅನ್ನುವಂತೆ ಈ ಎದೆಯ ಹೊಲದೊಳಗೆ ಸುರೀತಿವೆ.