ಪೊಲೀಸರಂದ್ರೇ ಭಯಾ ಯಾಕೆ ?

ಪೊಲೀಸರಂದ್ರೇ ಭಯಾ ಯಾಕೆ ?

ಹೀಗೆ ಎಂದಿನಂತೆ ಶನಿವಾರ ಸಂಜೆ ಸ್ಟುಡಿಯೋದಲ್ಲಿ ಲೈವ್ ಕಾರ್ಯಕ್ರಮ ನಡೆಸುತ್ತಿದ್ದೆ. ಅದು ಒರಿಸ್ಸಾದಲ್ಲಿನ ಕ್ರೈಸ್ತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕ್ರೈಸ್ತ ಶಾಲೆಗಳು ರಾಜ್ಯದಲ್ಲಿ ಬಂದ್ ಮಾಡಿದ್ದ ಬಗ್ಗೆ ಪರ ವಿರೋದ ಚರ್ಚೆ ನಡೆಯುತ್ತಿತ್ತು. ಹಠಾತ್ತಾಗಿ ಒಂದು ಘಟನೆ ನಡೆಯಿತು. ಕಾರ್ಯಕ್ರಮದ ಬ್ರೇಕ್ ನಡುವೆ ಒಬ್ಬ ಪೊಲೀಸ್ ಪೇದೆ ಸ್ಟುಡಿಯೋ ಒಳಗೆ ನುಗ್ಗಿ ಬೆತ್ತದಿಂದ ನನ್ನನ್ನು ತಿವಿದ. ಭೆಚ್ಚಿದ ನಾನು ಹಿಂತಿರುಗಿ ನೋಡಿದರೆ ಅದು ನಮ್ಮ ಸುದ್ದಿವಾಚಕ ಚನ್ನವೀರ್‍. ಯಾವುದೋ ಪೇದೆ ಡ್ರಸ್ ಸಿಕ್ತು ಅಂತ ಹಾಕ್ಕೊಂಡೆ ಅಂತ ನಕ್ಕರು.ನಂತರ ಎಲ್ಲರೂ ನಕ್ಕಿದ್ದೂ ಆಯ್ತು ಕಾರ್ಯಕ್ರಮನೂ ಮುಗಿಯಿತು. ನನ್ನ ಮನಸ್ಸಿನಲ್ಲಿ ಉಳಿದ ವಿಚಾರ ಒಂದೆ. ನಾವು ಪೊಲೀಸರಿಗೆ ಹೆದರಬೇಕೆ. ಪೊಲೀಸರು ಅಥವಾ ಪೊಲೀಸ್ ಇಲಾಖೆ ಇರುವುದೇ ನಮ್ಮ ರಕ್ಷಣೆಗಾಗಿ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತಲೆ ಇರುತ್ತೆ. ಆದರೆ ರಕ್ಷಕರು ರಕ್ಷಕರಾಗಿ ಉಳಿದಿದ್ದಾರಾ... ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಬಟ್ಟೆ ಅಂಗಡಿ ಮಾಲೀಕರೊಬ್ಬರು ತಮ್ಮ ನೂತನ ಅಂಗಡಿಯನ್ನು ಉದ್ಘಾಟಿಸುವ ಸಲುವಾಗಿ ನಡುರಾತ್ರಿಯವರೆಗೆ ಸಿಂಗರಿಸುತ್ತಿದ್ದರು. ಆ ಪ್ರದೇಶಕ್ಕೆ ಸಂಬಂಧಿಸಿರದ ಇತರೆ ಲಿಮಿಟ್ಸ್‌ನ ಪೊಲೀಸ್ ಇನ್ಸ್‌ಪೆಕ್ಟರ್‌ ತಮ್ಮ ಸಿಬ್ಬಂಧಿಯೊಂದಿಗೆ ಅಲ್ಲಗೆ ಬಂದು ಅಂಗಡಿ ಮುಚ್ಚಲು ಬಲವಂತ ಮಾಡಿ ಮಾಲೀಕನನ್ನು ಮನ ಬಂದಂತೆ ಥಳಿಸಿದ್ಧಾರೆ. ಆದರೆ ನಂತರ ತಿಳಿದ ವಿಷಯವೇನೆಂದರೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹಣ ಕೊಟ್ಟು ಪೊಲೀಸರನ್ನು ಛೂ ಬಿಡಲಾಗಿತ್ತು.

ಮತ್ತದೇ ಯೋಚನೆ . ಈಗ ಹೇಳಿ ನಾವು ಪೊಲೀಸರನ್ನು ಹೆಗೆ ನಂಬೋದು.

Rating
No votes yet

Comments